ಟ್ರಾಫಿಕ್ ಕಂಟ್ರೋಲ್ ಜೊತೆಗೆ ಈ ಕೆಲಸವನ್ನು ಮಾಡ್ತಾರೆ ಈ ಸಂಚಾರಿ ಪೊಲೀಸ್

ಭಾರತದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಿಂದ ಪ್ರತಿ ವರ್ಷ ಸುಮಾರು 1.50 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯ ವಾಹನ ಸವಾರರು ಸಂಚಾರಿ ನಿಯಮಗಳನ್ನು ಉಲ್ಲಂಘಿಸುವುದೇ ರಸ್ತೆ ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ.

ಟ್ರಾಫಿಕ್ ಕಂಟ್ರೋಲ್ ಜೊತೆಗೆ ಈ ಕೆಲಸವನ್ನು ಮಾಡ್ತಾರೆ ಈ ಸಂಚಾರಿ ಪೊಲೀಸ್

ಈ ಕಾರಣಕ್ಕೆ ಟ್ರಾಫಿಕ್ ಪೊಲೀಸರು ವಾಹನ ಸವಾರರು ಸಂಚಾರ ನಿಯಮಗಳನ್ನು ಪಾಲಿಸುವಂತೆ ಮಾಡಲು ವಾಹನಗಳ ತಪಾಸಣೆ ನಡೆಸಿ, ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರಿಗೆ ದಂಡ ವಿಧಿಸುತ್ತಿದ್ದಾರೆ. ಆದರೆ ಕೆಲವೊಮ್ಮೆ ಟ್ರಾಫಿಕ್ ಪೊಲೀಸರು ವಾಹನ ದಂಡದ ಹೆಸರಿನಲ್ಲಿ ವಾಹನ ಸವಾರರ ಸುಲಿಗೆ ಮಾಡುತ್ತಿದ್ದಾರೆ ಎಂಬ ಆರೋಪಗಳಿವೆ.

ಟ್ರಾಫಿಕ್ ಕಂಟ್ರೋಲ್ ಜೊತೆಗೆ ಈ ಕೆಲಸವನ್ನು ಮಾಡ್ತಾರೆ ಈ ಸಂಚಾರಿ ಪೊಲೀಸ್

ಇದು ವಾಹನ ಸವಾರರು ಹಾಗೂ ಸಂಚಾರಿ ಪೊಲೀಸರ ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ. ಈ ರೀತಿಯ ವಾತಾವರಣದ ನಡುವೆ ಟ್ರಾಫಿಕ್ ಪೊಲೀಸ್ ಒಬ್ಬರು ಮಾಡಿದ ಕಾರ್ಯಕ್ಕೆ ದೇಶದೆಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಟ್ರಾಫಿಕ್ ಕಂಟ್ರೋಲ್ ಜೊತೆಗೆ ಈ ಕೆಲಸವನ್ನು ಮಾಡ್ತಾರೆ ಈ ಸಂಚಾರಿ ಪೊಲೀಸ್

ಲಲಿತ್ ಮೋಹನ್, ಒರಿಸ್ಸಾದ ಕಟಕ್‌ನಲ್ಲಿರುವ ಟೌನ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ಇತ್ತೀಚೆಗೆ ಕಾರ್ಯ ನಿರ್ವಹಿಸುತ್ತಿದ್ದ ವೇಳೆಯಲ್ಲಿ ಪೊರಕೆ ಹಿಡಿದು ರಸ್ತೆಯನ್ನು ಸ್ವಚ್ಛಗೊಳಿಸಿದ್ದಾರೆ. ಅವರು ರಸ್ತೆಯನ್ನು ಸ್ವಚ್ಛಗೊಳಿಸುತ್ತಿರುವ ವೀಡಿಯೊ ವೈರಲ್ ಆಗಿದೆ.

