Just In
Don't Miss!
- Finance
ಮುಂದಿನ 6 ತಿಂಗಳಿನಲ್ಲಿ ದೆಹಲಿಯ ಎಲ್ಲಾ ಸರ್ಕಾರಿ ಕಾರುಗಳು, ಎಲೆಕ್ಟ್ರಿಕ್ ಕಾರುಗಳಾಗಿ ಬದಲಾಗಲಿವೆ!
- News
ರಾಜ್ಯ ಬಜೆಟ್ ಬಗ್ಗೆ ಸಿಎಂ ಯಡಿಯೂರಪ್ಪ ಹೇಳಿದ್ದೇನು?
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ಜೊತೆ ಇಶ್ ಸೋಧಿ ಒಪ್ಪಂದ
- Lifestyle
ಅರಿಶಿನದ ಈ ಆರೋಗ್ಯ ಪ್ರಯೋಜನಗಳನ್ನು ಕೇಳಿದರೆ, ನೀವೂ ಶಾಕ್ ಆಗ್ತೀರಾ!
- Movies
ರಾಬರ್ಟ್ ಸಂಭ್ರಮ: ವಿನಯದಿಂದ ತೆಲುಗು ಅಭಿಮಾನಿಗಳ ಮನಸು ಕದ್ದ ದರ್ಶನ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದಿಢೀರನೆ ಕೈಕೊಟ್ಟ ಬ್ರೇಕ್, 3 ಕಿ.ಮೀ ರಿವರ್ಸ್ ಗೇರಿನಲ್ಲಿ ಸಾಗಿದ ಟ್ರಕ್ ಚಾಲಕ
ಟ್ರಕ್ ಬ್ರೇಕ್ಗಳು ಇದ್ದಕ್ಕಿದ್ದಂತೆ ವಿಫಲಗೊಂಡ ಕಾರಣ ಚಾಲಕನೊಬ್ಬ ಟ್ರಕ್ ಅನ್ನು ರಿವರ್ಸ್ ಗೇರ್ನಲ್ಲಿ ಸುಮಾರು 3 ಕಿ.ಮೀ ಚಾಲನೆ ಮಾಡಿದ ಘಟನೆ ವರದಿಯಾಗಿದೆ. 3 ಕಿ.ಮೀ ಚಾಲನೆ ಮಾಡಿದ ನಂತರ ಕೊನೆಗೂ ಟ್ರಕ್ ಅನ್ನು ಸುರಕ್ಷಿತವಾಗಿ ನಿಲ್ಲಿಸಲು ಯಶಸ್ವಿಯಾಗಿದ್ದಾನೆ.

ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೀಡಿಯೊವನ್ನು ಟ್ರಾನ್ಸ್ಪೋರ್ಟ್ ಲೈವ್ ಎಂಬ ಯೂಟ್ಯೂಬ್ ಚಾನೆಲ್ ಅಪ್ ಲೋಡ್ ಮಾಡಿದೆ. ಈ ಘಟನೆ ಮಹಾರಾಷ್ಟ್ರದ ಜಲ್ನಾ- ಚಿಲೋಟ್ ರಸ್ತೆಯಲ್ಲಿ ನಡೆದಿದೆ. ಟ್ರಕ್ ನಿಲ್ಲಿಸಲು ಸುರಕ್ಷಿತವಾದ ಜಾಗ ಸಿಗುವವರೆಗೂ ಟ್ರಕ್ ಚಾಲಕ ರಿವರ್ಸ್ ಗೇರ್ನಲ್ಲಿಯೇ ನಿಧಾನವಾಗಿ ಚಾಲನೆ ಮಾಡಿದ್ದಾನೆ.

ಕೆಲವು ಬೈಕ್ ಸವಾರರು ರಿವರ್ಸ್ ಗೇರ್ನಲ್ಲಿ ಹೋಗುತ್ತಿದ್ದ ಟ್ರಕ್ ಜೊತೆಯೇ ಸಾಗುತ್ತಿರುವುದನ್ನು ಈ ವೀಡಿಯೊದಲ್ಲಿ ಕಾಣಬಹುದು. ಇವರಲ್ಲಿ ಕೆಲವರು ಇತರ ವಾಹನ ಸವಾರರಿಗೆ ಟ್ರಕ್ನ ಬಗ್ಗೆ ಎಚ್ಚರಿಕೆ ನೀಡುತ್ತಿರುವುದನ್ನು ಸಹ ಕಾಣಬಹುದು.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಬ್ರೇಕ್ಗಳು ವಿಫಲಗೊಂಡಾಗ ಇತರ ವಾಹನ ಸವಾರರಿಗೆ ತೊಂದರೆಯಾಗದಂತೆ ಟ್ರಕ್ ಚಾಲನೆ ಮಾಡುವುದು ಸುಲಭವಲ್ಲ. ಆದರೆ ಟ್ರಕ್ ಚಾಲಕ ಈ ಕಠಿಣ ಕೆಲಸವನ್ನು ಎಚ್ಚರಿಕೆಯಿಂದ ಮಾಡಿದ್ದಾನೆ.

