ಅಪಘಾತದ ವೇಳೆ ಏರ್‌ಬ್ಯಾಗ್ ಇದ್ರು ಫ್ಲಾಪ್- ಟೊಯೊಟಾ ವಿರುದ್ಧ ಕಾರು ಮಾಲೀಕನ ಆಕ್ರೋಶ..!

ಆ ಕಾರು ಮಾಲೀಕನು ತನಗೆ ಗರಿಷ್ಠ ಸುರಕ್ಷತೆ ಸಿಗುತ್ತೆ ಎನ್ನುವ ನಂಬಿಕೆಯೊಂದಿಗೆ ಒಂದು ಐಷಾರಾಮಿ ಕಾರು ಖರೀದಿ ಮಾಡಿದ್ದ. ಆದ್ರೆ ಆ ನಂಬಿಕೆ ಇದೀಗ ಸುಳ್ಳಾಗಿದೆ. ಭೀಕರ ಅಪಘಾತದ ಸಂದರ್ಭದಲ್ಲೂ ಇದ್ದ ಏರ್‌ಬ್ಯಾಗ್‌ಗಳು ಕೂಡಾ ಕಾರ್ಯನಿರ್ವಹಣೆ ಮಾಡದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾನೆ.

ಅಪಘಾತದ ವೇಳೆ ಏರ್‌ಬ್ಯಾಗ್ ಇದ್ರು ಫ್ಲಾಪ್- ಟೊಯೊಟಾ ವಿರುದ್ಧ ಕಾರು ಮಾಲೀಕನ ಆಕ್ರೋಶ..!

ಹೌದು, ಅಪಘಾತಗಳ ಸಂದರ್ಭದಲ್ಲಿ ಏರ್‌ಬ್ಯಾಗ್ ಕಾರ್ಯನಿರ್ವಹಣೆಯೂ ಎಷ್ಟು ಮಹತ್ವ ಹೊಂದಿದೆ ಎಂಬುವುದು ಇತರರಿಗಿಂತ ಅಪಘಾತಗಳಲ್ಲಿ ಪ್ರಾಣ ಉಳಿಸಿಕೊಂಡು ಬಂದವರಿಗೆ ಚೆನ್ನಾಗಿ ಗೊತ್ತಿದೆ. ಆದರೆ ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನಲ್ಲಿ ಬರೋಬ್ಬರಿ 6 ಏರ್‌ಬ್ಯಾಗ್‌ಗಳಿದ್ದರೂ ಸಹ ಅಪಘಾತದ ವೇಳೆ ಒಂದೇ ಒಂದು ಏರ್‌ಬ್ಯಾಗ್ ತೆರೆದುಕೊಳ್ಳದಿರುವುದು ಮಾಲೀಕನ ಆಕ್ರೋಶಕ್ಕೆ ಕಾರಣವಾಗಿದೆ.

ಅಪಘಾತದ ವೇಳೆ ಏರ್‌ಬ್ಯಾಗ್ ಇದ್ರು ಫ್ಲಾಪ್- ಟೊಯೊಟಾ ವಿರುದ್ಧ ಕಾರು ಮಾಲೀಕನ ಆಕ್ರೋಶ..!

ಅಪಘಾತಗಳ ಸಂದರ್ಭದಲ್ಲಿ ಗರಿಷ್ಠ ಸುರಕ್ಷತೆ ಸಿಗಲಿ ಎನ್ನುವ ಉದ್ದೇಶದಿಂದ ಬಹುತೇಕ ಕಾರು ಮಾಲೀಕರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಉತ್ತಮ ಸುರಕ್ಷಾ ಸೌಲಭ್ಯವಿರುವ ಕಾರುಗಳನ್ನೇ ಖರೀದಿ ಮಾಡಿರುತ್ತಾರೆ. ಹೀಗಿರುವಾಗ ದುಬಾರಿ ಬೆಲೆ ಹೊಂದಿರುವ ಇನೋವಾ ಕ್ರಿಸ್ಟಾ ಕಾರು ಇದೀಗ ಸುರಕ್ಷಾ ವಿಚಾರದಲ್ಲಿ ಗ್ರಾಹಕರ ಅನುಮಾನಕ್ಕೆ ಕಾರಣವಾಗಿದೆ.

