ಭಾಷಾ ಹಕ್ಕು ಕಿತ್ತುಕೊಂಡ ಹೋಂಡಾ, ಬಜಾಜ್

By ಅರುಣ್ ಜಾವಗಲ್

Local language Support to Consumers
ಭಾರತ ಎರಡು ಚಕ್ರ ವಾಹನ (2 wheeler)ತಯಾರಿಕೆ ಮತ್ತು ಮಾರಾಟದಲ್ಲಿ ಪ್ರಪಂಚದಲ್ಲೇ 2 ಸ್ಥಾನ ಪಡೆದುಕೊಂಡಿದೆ. ಇತ್ತೀಚಿನ ವರದಿಗಳಂತೆ ಹೀರೊ, ಹೊಂಡಾ, ಬಜಾಜ್ ಮತ್ತು ಟಿವಿಎಸ್ ಕಂಪನಿಗಳು ಮಾರುಕಟ್ಟೆಯಲ್ಲಿ ಮುಂದಿವೆ..ಇದೀಗ ಹೊರದೇಶದ ಕಂಪನಿಗಳು ಭಾರತದಲ್ಲಿ ವಾಹನ ಮಾರಾಟಕ್ಕೆ ಕೈಹಾಕಿದ್ದು ಹಾರ್ಲೆ ಡೇವಿಡ್ಸನ್ ನಂತಹಾ ಹತ್ತಾರು ಲಕ್ಷ ರೂಪಾಯಿ ಬೆಲೆ ಬಾಳುವ ಗಾಡಿಗಳು ಭಾರತದಲ್ಲಿ ಮಾರಾಟವಾಗುತ್ತಿವೆ.

ಆದರೆ ಈ ಮಾರುಕಟ್ಟೆಯಲ್ಲಿ ಒಬ್ಬ ಗ್ರಾಹಕನ ಭಾಷಾ ಹಕ್ಕುಗಳನ್ನು ಎಷ್ಟರ ಮಟ್ಟಿಗೆ ಗೌರವಿಸಲಾಗುತ್ತಿದೆ ಎಂದು ನೊಡಿದರೆ ನಮಗೆ ಕಾಣುವುದು ಒಂದು ದೊಡ್ಡ ಸೊನ್ನೆಯಷ್ಟೆ! ಬುಕ್ಕಿಂಗ್ ನಿಂದ ಹಿಡಿದು, ಸಾಲಕ್ಕೆ ಸಂಬಂಧಿಸಿದ ವಿಷಯಗಳು, ಗಾಡಿ ಕೊಂಡಿದ್ದಕ್ಕೆ ಕೊಡುವ ರಶೀತಿ, ಹೇಗೆ ಬಳಸಬೇಕೆಂದು ನೀಡುವ ಮ್ಯಾನುಯಲ್ ,ಗ್ಯಾರಂಟಿ, ವಾರಂಟಿ ಸೇರಿದಂತೆ ಅನೇಕ ವಿಷಯಗಳಲ್ಲಿ ಕನ್ನಡವನ್ನು ಕೈಬಿಟ್ಟಿರುವುದು ಕಾಣುತ್ತಿದೆ.

ಈ ಬಗ್ಗೆ ಕಂಪನಿಗಳನ್ನು ಕೇಳಿದರೆ ಭಾರತದಲ್ಲಿ ಅಷ್ಟು ಭಾಷೆಗಳಿವೆ ಇಷ್ಟು ಭಾಷೆಗಳಿವೆ ಎನ್ನುವ ಉತ್ತರ ಬರುತ್ತಾದರೂ, ಕರ್ನಾಟಕದಲ್ಲಿ ಮಾರುಕಟ್ಟೆಯಲ್ಲಿ ಗ್ರಾಹಕನಿಗೆ ಕನ್ನಡ ಭಾಷೆಯಲ್ಲಿ ಎಲ್ಲಾ ಸೇವೆ ಪಡೆಯುವ ಹಕ್ಕಿದೆ ಎನ್ನುವ ಮಾತು ಕೇಳಿಬರುವುದಿಲ್ಲ. ಇದರ ಜೊತೆಗೆ ಕರ್ನಾಟಕದಲ್ಲಿರುವ ಮಾರುಕಟ್ಟೆಯೂ ಪ್ರತಿ ತಿಂಗಳೂ ನೂರಾರು ಕೋಟಿ ಲಾಭಕೊಡುವಂತಿದ್ದರೂ ಕನ್ನಡದ ಗ್ರಾಹಕರು ತಮ್ಮ ಹಕ್ಕುಗಳಿಂದ ವಂಚಿತರಾಗಿದ್ದಾರೆ.

ಕರ್ನಾಟಕದಲ್ಲಿ 2 ವೀಲರ್ ಗಾಡಿಗಳ ಮಾರುಕಟ್ಟೆ ಎಷ್ಟಿದೆ? ಕನ್ನಡದಲ್ಲಿ ಸೇವೆ ನೀಡಲು ಆಗದಿರುವಸ್ಟು ಚಿಕ್ಕದೇ ನಮ್ಮ ರಾಜ್ಯದ ಮಾರುಕಟ್ಟೆ? ಎನ್ನುವುದನ್ನು ಇತ್ತೀಚಿನ ಮಾಹಿತಿಗಳ ಆಧಾರದಲ್ಲಿ ಒಮ್ಮೆ ನೊಡಿ, ನಮ್ಮ ರಾಜ್ಯದ ಮಾರುಕಟ್ಟೆಯ ಬಗ್ಗೆ ತಿಳಿಯೊಣ...

