ಕಲ್ಲು ಬಂಡೆಗಳ ನಡುವೆ ಸಿಲುಕಿದ್ದ ಟೊಯೊಟಾ ಇನೋವಾ ಕಾರ್ ಅನ್ನು ಹೊರಕ್ಕೆಳೆದ ಮಹೀಂದ್ರಾ ಬೊಲೆರೊ

ಟೊಯೊಟಾ ಇನೋವಾ ಭಾರತದ ಅತ್ಯಂತ ಜನಪ್ರಿಯ ಎಂಪಿವಿಗಳಲ್ಲಿ ಒಂದಾಗಿದೆ. ಆರಾಮದಾಯಕ ಹಾಗೂ ಹೆಚ್ಚು ಸ್ಪೇಸ್ ಹೊಂದಿರುವ ಕಾರಣಕ್ಕೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಇನೋವಾ ಕಾರನ್ನು ಖರೀದಿಸುತ್ತಾರೆ.

ಕಲ್ಲು ಬಂಡೆಗಳ ನಡುವೆ ಸಿಲುಕಿದ್ದ ಟೊಯೊಟಾ ಇನೋವಾ ಕಾರ್ ಅನ್ನು ಹೊರಕ್ಕೆಳೆದ ಮಹೀಂದ್ರಾ ಬೊಲೆರೊ

ಟೊಯೊಟಾ ಇನೋವಾ ಕಾರಿನ ಮೆಂಟೆನೆನ್ಸ್ ಕಡಿಮೆ ಇರುವುದು ಸಹ ಈ ಕಾರಿನ ಜನಪ್ರಿಯತೆಗೆ ಮತ್ತೊಂದು ಕಾರಣ. ಟೊಯೊಟಾ ಇನೋವಾ 2 ವ್ಹೀಲ್ ಡ್ರೈವ್ (2 ಡಬ್ಲ್ಯೂಡಿ) ಸಿಸ್ಟಂ ಹೊಂದಿದೆ. ಕೇವಲ 2 ವ್ಹೀಲ್ ಡ್ರೈವ್ ಸಿಸ್ಟಂ ಹೊಂದಿರುವುದರಿಂದ, ಆಫ್-ರೋಡ್‌ಗಳಿಗೆ ಹೋದಾಗ ಹಲವಾರು ಸಮಸ್ಯೆಗಳು ಉಂಟಾಗುತ್ತವೆ. ಇದಕ್ಕೆ ಸಾಕ್ಷಿಯೆಂಬಂತೆ ವೀಡಿಯೊವೊಂದು ಬಿಡುಗಡೆಯಾಗಿದೆ.

ಈ ವೀಡಿಯೊದಲ್ಲಿ ಹಳೆ ತಲೆಮಾರಿನ ಟೊಯೊಟಾ ಇನೋವಾ ಕಾರು ಬೆಟ್ಟ ಗುಡ್ಡಗಳ ನಡುವೆ ಸಿಕ್ಕಿಹಾಕಿಕೊಂಡಿರುವುದನ್ನು ಕಾಣಬಹುದು.

