ವಿಶ್ವದ ಅತಿ ವೇಗದ ಸ್ಕೂಟರ್ ಗಿನ್ನೆಸ್ ದಾಖಲೆ

By Nagaraja

ಇಬ್ಬರು ಮೆಕ್ಯಾನಿಕ್ ಒಟ್ಟು ಸೇರಿ ವಿಶ್ವದ ಅತಿ ವೇಗದ ಸ್ಕೂಟರ್ ನಿರ್ಮಿಸಿದ್ದಾರೆ. ಇನ್ನು ವಿಶೇಷವೆಂದರೆ ಗಿನ್ನಸ್ ಪುಟದಲ್ಲಿ ಅಧಿಕೃತ ದಾಖಲೆ ಪಟ್ಟವನ್ನು ಆಲಂಕರಿಸಿದೆ.

Also read:ರಿಕ್ಷಾದಲ್ಲೇ ವೀಲಿಂಗ್; ಆಟೋ ರಾಜನ ಗಿನ್ನೆಸ್ ದಾಖಲೆ

ಅಷ್ಟಕ್ಕೂ ಇದನ್ನು ನಿರ್ಮಿಸಿರುವ ಮೆಕ್ಯಾನಿಕ್‌ಗಳು ಯಾರು ಗೊತ್ತೇ? ಅವರಿಬ್ಬರು ಯಾವ ದೇಶಕ್ಕೆ ಹೆಮ್ಮೆ ತಂದಿರುತ್ತಾರೆ? ಇವೆಲ್ಲದಕ್ಕೂ ಮಿಗಿಲಾಗಿ ದಾಖಲೆಗೆ ಪಾತ್ರವಾಗಿರುವ ಸ್ಕೂಟರ್ ಎಷ್ಟು ವೇಗದಲ್ಲಿ ಸಂಚರಿಸುತ್ತದೆ ಎಂಬುದನ್ನು ತಿಳಿಯುವ ಕುತೂಹಲವಿದ್ದಲ್ಲಿ ಚಿತ್ರಪುಟದತ್ತ ಮುಂದುವರಿಯಿರಿ...

ವಿಶ್ವದ ಅತಿ ವೇಗದ ಸ್ಕೂಟರ್ ಗಿನ್ನೆಸ್ ದಾಖಲೆ

ಬ್ರಿಟನ್ ಮೂಲದ ಮೆಕ್ಯಾನಿಕ್ ಡೇವಿಡ್ ಆಂಡ್ರೆಸನ್ ಮತ್ತು ಮ್ಯಾಥ್ಯೂ ಹೈನ್ ಎಂಬವರು ಜೊತೆ ಸೇರಿ ವಿಶ್ವದ ಅತಿ ವೇಗದ ಚಲನಶೀಲ ಸ್ಕೂಟರನ್ನು ನಿರ್ಮಿಸಿದ್ದಾರೆ.

ವಿಶ್ವದ ಅತಿ ವೇಗದ ಸ್ಕೂಟರ್ ಗಿನ್ನೆಸ್ ದಾಖಲೆ

ಆರು ತಿಂಗಳ ನಿರಂತರ ಪ್ರಯತ್ನದ ಬಳಿಕ ತಮ್ಮ ಕನಸು ನನಸಾಗಿಸುವಲ್ಲಿ ಈ ಯಂತ್ರ ಶಾಸ್ತ್ರಜ್ಞರು ಯಶಸ್ವಿಯಾಗಿದ್ದಾರೆ.

ವಿಶ್ವದ ಅತಿ ವೇಗದ ಸ್ಕೂಟರ್ ಗಿನ್ನೆಸ್ ದಾಖಲೆ

ವಿಶ್ವದ ಅತಿ ವೇಗದ ಚಲನಶೀಲ ಸ್ಕೂಟರ್ ಗಂಟೆಗೆ 173.16 ಕೀ.ಮೀ. ವೇಗದಲ್ಲಿ (107.6 ಮೈಲು) ಸಂಚರಿಸುವ ಸಾಮರ್ಥ್ಯ ಹೊಂದಿರುತ್ತಾರೆ.

