78 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದ ಕಾರು ಮಾಲೀಕನ ಕಥೆ ಹರೋಹರ

ಸಂಚಾರಿ ನಿಯಮಗಳ ಉಲ್ಲಂಘನೆ ತಡೆಯುವ ಉದ್ದೇಶದಿಂದ ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲೂ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದರೂ ಸಹ ಸಂಚಾರಿ ನಿಯಮ ಉಲ್ಲಂಘಿಸಿ ದಂಡ ಪಾವತಿಸುವವ ಸಂಖ್ಯೆ ಮಾತ್ರ ಹೆಚ್ಚುತ್ತಲೇ ಇದೆ. ಅದರಲ್ಲೂ ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ವರ್ಷದಿಂದ ವರ್ಷದಿಂದ ಏರಿಕೆಯಾಗುತ್ತಲೇ ಇದ್ದು, ಇಲ್ಲೊಬ್ಬ ಕಾರು ಮಾಲೀಕನು 78 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿ ಬರೋಬ್ಬರಿ 1 ಲಕ್ಷ ದಂಡ ಪಾವತಿಸಿದ್ದಾನೆ.

78 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದ ಕಾರು ಮಾಲೀಕನ ಕಥೆ ಹರೋಹರ

ರಸ್ತೆ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ನಿಯಮಗಳು ಜಾರಿಯಲ್ಲಿದ್ದರೂ ಬಹುತೇಕ ವಾಹನ ಸವಾರರು ಸಿಗ್ನಲ್ ಜಂಪ್ ಮಾಡುವುದನ್ನು, ಒನ್ ವೇ ಗಳಲ್ಲಿ ನುಗ್ಗುವುದನ್ನು, ಎಲ್ಲೆಂದರಲ್ಲೇ ಯು ಟೂರ್ನ್ ತೆಗೆದುಕೊಳ್ಳುವುದನ್ನು ದಿನಂಪ್ರತಿ ನೋಡುತ್ತಲೇ ಇರುತ್ತವೆ. ಹೀಗೆ ದಿನಂಪ್ರತಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸುತ್ತಾ ಯಾರ ಕಣ್ಣಿಗೆ ಬಿದ್ದಿಲ್ಲ ಎಂದುಕೊಂಡಿದ್ದ ಕಾರು ಮಾಲೀಕನೊಬ್ಬ ಇಂದು ಸಿಕ್ಕಿಬಿದ್ದಿದ್ದು, 78 ಬಾರಿ ಸಂಚಾರಿ ನಿಯಮ ಉಲ್ಲಂಘನೆ ರೂ.96,830 ದಂಡ ವಸೂಲಿ ಮಾಡಿದ್ದಾರೆ.

78 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದ ಕಾರು ಮಾಲೀಕನ ಕಥೆ ಹರೋಹರ

ಚೆನ್ನೈ ನಗರದಲ್ಲಿ ಸಿಗ್ನಲ್‌ಗಳಿಗೂ ಕ್ಯಾರೆ ಎನ್ನದೇ ಓಡಾಡಿಕೊಂಡಿದ್ದ ಟೊಯೊಟಾ ಇಟಿಯಾಸ್ ಕಾರು ಮಾಲೀಕನು ಕೊನೆಗೂ ಸಿಕ್ಕಿಬಿದ್ದಿದ್ದು, ಬರೋಬ್ಬರಿ 76 ಬಾರಿ ನಿಯಮ ಉಲ್ಲಂಘಿಸಿದ್ದರೂ ತನಗೂ ಅದಕ್ಕೂ ಸಂಬಂಧವೇ ಇಲ್ಲ ಎಂದಿದ್ದ.

78 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದ ಕಾರು ಮಾಲೀಕನ ಕಥೆ ಹರೋಹರ

ಆದ್ರೆ ಸಾಕ್ಷಿ ಸಮೇತ ನಿಯಮ ಉಲ್ಲಂಘನೆಯ ಸಾಕ್ಷಿ ತೊರಿಸಿದಾಗ ಇಟಿಯಾಸ್ ಕಾರು ಮಾಲೀಕನು ತನ್ನಿಂದಾಗ ತಪ್ಪನ್ನು ಒಪ್ಪಿಕೊಂಡಿದ್ದು, ಚೆನ್ನೈನ ಪ್ರಮುಖ ರಸ್ತೆಗಳಲ್ಲಿ ಸಿಗ್ನಲ್ ಜಂಪ್, ಒನ್ ವೇ ನಲ್ಲಿ ಚಾಲನೆ ಮತ್ತು ನೋ ಪಾರ್ಕಿಂಗ್ ಸ್ಥಳಗಳಲ್ಲೇ ಕಾರು ನಿಲುಗಡೆ ಮಾಡಿದ ಪ್ರಕಣಗಳ ದೊಡ್ಡ ಪಟ್ಟಿಯನ್ನೇ ನೀಡಲಾಗಿದೆ.

