100 ಕೋಟಿ ವೆಚ್ಚದಲ್ಲಿ ಸಿದ್ದಗೊಂಡಿರುವ 'ಟ್ರೈನ್ 18' ಮೇಲೆ ಕಿಡಿಗೇಡಿಗಳ ಅಟ್ಟಹಾಸ..!

ದೇಶದ ಅತಿವೇಗದ ರೈಲು ಮಾದರಿ ಎಂದೇ ಬಿಂಬಿತವಾಗಿರುವ ಟ್ರೈನ್ 18 ಇದೇ ತಿಂಗಳು 29ರಿಂದ ಅಧಿಕೃತ ಸೇವೆಯನ್ನು ಆರಂಭಿಸಲು ಸಿದ್ದವಾಗಿದ್ದು, ರೈಲಿನ ಅಧಿಕೃತ ಸೇವೆಗೆ ಇನ್ನು ಒಂದು ವಾರ ಬಾಕಿ ಇರುವಾಗಲೇ ಟ್ರೈನ್ 18 ಮೇಲೆ ಕಲ್ಲುತೂರಾಟ ನಡೆಸಿರುವ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದಾರೆ.

100 ಕೋಟಿ ವೆಚ್ಚದಲ್ಲಿ ಸಿದ್ದಗೊಂಡಿರುವ 'ಟ್ರೈನ್ 18' ಮೇಲೆ ಕಿಡಿಗೇಡಿಗಳ ಅಟ್ಟಹಾಸ..!

ಹೌದು, ಮೇಕ್ ಇನ್ ಇಂಡಿಯಾ ಯೋಜನೆ ಅಡಿ ಅಭಿವೃದ್ಧಿಗೊಂಡಿರುವ ದೇಶದ ಅತಿ ವೇಗದ ರೈಲು ಎಂಬ ಖ್ಯಾತಿಗೆ ಒಳಗಾಗಿರುವ ಟ್ರೈನ್ 18 ಪರೀಕ್ಷಾರ್ಥ ಸಂಚಾರದ ವೇಳೆ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿದ್ದು, ರೈಲಿನ ಕೋಚ್ ಕಿಟಕಿ ಒಡೆದು ಹೋಗಿದೆ. ಪರೀಕ್ಷಾರ್ಥ ಚಾಲನೆ ಆಗಿದ್ದರಿಂದ ರೈಲಿನ ಪ್ರಯಾಣಿಕರ ಸೀಟುಗಳಲ್ಲಿ ಯಾರು ಇರದ ಹಿನ್ನೆಲೆ ಯಾರ ಪ್ರಾಣಕ್ಕೂ ತೊಂದರೆಯಾಗಿಲ್ಲ ಎನ್ನುವುದೇ ಸಮಾಧಾನಕರ ಸಂಗತಿ.

100 ಕೋಟಿ ವೆಚ್ಚದಲ್ಲಿ ಸಿದ್ದಗೊಂಡಿರುವ 'ಟ್ರೈನ್ 18' ಮೇಲೆ ಕಿಡಿಗೇಡಿಗಳ ಅಟ್ಟಹಾಸ..!

ಆಗ್ರಾ ಟು ದೆಹಲಿ ನಡುವಿನ ಮಾರ್ಗದಲ್ಲಿ ಪರೀಕ್ಷಾರ್ಥ ಸಂಚಾರ ನಡೆಸುತ್ತಿರುವಾಗಲೇ ಈ ಘಟನೆ ನಡೆದಿದ್ದು, ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿರುವ ರೈಲ್ವೆ ಪೊಲೀಸರು ಈ ಸಂಬಂಧ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ.

100 ಕೋಟಿ ವೆಚ್ಚದಲ್ಲಿ ಸಿದ್ದಗೊಂಡಿರುವ 'ಟ್ರೈನ್ 18' ಮೇಲೆ ಕಿಡಿಗೇಡಿಗಳ ಅಟ್ಟಹಾಸ..!

