ಬೆಂಗಳೂರಿನಲ್ಲಿ ಸಂಚಾರಿ ಪೊಲೀಸರ ವಸೂಲಿ ದಂಧೆ

ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ಹೆಸರಲ್ಲಿ ಸಂಚಾರಿ ಪೊಲೀಸರು ಚಾಲಕರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಸಂಚಾರಿ ಪೊಲೀಸರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಅಮಾನತು ಮಾಡಲಾಗಿದೆ.

ಬೆಂಗಳೂರಿನಲ್ಲಿ ಸಂಚಾರಿ ಪೊಲೀಸರ ವಸೂಲಿ ದಂಧೆ..!

ಬೆಂಗಳೂರಿನ ಅಶೋಕ್ ನಗರ ಸಂಚಾರಿ ಪೊಲೀಸ್ ಠಾಣೆ ಎಎಸ್‍ಐ ಮುನಿಯಪ್ಪ, ಪೇದೆಗಳಾದ ಗಂಗರಾಜು, ನಾಗರಾಜ್ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಸಂಚಾರಿ ಪೊಲೀಸರು ಖಾಸಗಿ ಆಲ್ಕೋಹಾಲ್ ಮೀಟರ್ ಬಳಿಸಿ ಹಿರಿಯ ಅಧಿಕಾರಿಗಳ ಅನುಮತಿ ಇಲ್ಲದೇ ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ಮಾಡುತ್ತಿದ್ದರು.

ಬೆಂಗಳೂರಿನಲ್ಲಿ ಸಂಚಾರಿ ಪೊಲೀಸರ ವಸೂಲಿ ದಂಧೆ..!

ಚಾಲಕರು ಹಾಗೂ ಸವಾರರಿಂದ ಹಣ ವಸೂಲಿ ಮಾಡುತ್ತಿದ್ದ ಸಂಚಾರಿ ಪೊಲೀಸರ ಮೇಲೆ ಕ್ರಿಮಿನಲ್ ಕೇಸ್ ಅಡಿ ವಿವೇಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ. ವಿವೇಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಈ ಸಂಚಾರಿ ಪೊಲೀಸರು ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ಹೆಸರಲ್ಲಿ ಹಣ ವಸೂಲಿ ಮಾಡುತ್ತಿದ್ದರು.

ಬೆಂಗಳೂರಿನಲ್ಲಿ ಸಂಚಾರಿ ಪೊಲೀಸರ ವಸೂಲಿ ದಂಧೆ..!

ಈ ಸಂಚಾರಿ ಪೊಲೀಸರು ಖಾಸಗಿ ಆಲ್ಕೋಹಾಲ್ ಮೀಟರ್ ಬಳಿಸಿ ಹಿರಿಯ ಅಧಿಕಾರಿಗಳ ಅನುಮತಿ ಇಲ್ಲದೇ ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ಮಾಡುತ್ತಿದ್ದರು. ಈ ಪೊಲೀಸ್ ಅಧಿಕಾರಿಗಳು ಬೈಕ್ ಮತ್ತು ಕಾರು ಪ್ರಯಾಣಿಕರನ್ನು ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ಮಾಡಲು ಇಲಾಖೆ ನೀಡಿರುವ ಅಧಿಕೃತ ಆಲ್ಕೋಹಾಲ್ ಮೀಟರ್ ಬಳಸದೆ ಖಾಸಗಿ ಆಲ್ಕೋಹಾಲ್ ಮೀಟರ್ ಬಳಸಿ ತಪಾಸಣೆ ಮಾಡುತ್ತಿದ್ದರು.

ಬೆಂಗಳೂರಿನಲ್ಲಿ ಸಂಚಾರಿ ಪೊಲೀಸರ ವಸೂಲಿ ದಂಧೆ..!

ಈ ಪೊಲೀಸ್ ಅಧಿಕಾರಿಗಳು ಯಾವುದೇ ದಂಡದ ಚಲನ್‍‍ಗಳನ್ನು ನೀಡದೆ ದಂಡವನ್ನು ಸಂಗ್ರಹಿಸುತ್ತಿದ್ದರು. ಸಂಚಾರ ಪೊಲೀಸರ ಹಣ ವಸೂಲಿ ದಂಧೆಯ ಬಗ್ಗೆ ಸಾರ್ವಜನಿಕರಿಂದ ಹಲವು ದೂರುಗಳು ಬಂದಿದ್ದವು.

ಬೆಂಗಳೂರಿನಲ್ಲಿ ಸಂಚಾರಿ ಪೊಲೀಸರ ವಸೂಲಿ ದಂಧೆ..!

ದೂರದಾರರ ಸಹಾಯದಿಂದ ಶನಿವಾರ ಹಿರಿಯ ಪೊಲೀಸ್ ಅಧಿಕಾರಿಗಳು ಅವರನ್ನು ಬಂಧಿಸಲು ಪ್ಲ್ಯಾನ್ ರೂಪಿಸಿದ್ದರು. ಎಎಸ್‍ಐ ಮುನಿಯಪ್ಪ ನೇತೃತ್ವದಲ್ಲಿ ಪೇದೆಗಳು ಶ್ರೀನಿವಾಗಿಲು ಜಂಕ್ಷನ್ ಬಳಿ ಚಾಲಕರನ್ನು ತಡೆದು ನ್ಯಾಯಾಲಕ್ಕೆ ಹೋದರೆ ರೂ.15 ಸಾವಿರ ಕಟ್ಟಬೇಕಾಗುತ್ತದೆ.

