Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಾಹನ ಸವಾರರ ಜೀವಕ್ಕೆ ಕುತ್ತು ತರುತಂತೆ ಟೈರ್ ಕಿಲ್ಲರ್ ಹಂಪ್?
ಕಳೆದ ವಾರವಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ಟೈರ್ ಕಿಲ್ಲರ್ ಎಂಬ ತಂತ್ರಜ್ಞಾನದ ಕುರಿತು ಇದೀಗ ಅಪಸ್ವರಗಳು ಕೇಳಿಬಂದಿದ್ದು, ಮಹತ್ವದ ಯೋಜನೆಗೆ ಆರಂಭದಲ್ಲೇ ಹಿನ್ನೆಡೆಯಾಗಿದೆ.

ರಸ್ತೆ ನಿಯಮಗಳನ್ನು ಪಾಲಿಸದೆ ಒನ್ ವೇ ಮತ್ತು ಮುಖ್ಯ ರಸ್ತೆಗಳಲ್ಲಿ ಅಡ್ಡಲಾಗಿ ಬರುವ ವಾಹನ ಸವಾರರಿಗೆ ಬುದ್ದಿಕಲಿಸಲು ಮುಂದಾಗಿದ್ದ ಪುಣೆ ಮೂಲದ ಟೌನ್ ಪ್ಲ್ಯಾನಿಂಗ್ ಅಮಾನೊರಾ ಎನ್ನುವ ಸಂಸ್ಥೆಯೊಂದು ಆಯ್ದ ಕೆಲ ರಸ್ತೆಗಳಲ್ಲಿ ಟೈರ್ ಕಿಲ್ಲರ್ ಹಂಪ್‌ಗಳನ್ನು ಅಳವಡಿಕೆ ಮಾಡಿತ್ತು.

ಅಮಾನೊರಾ ಸಂಸ್ಥೆಯ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಬೆಂಬಲ ವ್ಯಕ್ತವಾಗುತ್ತಿದಂತೆ ಟ್ರಾಫಿಕ್ ಪೊಲೀಸರಿಂದಲೂ ಸಹ ಈ ನಿಟ್ಟಿನಲ್ಲಿ ಉತ್ತಮ ಪ್ರತಿಕ್ರಿಯೆ ಬಂದಿತ್ತು.

ಜೊತೆಗೆ ಕಾನೂನು ಉಲ್ಲಂಘನೆಗೆ ಇಲ್ಲಿ ಯಾವುದೇ ಅವಕಾಶವೇ ಇಲ್ಲದಿರವುದು ಪೊಲೀಸರ ಆಕರ್ಷಣೆಗೂ ಕಾರಣವಾಗಿತ್ತು. ಆದ್ರೆ ಹೊಸ ಮಾದರಿಯ ಟೈರ್ ಕಿಲ್ಲರ್ ಹಂಪ್ ಕುರಿತು ಸಾಧಕ ಬಾಧಕಗಳನ್ನು ಕುರಿತು ಚರ್ಚೆ ನಡೆಸಿದಾಗ ಟೈರ್ ಕಿಲ್ಲರ್‌ನಿಂದ ಲಾಭಕ್ಕಿಂತ ಅನಾಹುತವೇ ಹೆಚ್ಚು ಎಂಬ ವಾದಗಳು ಕೇಳಿಬರುತ್ತಿವೆ.

ಹೀಗಾಗಿ ಅಮಾನೊರಾ ಸಂಸ್ಥೆಗೆ ನೋಟಿಸ್ ಜಾರಿ ಮಾಡಿರುವ ಪುಣೆ ಪೊಲೀಸರು ಈ ಕೂಡಲೇ ಟೈರ್ ಕಿಲ್ಲರ್ ಹಂಪ್‌ಗಳನ್ನು ತೆಗೆದುಹಾಕುವಂತೆ ಸೂಚನೆ ನೀಡಿದ್ದಾರೆ. ನೋಟಿಸ್‌ನಲ್ಲಿರುವ ಹೇಳಿಕೆಯಂತೆ ಜೀವಹಾನಿ ಮಾಡಬಲ್ಲ ಟೈರ್ ಕಿಲ್ಲರ್ ಅಳವಡಿಕೆಗೆ ಅವಕಾಶವೇ ಇಲ್ಲ ಎಂದು ಹೇಳಲಾಗಿದೆ.

