ದಿಢೀರನೆ ಕೈಕೊಟ್ಟ ಬ್ರೇಕ್, 3 ಕಿ.ಮೀ ರಿವರ್ಸ್ ಗೇರಿನಲ್ಲಿ ಸಾಗಿದ ಟ್ರಕ್ ಚಾಲಕ

ಟ್ರಕ್ ಬ್ರೇಕ್‌ಗಳು ಇದ್ದಕ್ಕಿದ್ದಂತೆ ವಿಫಲಗೊಂಡ ಕಾರಣ ಚಾಲಕನೊಬ್ಬ ಟ್ರಕ್ ಅನ್ನು ರಿವರ್ಸ್ ಗೇರ್‌ನಲ್ಲಿ ಸುಮಾರು 3 ಕಿ.ಮೀ ಚಾಲನೆ ಮಾಡಿದ ಘಟನೆ ವರದಿಯಾಗಿದೆ. 3 ಕಿ.ಮೀ ಚಾಲನೆ ಮಾಡಿದ ನಂತರ ಕೊನೆಗೂ ಟ್ರಕ್ ಅನ್ನು ಸುರಕ್ಷಿತವಾಗಿ ನಿಲ್ಲಿಸಲು ಯಶಸ್ವಿಯಾಗಿದ್ದಾನೆ.

ದಿಢೀರನೆ ಕೈಕೊಟ್ಟ ಬ್ರೇಕ್, 3 ಕಿ.ಮೀ ರಿವರ್ಸ್ ಗೇರಿನಲ್ಲಿ ಸಾಗಿದ ಟ್ರಕ್ ಚಾಲಕ

ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೀಡಿಯೊವನ್ನು ಟ್ರಾನ್ಸ್‌ಪೋರ್ಟ್ ಲೈವ್ ಎಂಬ ಯೂಟ್ಯೂಬ್ ಚಾನೆಲ್ ಅಪ್ ಲೋಡ್ ಮಾಡಿದೆ. ಈ ಘಟನೆ ಮಹಾರಾಷ್ಟ್ರದ ಜಲ್ನಾ- ಚಿಲೋಟ್ ರಸ್ತೆಯಲ್ಲಿ ನಡೆದಿದೆ. ಟ್ರಕ್ ನಿಲ್ಲಿಸಲು ಸುರಕ್ಷಿತವಾದ ಜಾಗ ಸಿಗುವವರೆಗೂ ಟ್ರಕ್ ಚಾಲಕ ರಿವರ್ಸ್ ಗೇರ್‌ನಲ್ಲಿಯೇ ನಿಧಾನವಾಗಿ ಚಾಲನೆ ಮಾಡಿದ್ದಾನೆ.

ದಿಢೀರನೆ ಕೈಕೊಟ್ಟ ಬ್ರೇಕ್, 3 ಕಿ.ಮೀ ರಿವರ್ಸ್ ಗೇರಿನಲ್ಲಿ ಸಾಗಿದ ಟ್ರಕ್ ಚಾಲಕ

ಕೆಲವು ಬೈಕ್ ಸವಾರರು ರಿವರ್ಸ್ ಗೇರ್‌ನಲ್ಲಿ ಹೋಗುತ್ತಿದ್ದ ಟ್ರಕ್ ಜೊತೆಯೇ ಸಾಗುತ್ತಿರುವುದನ್ನು ಈ ವೀಡಿಯೊದಲ್ಲಿ ಕಾಣಬಹುದು. ಇವರಲ್ಲಿ ಕೆಲವರು ಇತರ ವಾಹನ ಸವಾರರಿಗೆ ಟ್ರಕ್‌ನ ಬಗ್ಗೆ ಎಚ್ಚರಿಕೆ ನೀಡುತ್ತಿರುವುದನ್ನು ಸಹ ಕಾಣಬಹುದು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ದಿಢೀರನೆ ಕೈಕೊಟ್ಟ ಬ್ರೇಕ್, 3 ಕಿ.ಮೀ ರಿವರ್ಸ್ ಗೇರಿನಲ್ಲಿ ಸಾಗಿದ ಟ್ರಕ್ ಚಾಲಕ

