ಕರೋನಾ ವೈರಸ್ ಎಫೆಕ್ಟ್: ಸಂಕಷ್ಟದಲ್ಲಿ ಭಾರತೀಯ ಆಟೋ ಉತ್ಪಾದನಾ ಸಂಸ್ಥೆಗಳು

ಕರೋನಾ ವೈರಸ್‌ ಅಟ್ಟಹಾಸವು ಚೀನಾದಲ್ಲಿ ಮಾತ್ರವಲ್ಲದೇ ವಿಶ್ವದ ಪ್ರಮುಖ ರಾಷ್ಟ್ರಗಳಿಗೂ ವ್ಯಾಪಿಸುತ್ತಿದ್ದು, ವೈರಸ್ ಪರಿಣಾಮದಿಂದಾಗಿ ಜನರ ಜೀವ ಮಾತ್ರವಲ್ಲದೇ ಆರ್ಥಿಕ ಕುಸಿತವು ಕೂಡಾ ತಳಮಟ್ಟಕ್ಕೆ ಕುಸಿಯುವಂತೆ ಮಾಡಿದೆ.

ಕರೋನಾ ವೈರಸ್ ಎಫೆಕ್ಟ್: ಸಂಕಷ್ಟದಲ್ಲಿ ಭಾರತೀಯ ಆಟೋ ಉತ್ಪಾದನಾ ಸಂಸ್ಥೆಗಳು

ಈಗಾಗಲೇ ಸಾವಿರಾರು ಜನರ ಜೀವವನ್ನು ಬಲಿಪಡೆದಿರುವ ಕರೋನಾ ವೈರಸ್‌‌ ಭೀತಿಯು ಚೀನಾವನ್ನು ಮಾತ್ರವಲ್ಲದೇ ಇಡೀ ವಿಶ್ವ ಸಮುದಾಯವನ್ನೇ ಆತಂಕಕ್ಕೆ ಈಡಾಗುವಂತೆ ಮಾಡಿದ್ದು, ವೈರಸ್ ತಡೆಗೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದ್ದರು ಸಾವಿನ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದರ ನಡುವೆ ಕರೋನಾ ವೈರಸ್ ಚೀನಿ ಆರ್ಥಿಕತೆ ಮೇಲೆ ಸಾಕಷ್ಟು ಪರಿಣಾಮ ಬೀರಿದ್ದು, ಜೊತೆಗೆ ಆಟೋ ಉದ್ಯಮದ ಅಭಿವೃದ್ದಿಗೂ ಭಾರೀ ಹೊಡೆತ ನೀಡಿದೆ.

ಕರೋನಾ ವೈರಸ್ ಎಫೆಕ್ಟ್: ಸಂಕಷ್ಟದಲ್ಲಿ ಭಾರತೀಯ ಆಟೋ ಉತ್ಪಾದನಾ ಸಂಸ್ಥೆಗಳು

ಕರೋನಾ ವೈರಸ್‌ನಿಂದಾಗಿ ಚೀನಾದಲ್ಲಿರುವ ಪ್ರಮುಖ ಆಟೋ ಉತ್ಪಾದನಾ ಘಟಕಗಳು ಹೊಸ ವಾಹನ ಉತ್ಪಾದನೆಯನ್ನೇ ಬಂದ್ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಹೊಸ ವಾಹನಗಳ ಮಾರಾಟವು ಕೇವಲ ಒಂದೇ ತಿಂಗಳಿನಲ್ಲಿ ಶೇ.18ರಿಂದ ಶೇ.20 ರಷ್ಟು ಇಳಿಕೆ ಕಂಡಿದೆ.

ಕರೋನಾ ವೈರಸ್ ಎಫೆಕ್ಟ್: ಸಂಕಷ್ಟದಲ್ಲಿ ಭಾರತೀಯ ಆಟೋ ಉತ್ಪಾದನಾ ಸಂಸ್ಥೆಗಳು

ಇದು ಕೇವಲ ಚೀನಾದಲ್ಲಿನ ಪರಿಸ್ಥಿತಿಯಲ್ಲ, ಚೀನಾದಿಂದ ಆಮದುಗೊಳ್ಳುವ ಆಟೋ ಬೀಡಿಭಾಗಗಳನ್ನು ನೆಚ್ಚಿಕೊಂಡಿರುವ ಭಾರತೀಯ ಆಟೋ ಉತ್ಪಾದನಾ ಸಂಸ್ಥೆಗಳ ಪರಿಸ್ಥಿತಿ ಕೂಡಾ ಶೋಚನಿಯವಾಗುತ್ತಿದೆ.

