ಫ್ಯಾನ್ಸಿ ನಂಬರ್ ಪ್ಲೇಟ್‍ ವಾಹನಗಳಿಗೆ ಬೀಳುತ್ತಿದೆ ದಂಡ..!

ಫ್ಯಾನ್ಸಿ ನಂಬರ್‍‍ಗಳನ್ನು ಹೊಂದುವುದು ಇತ್ತೀಚಿಗೆ ದೊಡ್ಡ ಕ್ರೇಜ್ ಆಗಿದೆ. ಅದರ ಜೊತೆಗೆ ಫ್ಯಾನ್ಸಿ ನಂಬರ್ ಪ್ಲೇಟ್‍‍ಗಳನ್ನು ಹೊಂದುತ್ತಿರುವುದನ್ನು ಕಾಣಬಹುದು. ಅದರಲ್ಲೂ ಬಹುತೇಕ ಫ್ಯಾನ್ಸಿ ನಂಬರ್ ಪ್ಲೇಟ್‍‍ಗಳು ದೋಷಪೂರಿತವಾಗಿರುತ್ತವೆ.

ಫ್ಯಾನ್ಸಿ ನಂಬರ್ ಪ್ಲೇಟ್‍ ವಾಹನಗಳಿಗೆ ಬೀಳುತ್ತಿದೆ ದಂಡ..!

ನಿಮ್ಮ ಬಳಿಯಿರುವ ವಾಹನಗಳಲ್ಲಿ ಫ್ಯಾನ್ಸಿ ನಂಬರ್ ಪ್ಲೇಟ್‍‍ಗಳಿದ್ದರೆ, ಎಚ್ಚರ. ನಿಮ್ಮ ವಾಹನಗಳಿಗೂ ದಂಡ ಬೀಳಬಹುದು. ಈ ವರ್ಷದ ಜನವರಿಯಿಂದ ಇಲ್ಲಿಯವರೆಗೂ ಮುಂಬೈನಲ್ಲಿ 2,272 ವಾಹನಗಳಿಗೆ ದೋಷಯುಕ್ತ ನಂಬರ್ ಪ್ಲೇಟ್ ಹೊಂದಿದ್ದ ಕಾರಣಕ್ಕೆ ದಂಡ ವಿಧಿಸಲಾಗಿದೆ. ಸೋಮವಾರ ಪೊಲೀಸ್ ಇಲಾಖೆ ದೋಷಯುಕ್ತ ನಂಬರ್ ಪ್ಲೇಟ್ ಹೊಂದಿದ್ದ ಎಲ್ಲಾ 2,272 ವಾಹನಗಳ ಮಾಲೀಕರ ಮೊಬೈಲಿಗೆ ಎಸ್‍ಎಂ‍ಎಸ್ ಕಳುಹಿಸಿದೆ.

ಫ್ಯಾನ್ಸಿ ನಂಬರ್ ಪ್ಲೇಟ್‍ ವಾಹನಗಳಿಗೆ ಬೀಳುತ್ತಿದೆ ದಂಡ..!

ಆ ಎಸ್‍ಎಂ‍ಎಸ್‍‍ನಲ್ಲಿ ನಿಮ್ಮ ವಾಹನವು ದೋಷಯುಕ್ತ ನಂಬರ್ ಪ್ಲೇಟ್ ಹೊಂದಿದ್ದ ಕಾರಣಕ್ಕೆ ದಂಡ ವಿಧಿಸಲಾಗಿದೆ. ನೀವು ನಿಮ್ಮ ವಾಹನದ ನಂಬರ್ ಪ್ಲೇಟ್ ಅನ್ನು ಮೋಟಾರ್ ವೆಹಿಕಲ್ ಆಕ್ಟ್ ನಿಯಮ 51ರ ಪ್ರಕಾರ ಸರಿಯಾದ ಕ್ರಮದಲ್ಲಿ ಅಳವಡಿಸಿಕೊಂಡಿದ್ದೆರೆಂದು ಭಾವಿಸುತ್ತೇವೆ.

ಫ್ಯಾನ್ಸಿ ನಂಬರ್ ಪ್ಲೇಟ್‍ ವಾಹನಗಳಿಗೆ ಬೀಳುತ್ತಿದೆ ದಂಡ..!