ಸಾಮಾನ್ಯವಾಗಿ ಸಣ್ಣ ಟಯರ್ಗಳಿಗೆ ಹೋಲಿಸಿದರೆ ದೊಡ್ಡ ಗಾತ್ರದ ಟಯರ್ಗಳು ವೇಗವಾಗಿ ಚಲಿಸುತ್ತವೆ ಎಂಬುದು ಗಮನಿಸಬೇಕಾದ ಸಂಗತಿ. ಈ ಕಾರಣದಿಂದಾಗಿ ಲಾರಿಯ ವೇಗವು ನಿಧಾನವಾಗಿಲ್ಲ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಕೊನೆಗೆ ಖಾಲಿ ಮೈದಾನದಂತಹ ಜಾಗ ಸಿಕ್ಕಾಗ ಟ್ರಕ್ ಚಾಲಕ ಅಲ್ಲಿಗೆ ಟ್ರಕ್ ಅನ್ನು ತಿರುಗಿಸಿದ್ದಾನೆ. ಆ ಖಾಲಿ ಮೈದಾನವು ಒರಟಾಗಿದ್ದ ಕಾರಣ ಟ್ರಕ್'ನ ವೇಗವು ಕಡಿಮೆಯಾಗಿದೆ. ಇದರಿಂದಾಗಿ ಟ್ರಕ್ ನಿಂತಿದೆ.

ಟ್ರಕ್ ಚಾಲಕನು ಸುಮಾರು 3 ಕಿ.ಮೀ ರಿವರ್ಸ್ ಗೇರಿನಲ್ಲಿಯೇ ಸಾಗಿದರೂ ಯಾವುದೇ ದುರಂತ ಸಂಭವಿಸದೇ ಇರುವುದು ಈ ವೀಡಿಯೊದಿಂದ ಖಚಿತಪಟ್ಟಿದೆ. ಟ್ರಕ್ ಚಾಲಕನು ತನ್ನ ಸಮಯ ಪ್ರಜ್ಞೆಯಿಂದ ಸಂಭವಿಸಬಹುದಾಗಿದ್ದ ಭಾರೀ ಅನಾಹುತವನ್ನು ತಪ್ಪಿಸಿದ್ದಾನೆ.
MOST READ: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ವಾಹನ ಚಾಲನೆ ವೇಳೆ ಸಂಭವಿಸುವ ರಸ್ತೆ ಅಪಘಾತಗಳಿಗೆ ಬ್ರೇಕ್ ವೈಫಲ್ಯವೂ ಸಹ ಒಂದು ಕಾರಣ. ಭಾರತದಲ್ಲಿ ಪ್ರತಿ ವರ್ಷ ಸುಮಾರು 1.50 ಲಕ್ಷ ಜನರು ರಸ್ತೆ ಅಪಘಾತಗಳಿಂದ ಸಾವನ್ನಪ್ಪುತ್ತಿದ್ದಾರೆ.

ವಾಹನ ಸವಾರರು ಸಂಚಾರ ನಿಯಮಗಳನ್ನು ಉಲ್ಲಂಘಿಸುವುದೇ ಈ ಅಪಘಾತಗಳಿಗೆ ಪ್ರಮುಖ ಕಾರಣ. ಇದರ ಜೊತೆಗೆ ಇನ್ನೂ ಹಲವಾರು ಕಾರಣಗಳಿವೆ. ವಾಹನಗಳಲ್ಲಿರುವ ಎಂಜಿನ್ಗಳು ಹಠಾತ್ ಕೈಕೊಡುವುದು ಸಹ ಇದಕ್ಕೆ ಕಾರಣ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು
ಇನ್ನು ಕೆಲವೊಮ್ಮೆ ಬ್ರೇಕ್ಗಳು ಹಠಾತ್ ಆಗಿ ಕೈಕೊಡುತ್ತವೆ. ಬ್ರೇಕ್ಗಳು ಇವೆ ಎಂಬ ಧೈರ್ಯದಿಂದ ವಾಹನ ಸವಾರರು ವೇಗವಾಗಿ ವಾಹನ ಚಾಲನೆ ಮಾಡುತ್ತಾರೆ. ಆದರೆ ಬ್ರೇಕ್ಗಳು ಕೈಕೊಟ್ಟರೆ ಅನಾಹುತವಾಗುವುದು ಖಚಿತ.

ಇತ್ತೀಚೆಗೆ ತಮಿಳುನಾಡಿನಲ್ಲಿ ಬ್ರೇಕ್ ಫೇಲ್ ಆದ ಕಾರಣಕ್ಕೆ ಲಾರಿಯೊಂದು ಫುಟ್ ಪಾತ್ ಮೇಲೆ ನಿಂತಿದ್ದ ಇಬ್ಬರು ಯುವಕರಿಗೆ ಡಿಕ್ಕಿ ಹೊಡೆಯುವುದರಲ್ಲಿತ್ತು. ಆದರೆ ಅದೃಷ್ಟವಶಾತ್ ಆ ಇಬ್ಬರು ಯುವಕರು ಅಪಾಯದಿಂದ ಪಾರಾದರು. ಕಾಲಕಾಲಕ್ಕೆ ವಾಹನಗಳ ಬ್ರೇಕ್ ಪರೀಕ್ಷಿಸುವುದು ಮುಖ್ಯ.