78 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದ ಕಾರು ಮಾಲೀಕನ ಕಥೆ ಹರೋಹರ

ತದನಂತರ ದಂಡ ಪಾವತಿಸಲು ನಿರಾಕಸಿದ್ದ ಇಟಿಯಾಸ್ ಕಾರು ಮಾಲೀಕನು ಇಷ್ಟೊಂದು ದೊಡ್ಡ ಮೊತ್ತದ ದಂಡವನ್ನು ಪಾವತಿಸುವ ಶಕ್ತಿ ನನ್ನಲ್ಲಿ ಇಲ್ಲ ಅವತ್ತುಕೊಂಡಿದ್ದಾನೆ. ಆದರೂ ಕಾರು ಮಾಲೀಕನನ್ನು ಬಿಡದ ಪೊಲೀಸರು ಕಾರು ವಶಕ್ಕೆ ಪಡೆದು ಪೂರ್ಣ ಪ್ರಮಾಣದ ದಂಡವನ್ನು ವಸೂಲಿ ಮಾಡಿದ್ದು, ಪದೇ ಪದೇ ನಿಯಮ ಉಲ್ಲಂಘಿಸುವುದು ಕಂಡುಬಂದಲ್ಲಿ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

78 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದ ಕಾರು ಮಾಲೀಕನ ಕಥೆ ಹರೋಹರ

ಪ್ರತಿ ಬಾರಿಯೂ ಸಂಚಾರಿ ನಿಯಮ ಉಲ್ಲಂಘನೆ ಮಾಡಿದಾಗಲೂ ಪೊಲೀಸರು ನನ್ನನ್ನು ಹಿಡಿಯಲು ಸಾಧ್ಯವೇ ಇಲ್ಲ ಎಂದುಕೊಳ್ಳುತ್ತಿದ್ದ ಇಟಿಯಾಸ್ ಕಾರು ಮಾಲೀಕನಿಗೆ ಸಿಗ್ನಲ್‌ನಲ್ಲಿರುವ ಕ್ಯಾಮೆರಾ ಮೂಲಕ ಇ-ಚಲನ್ ಕಳುಹಿಸುತ್ತಿರುವ ಬಗ್ಗೆ ಗೊತ್ತೆ ಇಲ್ಲ ಎಂದಿದ್ದಾನೆ.

78 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದ ಕಾರು ಮಾಲೀಕನ ಕಥೆ ಹರೋಹರ

ಇದೀಗ 76 ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ದಂಡ ಪಾವತಿಸಿ ಟಿಎನ್ 09, ಬಿಎಂ 9144 ನೋಂದಣಿಯ ತನ್ನ ಇಟಿಯಾಸ್ ಕಾರನ್ನು ವಾಪಸ್ ಪಡೆದಿದ್ದು, ಇನ್ಮುಂದೆ ಇಂತಹ ತಪ್ಪು ಮಾಡಲಾರೇ ಎಂದಿದ್ದಾನೆ.

78 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದ ಕಾರು ಮಾಲೀಕನ ಕಥೆ ಹರೋಹರ

ಇನ್ನು ಚೆನ್ನೈನಲ್ಲಿ ಬರೋಬ್ಬರಿ 76 ಬಾರಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ರೂ.96,830 ದಂಡಪಾತಿಸಿರುವ ಪ್ರಕರಣ ಹೊಸದೆನು ಅಲ್ಲಾ. ಈ ಮೊದಲು ಇದಕ್ಕಿಂತಲೂ ದೊಡ್ಡ ದೊಡ್ಡ ಮಹಾನುಭಾವರು ನೂರಕ್ಕೂ ಹೆಚ್ಚು ಪ್ರಕರಣಗಳಲ್ಲಿ ಸಿಲುಕಿ 1 ಲಕ್ಷಕ್ಕೂ ಅಧಿಕ ಮೊತ್ತದ ದಂಡವನ್ನು ಪಾವತಿಸಿರುವ ಅನೇಕ ಪ್ರಕರಣಗಳಿವೆ.

