ಸಾರ್ವಜನಿಕ ರಸ್ತೆಯಲ್ಲಿ ಪರಸ್ಪರ ಹೊಡೆದಾಡಿ ಕೊಂಡ ಪೊಲೀಸರು

ಸಾರ್ವಜನಿಕ ರಸ್ತೆಯಲ್ಲಿ ಟ್ರಾಫಿಕ್ ಪೊಲೀಸ್ ಹಾಗೂ ಕ್ರೈಂ ಪೊಲೀಸರು ಪರಸ್ಪರ ಹೊಡೆದಾಡಿ ಕೊಂಡ ಘಟನೆ ವರದಿಯಾಗಿದೆ. ಈ ಇಬ್ಬರು ಪೊಲೀಸರ ಹೊಡೆದಾಟವನ್ನು ಸಾರ್ವಜನಿಕರು ಮಧ್ಯ ಪ್ರವೇಶಿಸಿ ಬಿಡಿಸಿದ್ದಾರೆ.

ಸಾರ್ವಜನಿಕ ರಸ್ತೆಯಲ್ಲಿ ಪರಸ್ಪರ ಹೊಡೆದಾಡಿ ಕೊಂಡ ಪೊಲೀಸರು

ಜಾರ್ಖಂಡ್ ರಾಜ್ಯದ ರಾಜಧಾನಿ ರಾಂಚಿಯಲ್ಲಿ ನಡೆದ ಈ ಘಟನೆ ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಇಬ್ಬರು ಪೊಲೀಸರು ಯಾವ ಕಾರಣಕ್ಕೆ ಪರಸ್ಪರ ಹೊಡೆದಾಟಕ್ಕೆ ಇಳಿದರು. ಅವರ ಮಧ್ಯೆ ನಡೆದಿದಾದ್ದರೂ ಏನು ಈ ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

ಸಾರ್ವಜನಿಕ ರಸ್ತೆಯಲ್ಲಿ ಪರಸ್ಪರ ಹೊಡೆದಾಡಿ ಕೊಂಡ ಪೊಲೀಸರು

ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಇಬ್ಬರು ಪೊಲೀಸರ ಪೈಕಿ ಒಬ್ಬ ಪೊಲೀಸ್ ಹೆಲ್ಮೆಟ್ ಇಲ್ಲದೆ ಬಂದಾಗ ಈ ಘಟನೆ ಸಂಭವಿಸಿದೆ. ಇದಕ್ಕೆ ಪುಷ್ಟಿ ನೀಡುವಂತೆ ವೀಡಿಯೊದಲ್ಲಿರುವ ಒಬ್ಬ ಪೊಲೀಸ್ ಮಾತ್ರ ಹೆಲ್ಮೆಟ್ ಧರಿಸಿರುವುದನ್ನು ಕಾಣಬಹುದು.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಸಾರ್ವಜನಿಕ ರಸ್ತೆಯಲ್ಲಿ ಪರಸ್ಪರ ಹೊಡೆದಾಡಿ ಕೊಂಡ ಪೊಲೀಸರು

ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಇಲ್ಲದೇ ಬಂದಿದ್ದ ಪೊಲೀಸರನ್ನು ಟ್ರಾಫಿಕ್ ಕಾನ್‌ಸ್ಟೆಬಲ್ ತಡೆದಿದ್ದಾರೆ. ನಮ್ಮನ್ನು ತಡೆಯಲು ನಿನಗೆ ಅಧಿಕಾರವಿಲ್ಲವೆಂದು ದ್ವಿಚಕ್ರ ವಾಹನದಲ್ಲಿದ್ದವರು ಟ್ರಾಫಿಕ್ ಕಾನ್‌ಸ್ಟೆಬಲ್‌ ಜೊತೆಗೆ ವಾಗ್ವಾದ ನಡೆಸಿದ್ದಾರೆ.

ಸಾರ್ವಜನಿಕ ರಸ್ತೆಯಲ್ಲಿ ಪರಸ್ಪರ ಹೊಡೆದಾಡಿ ಕೊಂಡ ಪೊಲೀಸರು

ಹೆಲ್ಮೆಟ್ ಧರಿಸದ ಕಾರಣಕ್ಕೆ ದಂಡ ಪಾವತಿಸುವಂತೆ ಹೇಳಲಾಗಿದೆ. ಈ ಕಾರಣಕ್ಕೆ ಇಬ್ಬರು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಘಟನಾ ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳ ಪ್ರಕಾರ ದ್ವಿಚಕ್ರ ವಾಹನದಲ್ಲಿ ಬಂದ ಪೊಲೀಸರೇ ಈ ಘಟನೆಗೆ ಕಾರಣವೆಂದು ಹೇಳಲಾಗಿದೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಸಾರ್ವಜನಿಕ ರಸ್ತೆಯಲ್ಲಿ ಪರಸ್ಪರ ಹೊಡೆದಾಡಿ ಕೊಂಡ ಪೊಲೀಸರು

ಪೊಲೀಸರ ಈ ವರ್ತನೆಗೆ ಜಾರ್ಖಂಡ್ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅಸಮಾಧಾನ ಏರ್ಪಟ್ಟಿದೆ. ಇಬ್ಬರು ಪೊಲೀಸರು ಪರಸ್ಪರ ಹೊಡೆದಾಡಿ ಕೊಂಡ ಘಟನೆಯ ಬಗ್ಗೆ ತನಿಖೆಗೆ ರಾಂಚಿಯ ಸಂಚಾರ ಎಸ್‌ಪಿ ಅಜಿತ್ ಪೀಟರ್ ಆದೇಶಿಸಿದ್ದಾರೆ.

