ಸಿಸಿಟಿವಿಯಿಂದಾಗಿ ಕಡಿಮೆಯಾದ ಸಿಗ್ನಲ್ ಜಂಪ್ ಪ್ರಕರಣಗಳು

ಪೊಲೀಸ್ ಇಲಾಖೆ ಅಳವಡಿಸಿರುವ ಸಿಸಿಟಿವಿ ಕ್ಯಾಮರಾಗಳು ಹಳೆಯ ಕ್ರಮಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿವೆ. ಪೊಲೀಸ್ ವರದಿಗಳ ಪ್ರಕಾರ, ಸಿಸಿಟಿವಿಗಳನ್ನು ಅಳವಡಿಸಿದ ನಂತರ 35% ನಷ್ಟು ಸಿಗ್ನಲ್ ಜಂಪ್ ಪ್ರಕರಣಗಳು ಕಡಿಮೆಯಾಗಿವೆ.

ಸಿಸಿಟಿವಿಯಿಂದಾಗಿ ಕಡಿಮೆಯಾದ ಸಿಗ್ನಲ್ ಜಂಪ್ ಪ್ರಕರಣಗಳು

ಸಿಗ್ನಲ್ ಜಂಪ್ ಪ್ರಕರಣಗಳು ಕಡಿಮೆಯಾಗುತ್ತಿರುವ ಶ್ರೇಯಸ್ಸು ಸಿಸಿಟಿವಿಗಳಿಗೆ ಸಲ್ಲಬೇಕು. ಸಿಸಿಟಿವಿಗಳನ್ನು ಟ್ರಾಫಿಕ್ ಹೆಚ್ಚು ಇರುವ ಜಂಕ್ಷನ್‍‍ಗಳಲ್ಲಿ ಹೆಚ್ಚಾಗಿ ಅಳವಡಿಸಲಾಗಿದ್ದು, ಇದರ ಜೊತೆಗೆ ರೆಡ್ ಲೈಟ್ ವಯೊಲೇಷನ್ ಡಿಟೆಕ್ಟರ್ (ಆರ್‍ಎಲ್‍‍ವಿ‍‍ಡಿ) ಗಳನ್ನು ಅಳವಡಿಸಲಾಗಿದ್ದು, ಇವು ಸಿಗ್ನಲ್ ಉಲ್ಲಂಘನೆ ಮಾಡುವ ವಾಹನಗಳ ನಂಬರ್ ಪ್ಲೇಟ್‍‍ಗಳನ್ನು ಸೆರೆ ಹಿಡಿಯುತ್ತವೆ. 2016ರಲ್ಲಿ ಸರಿ ಸುಮಾರು 10.2 ಲಕ್ಷ ವಾಹನಗಳು ಬೆಂಗಳೂರಿನದ್ಯಂತ ಸಿಗ್ನಲ್ ಜಂಪ್ ಮಾಡಿದ್ದ ಪ್ರಕರಣಗಳು ದಾಖಲಾಗಿದ್ದವು.

ಸಿಸಿಟಿವಿಯಿಂದಾಗಿ ಕಡಿಮೆಯಾದ ಸಿಗ್ನಲ್ ಜಂಪ್ ಪ್ರಕರಣಗಳು

2017ರಲ್ಲಿ ಈ ಪ್ರಕರಣಗಳ ಸಂಖ್ಯೆಯಲ್ಲಿ ಕುಸಿತ ಉಂಟಾಗಿ 7.21 ಲಕ್ಷ ಪ್ರಕರಣಗಳು ದಾಖಲಾಗಿದ್ದವು, 2018ರಲ್ಲಿ 6.4 ಲಕ್ಷ ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನಲ್ಲಿ ಸದ್ಯ 731 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.

ಸಿಸಿಟಿವಿಯಿಂದಾಗಿ ಕಡಿಮೆಯಾದ ಸಿಗ್ನಲ್ ಜಂಪ್ ಪ್ರಕರಣಗಳು

ಇವುಗಳ ಪೈಕಿ 170 ಕ್ಯಾಮರಾಗಳನ್ನು ಸೆಂಟ್ರಲ್ ಬಿಸಿನೆಸ್ ಡಿಸ್ಟ್ರಿಕ್ಟ್ ಹಾಗೂ ಸೂಕ್ಷ್ಮ ಟ್ರಾಫಿಕ್ ಪ್ರದೇಶವಾದ ಅಂತರ್‍‍ರಾಷ್ಟ್ರೀಯ ಏರ್‍‍ಪೋರ್ಟ್ ರಸ್ತೆಯ ಎಕ್ಸ್ ಪ್ರೆಸ್ ಹೈವೇಯಲ್ಲಿ ಅಳವಡಿಸಲಾಗಿದೆ. ಇದರ ಜೊತೆಗೆ ಬೆಂಗಳೂರಿನಲ್ಲಿ 10 ಆರ್‍ಎಲ್‍‍ವಿ‍‍ಡಿ ಕ್ಯಾಮರಾಗಳಿದ್ದು, ಇವುಗಳು ನಂಬರ್ ಪ್ಲೇಟ್‍‍ಗಳನ್ನು ಸೆರೆ ಹಿಡಿಯುತ್ತವೆ.