78 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದ ಕಾರು ಮಾಲೀಕನ ಕಥೆ ಹರೋಹರ

ಹೌದು, ಪ್ರಯಾಣಿಕರ ಸುರಕ್ಷತೆಗಾಗಿ ಟ್ರಾಫಿಕ್ ಪೊಲೀಸರು ಕಠಿಣ ಸಂಚಾರಿ ನಿಯಮಗಳನ್ನ ಜಾರಿ ಮಾಡಿದ್ದರೂ ಕೆಲವರಿಗೆ ಅದು ಅರ್ಥವಾಗುವುದೇ ಇಲ್ಲ. ಇಲ್ಲೊಬ್ಬ ಕ್ಯಾಬ್ ಚಾಲಕ ಕೂಡಾ ಇದೇ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಲ್ಲಿದ್ದು, ಒಂದಲ್ಲಾ, ಎರಡಲ್ಲಾ ಬರೋಬ್ಬರಿ 102 ಬಾರಿ ರಾಂಗ್ ಸೈಡ್ ಪಾರ್ಕಿಂಗ್ ಮಾಡಿ ರೂ.17 ಸಾವಿರ ದಂಡ ಪಾವತಿಸಿದ್ದ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

78 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದ ಕಾರು ಮಾಲೀಕನ ಕಥೆ ಹರೋಹರ

ಮತ್ತೊಂದು ಪ್ರಕರಣದಲ್ಲಿ ತೆಲಂಗಾಣ ಟ್ರಾಫಿಕ್ ಪೊಲೀಸರು 127 ಬಾರಿ ಓವರ್ ಸ್ಪೀಡ್ ಪ್ರಕರಣದಲ್ಲಿ ಸಿಕ್ಕಿಬಿದ್ದ ಹೋಂಡಾ ಜಾಝ್ ಕಾರು ಮಾಲೀಕನಿಂದಲೂ ಭಾರೀ ಪ್ರಮಾಣದ ದಂಡ ವಸೂಲಿ ಮಾಡಿದ್ದರು.

78 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದ ಕಾರು ಮಾಲೀಕನ ಕಥೆ ಹರೋಹರ

ಹೈದ್ರಾಬಾದ್ ಔಟರ್ ರಿಂಗ್ ರೋಡ್‌ನಲ್ಲಿ ಓವರ್ ಸ್ಪೀಡ್ ಡ್ರೈವ್ ಮಾಡುವ ಮೂಲಕ ಇತರೆ ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಜಾಝ್ ಕಾರು ಮಾಲೀಕನಿಂದ ಬರೋಬ್ಬರಿ ರೂ. 1.82 ಲಕ್ಷ ದಂಡ ಕಕ್ಕಿಸಿದ್ದರು.

MOST READ: ಲೈಸೆನ್ಸ್ ಇಲ್ಲದೇ ಬೈಕ್ ಚಾಲನೆ ಮಾಡಿದ 171 ಅಪ್ರಾಪ್ತರ ವಿರುದ್ಧ ಕೇಸ್..!

78 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದ ಕಾರು ಮಾಲೀಕನ ಕಥೆ ಹರೋಹರ

ಇನ್ನೊಂದು ಇಂಟ್ರಸ್ಟಿಂಗ್ ವಿಚಾರ ಅಂದ್ರೆ 127 ಪ್ರಕರಣಗಳು ದಾಖಲಾಗುವ ತನಕವು ಒಂದು ಬಾರಿಯೂ ಹೋಂಡಾ ಕಾರು ಮಾಲೀಕ ಮಾತ್ರ ಪೊಲೀಸರ ಕೈಗೆ ಸಿಕ್ಕಿಬಿದ್ದಿರಲಿಲ್ಲ. ಆದ್ರೆ 127ನೇ ಬಾರಿ ನಿಯಮ ಉಲ್ಲಂಘಿಸುವಾಗ ಅವನ ಅದೃಷ್ಟ ಕೆಟ್ಟಿತ್ತು ಅಂತಾ ಕಾಣುತ್ತೆ. ಪೊಲೀಸರ ಕೈಗೆ ಕೊನೆಗೂ ಸಿಕ್ಕಿಬಿದ್ದಿದ್ದ.

Most Read Articles

Kannada
English summary
Toyota Etios Owner Fined Nearly Rs1-lakh. Read In Kannada.
Story first published: Tuesday, May 14, 2019, 17:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X