ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಿತಿ ಮೀರಿದ ನಕಲಿ ನಂಬರ್ ಪ್ಲೇಟ್‌ಗಳ ಹಾವಳಿ

ಕಳ್ಳತನ ಮಾಡಲಾದ ವಾಹನಗಳನ್ನು ಅಂತರ್‌ರಾಜ್ಯಗಳಿಗೆ ಸಾಗಿಸುವ ಖರೀದಿಮರ ತಂಡಗಳು ನಕಲಿ ನಂಬರ್ ಪ್ಲೇಟ್‌ಗಳನ್ನು ಬಳಸಿ ಮರುಮಾರಾಟ ಮಾಡುವುದು ಒಂದಡೆಯಾದಲ್ಲಿ ಹೊಸ ಕಾರುಗಳ ನೋಂದಣಿಯಲ್ಲಿ ಗೋಲ್ಮಾಲ್ ಮಾಡಿ ಸಾರಿಗೆ ಇಲಾಖೆಗೂ ಮೋಸ ಮಾಡಿ ಓಡಾಡುವ ಖದೀಮರ ಪಟ್ಟಿಯೂ ಕೂಡಾ ದೊಡ್ಡ ಪಟ್ಟಿಯೇ ಇದೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಿತಿ ಮೀರಿದ ನಕಲಿ ನಂಬರ್ ಪ್ಲೇಟ್‌ಗಳ ಹಾವಳಿ

ಹೌದು, ಒಂದೇ ನೋಂದಣಿ ಸಂಖ್ಯೆಯಲ್ಲಿ ಎರಡರಿಂದ ಮೂರು ಕಾರುಗಳು ಮತ್ತು ದ್ವಿಚಕ್ರ ವಾಹನಗಳು ಓಡಾಡುತ್ತಿರುವ ಹಲವಾರು ಪ್ರಕರಣಗಳು ವಿವಿಧ ರಾಜ್ಯಗಳಲ್ಲಿ ಬೆಳಕಿಗೆ ಬಂದಿವೆ. ಒಂದೇ ಮಾದರಿಯ ಕಾರುಗಳಲ್ಲಿ ನಕಲಿ ನೋಂದಣಿ ಸಂಖ್ಯೆಯನ್ನು ಬಳಕೆ ಮಾಡುತ್ತಿರುವುದು ಈಗಾಗಲೇ ಹಲವಾರು ಕಡೆಗಳಲ್ಲಿ ಪತ್ತೆಯಾಗಿದ್ದು, ನಕಲಿ ನಂಬರ್ ಕಾರು ಮಾಲೀಕರು ಭಾರೀ ಪ್ರಮಾಣದ ದಂಡತೆತ್ತಿದ್ದಾರೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಿತಿ ಮೀರಿದ ನಕಲಿ ನಂಬರ್ ಪ್ಲೇಟ್‌ಗಳ ಹಾವಳಿ

ಭಾರೀ ಪ್ರಮಾಣದ ದಂಡದ ಹೊರತಾಗಿ ನಕಲಿ ನಂಬರ್ ಪ್ಲೇಟ್ ಬಳಕೆಯ ಪ್ರಕರಣಗಳು ಮಾತ್ರ ಕಡಿಮೆಯಾಗಿಲ್ಲ. ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನಂಪ್ರತಿ ಇಂತಹ ಪ್ರಕರಣ ದಾಖಲಾಗುತ್ತಿದ್ದು, ಇದೀಗ ಮತ್ತೆರಡು ಪ್ರಕರಣಗಳು ಬೆಳಕಿಗೆ ಬಂದಿವೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಿತಿ ಮೀರಿದ ನಕಲಿ ನಂಬರ್ ಪ್ಲೇಟ್‌ಗಳ ಹಾವಳಿ