ವಿಶ್ವದ ಅತಿ ವೇಗದ ಸ್ಕೂಟರ್ ಗಿನ್ನೆಸ್ ದಾಖಲೆ

ಇದಕ್ಕೂ ಮೊದಲು ಕಾಲಿನ್ ಫರ್ಜ್ ಎಂಬವರು ಗಂಟೆಗೆ 115.21 ವೇಗದಲ್ಲಿ ಚಲಿಸುವ ಸ್ಕೂಟರನ್ನು ಅವಿಷ್ಕರಿಸಿದ್ದರು. ಇದನ್ನು ಟಿ.ವಿಯಲ್ಲಿ ವೀಕ್ಷಿಸಿರುವ ಇವರಿಬ್ಬರು ನೂತನ ದಾಖಲೆಗೆ ಪಣ ತೊಟ್ಟಿದ್ದರು.

ವಿಶ್ವದ ಅತಿ ವೇಗದ ಸ್ಕೂಟರ್ ಗಿನ್ನೆಸ್ ದಾಖಲೆ

ಹಾಗಿದ್ದರೂ ಇದುವರೆಗಿನ ದಾಖಲೆ ಡೆನ್ಮಾರ್ಕ್ ನ ಕ್ಲಾಸ್ ನಿಸ್ಸೆನ್ ಪೀಟರ್ ಸನ್ ಎಂಬವರಿಗೆ ಸೇರಿದ್ದಾಗಿತ್ತು. 2012ರಲ್ಲಿ ನಡೆಸಿದ ಪ್ರಯತ್ನದಲ್ಲಿ ಗಂಟೆಗೆ 133.04 ಕೀ.ಮೀ. ವೇಗವನ್ನು ಕಂಡಿದ್ದರು.

ವಿಶ್ವದ ಅತಿ ವೇಗದ ಸ್ಕೂಟರ್ ಗಿನ್ನೆಸ್ ದಾಖಲೆ

ದಾಖಲೆ ಅಷ್ಟು ಸುಲಭವಾಗಿ ದಕ್ಕಿರಲಿಲ್ಲ. ಯಾಕೆಂದರೆ ಇದಕ್ಕಾಗಿ ಗಿನ್ನೆಸ್ ಅಧಿಕೃತ ಕೆಲವೊಂದು ನಿಯಮಾವಳಿಗಳನ್ನು ಪಾಲಿಸಬೇಕಾಗಿ ಬಂದಿತ್ತು.

ವಿಶ್ವದ ಅತಿ ವೇಗದ ಸ್ಕೂಟರ್ ಗಿನ್ನೆಸ್ ದಾಖಲೆ

ಇದರಂತೆ ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಚಲನಶೀಲ ಯಂತ್ರವನ್ನೇ ಬಳಕೆ ಮಾಡಬೇಕಾಗಿತ್ತು. ಅಂತೆಯೇ ವಿಶೇಷ ಕಸ್ಟಮೈಸ್ಡ್ ಸ್ಕೂಟರನ್ನು ತಯಾರಿಸಿದ್ದರು.

ವಿಶ್ವದ ಅತಿ ವೇಗದ ಸ್ಕೂಟರ್ ಗಿನ್ನೆಸ್ ದಾಖಲೆ

ಅಂದ ಹಾಗೆ ಇದರಲ್ಲಿ ರೇಸಿಂಗ್ ಗೊ ಕಾರ್ಟ್ ಚಾಸೀ, ನಾಲ್ಕು ಚಕ್ರಗಳನ್ನು ರೇಸಿಂಗ್ ಗೊ ಕಾರ್ಟ್ ನಿಂದ ಮತ್ತು ಸುಜುಕಿ 600 ಸಿಸಿ ಎಂಜಿನ್ ಲಗತ್ತಿಸಲಾಗಿತ್ತು.

ವಿಶ್ವದ ಅತಿ ವೇಗದ ಸ್ಕೂಟರ್ ಗಿನ್ನೆಸ್ ದಾಖಲೆ

ಆದರೆ ದುರದೃಷ್ಟವಶಾತ್ ಈ ಸ್ಕೂಟರ್ ಗಳನ್ನು ಸಾಮಾನ್ಯ ರಸ್ತೆಗಿಳಿಸುವಂತಿಲ್ಲ. ಏಕೆಂದರೆ ಇದಕ್ಕೆ ಫ್ರಂಟ್ ಬ್ರೇಕ್ ಗಳೇ ಇಲ್ಲದಿರುವುದು ಆಶ್ಚರ್ಯಕರವೆನಿಸಿದೆ.

ಇವನ್ನೂ ಓದಿ

ಗಿನ್ನೆಸ್ ದಾಖಲೆ ವಿಶೇಷ ಪುಟ

Most Read Articles

Kannada
English summary
Two mechanics race into the Guinness record books on a mobility scooter
Story first published: Thursday, February 25, 2016, 9:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X