ವಿಶೇಷವಾಗಿ ರಚನೆಗೊಂಡಿರುವ ಈ ಟೈರ್ ಕಿಲ್ಲರ್ ಸೌಲಭ್ಯವು ರಾಂಗ್ ರೂಟ್‌ನಲ್ಲಿ ಬರುವ ವಾಹನ ಸವಾರರಿಗೆ ಕಂಟಕವಾಗಲಿದ್ದು, ಒಂದು ವೇಳೆ ಟೈರ್ ಕಿಲ್ಲರ್‌ನ ವಿರುದ್ದ ದಿಕ್ಕಿನಲ್ಲಿ ಹೋಗಿದ್ದೆ ಆದಲ್ಲಿ ಟೈರ್ ಪಂಚರ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಯಾಕೇಂದ್ರೆ ಟೈರ್ ಕಿಲ್ಲರ್‌ನಲ್ಲಿ ಬಳಸಲಾಗಿರುವ ಹರಿತವಾದ ಮೊಳೆಗಳು ವಿರುದ್ಧ ದಿಕ್ಕಿನಲ್ಲಿ ಬರುವ ವಾಹನಗಳ ಟೈರ್‌ಗಳಲ್ಲಿ ಸಿಕ್ಕಿಕೊಳ್ಳುವುದಲ್ಲದೇ ದುರಂತಕ್ಕೆ ಎಡೆ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ. ಇದೇ ಕಾರಣಕ್ಕೆ ನೋಟಿಸ್ ಜಾರಿ ಮಾಡಿರುವ ಪೊಲೀಸರು, ಟೈರ್ ಕಿಲ್ಲರ್ ಹಂಪ್‌ಗಳು ತೆರವುಗೊಳಿಸಲು ಮುಂದಾಗಿದ್ದಾರೆ.

ಸದ್ಯ ಪ್ರಾಯೋಗಿಕವಾಗಿ ಪುಣೆಯ ಪ್ರಮುಖ ರಸ್ತೆಗಳಲ್ಲಿ ಟೈರ್ ಕಿಲ್ಲರ್‌ಗಳನ್ನು ಅಳವಡಿಸಲಾಗುತ್ತಿದ್ದು, ಇದರಿಂದ ಬಹುತೇಕ ವಾಹನ ಸವಾರರು ರಾಂಗ್ ರೂಟ್ ಹವ್ಯಾಸಕ್ಕೆ ಗುಡ್ ಬೈ ಹೇಳಿ ಸರಿಯಾದ ರಸ್ತೆ ನಿಯಮಗಳನ್ನು ಪಾಲನೆ ಮಾಡುತ್ತಿದ್ದಾರೆ.

ಇದರ ಹೊರತಾಗಿಯೂ ಟೈರ್ ಕಿಲ್ಲರ್ ಹಂಪ್ ದಾಟುವ ವೇಳೆ ಯಾವುದೇ ರೀತಿ ಅಪಘಾತ ಸಂಭವಿಸಿದ್ದಲ್ಲಿ ವಾಹನ ಸವಾರರ ಜೀವಕ್ಕೆ ಹಾನಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಲಾಗುತ್ತಿದ್ದು, ಹೊಸ ಯೋಜನೆಗೆ ಇಂಡಿಯನ್ ರೋಡ್ ಕಾಂಗ್ರೆಸ್(ಸಮಿತಿ) ಕೂಡಾ ಒಪ್ಪಿಗೆ ಸೂಚಿಸಿಲ್ಲವಂತೆ.