ಬೆಂಗಳೂರು ಟ್ರಾಫಿಕ್ ಪೋಲಿಸರು ನೀಡಿರುವ ಮಾಹಿತಿ ಪ್ರಕಾರ ಫೋರ್ಡ್ ಫಿಗೊ ಹೈ ಎಂಡ್ ಮತ್ತು ಬಿಎಂಡಬ್ಲ್ಯ 2 ಸೀರಿಸ್ ಸೆಡಾನ್ ಮಾದರಿಗಳು ನಕಲಿ ನಂಬರ್ ಪ್ಲೇಟ್ ಬಳಕೆ ಮಾಡುತ್ತಿರುವ ಬಗ್ಗೆ ಸಾರ್ವಜನಿಕರೊಂದಿಗೆ ಮಾಹಿತಿ ಹಂಚಿಕೊಂಡಿದ್ದು, ಈ ಎರಡು ಕಾರುಗಳು ಸಾರ್ವಜನಿಕರಿಗೆ ಯಾವುದೇ ಪ್ರದೇಶದಲ್ಲಿ ಕಂಡುಬಂದಲ್ಲಿ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಿತಿ ಮೀರಿದ ನಕಲಿ ನಂಬರ್ ಪ್ಲೇಟ್‌ಗಳ ಹಾವಳಿ

ಫೋರ್ಡ್ ಫಿಗೊ ಹೈ ಎಂಡ್ ಮತ್ತು ಬಿಎಂಡಬ್ಲ್ಯ 2 ಸೀರಿಸ್ ಸೆಡಾನ್ ಕ್ರಮವಾಗಿ KA-03 ML-1304 ಮತ್ತು KA-03 MC-7007 ನೋದಣಿ ಸಂಖ್ಯೆ ಬಳಕೆ ಮಾಡುತ್ತಿದ್ದು, ಈ ನೋಂದಣಿ ಸಂಖ್ಯೆಗಳ ಮೂಲ ಕಾರು ಮಾದರಿಗಳಾದ ಫೋರ್ಡ್ ಫಿಗೊ ಮತ್ತು ಮಾರುತಿ ಓಮ್ನಿ ಹೊಂದಿವೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಿತಿ ಮೀರಿದ ನಕಲಿ ನಂಬರ್ ಪ್ಲೇಟ್‌ಗಳ ಹಾವಳಿ

ಫೋರ್ಡ್ ಫಿಗೊ ಮತ್ತು ಮಾರುತಿ ಓಮ್ನಿ ನಂಬರ್ ಪ್ಲೇಟ್‌ಗಳನ್ನು ಕಾನೂನುಬಾಹಿರವಾಗಿ ಫೋರ್ಡ್ ಫಿಗೊ ಹೈ ಎಂಡ್ ಮತ್ತು ಬಿಎಂಡಬ್ಲ್ಯ 2 ಸೀರಿಸ್ ಸೆಡಾನ್ ಮಾಲೀಕರು ಬಳಕೆ ಮಾಡುತ್ತಿದ್ದು, KA-03 MC-7007 ನಂಬರ್ ಅನ್ನು ಕೇವಲ ಬಿಎಂಡಬ್ಲ್ಯು ಮಾದರಿಯಲ್ಲಿ ಮಾತ್ರವಲ್ಲದೆ ಟೊಯೊಟಾ ಪ್ಯಾಸೆಂಜರ್ ಕಾರು ಮಾದರಿಯೊಂದರಲ್ಲೂ ಕೂಡಾ ಬಳಕೆಯಾಗುತ್ತಿರುವ ಬಗೆಗೆ ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಿತಿ ಮೀರಿದ ನಕಲಿ ನಂಬರ್ ಪ್ಲೇಟ್‌ಗಳ ಹಾವಳಿ

