Just In
Don't Miss!
- News
ಮತ್ತೊಮ್ಮೆ ಮಹಾ ಹಿಂಸಾಚಾರಕ್ಕೆ ಟ್ರಂಪ್ ಬೆಂಬಲಿಗರಿಂದ ಸ್ಕೆಚ್..?
- Sports
ಭಾರತ vs ಆಸ್ಟ್ರೇಲಿಯಾ 4ನೇ ಟೆಸ್ಟ್ ಸಿಡ್ನಿ, ದಿನ 4, Live ಸ್ಕೋರ್
- Lifestyle
"ಸೋಮವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ"
- Finance
Flipkart Big Saving Days: ಆಪಲ್, ಸ್ಯಾಮ್ಸಂಗ್ ಸೇರಿ ಹಲವು ಬ್ರ್ಯಾಂಡ್ ಗಳ ಆಫರ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್
ಪ್ರಪಂಚದ ಎಲ್ಲಾ ರಾಷ್ಟ್ರಗಳು ಕರೋನಾ ವೈರಸ್ ನಿಂದಾಗಿ ತತ್ತರಿಸಿವೆ. ವಿಶ್ವಾದ್ಯಂತ ಈ ಮಾರಕ ವೈರಸ್ ಗೆ 14,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಭಾರತದಲ್ಲಿ ಈ ವೈರಸ್ ಹರಡದಂತೆ ತಡೆಗಟ್ಟಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಕ್ರಮಗಳನ್ನು ಕೈಗೊಂಡಿವೆ.

ವಿದೇಶಿಯರು ಭಾರತವನ್ನು ಪ್ರವೇಶಿಸದಂತೆ ನಿರಾಕರಿಸಲಾಗಿದೆ. ಇದರ ಜೊತೆಗೆ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹೋಗುವುದನ್ನು ನಿಷೇಧಿಸಲಾಗಿದೆ. ಇದರಿಂದಾಗಿ ಬೇರೆ ಉರುಗಳಲ್ಲಿರುವ ಜನರು ತಮ್ಮ ಮನೆಗಳಿಗೆ ಮರಳಲು ತೊಂದರೆ ಅನುಭವಿಸುತ್ತಿದ್ದಾರೆ.

ಇಂತಹ ಸಂದರ್ಭದಲ್ಲಿ ಸಿಕ್ಕಿಬಿದ್ದ ಯುವಕನೊಬ್ಬ ದುಬಾರಿ ಬೆಲೆಯ ಬೈಕ್ ಕಳೆದುಕೊಳ್ಳುತ್ತಾನೆ. ಆದರೆ ಟಿವಿಎಸ್ ಕಂಪನಿಯು ಆ ಯುವಕನಿಗೆ ಮತ್ತೊಂದು ದುಬಾರಿ ಬೈಕ್ ನೀಡುವ ಮೂಲಕ ಆಶ್ಚರ್ಯವನ್ನುಂಟು ಮಾಡಿತು.

ಈ ಘಟನೆ ನಡೆದಿರುವುದು ದೇವರ ಸ್ವಂತ ನಾಡು ಎಂದು ಕರೆಯಲಾಗುವ ಕೇರಳದ ಶಕೀರ್ ಸುಬ್ಬನ್ ಎಂಬತಾನ ಜೀವನದಲ್ಲಿ. ಈತನೇ ಬೈಕ್ ಕಳೆದುಕೊಂಡು, ಟಿವಿಎಸ್ ಕಂಪನಿಯಿಂದ ದುಬಾರಿ ಬೈಕ್ ಉಡುಗೊರೆಯಾಗಿ ಪಡೆದ ಯುವಕ. ಅವರು ಯಾವಾಗಲೂ ಬೈಕಿನಲ್ಲಿ ಸುತ್ತಾಡುತ್ತಿರುತ್ತಾರೆ. ಸದ್ಯ ಕರೋನಾ ವೈರಸ್ ಅವರ ಈ ಸಾಹಸಕ್ಕೆ ಅಡ್ಡಿಯಾಗಿದೆ.