ಸಿಸಿಟಿವಿಯಿಂದಾಗಿ ಕಡಿಮೆಯಾದ ಸಿಗ್ನಲ್ ಜಂಪ್ ಪ್ರಕರಣಗಳು

ನಂಬರ್ ಪ್ಲೇಟ್‍‍ಗಳ ಸಹಾಯದಿಂದ ವಾಹನಗಳ ಮಾಲೀಕರನ್ನು ಪತ್ತೆ ಹಚ್ಚಿ, ಅವರ ವಿಳಾಸಕ್ಕೆ ನೋಟಿಸ್ ಕಳುಹಿಸಲಾಗುತ್ತದೆ. ಈ ಬಗ್ಗೆ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಟಿ ಸುನೀಲ್ ಕುಮಾರ್‍‍ರವರು, ಪೊಲೀಸ್ ಇಲಾಖೆಯು ಮತ್ತಷ್ಟು ಆರ್‍ಎಲ್‍‍ವಿ‍‍ಡಿ ಕ್ಯಾಮರಾಗಳನ್ನು ಅಳವಡಿಸಲಿದೆ ಎಂದು ತಿಳಿಸಿದರು. ಆರ್‍ಎಲ್‍‍ವಿ‍‍ಡಿ ಕ್ಯಾಮರಾಗಳು ಮನುಷ್ಯನ ಸಹಾಯವಿಲ್ಲದೇ ಪ್ರಕರಣ ದಾಖಲಿಸಿಕೊಳ್ಳುತ್ತವೆ.

MOST READ: ಸ್ಮಾರ್ಟ್ ಹೈಬ್ರಿಡ್ ಟೆಕ್ನಾಲಜಿಯೊಂದಿಗೆ ಮಾರಾಟದಲ್ಲಿ ಮಿಂಚುತ್ತಿದೆ ಮಾರುತಿ ಬಲೆನೊ

ಸಿಸಿಟಿವಿಯಿಂದಾಗಿ ಕಡಿಮೆಯಾದ ಸಿಗ್ನಲ್ ಜಂಪ್ ಪ್ರಕರಣಗಳು

ಇದರಲ್ಲಿ ನಿಯಮ ಉಲ್ಲಂಘನೆಯ ಫೋಟೋ ಹಾಗೂ ವೀಡಿಯೊ ಸಾಕ್ಷಿಗಳಿರುವುದರಿಂದ, ತಪ್ಪಿತಸ್ಥರು ಉಲ್ಲಂಘನೆಯನ್ನು ನಿರಾಕರಿಸಲು ಸಾಧ್ಯವಾಗುವುದಿಲ್ಲ. ಮೊದಲಿಗೆ ಈ ಆರ್‍ಎಲ್‍‍ವಿ‍‍ಡಿ ಕ್ಯಾಮರಾಗಳನ್ನು ಸೆಂಟ್ರಲ್ ಬಿಸಿನೆಸ್ ಡಿಸ್ಟ್ರಿಕ್ಟ್ ನಲ್ಲಿ ಅಳವಡಿಸಲಾಗುವುದು, ನಂತರ ಹೆಚ್ಚು ಟ್ರಾಫಿಕ್ ಇರುವ ಹಾಗೂ ಪ್ರಮುಖವಾದ ಜಂಕ್ಷನ್‍‍ಗಳಲ್ಲಿ ಅಳವಡಿಸುತ್ತೇವೆ ಎಂದು ತಿಳಿಸಿದರು.

MOST READ: ಮರ್ಸಿಡಿಸ್ ಬೆಂಝ್ ಸಿ‍ಇ‍ಒ ವಿದಾಯವನ್ನು ಟ್ರೋಲ್ ಮಾಡಿದ ಬಿ‍ಎಂ‍‍ಡಬ್ಲ್ಯು

ಸಿಸಿಟಿವಿಯಿಂದಾಗಿ ಕಡಿಮೆಯಾದ ಸಿಗ್ನಲ್ ಜಂಪ್ ಪ್ರಕರಣಗಳು

ಪೊಲೀಸ್ ಇಲಾಖೆಯು ರಸ್ತೆಗಳಲ್ಲಿರುವ ವಾಹನಗಳ ಸಂಖ್ಯೆಯನ್ನಾಧರಿಸಿ ಸಿಗ್ನಲ್ ನಿಯಂತ್ರಿಸುವ ಆಟೋಮ್ಯಾಟಿಕ್ ಕ್ಯಾಮರಾಗಳನ್ನು ಅಳವಡಿಸಲು ಚಿಂತನೆ ನಡೆಸಿದೆ.

MOST READ: ಯಾವ ಯಾವ ರಾಜಕಾರಣಿಗಳ ಬಳಿ ಯಾವೆಲ್ಲಾ ಐಷಾರಾಮಿ ಕಾರುಗಳಿವೆ ಗೊತ್ತಾ

ಸಿಸಿಟಿವಿಯಿಂದಾಗಿ ಕಡಿಮೆಯಾದ ಸಿಗ್ನಲ್ ಜಂಪ್ ಪ್ರಕರಣಗಳು

ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, ಪೊಲೀಸ್ ಇಲಾಖೆಯು ಬುಲೆಟ್ ಹಾಗೂ ಪ್ಯಾನ್ ಟಿಲ್ಟ್ ಜೂಮ್ ಕ್ಯಾಮರಾಗಳನ್ನು ಅಳವಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ತಿಳಿಸಿದರು. ಈ ಕ್ಯಾಮರಾಗಳು ವಾಹನಗಳ ಫೋಟೊ ತೆಗೆಯುವುದರ ಜೊತೆಗೆ ಚಾಲಕನ ಚಲನವಲನಗಳನ್ನು ಸೆರೆಹಿಡಿಯುತ್ತವೆ.

MOST READ: ಯಾವ ಯಾವ ರಾಜಕಾರಣಿಗಳ ಬಳಿ ಯಾವೆಲ್ಲಾ ಐಷಾರಾಮಿ ಕಾರುಗಳಿವೆ ಗೊತ್ತಾ

Most Read Articles

Kannada
English summary
Traffic signal violations see a big drop in Bengaluru, thanks to cctv - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X