ಎಂದಿಗೂ ಮರೆಯಲಾಗದ ಟೈಟಾನಿಕ್ ದುರಂತದ ನಗ್ನ ಸತ್ಯಗಳು

ಮೊದಲ ಐಷಾರಾಮಿ ಹಡಗು ಎಂದೇ ಪ್ರಸಿದ್ಧಿ ಪಡೆದು ಪ್ರತಿಯೊಬ್ಬನೂ ತನ್ನೆಡೆ ನೋಡುವಂತೆ ಮಾಡಿದ್ದ 'ಟೈಟಾನಿಕ್' ತನ್ನ ಮೊದಲ ಪ್ರಯಾಣದಲ್ಲೇ ದುರಂತ ಕಂಡಿತ್ತು. ಅಪಾರ ಪ್ರಮಾಣದ ಸಾವು ನೋವಿಗೆ ಕಾರಣವಾಗಿದ್ದ ಈ ದುರಂತ ಜಗತ್ತನ್ನೇ ಬೆಚ್ಚಿ ಬೀಳಿಸಿತ್ತು.

By Manoj B.k

ಜಗತ್ತಿನ ಮೊದಲ ಐಷಾರಾಮಿ ಹಡಗು ಎಂದೇ ಪ್ರಸಿದ್ಧಿ ಪಡೆದು ಪ್ರತಿಯೊಬ್ಬನೂ ತನ್ನೆಡೆ ನೋಡುವಂತೆ ಮಾಡಿದ್ದ 'ಟೈಟಾನಿಕ್' ತನ್ನ ಮೊದಲ ಪ್ರಯಾಣದಲ್ಲೇ ದುರಂತ ಕಂಡಿತ್ತು. ಅಪಾರ ಪ್ರಮಾಣದ ಸಾವು ನೋವಿಗೆ ಕಾರಣವಾಗಿದ್ದ ಈ ದುರಂತ ಜಗತ್ತನ್ನೇ ಬೆಚ್ಚಿ ಬೀಳಿಸಿತ್ತು.

ಎಂದಿಗೂ ಮರೆಯಲಾಗದ ಟೈಟಾನಿಕ್ ದುರಂತದ ನಗ್ನ ಸತ್ಯಗಳು

ಬದುಕಿ ಬಂದ ಕೆಲವರು ಸಮುದ್ರಲ್ಲಿ ಹಡಗಿನ ಮಾರ್ಗಕ್ಕೆ ಅಡ್ಡ ಬಂದಿದ್ದ ಹಿಮಬಂಡೆಗಳು ಅಪ್ಪಳಿಸಿ ಈ ಅವಘಡ ಸಂಭವಿಸಿತ್ತು ಎಂದಿದ್ದರು. ಆದರೆ ಟೈಟಾನಿಕ್ ದುರಂತಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಸತ್ಯಗಳು ಹೊರಬರುತ್ತಿದ್ದು, ಹೊಸ ಸಂಶೋಧನೆಗಳು ಈ ದುರಂತಕ್ಕೆ ಬೇರೆಯದ್ದೆ ವ್ಯಾಖ್ಯಾನಗಳನ್ನು ನೀಡುತ್ತವೆ.

ಎಂದಿಗೂ ಮರೆಯಲಾಗದ ಟೈಟಾನಿಕ್ ದುರಂತದ ನಗ್ನ ಸತ್ಯಗಳು

ಕೇವಲ ಹಿಮಬಂಡೆಗಳು ಹಡಗಿಗೆ ಅಪ್ಪಳಿಸಿದ್ದರ ಪರಿಣಾಮ ಈ ದುರಂತವಾಗಿದ್ದಲ್ಲ, ಬದಲಾಗಿ ಹಡಗಿನ ಬಾಯ್ಲರ್ ವಿಭಾಗದಲ್ಲಿ ಬೆಂಕಿ ತಗುಲಿದ್ದೂ ಕೂಡಾ ಇದಕ್ಕೆ ಕಾರಣವೆಂದು ವಾದಿಸಲಾಗುತ್ತಿದೆ. ಆದರೂ ದೈತ್ಯ ಟೈಟಾನಿಕ್ ಹಡಗಿಗೆ ಸಂಬಂಧಪಟ್ಟ ಕೆಲವು ನಗ್ನ ಸತ್ಯಗಳನ್ನು ಎಂದು ಮರೆಯಲು ಸಾಧ್ಯವಿಲ್ಲ.

ಎಂದಿಗೂ ಮರೆಯಲಾಗದ ಟೈಟಾನಿಕ್ ದುರಂತದ ನಗ್ನ ಸತ್ಯಗಳು

ಬಹುಶಃ ಟೈಟಾನಿಕ್ ದುರಂತ ಪ್ರಕರಣದಲ್ಲಿ ಮಾತ್ರ ಹೀಗಾಗಿರಬೇಕು. ಮುಳುಗುತ್ತಿದ್ದ ಹಡಗಿನಲ್ಲಿದ್ದ ಪುರುಷರು ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಮೊದಲು ಮಹಿಳೆಯರು ಹಾಗೂ ಮಕ್ಕಳನ್ನು ರಕ್ಷಿಸಿದ್ದರು.