ಶಕೀರ್ ಸುಬ್ಬನ್ ಅವರು 2019ರ ಅಕ್ಟೋಬರ್ನಲ್ಲಿ ತಮ್ಮ ಸುದೀರ್ಘ ಪ್ರಯಾಣವನ್ನು ಆರಂಭಿಸಿದರು. ಇದರ ಭಾಗವಾಗಿ ಅವರು ಇರಾನ್, ಅಜರ್ ಬೈಜಾನ್ ಸೇರಿದಂತೆ ದೇಶಗಳ ಪ್ರವಾಸವನ್ನು ಕೈಗೊಂಡಿದ್ದರು. ಅವರು ತಮ್ಮ ಪ್ರಯಾಣವನ್ನು ಆರಂಭಿಸಿದ್ದಾಗ ಕರೋನಾದ ಭೀತಿ ಇನ್ನೂ ಆವರಿಸಿರಲಿಲ್ಲ. ಆದರೆ, ಶಕೀರ್ ರವರು ಇರಾನ್ ಮೂಲಕ ಜಾರ್ಜಿಯಾಗೆ ತೆರಳಿದ ನಂತರ ಕರೋನಾದ ಬಗ್ಗೆ ತಿಳಿದು ಬಂದಿದೆ.

ಶಕೀರ್ ಅವರನ್ನು ಜಾರ್ಜಿಯಾದ ಗಡಿಯಲ್ಲಿ ವಶಕ್ಕೆ ಪಡೆದ ಅಧಿಕಾರಿಗಳು ಅಲ್ಲಿಂದ ಮರಳುವಂತೆ ಸಲಹೆ ನೀಡಿದರು. ಜೊತೆಗೆ ಅವರ ಬಳಿಯಿದ್ದ ಬೈಕ್ ಅನ್ನು ವಶಕ್ಕೆ ಪಡೆದರು. ಅವರಿಗೆ ತಮ್ಮ ಬೈಕ್ ಅನ್ನು ಹಿಂಪಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಅಜರ್ ಬೈಜಾನ್ ನಿಂದ ಬರಿಗೈಯಲ್ಲಿ ವಾಪಸಾದರು.

ಅವರು ತಮ್ಮ ಟಿವಿಎಸ್ ಅಪಾಚೆ 200 4ವಿ ಬೈಕ್ ಅನ್ನು ಅಲ್ಲಿಯೇ ಬಿಟ್ಟು ಅಜರ್ ಬೈಜಾನ್ ವಿಮಾನ ನಿಲ್ದಾಣದ ಮೂಲಕ ದುಬೈಗೆ ಬಂದು ಭಾರತಕ್ಕೆ ವಾಪಸ್ ಆದರು. ಭಾರತಕ್ಕೆ ಬಂದಿಳಿದ ಅವರಿಗೆ ಟಿವಿಎಸ್ ಮೋಟಾರ್ಸ್, ದೊಡ್ಡ ಆಶ್ಚರ್ಯವನ್ನು ನೀಡಿತು.

ಅವರು ಬಳಸುತ್ತಿದ್ದ ಅಪಾಚೆ 200 4ವಿ ಬೈಕ್ಗಿಂತ ಹೆಚ್ಚು ಬೆಲೆಯ ಅಪಾಚೆ ಆರ್ ಆರ್ 310 ಬೈಕ್ ಅನ್ನು ಅವರಿಗೆ ನೀಡಿತು. ಇದನ್ನು ಅವರು ತಮ್ಮ ಯುಟ್ಯೂಬ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಶಕೀರ್ ರವರು ತಮ್ಮ ಬೈಕ್ನಲ್ಲಿ ವಿಶ್ವದಾದ್ಯಂತ ಪ್ರಯಾಣಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಅವರು ಹಲವು ಬಾರಿ ಇಂತಹ ಪ್ರಯಾಣಗಳಲ್ಲಿ ಭಾಗಿಯಾಗಿದ್ದರು.