ಕರೋನಾ ವೈರಸ್ ಎಫೆಕ್ಟ್: ಸಂಕಷ್ಟದಲ್ಲಿ ಭಾರತೀಯ ಆಟೋ ಉತ್ಪಾದನಾ ಸಂಸ್ಥೆಗಳು

ವಿಶ್ವದ ಪ್ರಮುಖ ವಾಹನ ಉತ್ಪಾದನಾ ಸಂಸ್ಥೆಗಳು ಚೀನಿ ಮಾರುಕಟ್ಟೆಯಿಂದಲೇ ಬಿಡಿಭಾಗಗಳ ಆಮದು ನೆಚ್ಚಿಕೊಂಡಿದ್ದು, ಅದು ಇದೀಗ ಕುಂಠಿತವಾಗಿರುವುದು ಚೀನಾದಲ್ಲಿ ಮಾತ್ರವಲ್ಲದೇ ಭಾರತೀಯ ಆಟೋ ಉದ್ಯಮದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ನಿಗದಿತ ಅವಧಿಯೊಳಗೆ ಬಿಡಿಭಾಗಗಳ ಪೂರೈಕೆಯಿಲ್ಲದೆ ವಾಹನ ಉತ್ಪಾದನೆಯು ತಗ್ಗುತ್ತಿದ್ದು, ಗ್ರಾಹಕರಿಂದ ಬೇಡಿಕೆಯಿದ್ದರೂ ವಾಹನಗಳನ್ನು ಪೂರೈಕೆ ಮಾಡಲು ಸಾಧ್ಯವಾಗದೆ ಪರದಾಟುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಕರೋನಾ ವೈರಸ್ ಎಫೆಕ್ಟ್: ಸಂಕಷ್ಟದಲ್ಲಿ ಭಾರತೀಯ ಆಟೋ ಉತ್ಪಾದನಾ ಸಂಸ್ಥೆಗಳು

ತಗ್ಗಿದ ಹೀರೋ, ಟಿವಿಎಸ್ ಬೈಕ್ ಉತ್ಪಾದನಾ ಪ್ರಮಾಣ..!

ಹೌದು, ಕರೋನಾ ವೈರಸ್ ಪರಿಣಾಮ ಚೀನಾದಲ್ಲಿ ಹಲವು ಆಟೋ ಬಿಡಿಭಾಗಗಳ ಉತ್ಪಾದನಾ ಸಂಸ್ಥೆಗಳು ಸ್ಥಗಿತಗೊಂಡಿರುವುದು ಭಾರತದಲ್ಲಿನ ಆಟೋ ಉತ್ಪಾದನಾ ಸಂಸ್ಥೆಗಳಿಗೂ ಸಮಸ್ಯೆ ಉಂಟಾಗಿದ್ದು, ಹೀರೋ ಮೋಟೊಕಾರ್ಪ್, ಟಿವಿಎಸ್ ಸೇರಿದಂತೆ ಹಲವು ಬೈಕ್ ಉತ್ಪಾದನಾ ಸಂಸ್ಥೆಗಳ ಉತ್ಪಾದನಾ ಪ್ರಮಾಣದಲ್ಲಿ ಶೇ.5ರಿಂದ ಶೇ. 15ರಷ್ಟು ಕಡಿತಗೊಂಡಿದೆ.

ಕರೋನಾ ವೈರಸ್ ಎಫೆಕ್ಟ್: ಸಂಕಷ್ಟದಲ್ಲಿ ಭಾರತೀಯ ಆಟೋ ಉತ್ಪಾದನಾ ಸಂಸ್ಥೆಗಳು

ಈ ಕುರಿತಂತೆ ಸ್ಪಷ್ಟನೆ ನೀಡಿರುವ ಹೀರೋ ಮೋಟೊಕಾರ್ಪ್ ಸಂಸ್ಥೆಯು ಪ್ರಮುಖ ಬಿಡಿಭಾಗಗಳು ಚೀನಿ ಮಾರುಕಟ್ಟೆಯಿಂದ ಆಮದು ಇಲ್ಲದಿರುವುದೇ ಉತ್ಪಾದನಾ ಪ್ರಮಾಣ ಇಳಿಕೆ ಪ್ರಮುಖ ಕಾರಣವಾಗಿರುವುದನ್ನು ಒಪ್ಪಿಕೊಂಡಿದೆ.