ಕಲ್ಲು ಬಂಡೆಗಳ ನಡುವೆ ಸಿಲುಕಿದ್ದ ಟೊಯೊಟಾ ಇನೋವಾ ಕಾರ್ ಅನ್ನು ಹೊರಕ್ಕೆಳೆದ ಮಹೀಂದ್ರಾ ಬೊಲೆರೊ

ಮೌಂಟೇನ್ ಗೋಟ್ 4 ಡಬ್ಲ್ಯೂಡಿ ಟಿವಿಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಈ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ. ಈ ವೀಡಿಯೊ ಹಳೆ ತಲೆಮಾರಿನ ಟೊಯೊಟಾ ಇನೋವಾ ಕಾರು ಬೆಟ್ಟದಲ್ಲಿರುವ ಹೊಳೆಯನ್ನು ತೋರಿಸುವುದರೊಂದಿಗೆ ಆರಂಭವಾಗುತ್ತದೆ. ಟೊಯೊಟಾ ಇನೋವಾ ಈ ಸ್ಥಳವನ್ನು ದಾಟಲು ಪ್ರಯತ್ನಿಸಿದಾಗ ಸಿಕ್ಕಿ ಹಾಕಿಕೊಂಡಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಕಲ್ಲು ಬಂಡೆಗಳ ನಡುವೆ ಸಿಲುಕಿದ್ದ ಟೊಯೊಟಾ ಇನೋವಾ ಕಾರ್ ಅನ್ನು ಹೊರಕ್ಕೆಳೆದ ಮಹೀಂದ್ರಾ ಬೊಲೆರೊ

ಕಾರಿನ ಹಿಂದಿನ ವ್ಹೀಲ್ ಬಂಡೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದರಿಂದ ಮುಂದಕ್ಕೆ ಹೋಗಲು ಸಾಧ್ಯವಾಗಿಲ್ಲ. ಆದರೆ ಅದೃಷ್ಟವಶಾತ್ ಕಾರಿನಲ್ಲಿದ್ದ ಎಲ್ಲರೂ ಸುರಕ್ಷಿತವಾಗಿ ಹೊರಬಂದರು. ನೀರಿನ ಹರಿವು ಇರುವ ಜಾಗಗಳಲ್ಲಿ ನೀರು ಇದ್ದಕ್ಕಿದ್ದಂತೆ ಏರಿದರೆ ದೊಡ್ಡ ದುರಂತಗಳಾಗುವ ಸಾಧ್ಯತೆಗಳಿರುತ್ತವೆ.

ಕಲ್ಲು ಬಂಡೆಗಳ ನಡುವೆ ಸಿಲುಕಿದ್ದ ಟೊಯೊಟಾ ಇನೋವಾ ಕಾರ್ ಅನ್ನು ಹೊರಕ್ಕೆಳೆದ ಮಹೀಂದ್ರಾ ಬೊಲೆರೊ

ಆ ರೀತಿಯ ಘಟನೆ ಸಂಭವಿಸದ ಕಾರಣಕ್ಕೆ ಕಾರಿನಲ್ಲಿದ್ದವರು ಹೊರಬಂದಿದ್ದಾರೆ. ಹೊಳೆಯಲ್ಲಿನ ನೀರಿನ ಹರಿವು ಹೆಚ್ಚಿದ ಕಾರಣ ಕಾರನ್ನು ಹಿಂದಕ್ಕೆ ತೆಗೆಯಲು ಸಾಧ್ಯವಾಗಲಿಲ್ಲ. ಕಾರಿನೊಳಗೂ ನೀರು ನುಗ್ಗಲು ಶುರುವಾಯಿತು.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕಲ್ಲು ಬಂಡೆಗಳ ನಡುವೆ ಸಿಲುಕಿದ್ದ ಟೊಯೊಟಾ ಇನೋವಾ ಕಾರ್ ಅನ್ನು ಹೊರಕ್ಕೆಳೆದ ಮಹೀಂದ್ರಾ ಬೊಲೆರೊ

ಸಾಮಾನ್ಯವಾಗಿ ಗುಡ್ಡಗಾಡಿನ ರಸ್ತೆಗಳು ಕಿರಿದಾಗಿರುತ್ತವೆ. ಯಾವುದಾದರೂ ವಾಹನವು ಅಪಘಾತಕ್ಕೀಡಾದರೆ ಅಥವಾ ರಸ್ತೆಯಲ್ಲಿ ಸಿಲುಕಿಕೊಂಡರೆ ಭಾರಿ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಇಲ್ಲಿ ಆಗಿದ್ದು ಅದೇ. ಟೊಯೊಟಾ ಇನೋವಾ ಸಿಕ್ಕಿಬಿದ್ದ ಕಾರಣ ಅದರ ಹಿಂದಿದ್ದ ವಾಹನಗಳು ಮುಂದೆ ಸಾಗಲು ಸಾಧ್ಯವಾಗದೇ ಹೆಚ್ಚು ದೂರದವರೆಗೆ ಸಾಲಾಗಿ ನಿಂತಿದ್ದವು.

