ಹೆಲ್ಮೆಟ್ ವಿಚಾರವಾಗಿ ಮಾರಾಮಾರಿ- ಯುವಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಪೊಲೀಸರು..

ಹೆಲ್ಮೆಟ್ ಧರಿಸದ ವಿಚಾರವಾಗಿ ಪೊಲೀಸರು ಮತ್ತು ಯುವಕನೊಬ್ಬನ ನಡುವೆ ಮಾರಾಮಾರಿ ನಡೆದಿದ್ದು, ಯುವಕನ ಮೇಲೆ ಪೊಲೀಸರು ಹಲ್ಲೆ ಮಾಡುತ್ತಿರುವ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

By Praveen Sannamani

ಹೆಲ್ಮೆಟ್ ಧರಿಸದ ವಿಚಾರವಾಗಿ ಪೊಲೀಸರು ಮತ್ತು ಯುವಕನೊಬ್ಬನ ನಡುವೆ ಮಾರಾಮಾರಿ ನಡೆದಿದ್ದು, ಯುವಕನ ಮೇಲೆ ಪೊಲೀಸರು ಹಲ್ಲೆ ಮಾಡುತ್ತಿರುವ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಹಲ್ಮೆಟ್ ವಿಚಾರವಾಗಿ ಮಾರಾಮಾರಿ- ಯುವಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಪೊಲೀಸರು..

ಚೆನ್ನೈನ ಟಿ ನಗರದಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದಾಗ ಪೊಲೀಸರು ಮತ್ತು ಯುವಕನ ನಡುವೆ ಮಾರಾಮಾರಿ ನಡೆದಿದೆ. 21 ವರ್ಷದ ಪ್ರಕಾಶ್ ಎಂಬಾತನನ್ನು ಹೆಲ್ಮೆಟ್‌ ಹಾಕದ ಹಿನ್ನೆಲೆ ತಡೆಹಿಡಿದ್ದ ಪೊಲೀಸರು, ಈ ಕೂಡಲೇ ದಂಡ ಪಾವತಿಸುವಂತೆ ಪಟ್ಟುಹಿಡಿದ್ದರು.

ಹಲ್ಮೆಟ್ ವಿಚಾರವಾಗಿ ಮಾರಾಮಾರಿ- ಯುವಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಪೊಲೀಸರು..

ಈ ವೇಳೆ ದಂಡ ಪಾವತಿಸಲು ನಿರಾಕರಿಸಿದ ಪ್ರಕಾಶ್, ಪೊಲೀಸರ ವಿರುದ್ಧವೇ ಕೆಟ್ಟಪದ ಬಳಕೆ ಮಾಡಿದ್ದಾನೆ. ಇದರಿಂದ ರೊಚ್ಚಿಗೆದ್ದ ಪೊಲೀಸರು ಪ್ರಕಾಶ್ ಮೇಲೆ ಹಿಗ್ಗಾಮುಗ್ಗ ಥಳಿಸಿದ್ದಲ್ಲದೇ ಪಕ್ಕದಲ್ಲೇ ಇದ್ದ ಸ್ಟ್ರೀಟ್ ಲೈಟ್ ಕಂಬಕ್ಕೆ ಅಡ್ಡಹಾಕಿ ಮತ್ತಷ್ಟು ಹಲ್ಲೆ ಮಾಡಿದ್ದಾರೆ.

ಹಲ್ಮೆಟ್ ವಿಚಾರವಾಗಿ ಮಾರಾಮಾರಿ- ಯುವಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಪೊಲೀಸರು..

ಈ ವೇಳೆ ಪ್ರಕಾಶ್ ಜೊತೆಯಲ್ಲೇ ಇದ್ದ ತಾಯಿ ಮತ್ತು ತಂಗಿ ಕೂಡಾ ಪ್ರಕಾಶ್ ಮೇಲೆ ಹಲ್ಲೆ ಮಾಡದಂತೆ ಮನವಿ ಮಾಡಿದರೂ ಹಲ್ಲೆ ಮಾಡಿದ ಪೊಲೀಸರು, ಕೊನೆಗೆ ಐಪಿಸಿ 322 ಮತ್ತು 427 ಅಡಿ ಪ್ರಕರಣ ದಾಖಲಿಸಿ ಜೈಲಿಗೆ ಅಟ್ಟಿದ್ದಾರೆ.

ಹಲ್ಮೆಟ್ ವಿಚಾರವಾಗಿ ಮಾರಾಮಾರಿ- ಯುವಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಪೊಲೀಸರು..

ಸದ್ಯ ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ ಮತ್ತು ದಂಡ ಪಾವತಿಸಲು ನಿರಾಕರಿಸಿ ಹಲ್ಲೆ ಮಾಡಿದ ಆರೋಪದ ಮೇಲೆ ಪ್ರಕಾಶ್‌ನನ್ನು ಜೈಲಿಗೆ ಅಟ್ಟಲಾಗಿದ್ದು, ಪೊಲೀಸರು ಮತ್ತು ಪ್ರಕಾಶ್ ನಡುವೆ ನಡೆದ ಹಲ್ಲೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪರ ವಿರೋಧಕ್ಕೆ ಕಾರಣವಾಗಿದೆ.