ಪದೆ ಪದೇ ದಂಡವನ್ನು ವಿಧಿಸುವುದರಿಂದ ತಪ್ಪಿಸಿಕೊಳ್ಳಲು ಸರಿಯಾದ ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳಿ ಎಂದು ತಿಳಿಸಲಾಗಿದೆ. ಈ ಬಗ್ಗೆ ಮಾತನಾಡಿರುವ ಟ್ರಾಫಿಕ್ ವಿಭಾಗದ ಜಂಟಿ ಕಮೀಷನರ್ ಮಧುಕರ್ ಪಾಂಡೆರವರು, ಪೊಲೀಸ್ ಇಲಾಖೆಯು ಸರಿಯಾದ ನಂಬರ್ ಪ್ಲೇಟ್‍‍ಗಳನ್ನು ಅಳವಡಿಸಿಕೊಳ್ಳುವಂತೆ ನೆನಪಿಸುವ ಕಾರ್ಯವಿಧಾನವನ್ನು ಜಾರಿಗೆ ತಂದಿದೆ.

ಫ್ಯಾನ್ಸಿ ನಂಬರ್ ಪ್ಲೇಟ್‍ ವಾಹನಗಳಿಗೆ ಬೀಳುತ್ತಿದೆ ದಂಡ..!

ವಾಹನಗಳ ಮಾಲೀಕರು ಇದನ್ನು ಪಾಲಿಸದಿದ್ದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಮೋಟಾರು ವಾಹನಗಳ ಕಾಯ್ದೆಯ ಪ್ರಕಾರ ಸರಿಯಾದ ಕ್ರಮದಲ್ಲಿ ನಂಬರ್‌ ಪ್ಲೇಟ್‌ಗಳನ್ನು ಹೊಂದ ಬೇಕಾಗಿದೆ. ನಂಬರ್ ಪ್ಲೇಟ್‍‍ಗಳು ಓದುವಂತಿರಬೇಕು.

ದ್ವಿಚಕ್ರ ವಾಹನಗಳ ನಂಬರ್ ಪ್ಲೇಟ್‍‍ನಲ್ಲಿರುವ ನೋಂದಣಿ ಸಂಖ್ಯೆಗಳು ಬಿಳಿ ಬಣ್ಣದ ಬೋರ್ಡಿನಲ್ಲಿ ಕಪ್ಪು ಬಣ್ಣದಲ್ಲಿರಬೇಕು. ಫ್ಯಾನ್ಸಿ ಲೆಟರ್‍‍ಗಳನ್ನು ಅಳವಡಿಸಿಕೊಳ್ಳಲು ಅನುಮತಿ ನೀಡಲಾಗುವುದಿಲ್ಲ. ಹೆಸರು ಹಾಗೂ ಚಿತ್ರಗಳನ್ನು ಅಳವಡಿಸಿಕೊಳ್ಳುವಂತಿಲ್ಲ.

ದ್ವಿಚಕ್ರ ವಾಹನಗಳ ನಂಬರ್ ಪ್ಲೇಟ್‍‍ನಲ್ಲಿರುವ ನೋಂದಣಿ ಸಂಖ್ಯೆಗಳು ಬಿಳಿ ಬಣ್ಣದ ಬೋರ್ಡಿನಲ್ಲಿ ಕಪ್ಪು ಬಣ್ಣದಲ್ಲಿರಬೇಕು. ಫ್ಯಾನ್ಸಿ ಲೆಟರ್‍‍ಗಳನ್ನು ಅಳವಡಿಸಿಕೊಳ್ಳಲು ಅನುಮತಿ ನೀಡಲಾಗುವುದಿಲ್ಲ. ಹೆಸರು ಹಾಗೂ ಚಿತ್ರಗಳನ್ನು ಅಳವಡಿಸಿಕೊಳ್ಳುವಂತಿಲ್ಲ.

ಫ್ಯಾನ್ಸಿ ನಂಬರ್ ಪ್ಲೇಟ್‍ ವಾಹನಗಳಿಗೆ ಬೀಳುತ್ತಿದೆ ದಂಡ..!

ಬಹುತೇಕ ಬಾರಿ ರಿಜಿಸ್ಟ್ರೇಷನ್ ಪ್ಲೇಟ್‍‍ನಲ್ಲಿರುವ ಸಂಖ್ಯೆಗಳು ಪದಗಳನ್ನು ಹೋಲುತ್ತವೆ ಎಂದು ಅಧಿಕಾರಿಯೊಬ್ಬರು ಹೇಳಿದರು. 4141 ಸಂಖ್ಯೆಯನ್ನು ಮರಾಠಿಯ ದಾದಾ ಪದದಂತೆ ಕಾಣುವಂತೆ ಬರೆಯಬಹುದು. 2124 ಹಾಗೂ 4912 ಸಂಖ್ಯೆಗಳನ್ನು ಮರಾಠಿಯಲ್ಲಿ ಶರದ್ ಹಾಗೂ ಪವಾರ್ ಪದದಂತೆ ಕಾಣುವಂತೆ ಮಾಡಬಹುದು.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಫ್ಯಾನ್ಸಿ ನಂಬರ್ ಪ್ಲೇಟ್‍ ವಾಹನಗಳಿಗೆ ಬೀಳುತ್ತಿದೆ ದಂಡ..!

