ಒನ್ ವೇ ನಲ್ಲಿ ನುಗ್ಗುವ ಮುನ್ನ ಇನ್ಮುಂದೆ ಹತ್ತು ಬಾರಿ ಯೋಚಿಸಿ..

ನಗರಪ್ರದೇಶಗಳಲ್ಲಿ ದಿನಂಪ್ರತಿ ಸಂಭವಿಸುವ ಬಹುತೇಕ ಅಪಘಾತ ಪ್ರಕರಣಗಳಿಗೆ ಒನ್ ವೇ ನಲ್ಲಿ ನುಗ್ಗುವುದು ಮತ್ತು ರಾಂಗ್ ಸೈಡ್‌ನಲ್ಲಿ ವಾಹನಗಳ ಚಾಲನೆಯೇ ಬಹುಮುಖ್ಯವಾದ ಕಾರಣವಾಗಿದೆ. ಇದಕ್ಕಾಗಿ ಎಷ್ಟೇ ಕಠಿಣ ಕಾನೂನು ಕ್ರಮ ಜಾರಿ ತಂದರೂ ಸಹ ಕೆಲವರು ಮಾತ್ರ ತಮ್ಮ ಕೆಟ್ಟ ಚಾಲನಾ ಅಭ್ಯಾಸವನ್ನು ಮಾತ್ರ ಮರೆಯುವುದೇ ಇಲ್ಲ. ಆದ್ರೆ ಇನ್ಮುಂದೆ ಇಂತಹ ಚಾಲನಾ ಪ್ರವೃತ್ತಿಗೆ ಬ್ರೇಕ್ ಹಾಕಲು ಹೊಸ ಐಡಿಯಾ ಒಂದನ್ನು ಜಾರಿಗೆ ತರಲಾಗಿದೆ.

ಒನ್ ವೇ ನಲ್ಲಿ ನುಗ್ಗುವ ಮುನ್ನ ಇನ್ಮುಂದೆ ಹತ್ತು ಬಾರಿ ಯೋಚಿಸಿ..

ಇಷ್ಟು ದಿನ ವಾಹನ ಸವಾರರು ಒನ್ ವೇ ಬಂದಾಗ ತಡೆಹಿಡಿಯುತ್ತಿದ್ದ ಪೊಲೀಸರು ನೂರು ಅಥವಾ ಎರಡು ನೂರು ರೂಪಾಯಿ ದಂಡ ಕಟ್ಟಿಸಿಕೊಂಡು ಬಿಟ್ಟು ಕಳುಹಿಸುತ್ತಿದ್ರು. ಆದ್ರೆ ಇನ್ಮುಂದೆ ಹಾಗೆ ಆಗುವುದಿಲ್ಲ. ಒಂದು ವೇಳೆ ನೀವು ನಿಯಮ ಮೀರಿ ಒನ್ ವೇ ನಲ್ಲಿ ನುಗ್ಗಿದ್ದೆ ಆದಲ್ಲಿ ಮುಂದೆ ಆಗುವ ಅನಾಹುತಗಳಿಗೆ ನೀವೇ ಜವಾಬ್ದಾರಿ ಆಗಬೇಕಾಗಬಹುದು.

ಒನ್ ವೇ ನಲ್ಲಿ ನುಗ್ಗುವ ಮುನ್ನ ಇನ್ಮುಂದೆ ಹತ್ತು ಬಾರಿ ಯೋಚಿಸಿ..

ಒನ್ ವೇ ನಲ್ಲಿ ಬರುವ ವಾಹನ ಸವಾರರಿಗೆ ಸರಿಯಾಗಿಯೇ ಬುದ್ದಿಕಲಿಸಲು ಮುಂದಾಗಿರುವ ನೋಯ್ಡಾ ಟ್ರಾಫಿಕ್ ಪೊಲೀಸರು ಹೊಸದೊಂದು ತಂತ್ರ ರೂಪಿಸಿದ್ದು, ರೋಡ್ ಹಂಪ್‌ಗಳ ಬದಲಾಗಿ ಟೈರ್ ಕಿಲ್ಲರ್ ಎನ್ನುವ ಹೊಸ ತಂತ್ರ ಬಳಕೆಗೆ ಚಾಲನೆ ನೀಡಿದ್ದಾರೆ.

