ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಇತ್ತೀಚೆಗೆ ಕೇರಳದಲ್ಲಿ ಊಹಿಸಲಾಸಾಧ್ಯವಾದ ಜಾಗದಲ್ಲಿ ಟೊಯೊಟಾ ಇನೋವಾ ಕಾರನ್ನು ಪಾರ್ಕಿಂಗ್ ಮಾಡಲಾಗಿತ್ತು. ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವೀಡಿಯೊ ನೋಡಿದವರು ಆ ಕಾರಿನ ಚಾಲಕನ ಪಾರ್ಕಿಂಗ್ ಕೌಶಲ್ಯವನ್ನು ಶ್ಲಾಘಿಸಿದ್ದರು.

ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಚಾಲಕನು ತನ್ನ ದೊಡ್ಡ ಕಾರನ್ನು ಅತ್ಯಂತ ಚಿಕ್ಕ ಜಾಗದಲ್ಲಿ ಪಾರ್ಕ್ ಮಾಡಿದ್ದ. ಪಾರ್ಕ್ ಮಾಡುವಾಗ ಆತ ಯಾರ ನೆರವನ್ನು ಪಡೆಯಲಿಲ್ಲ ಎಂಬುದು ಗಮನಾರ್ಹ. ದೊಡ್ಡ ಪಾರ್ಕಿಂಗ್ ಸ್ಥಳಗಳಲ್ಲಿಯೇ ಜನರು ತಮ್ಮ ವಾಹನಗಳನ್ನು ಪಾರ್ಕ್ ಮಾಡಲು ಪರದಾಡುವಾಗ ಅತಿ ಚಿಕ್ಕ ಜಾಗದಲ್ಲಿ ಇನೋವಾದಂತಹ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಈ ಚಾಲಕನ ಕುಶಲತೆಯನ್ನು ಮೆಚ್ಚಲೇ ಬೇಕು.

ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಈ ಕಾರು ಚಾಲಕ ಈಗ ಎಲ್ಲೆಡೆಯಿಂದ ಅಭಿನಂದನೆಗಳನ್ನು ಪಡೆಯುತ್ತಿದ್ದಾರೆ. ಇಂಟರ್ ನೆಟ್ ನಲ್ಲಿ ಅವರನ್ನು ಪಾರ್ಕಿಂಗ್ ಲೆಜೆಂಡ್ ಎಂದು ಕರೆಯಲಾಗುತ್ತಿದೆ. ಈ ರೀತಿಯ ಹೊಗಳಿಕೆಗೆ ಅವರು ನಿಜವಾಗಿ ಅರ್ಹರಾಗಿದ್ದಾರೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ದೇಶಾದ್ಯಂತ ವೈರಲ್ ಆದ ಈ ವೀಡಿಯೊದಿಂದ ಕೇರಳದ ಈ ಚಾಲಕ ರಾತ್ರೋರಾತ್ರಿ ಇಂಟರ್ ನೆಟ್ ಸ್ಟಾರ್ ಆದರು. ಟೊಯೊಟಾದ ಅಧಿಕೃತ ಡೀಲರ್ ಆದ ಅಮಾನಾ ಈ ಚಾಲಕನ ಕುಶಲತೆಯನ್ನು ಮೆಚ್ಚಿ ಅವರಿಗೆ ಪಾರ್ಕಿಂಗ್ ಲೆಜೆಂಡ್ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಸರಿ ಸಾಟಿಯಿಲ್ಲದ ನಿಮ್ಮ ಪಾರ್ಕಿಂಗ್ ಸಾಮರ್ಥ್ಯವನ್ನು ನಾವು ಸ್ವಾಗತಿಸುತ್ತೇವೆ ಎಂದು ಅಮಾನಾ ತಾನು ನೀಡಿರುವ ಪ್ರಶಸ್ತಿಯಲ್ಲಿ ತಿಳಿಸಿದೆ. ಅಮಾನಾ ಟೊಯೊಟಾ ಡೀಲರ್, ಆ ಚಾಲಕನು ಕಾರನ್ನು ಪಾರ್ಕ್ ಮಾಡಿದ ಜಾಗದಲ್ಲಿಯೇ ಪ್ರಶಸ್ತಿ ನೀಡಿ ಸನ್ಮಾನಿಸಿರುವುದು ವಿಶೇಷ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಟೊಯೊಟಾ ಡೀಲರ್ ನೀಡಿದ ಸನ್ಮಾನದ ನಂತರ ಆ ಚಾಲಕನ ಜನಪ್ರಿಯತೆ ಮತ್ತಷ್ಟು ಹೆಚ್ಚಿದೆ. ಆದರೆ ಈ ಸನ್ಮಾನವು ಟೊಯೊಟಾ ಕಂಪನಿ ನೀಡುತ್ತಿರುವ ಗೌರವವಲ್ಲ ಎಂಬುದನ್ನು ಗಮನಿಸಬೇಕು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಾಲಕ ತಾನು ಪಾರ್ಕ್ ಮಾಡುತ್ತಿರುವ ವೀಡಿಯೊವನ್ನು ರೆಕಾರ್ಡ್ ಮಾಡಲಾಗಿದೆ ಎಂಬುದು ತನಗೆ ತಿಳಿದಿರಲಿಲ್ಲವೆಂದು ಹೇಳಿದರು.

ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಈ ವೀಡಿಯೊವನ್ನು ಅವರ ಹೆಂಡತಿ ಅವರಿಗೆ ತಿಳಿಯದಂತೆ ರೆಕಾರ್ಡ್ ಮಾಡಿ ಅವರ ಸಹೋದರನಿಗೆ ಕಳುಹಿಸಿದ್ದಾರೆ. ಅವರ ಮೂಲಕ, ಈ ವಿಡಿಯೋ ಇಂಟರ್ ನೆಟ್ ನಲ್ಲಿ ವೈರಲ್ ಆಗಿದೆ. ಈ ವೀಡಿಯೊವನ್ನು ನೋಡಿದ ಜನರು ತಾವು ಸಹ ಅದೇ ರೀತಿಯಲ್ಲಿ ಪಾರ್ಕ್ ಮಾಡಲು ಮುಂದಾಗುತ್ತಿರುವ ಬಗ್ಗೆ ವರದಿಯಾಗಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಕೆಲವರು ತಮ್ಮ ಕಾರನ್ನು ಅದೇ ಸ್ಥಳದಲ್ಲಿ ಪಾರ್ಕ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಸ್ಥಳವು ತುಂಬಾ ಕಿರಿದಾಗಿರುವ ಕಾರಣ ಕಾರು ಪ್ರವೇಶಿಸಲು ಸಹ ಸಾಧ್ಯವಾಗುತ್ತಿಲ್ಲ. ಯುವಕನೊಬ್ಬ ತನ್ನ ಸೆಡಾನ್ ಕಾರನ್ನು ಪಾರ್ಕ್ ಮಾಡಲು ಪ್ರಯತ್ನಿಸಿ ವಿಫಲವಾದ ವೀಡಿಯೊ ಕೂಡ ವೈರಲ್ ಆಗಿದೆ.

ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ತಮಗೆ ಹಲವು ರೀತಿಯ ವಾಹನಗಳನ್ನು ಚಾಲನೆ ಮಾಡಿದ ಅನುಭವವಿರುವ ಕಾರಣಕ್ಕೆ ಕಾರನ್ನು ಈ ಕಿರಿದಾದ ಜಾಗದಲ್ಲಿ ಪಾರ್ಕಿಂಗ್ ಮಾಡಲು ಸಾಧ್ಯವಾಯಿತು ಎಂದು ಅವರು ಹೇಳಿದ್ದಾರೆ. ಈ ಹಿಂದೆ ಅವರು ಲಾರಿಗಳಂತಹ ಅನೇಕ ಭಾರೀ ಗಾತ್ರದ ವಾಹನಗಳನ್ನು ಚಾಲನೆ ಮಾಡಿದ ಅನುಭವ ಹೊಂದಿದ್ದಾರೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕಿಂಗ್ ಮಾಡುವುದು ಸಾಮಾನ್ಯ ಸಂಗತಿಯಲ್ಲ. ಇದು ಅಸಾಧ್ಯವಾದ ಕೌಶಲ್ಯ. ಈ ಕಾರಣಕ್ಕೆ ಆ ಟೊಯೊಟಾ ಕಾರಿನ ಚಾಲಕ ಹೆಚ್ಚು ಜನಪ್ರಿಯರಾಗಿದ್ದಾರೆ.

ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಭಾರತವನ್ನು ಹೊರತುಪಡಿಸಿ ವಿಶ್ವದ ವಿವಿಧ ದೇಶಗಳಲ್ಲಿ ಕಡಿದಾದ ಸ್ಥಳಗಳಲ್ಲಿ ಕಾರ್ ಪಾರ್ಕಿಂಗ್ ಮಾಡಲು ತರಬೇತಿ ನೀಡಲಾಗುತ್ತದೆ. ಆದರೆ ಬಹುತೇಕ ಭಾರತಿಯರಿಗೆ ತಮ್ಮ ಕಾರನ್ನು ಹೇಗೆ ಪಾರ್ಕ್ ಮಾಡಬೇಕೆಂದು ಸಹ ತಿಳಿದಿಲ್ಲ.

Most Read Articles

Kannada
English summary
Toyota dealership felicitates car driver who parked Innova car in small place. Read in Kannada.
Story first published: Tuesday, September 15, 2020, 19:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X