ಅಪಘಾತದ ವೇಳೆ ಏರ್‌ಬ್ಯಾಗ್ ಇದ್ರು ಫ್ಲಾಪ್- ಟೊಯೊಟಾ ವಿರುದ್ಧ ಕಾರು ಮಾಲೀಕನ ಆಕ್ರೋಶ..!

ಇದಕ್ಕೆ ಕಾರಣ, ಮೊನ್ನೆಯಷ್ಟೇ ಪಂಜಾಬ್‌ನ ಲೂಧಿಯಾನದಲ್ಲಿ ನಡೆದ ಇನೋವಾ ಕ್ರಿಸ್ಟಾ ಮತ್ತು ಹ್ಯುಂಡೈ ಕ್ರೆಟಾ ಕಾರುಗಳ ನಡುವಿನ ಭೀಕರ ಅಪಘಾತ ಪ್ರಕರಣದಲ್ಲಿ ಟೊಯೊಟಾ ಸಂಸ್ಥೆಯು ಕಾರು ಮಾಲೀಕರಲ್ಲಿ ಅಸಮಾಧಾನ ಉಂಟುಮಾಡಿದೆ.

ಅಪಘಾತದ ವೇಳೆ ಏರ್‌ಬ್ಯಾಗ್ ಇದ್ರು ಫ್ಲಾಪ್- ಟೊಯೊಟಾ ವಿರುದ್ಧ ಕಾರು ಮಾಲೀಕನ ಆಕ್ರೋಶ..!

ಅಪಘಾತದ ಸಂದರ್ಭದಲ್ಲಿ ಇನೋವಾ ಕ್ರಿಸ್ಟಾ ಕಾರು ಚಾಲಕನು ಸೀಟ್ ಬೆಲ್ಟ್ ಧರಿಸಿದ್ದರೂ ಸಹ ಏರ್‌ಬ್ಯಾಗ್ ಕಾರ್ಯನಿರ್ವಹಣೆ ಮಾಡದಿರುವುದು ಚರ್ಚೆಗೆ ಕಾರಣವಾಗಿದ್ದು, ಅದೃಷ್ಟವಶಾತ್ ಇಬ್ಬರು ಬಾಲಕರು ಸೇರಿ ಕಾರಿನಲ್ಲಿದ್ದ ಒಟ್ಟು ನಾಲ್ವರು ಕೆಲವು ಗಂಭೀರ ಗಾಯಗಳನ್ನು ಹೊರತುಪಡಿಸಿ ಪ್ರಾಣಪಾಯದಿಂದ ಪಾರಾಗಿದ್ದಾರೆ ಎನ್ನುವುದೇ ಅಸಮಾಧಾನಕರ ಸಂಗತಿ.

ಅಪಘಾತದ ವೇಳೆ ಏರ್‌ಬ್ಯಾಗ್ ಇದ್ರು ಫ್ಲಾಪ್- ಟೊಯೊಟಾ ವಿರುದ್ಧ ಕಾರು ಮಾಲೀಕನ ಆಕ್ರೋಶ..!

ಪ್ರಮುಖ ರಸ್ತೆಯೊಂದರಲ್ಲಿ ಸಿಗ್ನಲ್ ದಾಟುತ್ತಿದ್ದ ಇನೋವಾ ಕ್ರಿಸ್ಟಾ ಕಾರಿಗೆ ಮತ್ತೊಂದು ಮಾರ್ಗದಿಂದ ಅತಿ ವೇಗವಾಗಿ ಬಂದ ಹ್ಯುಂಡೈ ಕ್ರೆಟಾ ಕಾರು ಎಡಬದಿಗೆ ರಭಸವಾಗಿ ಗುದ್ದಿದೆ. ಈ ವೇಳೆ ನಿಯಂತ್ರಣ ತಪ್ಪಿದ ಇನೋವಾ ಕ್ರಿಸ್ಟಾ ಕಾರು ಎರಡು ಬಾರಿ ಪಲ್ಟಿ ಹೊಡೆದಿದೆ.

ಅಪಘಾತದ ವೇಳೆ ಏರ್‌ಬ್ಯಾಗ್ ಇದ್ರು ಫ್ಲಾಪ್- ಟೊಯೊಟಾ ವಿರುದ್ಧ ಕಾರು ಮಾಲೀಕನ ಆಕ್ರೋಶ..!