ಟ್ರಾಫಿಕ್ ಕಂಟ್ರೋಲ್ ಜೊತೆಗೆ ಈ ಕೆಲಸವನ್ನು ಮಾಡ್ತಾರೆ ಈ ಸಂಚಾರಿ ಪೊಲೀಸ್

ರಸ್ತೆಯ ಮೇಲಿದ್ದ ಮರಳು ಹಾಗೂ ಸಣ್ಣ ಕಲ್ಲುಗಳಿಂದಾಗಿ ವಾಹನ ಸವಾರರು ಜಾರಿಬಿದ್ದು, ಅಪಘಾತಗಳಾಗಬಾರದು ಎಂಬ ಸದುದ್ದೇಶದಿಂದ ಅವರು ರಸ್ತೆಯನ್ನು ಸ್ವಚ್ಛಗೊಳಿಸಿದ್ದಾರೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಟ್ರಾಫಿಕ್ ಕಂಟ್ರೋಲ್ ಜೊತೆಗೆ ಈ ಕೆಲಸವನ್ನು ಮಾಡ್ತಾರೆ ಈ ಸಂಚಾರಿ ಪೊಲೀಸ್

ಅವರ ಈ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಮೆಚ್ಚುಗೆ ಸೂಚಿಸಿದ್ದಾರೆ. ಇದು ನಿಜವಾಗಿಯೂ ಮೆಚ್ಚುಗೆ ಸೂಚಿಸಬೇಕಾದ ವಿಷಯ. ಇದರಿಂದ ವಾಹನ ಸವಾರರು ಜಾರಿ ಬಿದ್ದು, ಅಪಘಾತಗಳಾಗುವುದು ತಪ್ಪಿದೆ.

ಟ್ರಾಫಿಕ್ ಕಂಟ್ರೋಲ್ ಜೊತೆಗೆ ಈ ಕೆಲಸವನ್ನು ಮಾಡ್ತಾರೆ ಈ ಸಂಚಾರಿ ಪೊಲೀಸ್

ಕೆಲವರು ಲಲಿತ್ ಮೋಹನ್ ಅವರ ಈ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದ್ದರೆ, ಇನ್ನೂ ಕೆಲವರು ಇದು ಅವರ ಕೆಲಸವಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಕಟಕ್ ಕಾರ್ಪೊರೇಶನ್ ಅಧಿಕಾರಿಗಳು ತಮ್ಮ ಕೆಲಸವನ್ನು ಸರಿಯಾಗಿ ಮಾಡುತ್ತಿಲ್ಲ ಎಂದು ಕೆಲವರು ಕುಟುಕಿದ್ದಾರೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ತಮ್ಮ ಕೆಲಸವಲ್ಲವೆಂದು ತಿಳಿದಿದ್ದರೂ ವಾಹನ ಸವಾರರ ಅನುಕೂಲಕ್ಕಾಗಿ ರಸ್ತೆಯನ್ನು ಗುಡಿಸಿದ ಟ್ರಾಫಿಕ್ ಪೊಲೀಸ್ ಲಲಿತ್ ಮೋಹನ್ ರವರ ಕಾರ್ಯ ನಿಜವಾಗಿಯೂ ಅಭಿನಂದನಾರ್ಹವಾಗಿದೆ. ಈ ಮೂಲಕ ಲಲಿತ್ ಮೋಹನ್ ಇತರರಿಗೆ ಮಾದರಿಯಾಗಿದ್ದಾರೆ.

ಟ್ರಾಫಿಕ್ ಕಂಟ್ರೋಲ್ ಜೊತೆಗೆ ಈ ಕೆಲಸವನ್ನು ಮಾಡ್ತಾರೆ ಈ ಸಂಚಾರಿ ಪೊಲೀಸ್

ಲಲಿತ್ ಮೋಹನ್ ರಸ್ತೆ ಸ್ವಚ್ಛಗೊಳಿಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳ ಮೂಲಕ ಅವರ ಹಿರಿಯ ಅಧಿಕಾರಿಗಳ ಗಮನಕ್ಕೂ ಬಂದಿದೆ. ಅವರ ಈ ಕಾರ್ಯಕ್ಕೆ ಮೇಲಾಧಿಕಾರಿಗಳು ಸಹ ಮೆಚ್ಚುಗೆ ಸೂಚಿಸಿದ್ದಾರೆ.

Most Read Articles

Kannada
English summary
Traffic police sweeps road with broom. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X