ನಕಲಿ ನಂಬರ್ ಪ್ಲೇಟ್ ಪ್ರಕರಣಗಳು ಪತ್ತೆಯಾಗುತ್ತಿದ್ದಂತೆ ವಾಹನ್ ಡೇಟಾ ಬೆಸ್ ಮೂಲಕ ಮೂಲ ಮಾಲೀಕರ ವಿಳಾಸ ಪತ್ತೆಹಚ್ಚಿ ಸಂಪರ್ಕಿಸಿರುವ ಸಾರಿಗೆ ಇಲಾಖೆಯು ಮೂಲ ಮಾಲೀಕರಿಂದಲೇ ನಂಬರ್ ಪ್ಲೇಟ್ ದುರ್ಬಳಿಕೆ ಕುರಿತು ಪ್ರಕರಣ ದಾಖಲಿಸಿಕೊಂಡು ನಕಲಿ ನಂಬರ್ ಪ್ಲೇಟ್ ಹೊಂದಿರುವ ಕಾರುಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದಾರೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಿತಿ ಮೀರಿದ ನಕಲಿ ನಂಬರ್ ಪ್ಲೇಟ್‌ಗಳ ಹಾವಳಿ

ಕಾರುಗಳಲ್ಲಿನ ನಕಲಿ ನಂಬರ್ ಪ್ಲೇಟ್ ಪ್ರಕರಣದ ಕುರಿತು ಮಾತನಾಡಿರುವ ಸಂಚಾರಿ ಪೊಲೀಸ್ ಜಂಟಿ ಆಯುಕ್ತ ಬಿ.ಆರ್ ರವಿಕಾಂತೇಗೌಡ ಅವರು ನಂಬರ್ ಪ್ಲೇಟ್ ದುರ್ಬಳಿಕೆ ಮಾಡುತ್ತಿರುವ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದು, ಶೀಘ್ರದಲ್ಲಿಯೇ ನಕಲಿ ನಂಬರ್ ಪ್ಲೇಟ್ ಹೊಂದಿರುವ ಕಾರು ಮಾಲೀಕರನ್ನು ಪತ್ತೆ ಹಚ್ಚುವ ಭರವಸೆ ನೀಡಿದ್ದಾರೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಿತಿ ಮೀರಿದ ನಕಲಿ ನಂಬರ್ ಪ್ಲೇಟ್‌ಗಳ ಹಾವಳಿ

ಇದಲ್ಲದೇ ಮತ್ತೊಂದು ನಕಲಿ ನಂಬರ್ ಪ್ಲೇಟ್ ಪ್ರಕರಣದಲ್ಲಿ ಒಂದೇ ಸಂಖ್ಯೆಯಲ್ಲಿ ಮೂರು ದ್ವಿಚಕ್ರ ವಾಹನಗಳನ್ನು ಅಕ್ರಮವಾಗಿ ಬಳಕೆ ಮಾಡುತ್ತಿರುವುದು ಕೂಡಾ ಪತ್ತೆಯಾಗಿದೆ. KA-03 JY-4152 ನಂಬರ್ ಪ್ಲೇಟ್ ಅನ್ನು ಸುಮಾರು ಮೂರು ದ್ವಿಚಕ್ರ ವಾಹನಗಳು ಬಳಕೆ ಮಾಡುತ್ತಿವೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಿತಿ ಮೀರಿದ ನಕಲಿ ನಂಬರ್ ಪ್ಲೇಟ್‌ಗಳ ಹಾವಳಿ

ಮೂಲತಃ KA-03 JY-4152 ನಂಬರ್ ಪ್ಲೇಟ್ ಸುಜುಕಿ ಜಿಕ್ಸರ್ ಮಾಲೀಕರಿಗೆ ಸೇರಿದ್ದು, ಅಕ್ರಮವಾಗಿ ಟಿವಿಎಸ್ ಎನ್‌ಟಾರ್ಕ್ 125 ಮತ್ತು ಹೋಂಡಾ ಡಿಯೋ ಸ್ಕೂಟರ್‌ಗಳು ಬಳಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಿತಿ ಮೀರಿದ ನಕಲಿ ನಂಬರ್ ಪ್ಲೇಟ್‌ಗಳ ಹಾವಳಿ