ಒನ್ ವೇ ನಲ್ಲಿ ನುಗ್ಗುವ ಮುನ್ನ ಇನ್ಮುಂದೆ ಹತ್ತು ಬಾರಿ ಯೋಚಿಸಿ..

ವಿಶೇಷವಾಗಿ ರಚನೆಗೊಂಡಿರುವ ಈ ಟೈರ್ ಕಿಲ್ಲರ್ ಸೌಲಭ್ಯವು ಒನ್ ವೇ ನುಗ್ಗಿ ಬರುವ ವಾಹನ ಸವಾರರಿಗೆ ಕಂಟಕವಾಗಲಿದ್ದು, ಒಂದು ವೇಳೆ ಟೈರ್ ಕಿಲ್ಲರ್‌ನ ವಿರುದ್ದ ದಿಕ್ಕಿನಲ್ಲಿ ಹೋಗಿದ್ದೆ ಆದಲ್ಲಿ ಟೈರ್ ಪಂಚರ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಒನ್ ವೇ ನಲ್ಲಿ ನುಗ್ಗುವ ಮುನ್ನ ಇನ್ಮುಂದೆ ಹತ್ತು ಬಾರಿ ಯೋಚಿಸಿ..

ಯಾಕೇಂದ್ರೆ ಟೈರ್ ಕಿಲ್ಲರ್‌ನಲ್ಲಿ ಬಳಸಲಾಗಿರುವ ಹರಿತವಾದ ಮೊಳೆಗಳು ವಿರುದ್ಧ ದಿಕ್ಕಿನಲ್ಲಿ ಬರುವ ವಾಹನಗಳ ಟೈರ್‌ಗಳಲ್ಲಿ ಸಿಕ್ಕಿಕೊಳ್ಳುವುದಲ್ಲದೇ ರಾಂಗ್ ರೂಟ್‌ನಲ್ಲಿ ಬರುವ ವಾಹನ ಸವಾರರಿಗೆ ಸರಿಯಾಗಿಯೇ ಬುದ್ದಿ ಕಲಿಸುತ್ತೆ.

ಒನ್ ವೇ ನಲ್ಲಿ ನುಗ್ಗುವ ಮುನ್ನ ಇನ್ಮುಂದೆ ಹತ್ತು ಬಾರಿ ಯೋಚಿಸಿ..

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಸರಿಯಾದ ಮಾರ್ಗದಲ್ಲಿ ಬರುವ ವಾಹನಗಳಿಗೆ ಟೈರ್ ಕಿಲ್ಲರ್‌ನಲ್ಲಿರುವ ಹರಿತವಾದ ಮೊಳೆಗಳಿಂದ ಯಾವುದೇ ತೊಂದರೆ ಆಗುವುದಿಲ್ಲ. ಜೊತೆಗೆ ಒನ್ ವೇ ಹವ್ಯಾಸ ತಪ್ಪಿಸಲು ಹರಸಾಹಸ ಪಡಬೇಕಾಗಿದ್ದ ಪೊಲೀಸರಿಗೂ ಇದರಿಂದ ಸಾಕಷ್ಟು ಪ್ರಯೋಜನವಾಗಲಿದೆ.

ಒನ್ ವೇ ನಲ್ಲಿ ನುಗ್ಗುವ ಮುನ್ನ ಇನ್ಮುಂದೆ ಹತ್ತು ಬಾರಿ ಯೋಚಿಸಿ..