ಇನ್ನು ಹೊಸ ರೈಲು ಯೋಜನೆಯನ್ನು ಇದೇ ತಿಂಗಳು 29ರಂದು ಪ್ರಧಾನಿ ನರೇಂದ್ರ ಮೋದಿಯವರು ಹಸಿರು ನಿರಾಶೆ ತೋರುತ್ತಿದ್ದು, ಹೀಗಿರುವಾಗಲೇ ಕಲ್ಲುತೂರಾಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರೈಲ್ವೆ ಇಲಾಖೆಯು ಇಂತಹ ಘಟನೆಗಳು ಮರುಕಳಿಸದಿರಲು ಕೆಲವು ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಮುಂದಾಗಿದೆ.

100 ಕೋಟಿ ವೆಚ್ಚದಲ್ಲಿ ಸಿದ್ದಗೊಂಡಿರುವ 'ಟ್ರೈನ್ 18' ಮೇಲೆ ಕಿಡಿಗೇಡಿಗಳ ಅಟ್ಟಹಾಸ..!

ಸದ್ಯ ಕಲ್ಲುತೂರಾಟದಿಂದ ಹಾನಿಯಾಗಿರುವ ರೈಲಿನ ಕಿಟಕಿಯನ್ನು ಬದಲಿ ಮಾಡಲಾಗುತ್ತಿದ್ದು, 29ರಂದು ನಡೆಯಲಿರುವ ಹೊಸ ರೈಲಿನ ಹಸಿರು ನಿಶಾನೆ ಕಾರ್ಯಕ್ರಮಕ್ಕೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಂಡಿರುವುದಾಗಿ ಸಚಿವ ಪಿಯೂಷ್ ಗೋಯಲ್ ಮಾಹಿತಿ ನೀಡಿದ್ದಾರೆ.

100 ಕೋಟಿ ವೆಚ್ಚದಲ್ಲಿ ಸಿದ್ದಗೊಂಡಿರುವ 'ಟ್ರೈನ್ 18' ಮೇಲೆ ಕಿಡಿಗೇಡಿಗಳ ಅಟ್ಟಹಾಸ..!

ಈ ಹಿಂದೆ ಗಂಟೆಗೆ 180 ಕಿ.ಮಿ ವೇಗದಲ್ಲಿ ಚಲಿಸಿ ದಾಖಲೆ ಮಾಡಿದ್ದ ಟ್ರೈನ್ 18 ಮಾದರಿಯು ಮತ್ತೊಂದು ದಾಖಲೆಗಾಗಿ ನಿನ್ನೆಯಷ್ಟೇ 181 ಕಿ.ಮಿ ವೇಗದಲ್ಲಿ ಚಲಿಸುತ್ತಿತ್ತು. ಇದೇ ವೇಳೆ ಟ್ರ್ಯಾಕ್ ಪಕ್ಕದಿಂದ ತೂರಿಬಂದ ಕಲ್ಲಿನ ರಭಸಕ್ಕೆ ಗಾಜಿನ ಕಿಟಿಕಿ ಸಂಪೂರ್ಣವಾಗಿ ಜಖಂಗೊಂಡಿದೆ.

100 ಕೋಟಿ ವೆಚ್ಚದಲ್ಲಿ ಸಿದ್ದಗೊಂಡಿರುವ 'ಟ್ರೈನ್ 18' ಮೇಲೆ ಕಿಡಿಗೇಡಿಗಳ ಅಟ್ಟಹಾಸ..!

ಇನ್ನು ಮೇಕ್ ಇನ್ ಇಂಡಿಯಾ ಯೋಜನೆ ಅಡಿ ನಿರ್ಮಾಣಗೊಂಡಿರುವ ದೇಶದ ಹೆಮ್ಮೆಯ ಟ್ರೈನ್ 18 ಸಂಚಾರವು ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಸುಮಾರು 100 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಟ್ರೈನ್ 18ನಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಅಳವಡಿಸಲಾಗಿದೆ.

100 ಕೋಟಿ ವೆಚ್ಚದಲ್ಲಿ ಸಿದ್ದಗೊಂಡಿರುವ 'ಟ್ರೈನ್ 18' ಮೇಲೆ ಕಿಡಿಗೇಡಿಗಳ ಅಟ್ಟಹಾಸ..!