ಬ್ರೇಕ್‌ಗಳು ವಿಫಲಗೊಂಡಾಗ ಇತರ ವಾಹನ ಸವಾರರಿಗೆ ತೊಂದರೆಯಾಗದಂತೆ ಟ್ರಕ್ ಚಾಲನೆ ಮಾಡುವುದು ಸುಲಭವಲ್ಲ. ಆದರೆ ಟ್ರಕ್ ಚಾಲಕ ಈ ಕಠಿಣ ಕೆಲಸವನ್ನು ಎಚ್ಚರಿಕೆಯಿಂದ ಮಾಡಿದ್ದಾನೆ.

ದಿಢೀರನೆ ಕೈಕೊಟ್ಟ ಬ್ರೇಕ್, 3 ಕಿ.ಮೀ ರಿವರ್ಸ್ ಗೇರಿನಲ್ಲಿ ಸಾಗಿದ ಟ್ರಕ್ ಚಾಲಕ

ಸಾಮಾನ್ಯವಾಗಿ ಸಣ್ಣ ಟಯರ್‌ಗಳಿಗೆ ಹೋಲಿಸಿದರೆ ದೊಡ್ಡ ಗಾತ್ರದ ಟಯರ್‌ಗಳು ವೇಗವಾಗಿ ಚಲಿಸುತ್ತವೆ ಎಂಬುದು ಗಮನಿಸಬೇಕಾದ ಸಂಗತಿ. ಈ ಕಾರಣದಿಂದಾಗಿ ಲಾರಿಯ ವೇಗವು ನಿಧಾನವಾಗಿಲ್ಲ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ದಿಢೀರನೆ ಕೈಕೊಟ್ಟ ಬ್ರೇಕ್, 3 ಕಿ.ಮೀ ರಿವರ್ಸ್ ಗೇರಿನಲ್ಲಿ ಸಾಗಿದ ಟ್ರಕ್ ಚಾಲಕ

ಕೊನೆಗೆ ಖಾಲಿ ಮೈದಾನದಂತಹ ಜಾಗ ಸಿಕ್ಕಾಗ ಟ್ರಕ್‌ ಚಾಲಕ ಅಲ್ಲಿಗೆ ಟ್ರಕ್ ಅನ್ನು ತಿರುಗಿಸಿದ್ದಾನೆ. ಆ ಖಾಲಿ ಮೈದಾನವು ಒರಟಾಗಿದ್ದ ಕಾರಣ ಟ್ರಕ್'ನ ವೇಗವು ಕಡಿಮೆಯಾಗಿದೆ. ಇದರಿಂದಾಗಿ ಟ್ರಕ್ ನಿಂತಿದೆ.

ದಿಢೀರನೆ ಕೈಕೊಟ್ಟ ಬ್ರೇಕ್, 3 ಕಿ.ಮೀ ರಿವರ್ಸ್ ಗೇರಿನಲ್ಲಿ ಸಾಗಿದ ಟ್ರಕ್ ಚಾಲಕ

ಟ್ರಕ್ ಚಾಲಕನು ಸುಮಾರು 3 ಕಿ.ಮೀ ರಿವರ್ಸ್ ಗೇರಿನಲ್ಲಿಯೇ ಸಾಗಿದರೂ ಯಾವುದೇ ದುರಂತ ಸಂಭವಿಸದೇ ಇರುವುದು ಈ ವೀಡಿಯೊದಿಂದ ಖಚಿತಪಟ್ಟಿದೆ. ಟ್ರಕ್ ಚಾಲಕನು ತನ್ನ ಸಮಯ ಪ್ರಜ್ಞೆಯಿಂದ ಸಂಭವಿಸಬಹುದಾಗಿದ್ದ ಭಾರೀ ಅನಾಹುತವನ್ನು ತಪ್ಪಿಸಿದ್ದಾನೆ.