ಈ ಕಾರಣಕ್ಕೆ ಅವರು ಜನಪ್ರಿಯರಾಗಿದ್ದಾರೆ. ಟಿವಿಎಸ್ ಜೊತೆಗೆ ಕೈಜೋಡಿಸಿದ್ದಕ್ಕೆ ಯುಟ್ಯೂಬ್ನಲ್ಲಿಯೂ ಪ್ರಸಿದ್ಧರಾಗಿದ್ದಾರೆ. ಟಿವಿಎಸ್ ಕಂಪನಿಯು ಅವರಿಗೆ ನೀಡುತ್ತಿರುವ ಈ ಬೈಕ್ ಅನ್ನು ಬಿಎಂಡಬ್ಲ್ಯು ಟೆಕ್ನಾಲಜಿಯಿಂದ ತಯಾರಿಸಲಾಗಿದೆ.
ಈ ಬೈಕಿನ ಬೆಲೆ ಎಕ್ಸ್ ಶೋ ರೂಂ ದರದಂತೆ ರೂ.2.4 ಲಕ್ಷಗಳಾಗಿದೆ. ಈ ಬೈಕಿನಲ್ಲಿ ಹೆಚ್ಚು ಟೆಕ್ನಿಕಲ್ ಅಂಶಗಳನ್ನು ಅಳವಡಿಸಿರುವುದರಿಂದ ಈ ಬೈಕಿನ ಬೆಲೆ ಹೆಚ್ಚಾಗಿದೆ. ಈ ಬೈಕಿನಲ್ಲಿ 313 ಸಿಸಿಯ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ.

ಈ ಎಂಜಿನ್ 34 ಬಿಹೆಚ್ಪಿ ಪವರ್ ಹಾಗೂ 27 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಬಿಎಂಡಬ್ಲ್ಯು ಜಿ310ಆರ್ ಬೈಕು ಈ ಬೈಕಿನ ನೇಕೆಡ್ ಆವೃತ್ತಿಯಾಗಿದೆ. ಇದು ಬಿಎಂಡಬ್ಲ್ಯು ಕಂಪನಿಯ ಎಂಟ್ರಿ ಲೆವೆಲ್ ಬೈಕ್ ಆಗಿದೆ.

ಲಾಕ್ಡೌನ್ನಲ್ಲಿ ಸಿಲುಕಿದ ಈ ಕೂಲಿ ಕಾರ್ಮಿಕರು ಕೊನೆಗೆ ಮಾಡಿದ್ದೇನು ಗೊತ್ತಾ?
ಕರೋನಾ ವೈರಸ್ ಪರಿಣಾಮ ಇಡೀ ದೇಶವೇ ಲಾಕ್ ಡೌನ್ ಆಗಿದ್ದು, ಅಗತ್ಯ ಸೇವೆಗಳನ್ನು ಹೊರತುಪಡಿಸಿ ಬಹುತೇಕ ವಾಣಿಜ್ಯ ಚಟುವಟಿಕೆಗಳು ಮತ್ತು ಸಾರಿಗೆ ಸೌಲಭ್ಯಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಇದರಿಂದ ದಿನಗೂಲಿ ಕಾರ್ಮಿಕರು ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದು, ಮರಳಿ ತಮ್ಮ ತಮ್ಮ ಹಳ್ಳಿಗಳತ್ತ ಸೇರಿಕೊಳ್ಳಲು ಹರಸಾಹಸಪಡುತ್ತಿದ್ದಾರೆ.

ವೈರಸ್ ಹರಡದಂತೆ ತಡೆಯಲು ತೆಗೆದುಕೊಳ್ಳಲಾಗಿರುವ 21 ದಿನಗಳ ಲಾಕ್ ಡೌನ್ ಹಿನ್ನಲೆಯಲ್ಲಿ ಎಲ್ಲಾ ಬಗೆಯ ಸಂಚಾರಿ ವ್ಯವಸ್ಥೆಯನ್ನು ಏಕಾಏಕಿ ಬಂದ್ ಮಾಡಲಾಗಿದ್ದು, ದಿನಗೂಲಿ ಕಾರ್ಮಿಕರು ಲಾಕ್ ಡೌನ್ ನಡುವೆಯೂ ತಮ್ಮ ಊರುಗಳತ್ತ ಧಾವಿಸಲು ಎಲ್ಲಿಲ್ಲದ ಹರಸಾಹಸ ಮಾಡುತ್ತಿದ್ದಾರೆ. ಕೆಲವರು ಯಾವುದೇ ಸಾರಿಗೆ ಸೌಲಭ್ಯ ಸಿಗದೆ ನಗರದಲ್ಲೇ ಪರದಾಟುತ್ತಿದ್ದರೆ ಇನ್ನು ಕೆಲವರು ನಡೆದುಕೊಂಡು ಊರು ತಲಪುತ್ತಿದ್ದಾರೆ.