8055 ಸಂಖ್ಯೆಯನ್ನು ಇಂಗ್ಲಿಷ್‌ನ ಬಾಸ್ ರೀತಿಯಲ್ಲಿ ಕಾಣುವಂತೆ ಬರೆಯಬಹುದು. ನಂಬರ್ ಪ್ಲೇಟ್‌ಗಳನ್ನು ತಯಾರಿಸುವವರು ಫಾಂಟ್‌, ಸೈಜ್ ಹಾಗೂ ಅಕ್ಷರಗಳನ್ನು ತಮಗೆ ಬೇಕಾದ ರೀತಿಯಲ್ಲಿ ಬರೆಯುತ್ತಾರೆ. ಇವುಗಳು ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತವೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಫ್ಯಾನ್ಸಿ ನಂಬರ್ ಪ್ಲೇಟ್‍ ವಾಹನಗಳಿಗೆ ಬೀಳುತ್ತಿದೆ ದಂಡ..!

ಟ್ರಾಫಿಕ್ ಪೊಲೀಸರಿಗೂ ಇಂತಹ ನಂಬರ್ ಪ್ಲೇಟ್‍‍ಗಳನ್ನು ಓದುವುದಕ್ಕೆ ಕಷ್ಟವಾಗುತ್ತದೆ. ಅದರಲ್ಲೂ ರಾತ್ರಿ ವೇಳೆಯಲ್ಲಿ ತೊಂದರೆಯಾಗಲಿದೆ. ಪೊಲೀಸ್ ಚೆಕ್ ಪೋಸ್ಟ್‌ ಬಳಿ ರಾತ್ರಿ ವೇಳೆಯಲ್ಲಿ ತಪಾಸಣೆಗಾಗಿ ವಾಹನಗಳನ್ನು ನಿಲ್ಲಿಸದೆ, ವಾಹನಗಳನ್ನು ವೇಗವಾಗಿ ಚಲಾಯಿಸಿಕೊಂಡು ಹೋದರೆ, ಆ ವಾಹನದ ವಿವರಗಳನ್ನು ತಿಳಿಯಲು ಪೊಲೀಸರಿಗೆ ತೊಂದರೆಯಾಗುತ್ತದೆ.

MOST READ: ಬುಗಾಟಿ ಹೈಪರ್ ಕಾರು ಹೊಂದಿರುವ ಭಾರತೀಯರು

ಫ್ಯಾನ್ಸಿ ನಂಬರ್ ಪ್ಲೇಟ್‍ ವಾಹನಗಳಿಗೆ ಬೀಳುತ್ತಿದೆ ದಂಡ..!

ಕೆಲವು ವಾಹನಗಳಲ್ಲಿ ದೊಡ್ಡದಾದ, ದಪ್ಪವಾದ ಅಕ್ಷರಗಳಲ್ಲಿ ದಾದಾ ಎಂದು ಬರೆದುಕೊಂಡಿದ್ದರೆ, ಅಂತಹ ವಾಹನಗಳನ್ನು ಟ್ರ್ಯಾಕ್ ಮಾಡುವುದು ತುಂಬಾ ಕಷ್ಟದ ಕೆಲಸ. ಅನೇಕ ನಂಬರ್ ಪ್ಲೇಟ್‍‍ಗಳಲ್ಲಿ ಸಂಖ್ಯೆಗಳು ತುಂಬಾ ಚಿಕ್ಕದಾಗಿದ್ದು, ಅವುಗಳನ್ನು ಓದುವುದಕ್ಕೆ ಕಷ್ಟವಾಗುತ್ತದೆ. ಇಂತಹ ನಿಯಮ ಉಲ್ಲಂಘನೆಗಳಿಗಾಗಿ ದಂಡ ವಿಧಿಸಿ, ವಾಹನ ಚಾಲಕರು ನಿಯಮಗಳನ್ನು ಪಾಲಿಸುವಂತೆ ಮಾಡುತ್ತೇವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.

Most Read Articles

Kannada
English summary
Traffic police fines 2,275 vehicle owners for fancy number plates - Read in kannada
Story first published: Wednesday, August 21, 2019, 14:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X