MOST READ: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ದಿಢೀರನೆ ಕೈಕೊಟ್ಟ ಬ್ರೇಕ್, 3 ಕಿ.ಮೀ ರಿವರ್ಸ್ ಗೇರಿನಲ್ಲಿ ಸಾಗಿದ ಟ್ರಕ್ ಚಾಲಕ

ವಾಹನ ಚಾಲನೆ ವೇಳೆ ಸಂಭವಿಸುವ ರಸ್ತೆ ಅಪಘಾತಗಳಿಗೆ ಬ್ರೇಕ್ ವೈಫಲ್ಯವೂ ಸಹ ಒಂದು ಕಾರಣ. ಭಾರತದಲ್ಲಿ ಪ್ರತಿ ವರ್ಷ ಸುಮಾರು 1.50 ಲಕ್ಷ ಜನರು ರಸ್ತೆ ಅಪಘಾತಗಳಿಂದ ಸಾವನ್ನಪ್ಪುತ್ತಿದ್ದಾರೆ.

ದಿಢೀರನೆ ಕೈಕೊಟ್ಟ ಬ್ರೇಕ್, 3 ಕಿ.ಮೀ ರಿವರ್ಸ್ ಗೇರಿನಲ್ಲಿ ಸಾಗಿದ ಟ್ರಕ್ ಚಾಲಕ

ವಾಹನ ಸವಾರರು ಸಂಚಾರ ನಿಯಮಗಳನ್ನು ಉಲ್ಲಂಘಿಸುವುದೇ ಈ ಅಪಘಾತಗಳಿಗೆ ಪ್ರಮುಖ ಕಾರಣ. ಇದರ ಜೊತೆಗೆ ಇನ್ನೂ ಹಲವಾರು ಕಾರಣಗಳಿವೆ. ವಾಹನಗಳಲ್ಲಿರುವ ಎಂಜಿನ್‌ಗಳು ಹಠಾತ್ ಕೈಕೊಡುವುದು ಸಹ ಇದಕ್ಕೆ ಕಾರಣ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಇನ್ನು ಕೆಲವೊಮ್ಮೆ ಬ್ರೇಕ್‌ಗಳು ಹಠಾತ್ ಆಗಿ ಕೈಕೊಡುತ್ತವೆ. ಬ್ರೇಕ್‌ಗಳು ಇವೆ ಎಂಬ ಧೈರ್ಯದಿಂದ ವಾಹನ ಸವಾರರು ವೇಗವಾಗಿ ವಾಹನ ಚಾಲನೆ ಮಾಡುತ್ತಾರೆ. ಆದರೆ ಬ್ರೇಕ್‌ಗಳು ಕೈಕೊಟ್ಟರೆ ಅನಾಹುತವಾಗುವುದು ಖಚಿತ.

ದಿಢೀರನೆ ಕೈಕೊಟ್ಟ ಬ್ರೇಕ್, 3 ಕಿ.ಮೀ ರಿವರ್ಸ್ ಗೇರಿನಲ್ಲಿ ಸಾಗಿದ ಟ್ರಕ್ ಚಾಲಕ

ಇತ್ತೀಚೆಗೆ ತಮಿಳುನಾಡಿನಲ್ಲಿ ಬ್ರೇಕ್ ಫೇಲ್ ಆದ ಕಾರಣಕ್ಕೆ ಲಾರಿಯೊಂದು ಫುಟ್ ಪಾತ್ ಮೇಲೆ ನಿಂತಿದ್ದ ಇಬ್ಬರು ಯುವಕರಿಗೆ ಡಿಕ್ಕಿ ಹೊಡೆಯುವುದರಲ್ಲಿತ್ತು. ಆದರೆ ಅದೃಷ್ಟವಶಾತ್ ಆ ಇಬ್ಬರು ಯುವಕರು ಅಪಾಯದಿಂದ ಪಾರಾದರು. ಕಾಲಕಾಲಕ್ಕೆ ವಾಹನಗಳ ಬ್ರೇಕ್ ಪರೀಕ್ಷಿಸುವುದು ಮುಖ್ಯ.

Most Read Articles

Kannada
English summary
Truck driver drives truck for 3 kms in reverse gear. Read in Kannada.
Story first published: Tuesday, January 19, 2021, 10:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X