ಈ ವೇಳೆ ಇನೋವಾ ಕಾರಿನ ಎಡಬದಿಯೂ ಸಂಪೂರ್ಣ ಜಖಂಗೊಂಡಿದ್ದಲ್ಲಿ ಕಾರಿನ ಬದಿಯು ಸಹ ಪಲ್ಟಿ ರಭಸಕ್ಕೆ ಹಾನಿಗಿಡಾಗಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದವರಿಗೆ ಗಾಯಗಳನ್ನು ಹೊರತುಪಡಿಸಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಪಘಾತದ ವೇಳೆ ಏರ್‌ಬ್ಯಾಗ್ ಇದ್ರು ಫ್ಲಾಪ್- ಟೊಯೊಟಾ ವಿರುದ್ಧ ಕಾರು ಮಾಲೀಕನ ಆಕ್ರೋಶ..!

ಇಷ್ಟೆಲ್ಲಾ ಆದರೂ ಸಹ ಇನೋವಾ ಕ್ರಿಸ್ಟಾ ಕಾರಿನಲ್ಲಿದ್ದ ಆರು ಏರ್‌ಬ್ಯಾಗ್‌ಗಳು ಕಾರ್ಯನಿರ್ವಹಣೆ ಮಾಡದಿರುವ ಬಗ್ಗೆ ಮಾಲೀಕನು ಆಕ್ರೋಶ ವ್ಯಕ್ತಪಡಿಸಿದ್ದು, ಏರ್‌ಬ್ಯಾಗ್ ಕಾರ್ಯನಿರ್ವಹಣೆ ಮಾಡದಿರುವ ಬಗ್ಗೆ ಟೊಯೊಟಾ ಉನ್ನತಾಧಿಕಾರಿಗಳಿಗೆ ಸುಧೀರ್ಘ ಪತ್ರ ಬರೆದಿದ್ದಾರೆ.

ಅಪಘಾತದ ವೇಳೆ ಏರ್‌ಬ್ಯಾಗ್ ಇದ್ರು ಫ್ಲಾಪ್- ಟೊಯೊಟಾ ವಿರುದ್ಧ ಕಾರು ಮಾಲೀಕನ ಆಕ್ರೋಶ..!

ಇನ್ನು ಪ್ರಾಥಮಿಕ ತನಿಖೆ ವೇಳೆ ಕಾರಿನಲ್ಲಿರುವ ಏರ್‌ಬ್ಯಾಗ್‌ ಸೆನ್ಸಾರ್ ಸಮಸ್ಯೆಯೇ ಈ ರೀತಿಯಾಗಲು ಕಾರಣ ಎನ್ನಲಾಗಿದ್ದು, ಉನ್ನತ ಮಟ್ಟದ ತನಿಖೆಯ ನಂತರವಷ್ಟೇ ಏರ್‌ಬ್ಯಾಗ್ ಕಾರ್ಯನಿರ್ವಹಿಸುವುದರ ಬಗ್ಗೆ ನಿಖರ ಕಾರಣ ಹೊರಬರಬೇಕಿದೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಅಪಘಾತದ ವೇಳೆ ಏರ್‌ಬ್ಯಾಗ್ ಇದ್ರು ಫ್ಲಾಪ್- ಟೊಯೊಟಾ ವಿರುದ್ಧ ಕಾರು ಮಾಲೀಕನ ಆಕ್ರೋಶ..!

ಕೆಲವು ಪ್ರಕರಣಗಳಲ್ಲಿ ಸೀಟ್ ಬೆಲ್ಟ್ ಧರಿಸದೇ ಇದ್ದಾಗ ಮತ್ತು ಕಾರಿನ ಮುಂಭಾದಲ್ಲಿ ಅತಿಯಾಗಿ ಮಾಡಿಫೈ ಮಾಡಿಸುವುದು ಕೂಡಾ ಅಪಘಾತಗಳ ಸಂದರ್ಭದಲ್ಲಿ ಏರ್‌ಬ್ಯಾಗ್ ಸೆನ್ಸಾರ್ ಕಾರ್ಯನಿರ್ವಹಣೆಗೆ ತೊಂದರೆ ಉಂಟು ಮಾಡುವ ಸಾಧ್ಯತೆಗಳಿದ್ದೂ, ಇಂತಹ ಕೆಲವು ಸೂಕ್ಷ್ಮ ವಿಚಾರಗಳು ಇನೋವಾ ಕ್ರಿಸ್ಟಾ ಕಾರಿನ ಏರ್‌ಬ್ಯಾಗ್ ಸ್ಥಗಿತಕ್ಕೂ ಕಾರಣವಾಗಿರಬಹುದೇ ಎನ್ನುವ ಬಗ್ಗೆ ಖಚಿತತೆಯಿಲ್ಲ.