ರೈಲ್ವೆ ಸೇವೆಗಳಲ್ಲಿ ಭಾರೀ ಬದಲಾವಣೆ ತರುತ್ತಿರುವ ಕೇಂದ್ರ ಸರ್ಕಾರವು ಸದ್ಯ ಬುಲೆಟ್ ಟ್ರೈನ್ ಸೇರಿದಂತೆ ಹಲವು ಅತ್ಯಾಧುನಿಕ ಸಾರಿಗೆ ಸೌಲಭ್ಯಗಳನ್ನು ಆರಂಭಿಸುವ ಗುರಿಹೊಂದಿದ್ದು, ಇದರಲ್ಲಿ ಸದ್ಯಕ್ಕೆ ಹಳಿಗಿಳಿಯಲು ಸಜ್ಜಾಗಿರುವ ಟ್ರೈನ್ 18 ಮೂಲಕ ಹೊಸದೊಂದು ಬದಲಾವಣೆಗೆ ನಾಂದಿಹಾಡಿದೆ ಎನ್ನಬಹುದು.

100 ಕೋಟಿ ವೆಚ್ಚದಲ್ಲಿ ಸಿದ್ದಗೊಂಡಿರುವ 'ಟ್ರೈನ್ 18' ಮೇಲೆ ಕಿಡಿಗೇಡಿಗಳ ಅಟ್ಟಹಾಸ..!

ಪಸ್ತುತ ಸೇವೆಯಲ್ಲಿರುವ ಶತಾಬ್ದಿ ಎಕ್ಸ್​​ಪ್ರೆಸ್ ರೈಲು ಪ್ರತಿ ಗಂಟೆಗೆ 130 ಕಿ.ಮಿ ವೇಗದೊಂದಿಗೆ ಭಾರತದಲ್ಲಿರುವ ಚಲಿಸುತ್ತಿರುವ ಅತಿ ವೇಗದ ರೈಲು ಎನ್ನುವ ಖ್ಯಾತಿ ಹೊಂದಿದ್ದು, ಇದೀಗ ಟ್ರೈನ್ 18 ರೈಲು ಗಂಟೆಗೆ ಸರಾಸರಿ 180 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯದೊಂದಿಗೆ ಶತಾಬ್ದಿ ರೈಲನ್ನು ಹಿಂದಿಕ್ಕಿದೆ.

100 ಕೋಟಿ ವೆಚ್ಚದಲ್ಲಿ ಸಿದ್ದಗೊಂಡಿರುವ 'ಟ್ರೈನ್ 18' ಮೇಲೆ ಕಿಡಿಗೇಡಿಗಳ ಅಟ್ಟಹಾಸ..!

ವಾರಾಣಸಿ ಟು ದೆಹಲಿ

ಪ್ರಧಾನಿ ನರೇಂದ್ರ ಮೋದಿಯವರ ಪ್ರತಿನಿಧಿಸುವ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ರಾಷ್ಟ್ರದ ರಾಜಧಾನಿ ದೆಹಲಿ ನಡುವೆ ಟ್ರೈನ್ 18 ಮೊದಲು ಬಾರಿಗೆ ಸಂಚಾರ ಆರಂಭಿಸಲಿದ್ದು, ಬರೋಬ್ಬರಿ 820 ಕಿ.ಮಿ ದೂರದ ಈ ಮಾರ್ಗವನ್ನು 'ಟ್ರೈನ್ 18' ಕೇವಲ ಐದರಿಂದ ಐದೂವರೆ ಗಂಟೆಗಳಲ್ಲಿ ಕ್ರಮಿಸಲಿದೆ.

MOST READ: ಶಾಕಿಂಗ್ ಸುದ್ದಿ- ಭಾರತದಲ್ಲಿ ಬ್ಯಾನ್ ಆಗಲಿವೆ ಈ ಒಂಬತ್ತು ಜನಪ್ರಿಯ ಕಾರುಗಳು..!

100 ಕೋಟಿ ವೆಚ್ಚದಲ್ಲಿ ಸಿದ್ದಗೊಂಡಿರುವ 'ಟ್ರೈನ್ 18' ಮೇಲೆ ಕಿಡಿಗೇಡಿಗಳ ಅಟ್ಟಹಾಸ..!

