ಪ್ರಪಂಚದಲ್ಲಿರುವ ಟಾಪ್ 10 ರೇಸಿಂಗ್ ಟ್ರಾಕ್‌ಗಳಿವು

By Manoj Bk

ರೇಸಿಂಗ್ ತನ್ನದೇ ಆದ ವೈಭವವನ್ನು ಹೊಂದಿದೆ. ರೇಸಿಂಗ್ ವಿಶ್ವಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದೆ. ಬಹುತೇಕ ಎಲ್ಲಾ ದೇಶಗಳಲ್ಲಿ ರೇಸಿಂಗ್ ಟ್ರಾಕ್‌ಗಳಿವೆ. ಭಾರತವೂ ಇದರಿಂದ ಹೊರತಾಗಿಲ್ಲ.

ಪ್ರಪಂಚದಲ್ಲಿರುವ ಟಾಪ್ 10 ರೇಸಿಂಗ್ ಟ್ರಾಕ್‌ಗಳಿವು

ವಿಶ್ವದಲ್ಲಿ ಸಾವಿರಾರು ಸಂಖ್ಯೆಯ ರೇಸಿಂಗ್ ಟ್ರಾಕ್‌ಗಳಿವೆ. ಆದರೆ ಅವುಗಳಲ್ಲಿ ಕೆಲವನ್ನು ಮಾತ್ರ ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ವಿಶ್ವದಲ್ಲಿರುವಟಾಪ್ 10 ರೇಸ್ ಟ್ರಾಕ್‌ಗಳು ಯಾವುವು, ಅವುಗಳ ಪ್ರಮುಖ ಲಕ್ಷಣಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಪ್ರಪಂಚದಲ್ಲಿರುವ ಟಾಪ್ 10 ರೇಸಿಂಗ್ ಟ್ರಾಕ್‌ಗಳಿವು

ನೂರ್ಬರ್ಗ್ರಿಂಗ್ ನಾರ್ಡ್ಸ್ಕ್ಲೀಫ್

ನೂರ್ಬರ್ಗ್ರಿಂಗ್ ನಾರ್ಡ್ಸ್ಲೀಫ್ ವಿಶ್ವದ ಅತ್ಯುತ್ತಮ ರೇಸ್ ಟ್ರಾಕ್‌ಗಳಲ್ಲಿ ಒಂದಾಗಿದೆ. ಜರ್ಮನಿಯಲ್ಲಿರುವ ಈ ರೇಸ್‌ಟ್ರಾಕ್‌ನಲ್ಲಿ ಒಂದೇ ಬಾರಿ 1,50,000 ಜನರು ಕುಳಿತುಕೊಳ್ಳಬಹುದು. ಈ ರೇಸ್‌ಟ್ರಾಕ್‌ನಲ್ಲಿ ಹಲವಾರು ಐತಿಹಾಸಿಕ ಮಹತ್ವದ ರೇಸ್‌ಗಳನ್ನು ನಡೆಸಲಾಗುತ್ತದೆ.

MOST READ:ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಪ್ರಪಂಚದಲ್ಲಿರುವ ಟಾಪ್ 10 ರೇಸಿಂಗ್ ಟ್ರಾಕ್‌ಗಳಿವು

ದಟ್ಟವಾದ ಕಾಡಿನಂತಿರುವ ಈ ರೇಸ್‌ಟ್ರಾಕ್‌ 21 ಕಿ.ಮೀ ಉದ್ದದ 154 ಕರ್ವ್'ಗಳನ್ನು ಹೊಂದಿದೆ. ಈ ಕರ್ವ್'ಗಳು ಊಹೆಗೂ ನಿಲುಕದಂತಿವೆ. ಈ ರೇಸ್ ಟ್ರಾಕ್‌ನಲ್ಲಿ ಇನ್ನೂ ವಿವಿಧ ಸ್ಪರ್ಧೆಗಳನ್ನು ನಡೆಸಲಾಗುತ್ತದೆ.