ಆದರೆ ಕೆಲಸ ಅರಿಸಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಬಂದಿದ್ದ ಕೂಲಿ ಕಾರ್ಮಿಕರ ತಂಡವೊಂದು ಲಾಕ್ಡೌನ್ ಮಧ್ಯದಲ್ಲೂ ಸಾವಿರಾರು ಕಿ.ಮೀ ದೂರದಲ್ಲಿರುವ ಮನೆಯನ್ನು ಸುರಕ್ಷಿತವಾಗಿ ತಲುಪಿದ್ದು, ಯಾವುದೇ ಸಾರಿಗೆ ಸಂಪರ್ಕವಿಲ್ಲ ಸಂದರ್ಭದಲ್ಲಿ ಹೊಸ ಸಾಹಸವೊಂದನ್ನು ಮಾಡಿ ಗಮನಸೆಳೆದಿದ್ದಾರೆ.

ಹೌದು, ದೆಹಲಿ ಹೊರವಲಯದಲ್ಲಿ ಕೂಲಿ ಕೆಲಸಕ್ಕೆಂದು ದೂರದ ಬಿಹಾರದಿಂದ ಬಂದಿದ್ದ ಮೂವರು ಕಾರ್ಮಿಕರು ಲಾಕ್ಡೌನ್ ಆದ ಹಿನ್ನಲೆ ಅಕ್ಷರಶಃ ನಲುಗಿ ಹೋಗಿದ್ದಾರೆ. ತಿನ್ನಲು ಉಟ ಮತ್ತು ವಸತಿ ಸಿಗದೆ ಎರಡು ದಿನ ಪರದಾಡಿದ ಕೂಲಿ ಕಾರ್ಮಿಕರು ಕೊನೆಗೆ ಸೈಕಲ್ ಮಾದರಿಯ ತಳ್ಳುವ ಗಾಡಿಯಲ್ಲೇ ಊರು ಸೇರಲು ಯತ್ನಿಸಿದ್ದಾರೆ.

ಆದರೆ ದೆಹಲಿಯಿಂದ 1,200 ಕಿ.ಮೀ ದೂರದಲ್ಲಿರುವ ತಮ್ಮ ಊರನ್ನು ಸೈಕಲ್ನಲ್ಲಿ ಪ್ರಯಾಣ ಮಾಡುವ ಕಷ್ಟವೆಂದ ಅರಿತ ಮೂವರು ಕೂಲಿ ಕಾರ್ಮಿಕರು, ಗುಜರಿ ಅಂಗಡಿ ಮುಂಭಾಗದಲ್ಲಿ ಬಿದಿದ್ದ ಹಳೆಯ ಸ್ಕೂಟರ್ ಒಂದರ ಎಂಜಿನ್ ಅನ್ನು ಬಿಚ್ಚಿಕೊಂಡು ಸೈಕಲ್ ಕೆಳಭಾಗದಲ್ಲಿ ಜೋಡಿಸಿಕೊಂಡಿದ್ದಾರೆ. ಅದೃಷ್ಟವಶಾತ್ ಹಳೆಯ ಸ್ಕೂಟರ್ ಎಂಜಿನ್ ಕಾರ್ಯನಿರ್ವಹಣೆ ಮಾಡುವುದನ್ನ ಅರಿತ ಕೂಲಿ ಕಾರ್ಮಿಕರು ಸೈಕಲ್ಗೆ ಜೋಡಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಮೂವರು ಕಾರ್ಮಿಕರಲ್ಲಿ ಇಬ್ಬರಿಗೆ ಮೆಕ್ಯಾನಿಕಲ್ ಕೆಲಸ ಗೊತ್ತಿದ್ದ ಹಿನ್ನಲೆಯಲ್ಲಿ ಸ್ಕೂಟರ್ ಎಂಜಿನ್ ಕಾರ್ಯನಿರ್ವಹಣೆ ಬಗೆಗೆ ಅರಿತು ಸೈಕಲ್ಗೆ ಜೋಡಣೆ ಮಾಡುವಲ್ಲಿ ಯಶಸ್ವಿಯಾಗಿದ್ದು, ತಡಮಾಡದೆ ಅಲ್ಲಿಂದ ಹೊರಟುಬಂದಿದ್ದಾರೆ.

