ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯ್ತು ಬಸ್ ಅಡಿಯಲ್ಲಿ ಕುಳಿತು ಪ್ರಯಾಣ ಮಾಡಿದ ಬಾಲಕರ ವಿಡಿಯೋ

ಬಾಲಕರಿಬ್ಬರು ಹಣವಿಲ್ಲದ ಕಾರಣ ಬಸ್ ಅಡಿ ಕುಳಿತು ಸುಮಾರು 80 ಕಿಮಿ ಪ್ರಯಾಣ ಮಾಡಿರುವ ಘಟನೆ ನಡೆದಿದ್ದು, ಬಸ್ ಅಡಿ ಕುಳಿತು ಪ್ರಯಾಣ ಮಾಡುತ್ತಿದ್ದ ಬಾಲಕರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

By Praveen

ಹೊಟ್ಟೆ ಪಾಡಿಗಾಗಿ ವಲಸೆ ಹೋದ ತಂದೆ ತಾಯಿಗಳನ್ನು ಹುಡುಕಿ ಹೊರಟಿದ್ದ ಬಾಲಕರಿಬ್ಬರು ಹಣವಿಲ್ಲದ ಕಾರಣ ಬಸ್ ಅಡಿ ಕುಳಿತು ಸುಮಾರು 80 ಕಿಮಿ ಪ್ರಯಾಣ ಮಾಡಿರುವ ಘಟನೆ ನಡೆದಿದ್ದು, ಬಸ್ ಅಡಿ ಕುಳಿತು ಪ್ರಯಾಣ ಮಾಡುತ್ತಿದ್ದ ಬಾಲಕರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ವೈರಲ್ ಆಯ್ತು ಬಸ್ ಅಡಿಯಲ್ಲಿ ಕುಳಿತು ಪ್ರಯಾಣ ಮಾಡಿದ ಬಾಲಕರ ವಿಡಿಯೋ

ಅವರಿನ್ನು ಆಡಿ ನಲಿಯಬೇಕಾದ ಮಕ್ಕಳು. ಆದ್ರೆ ಅವರಿಗೆ ಆ ಭಾಗ್ಯವಿಲ್ಲ. ಯಾಕಂದ್ರೆ ಹೊಟ್ಟೆ ಪಾಡಿಗಾಗಿ ದುಡಿಯಲು ಹೋದ ಅವರ ತಂದೆ ತಾಯಿಗಳು ಅವರ ಮುಖ ನೋಡುವುದೇ ಅಪರೂಪ. ಹೀಗಾದಾಗ ಬೆಳೆಯುವ ಮಕ್ಕಳು ಯಾರನ್ನು ಅನುಸರಿಸಬೇಕು ಎಂಬ ಗೊಂದಲ ಸಹಜವಾಗಿ ಮೂಡದೇ ಇರದು.

ವೈರಲ್ ಆಯ್ತು ಬಸ್ ಅಡಿಯಲ್ಲಿ ಕುಳಿತು ಪ್ರಯಾಣ ಮಾಡಿದ ಬಾಲಕರ ವಿಡಿಯೋ

ಹೀಗಿದ್ದಾಗ ಮಕ್ಕಳು ಅಡ್ಡದಾರಿ ತುಳಿಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದು ಅತಿಯಾದ ಜನಸಂಖ್ಯೆಯಿಂದ ಬಳಲುತ್ತಿರುವ ಎಲ್ಲ ದೇಶಗಳ ಸಾಮಾನ್ಯ ಸಮಸ್ಯೆಯಾದ್ರು ಚೀನಾದಲ್ಲಿ ಅತಿಯಾಗುತ್ತಿದೆ ಎನ್ನುವುದಕ್ಕೆ ಮೊನ್ನೆ ನಡೆದ ಘಟನೆಯೊಂದು ವಿಶ್ವಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.

ವೈರಲ್ ಆಯ್ತು ಬಸ್ ಅಡಿಯಲ್ಲಿ ಕುಳಿತು ಪ್ರಯಾಣ ಮಾಡಿದ ಬಾಲಕರ ವಿಡಿಯೋ

ಇದಕ್ಕೆ ಕಾರಣ ದಕ್ಷಿಣ ಚೀನಾದ ಗುಯಿಗಾಂಗ್ ಪ್ರಾಂತ್ಯದಲ್ಲಿನ ಜನ ಕೆಲಸ ಅರಸಿ ಪೂರ್ವ ಪ್ರಾಂತ್ಯಗಳತ್ತ ವಲಸೆ ಬರುತ್ತಿರುವುದು ಹೊಸ ಸಮಸ್ಯೆಗಳಿಗೆ ಕಾರಣವಾಗಿದೆ. ಇದರಿಂದ ತಂದೆ ತಾಯಿಗಳ ಪೋಷಣೆಯಿಂದ ವಂಚಿತರಾರುತ್ತಿರುವ ಮಕ್ಕಳು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವ ಆಘಾತಕಾರಿ ಅಂಶಗಳು ಪತ್ತೆಯಾಗುತ್ತಿವೆ.