ಕಲ್ಲು ಬಂಡೆಗಳ ನಡುವೆ ಸಿಲುಕಿದ್ದ ಟೊಯೊಟಾ ಇನೋವಾ ಕಾರ್ ಅನ್ನು ಹೊರಕ್ಕೆಳೆದ ಮಹೀಂದ್ರಾ ಬೊಲೆರೊ

ಟೊಯೊಟಾ ಇನೋವಾ ಕಾರನ್ನು ಹೊರತೆಗೆಯಲು ರಕ್ಷಣಾ ಪಡೆ ಸ್ಥಳಕ್ಕೆ ಧಾವಿಸಿತು. ಸ್ಥಳಕ್ಕೆ ಬಂದ ಕೂಡಲೇ ಹಗ್ಗದಿಂದ ಕಾರನ್ನು ಹೊರಕ್ಕೆ ಎಳೆಯಲು ಪ್ರಯತ್ನಿಸಲಾಯಿತು. ಕಾರು ಬಂಡೆಗಳ ನಡುವೆ ಸಿಲುಕಿದ್ದ ಕಾರಣ ಅಲುಗಾಡಲು ಶುರು ಮಾಡಿತು. ನಂತರ ಇನೋವಾ ಕಾರನ್ನು ಮಹೀಂದ್ರಾ ಬೊಲೆರೊ ಕಾರಿನಿಂದ ಹೊರಕ್ಕೆ ಎಳೆಯಲು ನಿರ್ಧರಿಸಲಾಯಿತು.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ರಕ್ಷಣಾ ಪಡೆ ಹಾಗೂ ಸ್ಥಳೀಯರ ಪ್ರಯತ್ನದಿಂದಾಗಿ ಸುಮಾರು 14 ಗಂಟೆಗಳ ಹೆಣಗಾಟದ ನಂತರ ಇನೋವಾ ಕಾರ್ ಅನ್ನು ಹೊರ ತರಲಾಯಿತು. ಟೊಯೊಟಾ ಇನೋವಾ 4 ವ್ಹೀಲ್ ಡ್ರೈವ್ ಸಿಸ್ಟಂ ಹೊಂದಿಲ್ಲ. ಟೊಯೊಟಾ ಇನೋವಾ ಕಾರ್ ಅನ್ನು ಆಫ್ ರೋಡ್‌ಗಳಿಗೆ ಹೊಂದಿಕೊಳ್ಳುವಂತೆ ವಿನ್ಯಾಸಗೊಳಿಸಿಲ್ಲ.

ಕಲ್ಲು ಬಂಡೆಗಳ ನಡುವೆ ಸಿಲುಕಿದ್ದ ಟೊಯೊಟಾ ಇನೋವಾ ಕಾರ್ ಅನ್ನು ಹೊರಕ್ಕೆಳೆದ ಮಹೀಂದ್ರಾ ಬೊಲೆರೊ

ಇದರಿಂದಾಗಿ ಇನೋವಾ ಕಾರ್ ಅನ್ನು ಆಫ್ ರೋಡ್‌ಗಳಲ್ಲಿ ಚಾಲನೆ ಮಾಡಿದರೆ, ಸಿಕ್ಕಿಹಾಕಿಕೊಳ್ಳುವ ಸಾಧ್ಯತೆಗಳಿರುತ್ತವೆ. ಆಫ್ ರೋಡ್‌ಗಳಲ್ಲಿ ಪ್ರಯಾಣಿಸುವಾಗ, 4 ವ್ಹೀಲ್ ಡ್ರೈವ್ ಕಾರುಗಳನ್ನು ಬಳಸುವುದು ಸೂಕ್ತ.

Most Read Articles

Kannada
English summary
Toyota Innova rescued by Mahindra Bolero. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X