ನಕಲಿ ನಂಬರ್ ಪ್ಲೇಟ್ ಬಳಕೆ ವಿರುದ್ದ ಕಠಿಣ ಕ್ರಮಗಳ ಹೊರತಾಗಿಯೂ ರಾಜ್ಯದ ವಿವಿಧಡೆಗಳಲ್ಲೂ ಇಂತಹ ಸಾವಿರಾರು ವಾಹನಗಳು ಅಕ್ರಮವಾಗಿ ಓಡಾಡುತ್ತಿದ್ದು, ಸೂಕ್ತ ಕಾರ್ಯಾಚರಣೆಯ ಕೊರತೆಯಿಂದಾಗಿ ಇಂತಹ ಪ್ರಕರಣಗಳು ಪತ್ತೆಯಾಗುತ್ತಿಲ್ಲ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಿತಿ ಮೀರಿದ ನಕಲಿ ನಂಬರ್ ಪ್ಲೇಟ್‌ಗಳ ಹಾವಳಿ

ನಕಲಿ ನಂಬರ್ ಪ್ಲೇಟ್‌ಗಳ ಪರಿಣಾಮ ಮೂಲ ವಾಹನಗಳ ಮಾಲೀಕರು ಕೆಲವು ಬಾರಿ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳಿದ್ದು, ನಕಲಿ ನಂಬರ್ ಬಳಕೆ ಮಾಡಿಕೊಂಡ ವಾಹನಗಳಿಂದ ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಿತಿ ಮೀರಿದ ನಕಲಿ ನಂಬರ್ ಪ್ಲೇಟ್‌ಗಳ ಹಾವಳಿ

ಜೊತೆಗೆ ನಕಲಿ ನಂಬರ್ ಪ್ಲೇಟ್ ಮೂಲಕ ವಾಹನ ನೋಂದಣಿ ಹಣ ಉಳಿಸಲು ಮತ್ತು ಇನ್ಸುರೆನ್ಸ್ ಉಳಿತಾಯ ಮಾಡಲು ಕೂಡಾ ಇಂತಹ ಕಾನೂನು ಬಾಹಿರ ಚಟುವಟಿಕೆ ನಡೆಸುವವರು ಸಂಖ್ಯೆ ಹೆಚ್ಚುತ್ತಿದ್ದು, ಇದನ್ನು ಕೆಲವು ಸೆಕೆಂಡ್ ಹ್ಯಾಂಡ್ ವಾಹನ ಮಾರಾಟ ಮಾಡುವ ಮಧ್ಯವರ್ತಿಗಳು ಇದರಲ್ಲಿ ಪ್ರಮುಖವಾಗಿ ಭಾಗಿಯಾಗುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಿತಿ ಮೀರಿದ ನಕಲಿ ನಂಬರ್ ಪ್ಲೇಟ್‌ಗಳ ಹಾವಳಿ

ಹೀಗಾಗಿ ಸೇಕೆಂಡ್ ಹ್ಯಾಂಡ್ ವಾಹನಗಳು ಖರೀದಿಸುವಾಗ ಮತ್ತು ಮರುಮಾರಾಟ ಮಾಡುವಾಗ ಎಚ್ಚರಿಕೆ ವಹಿಸಬೇಕಿದ್ದು, ಕಳ್ಳತನವಾದ ವಾಹನಗಳು, ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ವಾಹನಗಳನ್ನು ಹೀಗೆ ಬದಲಿ ನಂಬರ್ ಪ್ಲೇಟ್ ಬಳಕೆ ಮಾಡುವ ಮೂಲಕ ಮರು ಮಾರಾಟ ಮಾಡುವ ಸಾಧ್ಯತೆಗಳಿವೆ.

Most Read Articles

Kannada
English summary
Two high end vehicles using fake number plates in bengaluru details
Story first published: Wednesday, June 29, 2022, 13:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X