ಕರೋನಾ ವೈರಸ್ ಎಫೆಕ್ಟ್: ಸಂಕಷ್ಟದಲ್ಲಿ ಭಾರತೀಯ ಆಟೋ ಉತ್ಪಾದನಾ ಸಂಸ್ಥೆಗಳು

ಜೊತೆಗೆ ಕರೋನಾ ವೈರಸ್‌ನಿಂದಾಗಿ ಎಂಜಿ ಮೋಟಾರ್ ಕಾರುಗಳ ಉತ್ಪಾದನೆಯಲ್ಲೂ ಕುಂಠಿತವಾಗಿದ್ದು, ಶೇ.70 ರಷ್ಟು ಚೀನಿ ಬಿಡಿಭಾಗಗಳನ್ನೇ ಹೊಂದಿರುವ ಹೆಕ್ಟರ್ ಉತ್ಪಾದನೆಗೆ ಹಿನ್ನಡೆಯಾಗುತ್ತಿರುವುದಲ್ಲದೇ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟದಲ್ಲೂ ಸಾಕಷ್ಟು ತೊಂದರೆಯಾಗುತ್ತಿದೆ.

ಕರೋನಾ ವೈರಸ್ ಎಫೆಕ್ಟ್: ಸಂಕಷ್ಟದಲ್ಲಿ ಭಾರತೀಯ ಆಟೋ ಉತ್ಪಾದನಾ ಸಂಸ್ಥೆಗಳು

ಸದ್ಯ ಲಭ್ಯವಿರುವ ಸ್ಥಳೀಯ ಬಿಡಿಭಾಗಗಳಿಂದ ವಾಹನ ಉತ್ಪಾದನೆಯು ಮುಂದುವರಿದಿದ್ದು, ಕರೋನಾ ವೈರಸ್ ಹತೋಟಿಗೆ ಬಂದ ನಂತರವಷ್ಟೇ ಸಾಗರೋತ್ತರ ವ್ಯವಹಾರಗಳು ಸುಧಾರಣೆಗೊಳ್ಳಲಿವೆ.

ಕರೋನಾ ವೈರಸ್ ಎಫೆಕ್ಟ್: ಸಂಕಷ್ಟದಲ್ಲಿ ಭಾರತೀಯ ಆಟೋ ಉತ್ಪಾದನಾ ಸಂಸ್ಥೆಗಳು

ಕಾರು ಉತ್ಪಾದನೆ ಬಂದ್ ಮಾಡಿದ ಹ್ಯುಂಡೈ

ಕೊರೊನಾ ವೈರಸ್‌ನಿಂದಾಗಿ ದಕ್ಷಿಣ ಕೊರಿಯಾದ ಅತಿ ದೊಡ್ಡ ಕಾರು ಉತ್ಪಾದನಾ ಸಂಸ್ಥೆಯಾಗಿರುವ ಹ್ಯುಂಡೈ ಕೂಡಾ ಚೀನಾದಲ್ಲಿರುವ ತನ್ನ ಕಾರು ಉತ್ಪಾದನಾ ಘಟಕವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ವಾಹನ ರಫ್ತು ಪ್ರಮಾಣವನ್ನು ಗಣನೀಯವಾಗಿ ಇಳಿಕೆ ಮಾಡಿದೆ.

ಕರೋನಾ ವೈರಸ್ ಎಫೆಕ್ಟ್: ಸಂಕಷ್ಟದಲ್ಲಿ ಭಾರತೀಯ ಆಟೋ ಉತ್ಪಾದನಾ ಸಂಸ್ಥೆಗಳು

ಇದರ ಜೊತೆಗೆ ಚೀನಿ ಅತಿ ದೊಡ್ಡ ಕಾರು ಉತ್ಪಾದನಾ ಸಂಸ್ಥೆಯಾದ ಸೈಕ್(ಎಂಜಿ ಮೋಟಾರ್ ಮಾತೃಸಂಸ್ಥೆ), ಟೊಯೊಟಾ, ಫಾವ್, ಹೈಮಾ, ಗ್ರೇಟ್ ವಾಲ್ ಮೋಟಾರ್ಸ್, ಫೋಕ್ಸ್‌ವ್ಯಾಗನ್, ಜೀಪ್ ಮತ್ತು ಹವಾಲ್ ಕಾರುಗಳ ಉತ್ಪಾದನೆಯಲ್ಲಿ ಕುಂಠಿತವಾಗಿರುವುದಲ್ಲದೇ ಮಾರಾಟ ಪ್ರಕ್ರಿಯೆಯು ಸಹ ತೀವ್ರಗತಿಯಲ್ಲಿ ಕುಸಿತ ಕಾಣುತ್ತಿದೆ.

Most Read Articles

Kannada
English summary
TVS production in February affected due to Coronavirus. Read in Kannada.
Story first published: Tuesday, February 25, 2020, 16:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X