ಪ್ರಪಂಚದಲ್ಲಿರುವ ಟಾಪ್ 10 ರೇಸಿಂಗ್ ಟ್ರಾಕ್‌ಗಳಿವು

ಸ್ಪಾ ಫ್ರಾಂಕೋರ್ಸ್‌ಚಾಂಪ್ಸ್

ಈ ರೇಸ್ ಟ್ರಾಕ್ ಬೆಲ್ಜಿಯಂನ ಸ್ಟಾವ್ಲಾಟ್ ಪ್ರದೇಶದಲ್ಲಿದೆ. ಎಫ್ 1 ನಂತಹ ಪ್ರಮುಖ ಮೋಟಾರ್ ಸ್ಪೋರ್ಟ್‌ಗಳು ಈ ರೇಸ್‌ಟ್ರಾಕ್‌ನಲ್ಲಿ ನಡೆಯುತ್ತವೆ. ಸ್ಪಾ ಫ್ರಾಂಕೋರ್ಸ್‌ಚಾಂಪ್ಸ್ ಸುಂದರವಾದ ಹಳ್ಳಿಯ ಬಳಿ ಇದೆ.

MOST READ:ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಪ್ರಪಂಚದಲ್ಲಿರುವ ಟಾಪ್ 10 ರೇಸಿಂಗ್ ಟ್ರಾಕ್‌ಗಳಿವು

ಇದರಿಂದಾಗಿ ಈ ಟ್ರಾಕ್ ಸುತ್ತ ಸದಾ ಹಸಿರು ಹಾಗೂ ನೈಸರ್ಗಿಕವಾದ ಟ್ರಾಕ್ ನೋಡಬಹುದು. ಈ ಟ್ರಾಕ್ ಅತ್ಯುತ್ತಮ ರೇಸಿಂಗ್ ಅನುಭವವನ್ನು ನೀಡುತ್ತದೆ ಎಂಬುದು ಸ್ಪರ್ಧಿಗಳ ಅಭಿಪ್ರಾಯ.

ಪ್ರಪಂಚದಲ್ಲಿರುವ ಟಾಪ್ 10 ರೇಸಿಂಗ್ ಟ್ರಾಕ್‌ಗಳಿವು

ಸುಜುಕಾ

ಸುಜುಕಾ ರೇಸ್‌ಟ್ರಾಕ್ ಜಪಾನ್‌ನ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿದೆ. ನೋಡಲು ಭಯ ಹುಟ್ಟಿಸುವಂತಿರುವ ಈ ರೇಸ್‌ಟ್ರಾಕ್‌ನಲ್ಲಿ ವಿವಿಧ ರೀತಿಯ ಭಯಾನಕ ಕರ್ವ್'ಗಳಿವೆ.

MOST READ:ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಪ್ರಪಂಚದಲ್ಲಿರುವ ಟಾಪ್ 10 ರೇಸಿಂಗ್ ಟ್ರಾಕ್‌ಗಳಿವು

ಎಸ್ ಹಾಗೂ ಟೆಕ್ನರ್ ಎಂಬ ಈ ಟ್ರಾಕ್‌ನಲ್ಲಿ ಕೆಲವು ಭಯಾನಕ ಕರ್ವ್'ಗಳಿವೆ. ಈ ರೇಸ್ ಟ್ರಾಕ್ ಹೆಚ್ಚು ರೋಮಾಂಚನವನ್ನು ನಿರೀಕ್ಷಿಸುವ ರೇಸರ್'ಗಳಿಗೆ ಸೂಕ್ತವಾದ ಟ್ರಾಕ್ ಆಗಿದೆ. ಈ ಟ್ರಾಕ್ 1925ರಿಂದ ಬಳಕೆಯಲ್ಲಿದೆ ಎಂದು ಹೇಳಲಾಗಿದೆ.

ಪ್ರಪಂಚದಲ್ಲಿರುವ ಟಾಪ್ 10 ರೇಸಿಂಗ್ ಟ್ರಾಕ್‌ಗಳಿವು

ಚಿತ್ರಕೃಪೆ: ಎಫ್‌ಐಎ ಡಬ್ಲ್ಯುಇಸಿ

ಸರ್ಕ್ಯೂಟ್ ಡೆ ಲಾ ಸಾರ್ತೆ

ಈ ರೇಸ್ ಟ್ರಾಕ್ ಫ್ರಾನ್ಸ್‌ನ ಲೆ ಮ್ಯಾನ್ಸ್‌ನಲ್ಲಿದೆ. ಈ ಟ್ರಾಕ್‌ನಲ್ಲಿ ವಿವಿಧ ವಿಶ್ವ ಪ್ರಸಿದ್ಧ ಮೋಟಾರು ರೇಸ್‌ಗಳು ನಡೆಯುತ್ತವೆ. ಇದೂ ಸಾರ್ವಜನಿಕ ರಸ್ತೆಯೂ ಹೌದು. ರೇಸಿಂಗ್ ಸಮಯದಲ್ಲಿ ಇದು ಟ್ರಾಕ್ ಆಗಿ ಬದಲಾಗುತ್ತದೆ.