ವಾರಣಾಸಿಯು ಕೇವಲ ಪ್ರಧಾನಿಯವರು ಪ್ರತಿನಿಧಿಸುವ ಕ್ಷೇತ್ರ ಎಂಬುವುದನ್ನು ಹೊರತುಪಡಿಸಿ ಪವಿತ್ರ ಪುಣ್ಯ ಕ್ಷೇತ್ರವೂ ಸಹ ಆಗಿರುವುದರಿಂದ ದಿನಂಪ್ರತಿ ಇಲ್ಲಿಗೆ ಸಾವಿರಾರು ಜನ ತೀರ್ಥಯಾತ್ರೆಗೆ ಆಗಮಿಸುತ್ತಾರೆ. ಹೀಗಿರುವಾಗ ಟ್ರೈನ್ 18 ಈ ಭಾಗದಲ್ಲಿ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲಕರವಾಗಲಿದೆ.

100 ಕೋಟಿ ವೆಚ್ಚದಲ್ಲಿ ಸಿದ್ದಗೊಂಡಿರುವ 'ಟ್ರೈನ್ 18' ಮೇಲೆ ಕಿಡಿಗೇಡಿಗಳ ಅಟ್ಟಹಾಸ..!

ವಾರಣಾಸಿಗೆ ಪ್ರಯಾಣ ಬೆಳೆಸುವ ಬರುವ ಬಹುತೇಕ ಪ್ರವಾಸಿಗರು ಮೊದಲ ದೆಹಲಿಗೆ ಆಗಮಿಸಿ ತದನಂತರವಷ್ಟೇ ಅಲ್ಲಿಂದ ವಾರಣಾಸಿಗೆ ಪ್ರಯಾಣ ಬೆಳೆಸುತ್ತಾರೆ. ಈ ವೇಳೆ ಕೈಗೆಟುವ ಬೆಲೆಯ ಪ್ರಯಾಣ ಅಂದ್ರೆ ಅದು ರೈಲು. ಆದ್ರೆ 820 ಕಿ.ಮಿ ದೂರದ ಈ ಪ್ರಯಾಣವು ಸಾಮಾನ್ಯ ರೈಲುಗಳಲ್ಲಿ ಕನಿಷ್ಠ ಅಂದ್ರು 14 ರಿಂದ 16 ಗಂಟೆಗಳ ಪ್ರಯಾಣವಿರುತ್ತೆ.

100 ಕೋಟಿ ವೆಚ್ಚದಲ್ಲಿ ಸಿದ್ದಗೊಂಡಿರುವ 'ಟ್ರೈನ್ 18' ಮೇಲೆ ಕಿಡಿಗೇಡಿಗಳ ಅಟ್ಟಹಾಸ..!

ಇದೇ ಕಾರಣಕ್ಕೆ ಟ್ರೈನ್ 18 ಈ ಮಾರ್ಗದಲ್ಲಿ ಪ್ರಯಾಣಿಸಿದ್ದಲ್ಲಿ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲಕತೆಗಳಿದ್ದು, ಬಹುಮುಖ್ಯವಾಗಿ ಪ್ರಯಾಣದ ಅವಧಿ ಸಾಕಷ್ಟು ತಗ್ಗಲಿದೆ. ಜೊತೆಗೆ ಹೊಸ ಯೋಜನೆಯಿಂದಾಗಿ ಪ್ರವಾಸೋದ್ಯಮ ಅಭಿವೃದ್ಧಿಗೂ ಸಹಕಾರಿಯಾಗಲಿದೆ.

MOST READ: ವಾಹನ ಸವಾರರೇ ಎಚ್ಚರ- ಪೆಟ್ರೋಲ್ ಬಂಕ್‌ಗಳಲ್ಲಿ ಹೇಗೆ ನಡೆಯುತ್ತೆ ನೋಡಿ ಹಗಲು ದರೋಡೆ..!