ಸಾರ್ವಜನಿಕ ರಸ್ತೆಯಲ್ಲಿ ಪರಸ್ಪರ ಹೊಡೆದಾಡಿ ಕೊಂಡ ಪೊಲೀಸರು

ತನಿಖೆಯಲ್ಲಿ ಯಾರು ತಪ್ಪಿತಸ್ಥರು ಎಂದು ಕಂಡು ಬರುವುದೋ ಅವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಆದೇಶಿಸಲಾಗಿದೆ. ಎಲ್ಲಾ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂಬುದಾಗಿ ಭಾರತೀಯ ಮೋಟಾರು ವಾಹನ ಕಾಯ್ದೆ ಹೇಳುತ್ತದೆ.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಸಾರ್ವಜನಿಕ ರಸ್ತೆಯಲ್ಲಿ ಪರಸ್ಪರ ಹೊಡೆದಾಡಿ ಕೊಂಡ ಪೊಲೀಸರು

ಈ ಕಾಯ್ದೆಯ ಪ್ರಕಾರ ದ್ವಿಚಕ್ರ ವಾಹನ ಸವಾರರು ಮಾತ್ರವಲ್ಲದೇ ಹಿಂಬದಿಯ ಸವಾರರು ಸಹ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಆದರೆ ಬಹುತೇಕ ದ್ವಿಚಕ್ರ ವಾಹನ ಸವಾರರು ಈ ನಿಯಮವನ್ನು ಪಾಲಿಸುತ್ತಿಲ್ಲ.

ಸಾರ್ವಜನಿಕ ರಸ್ತೆಯಲ್ಲಿ ಪರಸ್ಪರ ಹೊಡೆದಾಡಿ ಕೊಂಡ ಪೊಲೀಸರು

ನಿಯಮವನ್ನು ಪಾಲಿಸದವರಿಗೆ ಪೊಲೀಸರು ದಂಡ ವಿಧಿಸುತ್ತಾರೆ. ಈ ಸನ್ನಿವೇಶದಲ್ಲಿ ಸಾರ್ವಜನಿಕರಿಗೆ ಮಾದರಿಯಾಗಿರಬೇಕಾದ ಪೊಲೀಸರೇ ನಿರ್ಲಕ್ಷ್ಯ ತೋರಿ ಸಾರ್ವಜನಿಕ ರಸ್ತೆಯಲ್ಲಿ ಹೊಡೆದಾಟಕ್ಕೆ ಇಳಿದಿರುವುದು ನಿಜಕ್ಕೂ ಖೇದದ ಸಂಗತಿ.

MOST READ:ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಯೂಟ್ಯೂಬ್'ನಲ್ಲಿ ಅಪ್ ಲೋಡ್ ಮಾಡಲಾಗಿರುವ ಈ ವೀಡಿಯೊ ವೈರಲ್ ಆಗಿದ್ದು, ಈ ವೀಡಿಯೊ ವೀಕ್ಷಿಸಿದವರು ಸಾರ್ವಜನಿಕ ರಸ್ತೆಯಲ್ಲಿ ಹೊಡೆದಾಟಕ್ಕಿಳಿದ ಪೊಲೀಸರ ವರ್ತನೆಯನ್ನು ಖಂಡಿಸಿದ್ದಾರೆ.

ಸಾರ್ವಜನಿಕ ರಸ್ತೆಯಲ್ಲಿ ಪರಸ್ಪರ ಹೊಡೆದಾಡಿ ಕೊಂಡ ಪೊಲೀಸರು

ಸರ್ಕಾರದ ಪ್ರಮುಖ ಹುದ್ದೆಗಳಲ್ಲಿರುವ ಪೊಲೀಸರು ಹಾಗೂ ಅಧಿಕಾರಿಗಳು ಈ ರೀತಿ ವರ್ತಿಸುತ್ತಿರುವುದು ಇದೇ ಮೊದಲ ಸಲವಲ್ಲ. ಈ ಕೃತ್ಯಗಳಲ್ಲಿ ಭಾಗಿಯಾಗಿದ್ದವರು ಸೂಕ್ತ ಕ್ರಮವನ್ನು ಎದುರಿಸಿದ್ದಾರೆ ಎಂಬುದು ಗಮನಾರ್ಹ.

ಚಿತ್ರಕೃಪೆ: ದಿ ಫಾಲೋ ಅಪ್

Most Read Articles

Kannada
English summary
Two police man fights in public road in Ranchi. Read in Kannada.
Story first published: Tuesday, May 11, 2021, 20:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X