ಹಲ್ಮೆಟ್ ವಿಚಾರವಾಗಿ ಮಾರಾಮಾರಿ- ಯುವಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಪೊಲೀಸರು..

ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಪೊಲೀಸರ ಕ್ರಮವನ್ನು ಖಂಡಿಸಿದ್ದು, ದಂಡ ಪಾವತಿಸಲು ನಿರಾಕರಿಸಿದ್ದಕ್ಕೆ ಹಲ್ಲೆ ಮಾಡುವುದು ತಪ್ಪು ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕೆಲವರು ಯುವಕನ ವರ್ತನೆ ಬಗ್ಗೆ ಕಿಡಿಕಾರಿದ್ದು, ಪೊಲೀಸರ ಕ್ರಮವು ಸರಿಯಾಗಿದೆ ಎಂದಿದ್ದಾರೆ.

ಹಲ್ಮೆಟ್ ವಿಚಾರವಾಗಿ ಮಾರಾಮಾರಿ- ಯುವಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಪೊಲೀಸರು..

ಇನ್ನು ಕೆಲವು ಸುದ್ದಿಮೂಲಗಳ ಪ್ರಕಾರ ಪೊಲೀಸರ ವಿರುದ್ಧ ಕೆಟ್ಟಪದ ಬಳಕೆ ಮಾಡಿ ಹಲ್ಲೆಗೆ ಒಳಗಾದ ಪ್ರಕಾಶ್‌ ಕ್ಯಾಬ್ ಚಾಲಕನಾಗಿದ್ದು, ತಾಯಿ ಮತ್ತು ತಂಗಿಯೊಂದಿಗೆ ಟಿ ನಗರದಲ್ಲಿ ಶಾಪಿಂಗ್ ಮಾಡಲೆಂದು ಸ್ಕೂಟರ್‌ನಲ್ಲಿ ಬಂದಿದ್ದನಂತೆ.

ಹಲ್ಮೆಟ್ ವಿಚಾರವಾಗಿ ಮಾರಾಮಾರಿ- ಯುವಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಪೊಲೀಸರು..

ಈ ವೇಳೆ ಪ್ರಕಾಶ್ ಹೆಲ್ಮೆಟ್ ಹಾಕಿರಲಿಲ್ಲ. ಜೊತೆಗೆ ಒಂದೇ ಸ್ಕೂಟರ್‌ನಲ್ಲಿ ಮೂವರು ಪ್ರಯಾಣ ಮಾಡುತ್ತಿರುವುದು ಪೊಲೀಸರ ಕೊಪಕ್ಕೆ ಕಾರಣವಾಗಿದೆ. ಆದರೇ ಮಾಡಿದ ತಪ್ಪಿಗೆ ದಂಡ ಪಾವತಿ ಮಾಡಬೇಕಿದ್ದ ಪ್ರಕಾಶ್, ದಂಡದಿಂದ ತಪ್ಪಿಸಿಕೊಳ್ಳಲು ಹೋಗಿ ಇದೀಗ ಜೈಲು ಸೇರಿದ್ದಾನೆ.

ಟಿ ನಗರ ಟ್ರಾಫಿಕ್ ಪೊಲೀಸರು ಯುವಕನ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೋ ಇಲ್ಲಿದೆ ನೋಡಿ..

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

01. ಉಡುಪಿಯಲ್ಲಿ ಭೀಕರ ಅಪಘಾತ- ಇನೋವಾ ಗುದ್ದಿದ ರಭಸಕ್ಕೆ ಗಾಳಿಯಲ್ಲಿ ತೂರಿ ಹೋದ ಪಲ್ಸರ್ ಬೈಕ್...

02. 30 ಕೋಟಿಗೂ ಹೆಚ್ಚು ಬೆಲೆಬಾಳುವ ಈ ಐಷಾರಾಮಿ ಎಸ್‌ಯುವಿ ಕಾರಿನ ವಿಶೇಷತೆ ಏನು?

03. ಕಾನೂನು ಬಾಹಿರವಾಗಿ ಪಾರ್ಕ್ ಮಾಡಿದ್ದಕ್ಕೆ ಸೂಪರ್ ಕಾರ್ ಪುಡಿ ಪುಡಿ ಮಾಡಿದ್ರು...

04. ಟ್ರಾಫಿಕ್ ರೂಲ್ಸ್ ಬ್ರೇಕ್- ಮಗನನ್ನೇ ಹಿಡಿದು ದಂಡ ವಸೂಲಿ ಮಾಡಿದ ಪೊಲೀಸ್..

05. ವಾಹನ ಪ್ರಿಯರಿಗೆ ಸಿಹಿ ಸುದ್ಧಿ ನೀಡಿದ ಸಾರಿಗೆ ಇಲಾಖೆ..

Most Read Articles

Kannada
Read more on traffic police
English summary
Traffic cops beat up youth after argument on not wearing helmet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X