Recommended Video

Honda CB1000R Unveiled At EICMA 2017 - DriveSpark
ವೈರಲ್ ಆಯ್ತು ಬಸ್ ಅಡಿಯಲ್ಲಿ ಕುಳಿತು ಪ್ರಯಾಣ ಮಾಡಿದ ಬಾಲಕರ ವಿಡಿಯೋ

ಹೀಗಿರುವಾಗಲೇ ಗುಯಿಗಾಂಗ್ ಪ್ರಾಂತ್ಯದಲ್ಲಿ 8 ಮತ್ತು 9 ವರ್ಷದ ಬಾಲಕರಿಬ್ಬರು ವಲಸೆ ಹೋದ ತಮ್ಮ ತಂದೆ-ತಾಯಿಗಳನ್ನು ನೋಡ ಹೋಗಲು ಯತ್ನಿಸಿದ್ದಾರೆ. ಆದ್ರೆ ಹಣ ಇಲ್ಲದ ಕಾರಣ ಸರ್ಕಾರಿ ಬಸ್ ಒಂದರ ಎಂಜಿನ್ ವಿಭಾಗದಲ್ಲಿ ಅಡುಗಿ ಕುಳಿತು ಸುಮಾರು 80 ಕಿಮಿ ಪ್ರಯಾಣ ಮಾಡಿದ್ದಾರೆ.

ವೈರಲ್ ಆಯ್ತು ಬಸ್ ಅಡಿಯಲ್ಲಿ ಕುಳಿತು ಪ್ರಯಾಣ ಮಾಡಿದ ಬಾಲಕರ ವಿಡಿಯೋ

ಈ ವೇಳೆ ಬಸ್ ಡಿಪೋ ಒಂದರಲ್ಲಿ ಎಂಜಿನ್ ಭಾಗಗವನ್ನು ಪರೀಕ್ಷೆ ಮಾಡುವ ವೇಳೆ ಬಾಲಕರಿಬ್ಬರು ಅಡುಗಿ ಕುಳಿತಿರುವುದು ಪತ್ತೆಯಾಗಿದೆ. ವಿಷಯ ತಿಳಿದ ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿರುವ ಡಿಪೊ ಸಿಬ್ಬಂದಿಯು, ಬಿಸಿಯಾದ ಎಂಜಿನ್ ಮಧ್ಯೆ ಕುಳಿತು ಸುಮಾರು 80ಕಿಮಿ ಪ್ರಯಾಣಿಸಿರುವ ಮಕ್ಕಳ ಸಾಹಸಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ವೈರಲ್ ಆಯ್ತು ಬಸ್ ಅಡಿಯಲ್ಲಿ ಕುಳಿತು ಪ್ರಯಾಣ ಮಾಡಿದ ಬಾಲಕರ ವಿಡಿಯೋ

ಆದ್ರೆ ವಾಸ್ತವಾಂಶ ನೋಡುವುದಾದ್ರೆ ಚೀನಾದಲ್ಲಿ ಶೇ.70 ರಷ್ಟು ಮಕ್ಕಳು ತಂದೆ-ತಾಯಿಗಳ ಪೋಷಣೆಯಿಂದ ವಂಚಿತರಾಗುತ್ತಿದ್ದು, ಹೊಟ್ಟೆ ಪಾಡಿಗಾಗಿ ವಲಸೆ ಹೋಗುತ್ತಿರುವುದು ಇಂತಹ ಸಾಮಾಜಿಕ ಸಮಸ್ಯೆಗಳ ಹೆಚ್ಚಳ ಕಾರಣವಾಗಿದೆ ಅಂತಾ ಅಲ್ಲಿನ ಮಾಧ್ಯಮಗಳು ಸರ್ಕಾರದ ವಿರುದ್ಧ ಧ್ವನಿ ಎತ್ತಿವೆ.

ಬಾಲಕರು ಬಸ್ ಎಂಜಿನ್ ವಿಭಾಗದಲ್ಲಿ ಕುಳಿತು ಪ್ರಯಾಣಿಸುತ್ತಿರುವ ವಿಡಿಯೋ ಇಲ್ಲಿದೆ ನೋಡಿ...

Most Read Articles

Kannada
English summary
Read in Kannada about Two Chinese boys travelled 80km in bus undercarriage.
Story first published: Wednesday, November 29, 2017, 11:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X