ಈ ಬಗ್ಗೆ ಮಾತನಾಡಿರುವ ಅಮಾನೊರಾ ಸಂಸ್ಥೆಯ ಮುಖ್ಯಸ್ಥ ಸುನೀಲ್ ಕಠಾರೆ, ಟೈರ್ ಕಿಲ್ಲರ್ ಅಳವಡಿಕೆಯಿಂದಾಗಿ ಈಗಾಗಲೇ ಸಾಕಷ್ಟು ಜನ ವಾಹನ ಸವಾರರು ಸರಿಯಾದ ರೀತಿಯಲ್ಲಿ ರಸ್ತೆ ನಿಯಮ ಪಾಲನೆ ಮಾಡುತ್ತಿದ್ದು, ಇದರಿಂದಾಗಿ ಅಪಘಾತ ಪ್ರಕರಣಗಳು ಸಹ ಹತೋಟಿ ಬಂದಿವೆ ಎಂದಿದ್ದಾರೆ.
ಆದ್ರೆ ಟ್ರಾಫಿಕ್ ಪೊಲೀಸರು ಹೊಸ ಯೋಜನೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಟೈರ್ ಕಿಲ್ಲರ್‌ಗಳಿಂದಾಗಿ ವಾಹನ ಸವಾರರ ಜೀವಕ್ಕೆ ಆಪತ್ತು ಎಂದು ಹೇಳಿದ ಕಾರಣಕ್ಕೆ ಟೈರ್ ಕಿಲ್ಲರ್‌ಗಳನ್ನು ಸದ್ಯದಲ್ಲೇ ತೆಗೆದುಹಾಕಲಿದ್ದೇವೆ ಎಂದು ಸುನೀಲ್ ಕಠಾರೆ ಅವರು ಸುದ್ದಿವಾಹಿನಿಯೊಂದರ ಜೊತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇನ್ನು ರಸ್ತೆ ನಿಯಮ ಉಲ್ಲಂಘನೆ ಮಾಡುವ ವಾಹನ ಸವಾರರಿಗೆ ಟೈರ್ ಕಿಲ್ಲರ್ ಹಂಪ್‌ಗಳು ಸರಿಯಾದ ಪರಿಹಾರ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದ ಸಾರ್ವಜನಿಕರಿಗೆ ಪುಣೆ ಪೊಲೀಸರು ನಿರಾಸೆ ಮೂಡಿಸಿದ್ದು, ಈ ಕೂಡಲೇ ಡೇಂಜರ್ ಟೈರ್ ಕಿಲ್ಲರ್‌ಗಳನ್ನು ಕಿತ್ತು ಹಾಕಲು ಸೂಚನೆ ನೀಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:
01. ಬಾಲಕಿಗೆ ಗುದ್ದಿದ ಕೆಟಿಎಂ ಬೈಕ್- ಬೈಕ್‌ರ್‌ಗಳಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿತ..!!
02. 30 ಕೋಟಿಗೂ ಹೆಚ್ಚು ಬೆಲೆಬಾಳುವ ಈ ಐಷಾರಾಮಿ ಎಸ್‌ಯುವಿ ಕಾರಿನ ವಿಶೇಷತೆ ಏನು?
03. ಕಾರಿನ ಗೇರ್ ಸ್ಕಿಪ್ ಮಾಡುವುದರಿಂದ ಗೇರ್‌ಬಾಕ್ಸ್ ಹಾಳಾಗುತ್ತಾ ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
04.ಉಡುಪಿಯಲ್ಲಿ ಭೀಕರ ಅಪಘಾತ- ಇನೋವಾ ಗುದ್ದಿದ ರಭಸಕ್ಕೆ ಗಾಳಿಯಲ್ಲಿ ತೂರಿ ಹೋದ ಪಲ್ಸರ್ ಬೈಕ್...