ಸದ್ಯ ಪ್ರಾಯೋಗಿಕವಾಗಿ ನೋಯ್ಡಾ ಪ್ರಮುಖ ರಸ್ತೆಗಳಲ್ಲಿ ಟೈರ್ ಕಿಲ್ಲರ್‌ಗಳನ್ನು ಅಳವಡಿಸಲಾಗುತ್ತಿದ್ದು, ಇದರಿಂದ ಬಹುತೇಕ ವಾಹನ ಸವಾರರು ಒನ್ ವೇ ನುಗ್ಗುವ ಹವ್ಯಾಸಕ್ಕೆ ಗುಡ್ ಬೈ ಹೇಳಿ ಸರಿಯಾದ ರಸ್ತೆ ನಿಯಮಗಳನ್ನು ಪಾಲನೆ ಮಾಡುತ್ತಿದ್ದಾರೆ.

ಒನ್ ವೇ ನಲ್ಲಿ ನುಗ್ಗುವ ಮುನ್ನ ಇನ್ಮುಂದೆ ಹತ್ತು ಬಾರಿ ಯೋಚಿಸಿ..

ಜೊತೆಗೆ ಕಾನೂನು ಉಲ್ಲಂಘನೆಗೆ ಇಲ್ಲಿ ಯಾವುದೇ ಅವಕಾಶವೇ ಇಲ್ಲದಿರವುದರಿಂದ ಇದನ್ನು ದೇಶದ ಪ್ರಮುಖ ನಗರಗಳಲ್ಲೂ ಅಳವಡಿಸಬೇಕೆಂಬ ಒತ್ತಾಯಗಳನ್ನು ಕೇಳಿಬರುತ್ತಿದ್ದು, ಇನ್ನು ಕೆಲವರು ಟೈರ್ ಕಿಲ್ಲರ್ ಸಹವಾಸವೇ ಬೇಡ ಎನ್ನುತ್ತಿದ್ದಾರೆ.

ಒನ್ ವೇ ನಲ್ಲಿ ನುಗ್ಗುವ ಮುನ್ನ ಇನ್ಮುಂದೆ ಹತ್ತು ಬಾರಿ ಯೋಚಿಸಿ..

ಇದಕ್ಕೆ ಕಾರಣ, ಈ ಮೊದಲು ಕೂಡಾ ಪುಣೆ ಪೊಲೀಸರು ಟೈರ್ ಕಿಲ್ಲರ್ ಅಳವಡಿಸಿ ಅದರಿಂದ ಹಿಂದೆ ಸರಿದಿದ್ದರು. ಟೈರ್ ಕಿಲ್ಲರ್‌ನಿಂದ ಕೆಲವು ಅನುಕೂಲಕತೆಗಳಿದ್ದರೂ ಸಹ ಕೆಲವು ಸಂದರ್ಭಗಳಲ್ಲಿ ವಾಹನ ಸವಾರರಿಗೆ ಇದು ಪ್ರಾಣಕ್ಕೆ ಕುತ್ತು ತರಬುಹುದು ಎನ್ನುವ ಕಾರಣಕ್ಕೆ ತೆಗೆದು ಹಾಕಿದ್ದರು.

ಒನ್ ವೇ ನಲ್ಲಿ ನುಗ್ಗುವ ಮುನ್ನ ಇನ್ಮುಂದೆ ಹತ್ತು ಬಾರಿ ಯೋಚಿಸಿ..

ರಸ್ತೆ ನಿಯಮಗಳನ್ನು ಪಾಲಿಸದೆ ಒನ್ ವೇ ಮತ್ತು ಮುಖ್ಯ ರಸ್ತೆಗಳಲ್ಲಿ ಅಡ್ಡಲಾಗಿ ಬರುವ ವಾಹನ ಸವಾರರಿಗೆ ಬುದ್ದಿಕಲಿಸಲು ಮುಂದಾಗಿದ್ದ ಪುಣೆ ಮೂಲದ ಟೌನ್ ಪ್ಲ್ಯಾನಿಂಗ್ ಅಮಾನೊರಾ ಎನ್ನುವ ಸಂಸ್ಥೆಯೊಂದು ಆಯ್ದ ಕೆಲ ರಸ್ತೆಗಳಲ್ಲಿ ಟೈರ್ ಕಿಲ್ಲರ್ ಹಂಪ್‌ಗಳನ್ನು ಅಳವಡಿಕೆ ಮಾಡಿತ್ತು.