MOST READ:ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಪ್ರಪಂಚದಲ್ಲಿರುವ ಟಾಪ್ 10 ರೇಸಿಂಗ್ ಟ್ರಾಕ್‌ಗಳಿವು

ಈ ಟ್ರಾಕ್ ಸಾರ್ವಜನಿಕ ರಸ್ತೆ ಹಾಗೂ ರೇಸಿಂಗ್ ಟ್ರಾಕ್ ಎರಡರ ಸಂಯೋಜನೆಯನ್ನೂ ಹೊಂದಿದೆ. ಈ ಕಾರಣಕ್ಕೆ ಈ ಟ್ರಾಕ್ ಅನೇಕ ಸ್ಪರ್ಧಿಗಳ ನೆಚ್ಚಿನ ಟ್ರಾಕ್‌ಗಳಲ್ಲಿ ಒಂದಾಗಿದೆ. ಈ ಟ್ರಾಕ್‌ಗೆ ಡನ್‌ಲಾಪ್, ಎಸೆಕ್ಸ್ ಹಾಗೂ ಪೋರ್ಷೆ ಕರ್ವ್'ಗಳ ಹೆಸರನ್ನು ಇಡಲಾಗಿದೆ.

ಪ್ರಪಂಚದಲ್ಲಿರುವ ಟಾಪ್ 10 ರೇಸಿಂಗ್ ಟ್ರಾಕ್‌ಗಳಿವು

ಮೌಂಟ್ ಪನೋರಮಾ

ಈ ಜನಪ್ರಿಯ ರೇಸ್ ಟ್ರಾಕ್ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ಪ್ರದೇಶದಲ್ಲಿದೆ. ಈ ಟ್ರಾಕ್ ಅನ್ನು ಅತ್ಯಂತ ಸುಂದರವಾದ ರೇಸ್ ಟ್ರಾಕ್ ಎಂದು ಹೇಳಲಾಗುತ್ತದೆ. ಜೊತೆಗೆ ಈ ಟ್ರಾಕ್ ವಿಶ್ವದ ಅತ್ಯುತ್ತಮ ರೇಸಿಂಗ್ ಟ್ರಾಕ್‌ಗಳಲ್ಲಿ ಒಂದಾಗಿದೆ.

MOST READ:ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

ಪ್ರಪಂಚದಲ್ಲಿರುವ ಟಾಪ್ 10 ರೇಸಿಂಗ್ ಟ್ರಾಕ್‌ಗಳಿವು

ಈ ಟ್ರಾಕ್ ಅನ್ನು ರೇಸರ್'ಗಳು ಬಾತ್ರಸ್ಟ್ ಎಂದು ಕರೆಯುತ್ತಾರೆ. ಈ ಟ್ರಾಕ್ ಸಹ ಸಾರ್ವಜನಿಕ ರಸ್ತೆಯಾಗಿದ್ದು, ರೇಸಿಂಗ್ ಸಮಯದಲ್ಲಿ ರೇಸ್ ಟ್ರಾಕ್ ಆಗಿ ಬದಲಾಗುತ್ತದೆ. ಕಡಿದಾದ ಇಳಿಜಾರು ಹಾಗೂ ಕರ್ವ್'ಗಳನ್ನು ಹೊಂದಿರುವ ಈ ಟ್ರಾಕ್ ಉದ್ದವಾದ ನೇರ ಮಾರ್ಗವನ್ನು ಹೊಂದಿದೆ.