ಭಾರತದಲ್ಲಿ ತಿಂಗಳಿಗೆ ಮಾರಾಟವಾಗುವ 2 ಚಕ್ರ ಗಾಡಿಗಳ ಸಂಖ್ಯೆ ಸುಮಾರು 12 ಲಕ್ಷ, ಒಂದು 2 ಚಕ್ರದ ಗಾಡಿ ಬೆಲೆ ಆವೆರೇಜ್ 50000 ( 50 ಸಾವಿರ ಕಡಿಮೆನೇ, ಗಾಡಿಗಳ ಬೆಲೆ ಈಗ 1 ಲಕ್ಷದ ಆಸುಪಾಸಿನಲ್ಲಿದೆ)ಅಂತ ಇಟ್ಟುಕೊಂಡ್ರೆ, ಸುಮಾರು 6000 ಕೊಟಿ ರೂಪಾಯಿಯಷ್ಟು ಹೊಸ ಗಾಡಿಗಳು ಮಾರಾಟವಾಗುತ್ತೆ! ಇನ್ನು ಸ್ಪೇರ್ಸ & ಸರ್ವಿಸ್ ನಲ್ಲಿ ಸುಮಾರು 2000 ಕೋಟಿ ಅಂದುಕೊಂಡ್ರು ಒಟ್ಟಾರೆ ಕಡಿಮೆ ಅಂದ್ರು ತಿಂಗಳಿಗೆ 8000 ಕೋಟಿ ವಹಿವಾಟು ನಡೆಯುತ್ತೆ.

ಇನ್ನು ಕರ್ನಾಟಕದ ವಿಷಯಕ್ಕೆ ಬಂದ್ರೆ ಈ 8000 ಕೋಟಿಯಲ್ಲಿ, ಕರ್ನಾಟಕದ ಜನ ಸಂಖ್ಯೆ ಮತ್ತು ಕೊಳ್ಳುವ ಸಾಮರ್ಥ್ಯದ ಆಧಾರದಲ್ಲಿ, ಕರ್ನಾಟಕದ್ದು ಕಡಿಮೆ ಅಂದ್ರು 5-8% ಪಾಲಿರಬಹುದು. ಕಡಿಮೆ ಅಂದ್ರು ಸುಮಾರು 500 ಕೋಟಿ ರೂಗಳಷ್ಟು ವ್ಯಾಪಾರ ಕನ್ನಡಿಗರಿಂದಲೇ ಆಗುತ್ತೆ.ಹೆಚ್ಚು ಲಾಭ ಕೊಡುವ ಉದ್ದಿಮೆಗಳಲ್ಲಿ ವಾಹನ ತಯಾರಿಕೆಯೊ ಒಂದು ಎನ್ನಲಾಗುತ್ತೆ. ಅಂದ್ರೆ ಕರ್ನಾಟಕದಿಂದ ಪ್ರತಿ ತಿಂಗಳು ನೂರಾರು ಕೊಟಿ ಲಾಭವಿದೆ.

ಕನ್ನಡಿಗರಿಂದ ಪ್ರತಿ ತಿಂಗಳು ನೂರಾರು ಕೊಟಿ ಲಾಭವಿದ್ದರೂ ಎಷ್ಟು ಕಂಪನಿಗಳು Manual book ಸೇರಿದಂತೆ ಇನ್ನಿತರೇ , ಗಾಡಿಗೆ ಸಂಬಂಧಿಸಿದ ವಿಷಯಗಳನ್ನು ಜನರಿಗೆ ಉಪಯೊಗವಾಗಲಿ ಎಂದು ಕನ್ನಡದಲ್ಲಿ ತಿಳಿಸುತ್ತಿವೆ? ಪ್ರತಿ ತಿಂಗಳು ಕೋಟಿ ಕೋಟಿ ಲಾಭ ಬೇಕು. ಆದ್ರೆ ಕರ್ನಾಟಕದ ಗ್ರಾಹಕರ ಹಕ್ಕುಗಳಿಗೆ ಬೆಲೆ ಇಲ್ಲ ಅನ್ನೊ ನಡೆ ಎಷ್ಟು ಸರಿ?

ಗ್ರಾಹಕ ಹಕ್ಕೊತ್ತಾಯವೊಂದೇ ಮದ್ದು: ಗ್ರಾಹಕ ಹಕ್ಕುಗಳಲ್ಲಿ ತಾನು ಕೊಂಡ ವಸ್ತುವಿನ ಬಗ್ಗೆ ತಿಳಿದುಕೊಳ್ಳುವ ಹಕ್ಕು ಗ್ರಾಹಕನಿಗಿದೆ(Right to be informed)ಈ ಹಕ್ಕಿನ ಆಧಾರದಲ್ಲಿ ನೀವು ಗಾಡಿ ತಗೊಂಡಾಗ Manual book ಕನ್ನಡದಲ್ಲಿ ಕೊಟ್ಟಿದ್ದಾರೆಯೇ ಎಂದು ನೊಡಿ? ಇಲ್ಲ ಅಂದ್ರೆ , ನಿಮಗೆ ವ್ಯಾಪಾರ ಮಾತ್ರಬೇಕಾ? ನಮ್ಮ ಹಕ್ಕು ಗಳಿಗೆ ಬೆಲೆ ಇಲ್ವ ಅನ್ನೊ ಪ್ರಶ್ನೆ ಕೇಳಿ manual book ಕನ್ನಡದಲ್ಲಿ ಕೊಡಲು ತಿಳಿಸಿ

Most Read Articles

Kannada
English summary
Indian two-wheeler market is biggest in world. According to latest report Hero, Bajaj and TVS companies expanding its market to Tier II and III cities in India but Companies ignore to give information to local consumers in their respective languages reports Citizen Journalist Arun Javagal
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X