ಅಪಘಾತದ ವೇಳೆ ಏರ್‌ಬ್ಯಾಗ್ ಇದ್ರು ಫ್ಲಾಪ್- ಟೊಯೊಟಾ ವಿರುದ್ಧ ಕಾರು ಮಾಲೀಕನ ಆಕ್ರೋಶ..!

ಹೀಗಾಗಿ ಸಂಪೂರ್ಣ ತನಿಖೆ ನಂತರವಷ್ಟೇ ಏರ್‌ಬ್ಯಾಗ್ ಸ್ಥಗಿತಕ್ಕೆ ನಿಖರ ಕಾರಣ ತಿಳಿಯಲಿದ್ದು, ಒಂದು ವೇಳೆ ಇದು ಉತ್ಪಾದನಾ ಸಂಸ್ಥೆಯಿಂದಲೇ ಆದ ಪ್ರಮಾದವಾಗಿದ್ದಲ್ಲಿ ಟೊಯೊಟಾ ಕಾರುಗಳ ಮೇಲಿನ ಗ್ರಾಹಕರ ವಿಶ್ವಾಸಕ್ಕೆ ಮಾಡಿದ ಮೋಸ ಎನ್ನುವುದರಲ್ಲಿ ಎರಡು ಮಾತಿಲ್ಲ.

MOST READ: ಹೊಸ ಕಾರು ವಿತರಣೆಯಲ್ಲಿ ವಿಳಂಬ- ಜೀಪ್ ಡೀಲರ್ಸ್‌ಗೆ ಬಿತ್ತು ರೂ. 50 ಸಾವಿರ ದಂಡ..!

ಅಪಘಾತದ ವೇಳೆ ಏರ್‌ಬ್ಯಾಗ್ ಇದ್ರು ಫ್ಲಾಪ್- ಟೊಯೊಟಾ ವಿರುದ್ಧ ಕಾರು ಮಾಲೀಕನ ಆಕ್ರೋಶ..!

ಇನ್ನು ಟೊಯೊಟಾ ಇನೋವಾ ಕಾರು ಸದ್ಯ ಎಂಪಿವಿ ಕಾರು ಮಾರಾಟದಲ್ಲಿ ಅಗ್ರಸ್ಥಾನ ಹೊಂದಿದ್ದು, ಆನ್ ರೋಡ್ ಪ್ರಕಾರ ಆರಂಭಿಕವಾಗಿ ರೂ. 18.84 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 29.70 ಲಕ್ಷ ಬೆಲೆ ಪಡೆದುಕೊಂಡಿದೆ.

ಅಪಘಾತದ ವೇಳೆ ಏರ್‌ಬ್ಯಾಗ್ ಇದ್ರು ಫ್ಲಾಪ್- ಟೊಯೊಟಾ ವಿರುದ್ಧ ಕಾರು ಮಾಲೀಕನ ಆಕ್ರೋಶ..!

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪೆಟ್ರೋಲ್ ಮತ್ತು ಡೀಸೆಲ್ ಎರಡು ಆವೃತ್ತಿಗಳಲ್ಲೂ ಖರೀದಿಗೆ ಲಭ್ಯವಿರುವ ಇನೋವಾ ಕ್ರಿಸ್ಟಾ ಕಾರು 2.4-ಲೀಟರ್ ಡೀಸೆಲ್, 2.7-ಲೀಟರ್ ಪೆಟ್ರೋಲ್ ಮತ್ತು 2.8-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಹೊಂದಿದ್ದು, ಹೀಗಿರುವಾಗ ಕಾರಿನಲ್ಲಿರುವ ಸುರಕ್ಷಾ ಸೌಲಭ್ಯಗಳು ಗ್ರಾಹಕರಲ್ಲಿ ಅನುಮಾನ ಮೂಡಿಸುವಂತೆ ಮಾಡಿದೆ.

Most Read Articles

Kannada
Read more on ಅಪಘಾತ accident
English summary
Toyota Innova Rolls Over Thrice In Crash; Airbags Fail To Deploy. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X