MOST READ: ಶಾಕಿಂಗ್ ಸುದ್ದಿ- ಭಾರತದಲ್ಲಿ ಬ್ಯಾನ್ ಆಗಲಿವೆ ಈ ಒಂಬತ್ತು ಜನಪ್ರಿಯ ಕಾರುಗಳು..!

ಒನ್ ವೇ ನಲ್ಲಿ ನುಗ್ಗುವ ಮುನ್ನ ಇನ್ಮುಂದೆ ಹತ್ತು ಬಾರಿ ಯೋಚಿಸಿ..

ಅಮಾನೊರಾ ಸಂಸ್ಥೆಯ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಬೆಂಬಲ ವ್ಯಕ್ತವಾಗುತ್ತಿದಂತೆ ಟ್ರಾಫಿಕ್ ಪೊಲೀಸರಿಂದಲೂ ಸಹ ಈ ನಿಟ್ಟಿನಲ್ಲಿ ಉತ್ತಮ ಪ್ರತಿಕ್ರಿಯೆ ಬಂದಿತ್ತು.

ಒನ್ ವೇ ನಲ್ಲಿ ನುಗ್ಗುವ ಮುನ್ನ ಇನ್ಮುಂದೆ ಹತ್ತು ಬಾರಿ ಯೋಚಿಸಿ..

ಜೊತೆಗೆ ಕಾನೂನು ಉಲ್ಲಂಘನೆಗೆ ಇಲ್ಲಿ ಯಾವುದೇ ಅವಕಾಶವೇ ಇಲ್ಲದಿರವುದು ಪೊಲೀಸರ ಆಕರ್ಷಣೆಗೂ ಕಾರಣವಾಗಿತ್ತು. ಆದ್ರೆ ಹೊಸ ಮಾದರಿಯ ಟೈರ್ ಕಿಲ್ಲರ್ ಹಂಪ್ ಕುರಿತು ಸಾಧಕ ಬಾಧಕಗಳನ್ನು ಕುರಿತು ಚರ್ಚೆ ನಡೆಸಿದಾಗ ಟೈರ್ ಕಿಲ್ಲರ್‌ನಿಂದ ಲಾಭಕ್ಕಿಂತ ಅನಾಹುತವೇ ಹೆಚ್ಚು ಎಂಬ ವಾದಗಳು ಕೇಳಿಬಂದಾಗ ಆ ಯೋಜನೆಯನ್ನು ಕೈಬಿಡಲಾಗಿತ್ತು.

MOST READ: 8.50 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಕಲಿನಿಯನ್ ಒಡತಿಯಾದ ಭಾರತದ ಮೊದಲ ಮಹಿಳೆ..!

ಒನ್ ವೇ ನಲ್ಲಿ ನುಗ್ಗುವ ಮುನ್ನ ಇನ್ಮುಂದೆ ಹತ್ತು ಬಾರಿ ಯೋಚಿಸಿ..

ಆದ್ರೆ ನೋಯ್ಡಾ ಪೊಲೀಸರು ಟೈರ್ ಕಿಲ್ಲಿಂಗ್ ಮೊರೆಹೋಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈಗಾಲಲೇ ಈ ಬಗ್ಗೆ ಪರ-ವಿರೋಧ ಚರ್ಚೆಗಳು ಶುರುವಾಗಿವೆ. ಹೀಗಾಗಿ ಮುಂಬರುವ ದಿನಗಳಲ್ಲಿ ಜನಾಭಿಪ್ರಾಯ ಮೇಲೆ ಮತ್ತಷ್ಟು ಟೈರ್ ಕಿಲ್ಲರ್ ಅಳವಡಿಸಲಾಗುತ್ತಿದ್ದು, ಬೆಂಗಳೂರಿನಲ್ಲೂ ಇಂತಹ ವ್ಯವಸ್ಥೆಯನ್ನು ಅಳವಡಿಸುವ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೇ ತಿಳಿಸಿ.

Most Read Articles

Kannada
English summary
Noida authority to install tyre killers to stop wrong side driving. Read in kannada.
Story first published: Saturday, December 29, 2018, 19:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X