ಈ ವೇಳೆ ಮಾರ್ಗಮಧ್ಯದಲ್ಲಿ ಬರುತ್ತಿರುವಾಗ ಎದುರಾದ ಉತ್ತರ ಪ್ರದೇಶದ ಪೊಲೀಸರು ಮೂವರು ಕಾರ್ಮಿಕರನ್ನು ತಡೆದು ಪ್ರಶ್ನಿಸಿದ್ದಾರೆ. ಎಲ್ಲಿಂದ ಬಂದಿರುವುದು? ಎಲ್ಲಿಗೆ ಹೋಗಬೇಕಿದೆ ಎನ್ನುವುದನ್ನು ಪ್ರಶ್ನಿಸಿದ್ದಾರೆ.

ಪೊಲೀಸರ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದ ಮೂವರು ಕಾರ್ಮಿಕರು ದೆಹಲಿ ಆದ ಪರಿಸ್ಥಿತಿ ಬಗೆಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಉತ್ತರ ಪ್ರದೇಶದ ಪೊಲೀಸರು ಕೂಲಿ ಕಾರ್ಮಿಕರಾದ ಹಿನ್ನಲೆಯಲ್ಲಿ ಯಾವುದೇ ರೀತಿ ತೊಂದರೆ ಆಗದಂತೆ ಬಿಟ್ಟು ಕಳುಹಿಸಿದ್ದಾರೆ.

ಆದರೆ ಉತ್ತರ ಪ್ರದೇಶದ ಗಡಿಯಿಂದ ಬಿಟ್ಟುಹೊರಡುವ ಮುನ್ನ ಮೂವರು ಕಾರ್ಮಿಕರನ್ನು ಸ್ಕ್ರೀನಿಂಗ್ ಮಾಡಿದ ವೈದ್ಯಕೀಯ ತಂಡವು ಕಡ್ಡಾಯವಾಗಿ ಮಾಸ್ಕ್ ಬಳಕೆ ಮಾಡಬೇಕೆಂಬ ಎಚ್ಚರಿಕೆಯ ಸಂದೇಶ ನೀಡಿ ಕಳುಹಿಸಿದ್ದಾರೆ.

1,200 ಕಿ.ಮಿ ಪ್ರಯಾಣವನ್ನು ಇಂದು ಕೂಡಾ ಮುಂದುವರಿಸಿರುವ ಮೂವರು ಕೂಲಿ ಕಾರ್ಮಿಕರು ಊರಿನತ್ತ ಪ್ರಯಣಿಸುತ್ತಿದ್ದಾರೆ. ಇನ್ನು ಸೈಕಲ್ ಪ್ಲಸ್ ಸ್ಕೂಟರ್ ಎಂಜಿನ್ ಹೊಂದಿರುವ ವಾಹನದಲ್ಲಿ ಪೆಟ್ರೋಲ್ ಟ್ಯಾಂಕ್ ಸಹ ಇದ್ದು, ಪೆಟ್ರೋಲ್ ಸಿಗದೆ ಇದ್ದಾಗ ಪೆಡಲ್ ತುಳಿದುಕೊಂಡು ಪ್ರಯಾಣ ಮಾಡುತ್ತಿದ್ದಾರೆ.