100 ಕೋಟಿ ವೆಚ್ಚದಲ್ಲಿ ಸಿದ್ದಗೊಂಡಿರುವ 'ಟ್ರೈನ್ 18' ಮೇಲೆ ಕಿಡಿಗೇಡಿಗಳ ಅಟ್ಟಹಾಸ..!

ಆಧುನಿಕ ಸೌಕರ್ಯಗಳನ್ನು ಒಳಗೊಂಡಿರುವ ಹೊಸ ಟ್ರೈನ್ 18 ರೈಲು ಎಂಜಿನ್ ರಹಿತವಾಗಿದ್ದು, ಬುಲೆಟ್ ರೈಲು ಮಾದರಿಯಲ್ಲೇ ಇದನ್ನು ಸಿದ್ಧಪಡಿಸಲಾಗಿದೆ. ಹೀಗಾಗಿ ಟ್ರೈನ್ 18ನಲ್ಲಿ ಪ್ರತ್ಯೇಕ ಎಂಜಿನ್ ಬದಲಾಗಿ ಮೆಟ್ರೋ ರೈಲು ಮಾದರಿಯಲ್ಲಿ ಬೋಗಿಯ ಕೆಳಗಡೆಯೇ ಎಂಜಿನ್ ಜೋಡಣೆ ಮಾಡಲಾಗಿರುತ್ತೆ.

100 ಕೋಟಿ ವೆಚ್ಚದಲ್ಲಿ ಸಿದ್ದಗೊಂಡಿರುವ 'ಟ್ರೈನ್ 18' ಮೇಲೆ ಕಿಡಿಗೇಡಿಗಳ ಅಟ್ಟಹಾಸ..!

ಹೊಸ ರೈಲಿನಲ್ಲಿ ಒಟ್ಟು 16 ಬೋಗಿಗಳಿದ್ದು, ಇವುಗಲ್ಲಿ 52 ಆಸನಗಳ ಹೊಂದಿರುವ ಎರಡು ಎಕ್ಸಿಕ್ಯುಟಿವ್‌ ಬೋಗಿಗಳನ್ನು ನೀಡಲಾಗಿದೆ. ಉಳಿದವು 78 ಆಸನಗಳ ಸಾಮಾನ್ಯ ಬೋಗಿಗಳಿದ್ದು, ಸಂಪೂರ್ಣ ಹವಾನಿಯಂತ್ರಣ, ಸಿಸಿಟಿವಿ ಸೌಲಭ್ಯ, ಜಿಪಿಎಸ್ ಆಧರಿತ ಮಾಹಿತಿ ಫಲಕ, ಸ್ವಯಂ ಚಾಲಿತ ಬಾಗಿಲು ಸೌಲಭ್ಯ ಪಡೆದಿದೆ.

100 ಕೋಟಿ ವೆಚ್ಚದಲ್ಲಿ ಸಿದ್ದಗೊಂಡಿರುವ 'ಟ್ರೈನ್ 18' ಮೇಲೆ ಕಿಡಿಗೇಡಿಗಳ ಅಟ್ಟಹಾಸ..!

ಹಾಗೆಯೇ ಪ್ರತಿ ಎರಡು ಬೋಗಿಗಳ ನಡುವೆ ಮೋಟಾರೈಸ್ಡ್ ಎಂಜಿನ್ ಅಳವಡಿಕೆ ಮಾಡಿರುವುದಿಂದ ರೈಲು ಅತಿ ವೇಗವಾಗಿ ಚಲಿಸಲು ಸಾಧ್ಯವಾಗಿದೆ. ಜೊತೆಗೆ ಕ್ಷಣಾರ್ಧದಲ್ಲಿ ನಿಲ್ಲುವ ಸಾಮರ್ಥ್ಯವನ್ನೂ ಕೂಡಾ ಹೊಂದಿದ್ದು, ಆಗಬಹುದಾದ ರೈಲು ದುರಂತಗಳಿಗೆ ಇದರಿಂದ ತಪ್ಪಿಸಬಹುದಾಗಿದೆ.

MOST READ: 23 ವರ್ಷಗಳ ಹಿಂದಿನ ದೇವೇಗೌಡರ ಕನಸಿನ ಯೋಜನೆಗೆ ಕೊನೆಗೂ ಮುಕ್ತಿ ಕೊಟ್ಟಿದ್ದು ಪ್ರಧಾನಿ ಮೋದಿ..!