ಪ್ರಪಂಚದಲ್ಲಿರುವ ಟಾಪ್ 10 ರೇಸಿಂಗ್ ಟ್ರಾಕ್‌ಗಳಿವು

ಚಿತ್ರಕೃಪೆ: ಮಜ್ದಾ ರೇಸ್ ವೇ

ಲಗುನಾ ಸೆಕಾ

ಈ ಟ್ರಾಕ್ ಸೆಂಟ್ರಲ್ ಕ್ಯಾಲಿಫೋರ್ನಿಯಾದಲ್ಲಿದೆ. ಈ ರೇಸ್‌ಟ್ರಾಕ್ 11 ಕಾರ್ನರ್'ಗಳನ್ನು ಹೊಂದಿದೆ. ಈ ರೇಸ್‌ಟ್ರಾಕ್ ಅಪಾಯಕಾರಿ ಹಾಗೂ ರೋಮಾಂಚಕ ಕರ್ವ್'ಗಳನ್ನು ಹೊಂದಿದೆ. ಈ ಟ್ರಾಕ್ 1957 ರಿಂದ ಬಳಕೆಯಲ್ಲಿದೆ.

MOST READ:ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಪ್ರಪಂಚದಲ್ಲಿರುವ ಟಾಪ್ 10 ರೇಸಿಂಗ್ ಟ್ರಾಕ್‌ಗಳಿವು

ಚಿತ್ರಕೃಪೆ: ಫಾರ್ಮುಲಾ 1

ಸರ್ಕ್ಯೂಟ್ ಡಿ ಮೊನಾಕೊ

ಸರ್ಕ್ಯೂಟ್ ಡಿ ಮೊನಾಕೊ ರೇಸ್‌ಟ್ರಾಕ್ 1950 ರಿಂದ ಬಳಕೆಯಲ್ಲಿದೆ. ಕೆಲವು ಸಣ್ಣ ಮಾರ್ಪಾಡುಗಳೊಂದಿಗೆ ಈ ರೇಸ್‌ಟ್ರಾಕ್ ಬಳಕೆಯಲ್ಲಿದೆ ಎಂಬುದು ಗಮನಾರ್ಹ. ಒಂದು ಬಾರಿ ಒಟ್ಟು 37,000 ಪ್ರೇಕ್ಷಕರು ಈ ಈ ರೇಸ್‌ಟ್ರಾಕ್'ನಲ್ಲಿ ಕುಳಿತು ರೇಸಿಂಗ್ ಸ್ಪರ್ಧೆಗಳನ್ನು ವೀಕ್ಷಿಸಬಹುದು.

ಪ್ರಪಂಚದಲ್ಲಿರುವ ಟಾಪ್ 10 ರೇಸಿಂಗ್ ಟ್ರಾಕ್‌ಗಳಿವು

ಈ ರೇಸ್‌ಟ್ರಾಕ್'ನಲ್ಲಿ ರೇಸರ್'ಗಳು ಗೆಲ್ಲುವುದು ಅಷ್ಟು ಸುಲಭವಲ್ಲ. ಈ ಟ್ರಾಕ್ ಕರ್ವ್ ಹಾಗೂ ತಿರುವುಗಳನ್ನು ಹೊಂದಿದೆ. ಈ ರೇಸ್‌ಟ್ರಾಕ್ ಎಫ್ 1 ರೇಸಿಂಗ್‌ಗೆ ಸೂಕ್ತವಾದ ಟ್ರಾಕ್ ಆಗಿದೆ.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಪ್ರಪಂಚದಲ್ಲಿರುವ ಟಾಪ್ 10 ರೇಸಿಂಗ್ ಟ್ರಾಕ್‌ಗಳಿವು

ಮೊನ್ಜಾ

ಈ ರೇಸ್‌ಟ್ರಾಕ್ ಅನ್ನು 1922ರಲ್ಲಿ ನಿರ್ಮಿಸಲಾಗಿದೆ. ಈ ರೇಸ್‌ಟ್ರಾಕ್ ವಿಶ್ವದ ಅತ್ಯಂತ ಹಳೆಯ ರೇಸ್‌ಟ್ರಾಕ್‌ಗಳಲ್ಲಿ ಒಂದಾಗಿದೆ. ಈ ರೇಸ್‌ಟ್ರಾಕ್ ಹತ್ತಿರದ ಕರ್ವ್ ಹಾಗೂ ಉದ್ದವಾದ ನೇರ ಮಾರ್ಗಗಳಿಗೆ ಪ್ರಸಿದ್ಧವಾಗಿದೆ.