ಬೆಂಗಳೂರಿನಲ್ಲಿ ಸಂಚಾರಿ ಪೊಲೀಸರ ವಸೂಲಿ ದಂಧೆ..!

ಇಲ್ಲಿ ಹಣ ಕಟ್ಟಿ ಅಂತ ಹಣ ಕಟ್ಟಿಸಿಕೊಳ್ಳುತ್ತಿದ್ದರು. ಅದ್ದರಂತೆ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿರುವಾಗ ಈ ಪೊಲೀಸ್ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದಾರೆ. ಈ ವೇಳೆ ಬಂದ ಪೊಲೀಸ್ ಹಿರಿಯ ಅಧಿಕಾರಿಗಳ ತಂಡ ಅವರನ್ನು ಹಿಡಿದು ದೂರು ದಾಖಲಿಸಿದೆ.

MOST READ: ಕಾರು ಖರೀದಿದಾರರ ನೆಚ್ಚಿನ ಬಣ್ಣ ಯಾವುದು ಗೊತ್ತಾ?

ಬೆಂಗಳೂರಿನಲ್ಲಿ ಸಂಚಾರಿ ಪೊಲೀಸರ ವಸೂಲಿ ದಂಧೆ..!

ಈ ವೇಳೆ ಸಂಚಾರಿ ಪೊಲೀಸರ ಬಳಿ ಇದ್ದ ಖಾಸಗಿ ಆಲ್ಕೋಮೀಟರ್‍ ಅನ್ನು ವಶಪಡಿಸಿಕೊಳ್ಳಲಾಗಿದೆ. ಇದರೊಂದಿಗೆ ಅವರ ಬಳಿ ರೂ.32,000 ನಗದು ಮತ್ತು ಚಾಲನಾ ಪರವಾನಗಿಗಳನ್ನು ವಶಪಡಿಸಿಕೊಳ್ಳಲಾಗಿದೆ.

MOST READ: ಪ್ರತಿ ಲೀಟರ್ ನೀರಿಗೆ 35 ಕಿ.ಮಿ ಮೈಲೇಜ್ ನೀಡುವ ಕಾರ್ ಎಂಜಿನ್ ಸಿದ್ದಪಡಿಸಿದ 21 ವರ್ಷದ ಯುವಕ

ಬೆಂಗಳೂರಿನಲ್ಲಿ ಸಂಚಾರಿ ಪೊಲೀಸರ ವಸೂಲಿ ದಂಧೆ..!

ಸಿಕ್ಕಿ ಬಿದ್ದಿರುವ ಸಂಚಾರಿ ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಮತ್ತು ಪ್ರಕರಣದ ಬಗ್ಗೆ ಹೆಚ್ಚಿನ ತನಖೆ ನಡೆಸುವಂತೆ ಹಿರಿಯ ಅಧಿಕಾರಗಳು ಸೂಚನೆ ನೀಡಲಾಗಿದೆ. ಬೆಂಗಳೂರಿನಲ್ಲಿ ಸಂಚಾರಿ ಪೊಲೀಸರು ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ಮಾಡುವುದು ಸಾಮಾನ್ಯ, ಆದರೆ ಇದರ ಹಿಂದಿನ ಹಣ ವಸೂಲಿ ಮಾಡುವ ದಂಧೆಯ ವಿಷಯ ಕೇಳಿ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಬೆಂಗಳೂರಿನಲ್ಲಿ ಸಂಚಾರಿ ಪೊಲೀಸರ ವಸೂಲಿ ದಂಧೆ..!

ಈ ಸಂಚಾರಿ ಪೊಲೀಸರು ಕಳೆದ ಕೆಲವು ತಿಂಗಳುಗಳಿಂದ ಈ ದಂಧೆಯನ್ನು ನಡೆಸುತ್ತಿದ್ದಾರೆ ಎಂದು ಶಂಕಿಸಲಾಗಿದೆ. ಡ್ರಗ್ಸ್ ಅಥವಾ ಮಧ್ಯಪಾನ ಮಾಡಿ ವಾಹನ ಚಲಾಯಿಸುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. ಮೊದಲ ಬಾರಿ ಅಪರಾಧ ಮಾಡಿದರೆ ರೂ.2 ಸಾವಿರ ದಂಡ ಅಥವಾ 6 ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಬಹುದು.

ಬೆಂಗಳೂರಿನಲ್ಲಿ ಸಂಚಾರಿ ಪೊಲೀಸರ ವಸೂಲಿ ದಂಧೆ..!

ಮತ್ತೊಮ್ಮೆ ಈ ಅಪರಾಧ ಮಾಡಿದರೆ ರೂ.3,000 ದಂಡ ಮತ್ತು 2 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಬಹುದು. ಆಲ್ಕೋಹಾಲ್ ಪ್ರಮಾಣವು 100 ಮಿಲಿಲೀಟರ್ ರಕ್ತಕ್ಕೆ 30 ಮಿಲಿಗ್ರಾಂ ಅನ್ನು ಮೀರಿದರೆ ಅಥವಾ ಉಸಿರಾಟದ ಪರೀಕ್ಷೆಯಲ್ಲಿ ಮಧ್ಯಪಾನ ಮಾಡಿರುವುದು ಪತ್ತೆಯಾಗುತ್ತದೆ.

Most Read Articles

Kannada
English summary
Policemen caught with fake devices to check alcohol level – Suspended - Read in Kannada
Story first published: Wednesday, December 18, 2019, 12:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X