100 ಕೋಟಿ ವೆಚ್ಚದಲ್ಲಿ ಸಿದ್ದಗೊಂಡಿರುವ 'ಟ್ರೈನ್ 18' ಮೇಲೆ ಕಿಡಿಗೇಡಿಗಳ ಅಟ್ಟಹಾಸ..!

ಇದಲ್ಲದೇ ದೀರ್ಘಾವಧಿ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಹೊಸ ರೈಲಿನಲ್ಲಿ ವಿಶೇಷ ಮನೋರಂಜನಾ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ವೈ ಫೈ, ವ್ಯಾಕ್ಯೂಮ್ ಟಾಯ್ಲೆಟ್, ಲಗೇಜ್‌ಗೆ ಪ್ರತ್ಯೇಕ ಜಾಗ ಮೀಸಲು, ಅಂಗವಿಕಲರಿಗಾಗಿ ಪ್ರತ್ಯೇಕ ಶೌಚಾಲಯ ವ್ಯವಸ್ಥೆಯನ್ನು ಇದರಲ್ಲಿ ಅಳವಡಿಸಲಾಗಿದೆ.

100 ಕೋಟಿ ವೆಚ್ಚದಲ್ಲಿ ಸಿದ್ದಗೊಂಡಿರುವ 'ಟ್ರೈನ್ 18' ಮೇಲೆ ಕಿಡಿಗೇಡಿಗಳ ಅಟ್ಟಹಾಸ..!

ಸದ್ಯದಲ್ಲೇ ಟ್ರೈನ್ 18 ಸಂಖ್ಯೆಯಲ್ಲಿ ಹೆಚ್ಚಳ..!

ಪರೀಕ್ಷಾರ್ಥ ಸಂದರ್ಭದಲ್ಲಿ ಹೊಸ ರೈಲ್ವೆ ಸೇವೆ ಕುರಿತು ಸಾಕಷ್ಟು ಮೆಚ್ಚುಗೆ ವ್ಯಕ್ತವಾದ ಹಿನ್ನೆಲೆಯಲ್ಲಿ ಟ್ರೈನ್ 18 ಸಂಖ್ಯೆಯನ್ನು ಹೆಚ್ಚಳ ಮಾಡಲು ನಿರ್ಧರಿಸಿರುವ ಕೇಂದ್ರ ರೈಲ್ವೆ ಮಂಡಳಿಯು, ಮುಂಬರುವ 2019ರ ಕೊನೆಗೆ ದೇಶದ ವಿವಿಧ ನಗರಗಳನ್ನು ಸಂಪರ್ಕಿಸಲು ಒಟ್ಟು ಹತ್ತು ಕಡೆಗಳಲ್ಲಿ ಟ್ರೈನ್ 18 ಓಡಿಸಲು ನಿರ್ಧರಿಸಲಾಗಿದೆ.

100 ಕೋಟಿ ವೆಚ್ಚದಲ್ಲಿ ಸಿದ್ದಗೊಂಡಿರುವ 'ಟ್ರೈನ್ 18' ಮೇಲೆ ಕಿಡಿಗೇಡಿಗಳ ಅಟ್ಟಹಾಸ..!

ಈ ಸಂಬಂಧ ರೈಲ್ವೆ ಸಚಿವಾಲಯವು ಚೆನ್ನೈನಲ್ಲಿರುವ ಐಸಿಎಫ್‍ಗೆ ಮಹತ್ವದ ಸೂಚನೆ ನೀಡಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಶತಾಬ್ದಿ ರೈಲಿನ ಬದಲಿಗೆ ಸಂಪೂರ್ಣವಾಗಿ ಟ್ರೈನ್ 18 ಸಂಚಾರಕ್ಕೆ ಹೆಚ್ಚಿನ ಒತ್ತು ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ.

Most Read Articles

Kannada
Read more on ರೈಲು train off beat
English summary
Train 18, Indian Railways’ fastest train pelted with stones during the trial run. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X