ಪ್ರಪಂಚದಲ್ಲಿರುವ ಟಾಪ್ 10 ರೇಸಿಂಗ್ ಟ್ರಾಕ್‌ಗಳಿವು

ಈ ರೇಸ್‌ಟ್ರಾಕ್ ಬಹಳ ವಿಶಿಷ್ಟವಾದ ಮಾರ್ಗ ವ್ಯವಸ್ಥೆಯನ್ನು ಹೊಂದಿದೆ. ಈ ರೇಸ್‌ಟ್ರಾಕ್'ನಲ್ಲಿ ಒಂದು ಬಾರಿಗೆ 1,18,865 ಜನರು ಕುಳಿತು ರೇಸಿಂಗ್ ಸ್ಪರ್ಧೆಗಳನ್ನು ವೀಕ್ಷಿಸಬಹುದು.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಪ್ರಪಂಚದಲ್ಲಿರುವ ಟಾಪ್ 10 ರೇಸಿಂಗ್ ಟ್ರಾಕ್‌ಗಳಿವು

ಸಿಲ್ವರ್‌ಸ್ಟೋನ್

ಸಿಲ್ವರ್‌ಸ್ಟೋನ್ ಇಂಗ್ಲೆಂಡಿನಲ್ಲಿರುವ ಜನಪ್ರಿಯ ರೇಸಿಂಗ್ ಟ್ರಾಕ್ ಆಗಿದೆ. ಈ ರೇಸ್‌ಟ್ರಾಕ್ ಮೋಟಾರು ವಾಹನ ಪ್ರಪಂಚದ ತಾಯ್ನಾಡು ಎಂದು ಕರೆಯಲಾಗುವಇಂಗ್ಲೆಂಡಿನಲ್ಲಿರುವುದು ವಿಶೇಷ.

ಪ್ರಪಂಚದಲ್ಲಿರುವ ಟಾಪ್ 10 ರೇಸಿಂಗ್ ಟ್ರಾಕ್‌ಗಳಿವು

ಈ ರೇಸ್‌ಟ್ರಾಕ್'ನಲ್ಲಿ ಕಾಲಕಾಲಕ್ಕೆ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಈ ರೇಸ್‌ಟ್ರಾಕ್ ಅನ್ನು 1948ರಲ್ಲಿ ಬ್ರಿಟಿಷ್ ಗ್ರ್ಯಾಂಡ್ ಪ್ರಿಕ್ಸ್ ನಿರ್ಮಿಸಿತು.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಪ್ರಪಂಚದಲ್ಲಿರುವ ಟಾಪ್ 10 ರೇಸಿಂಗ್ ಟ್ರಾಕ್‌ಗಳಿವು

ಇಂಟರ್ ಲಾಗೋಸ್

ಈ ಕ್ಲಾಸಿಕ್ ರೇಸಿಂಗ್ ಟ್ರಾಕ್ ಬ್ರೆಜಿಲ್'ನಾ ಸಾವೊ ಪಾಲೊದಲ್ಲಿದೆ. ಈ ರೇಸ್‌ಟ್ರಾಕ್'ನಲ್ಲಿ ಇದುವರೆಗೂ ಸಾವಿರಾರು ಪಂದ್ಯಗಳನ್ನು ಆಯೋಜಿಸಲಾಗಿದೆ. ಸೊಗಸಾದ ಕರ್ವ್ ಹಾಗೂ ನಿಕಟ ತಿರುವುಗಳಿಂದಾಗಿ ಈ ರೇಸ್‌ಟ್ರಾಕ್ ವಿಶ್ವದ ಅತ್ಯುತ್ತಮ ರೇಸ್ ಟ್ರಾಕ್‌ಗಳಲ್ಲಿ ಒಂದಾಗಿದೆ. 1940ರಿಂದ ಬಳಕೆಯಲ್ಲಿರುವ ಈ ಈ ರೇಸ್‌ಟ್ರಾಕ್'ನಲ್ಲಿ ಸುಮಾರು 60,000 ಒಟ್ಟಿಗೆ ಕುಳಿತುಕೊಳ್ಳಬಹುದು.

Most Read Articles

Kannada
English summary
Top ten best racing tracks in the world. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X