ಎಂದಿಗೂ ಮರೆಯಲಾಗದ ಟೈಟಾನಿಕ್ ದುರಂತದ ನಗ್ನ ಸತ್ಯಗಳು

ಪ್ರಪಂಚದ ಅತ್ಯಂತ ಭೀಕರ ದುರ್ಘಟನೆಗಳಲ್ಲಿ ಒಂದಾಗಿರುವ ಟೈಟಾನಿಕ್ 'ಮುಳುಗಲಾರದ ಹಡಗು' ಎಂದೇ ಭಾರೀ ಪ್ರಚಾರ ಪಡೆದಿತ್ತು. ಇಷ್ಟು ಭರ್ಜರಿಯಾಗಿದ್ದ ಹಡಗು ಮುಳುಗಲು ಸಾಧ್ಯವೇ ಇಲ್ಲ ಎಂಬುವುದು ಎಲ್ಲರ ಭಾವನೆಯಾಗಿತ್ತು.

ಎಂದಿಗೂ ಮರೆಯಲಾಗದ ಟೈಟಾನಿಕ್ ದುರಂತದ ನಗ್ನ ಸತ್ಯಗಳು

ಆದರೆ, ಅತ್ಯಂತ ವೈಭವೋಪೂರಿತ ಹಡುಗಳಲ್ಲಿ ಟೈಟಾನಿಕ್ ಅಗ್ರಸ್ಥಾನ ಪಡೆದಿದ್ದ 'ಟೈಟಾನಿಕ್', ಸಮುದ್ರದ ಮಾರ್ಗ ಮಧ್ಯೆದಲ್ಲಿ ನೀರ್ಗಲ್ಲಿಗೆ ಅಪ್ಪಳಿಸಿದ ಪರಿಣಾಮ ದುರಂತ ಸಂಭವಿಸಿತ್ತು ಎಂಬುವುದು ಸಂಶೋಧನೆಗಳು ವಾದಿಸುತ್ತವೆ.

ಎಂದಿಗೂ ಮರೆಯಲಾಗದ ಟೈಟಾನಿಕ್ ದುರಂತದ ನಗ್ನ ಸತ್ಯಗಳು

ದುರಂತದ ಸಮಯದಲ್ಲಿ ಜೀವ ರಕ್ಷಕ ಲೈಫ್ ಬೋಟ್‌ಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳಲಾಗದಿರುವುದು ಕೂಡಾ ಸಾವಿರಾರು ಜನರು ಪ್ರಾಣ ಕಳೆದುಕೊಳ್ಳಬೇಕಾಯಿತು. ಈ ದುರಂತದಲ್ಲಿ ಬದುಕುಳಿದವರು ಅದೃಷ್ಟಶಾಲಿಗಳೇ ಎನ್ನಬಹುದು.

ಎಂದಿಗೂ ಮರೆಯಲಾಗದ ಟೈಟಾನಿಕ್ ದುರಂತದ ನಗ್ನ ಸತ್ಯಗಳು

ಈ ನೈಜ ಘಟನೆಯನ್ನೇ ಆಧಾರವಾಗಿಟ್ಟುಕೊಂಡು ಹಾಲಿವುಡ್‌ನ ಪ್ರಸಿದ್ಧ ನಿರ್ದೇಶಕ ಜೇಮ್ಸ್ ಕ್ಯಾಮರೂನ್, 1997ರಲ್ಲಿ ಟೈಟಾನಿಕ್ ಎಂಬ ಚಲನಚಿತ್ರವನ್ನು ನಿರ್ಮಿಸಿದ್ದರು. ಚಿತ್ರದಲ್ಲಿ ಲಿಯಾನಾರ್ಡೊ ಡಿ ಕಾಪ್ರಿಯೊ ಹಾಗೂ ಕೇಟ್ ವಿನ್ಸ್ಲೆಟ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಎಂದಿಗೂ ಮರೆಯಲಾಗದ ಟೈಟಾನಿಕ್ ದುರಂತದ ನಗ್ನ ಸತ್ಯಗಳು

ಒ೦ದು ಕಾಲದ ಜಗತ್ತಿನ ಅತ್ಯ೦ತ ದೊಡ್ಡ ಹಡಗು ಮುಳುಗಿದ ಕಥೆಯನ್ನೇ ಹೃದಯಸ್ಪರ್ಶಿಯಾಗಿ ಚಿತ್ರಿಸಿದ ರೀತಿ ಅವಿಸ್ಮರಣೀಯ. ನಾವು ಈ ಮೊದಲೇ ತಿಳಿಸಿರುವಂತೆಯೇ ಟೈಟಾನಿಕ್ ಅಂದಿನ ಕಾಲದ ಅತಿದೊಡ್ಡ ಹಡಗಾಗಿತ್ತು. ಅಂದರೆ ಇದರ ಗಾತ್ರ ಸಾಮಾನ್ಯ ಫುಟ್ಬಾಲ್ ಮೈದಾನಕ್ಕಿಂತ ಮೂರು ಪಟ್ಟು ಹೆಚ್ಚಾಗಿತ್ತು.

ಎಂದಿಗೂ ಮರೆಯಲಾಗದ ಟೈಟಾನಿಕ್ ದುರಂತದ ನಗ್ನ ಸತ್ಯಗಳು

ಹೀಗಾಗಿಯೇ ಟೈಟಾನಿಕ್ ಎಂಜಿನ್‌ಗಾಗಿ ದಿನಂಪ್ರತಿ 800 ಟನ್ ಕಲ್ಲಿದ್ದಲು ಬಳಕೆ ಮಾಡಲಾಗುತ್ತಿತ್ತು. ಹಾಗೆಯೇ ಪ್ರತಿಗಂಟೆಗೆ 43.50 ಕೀ.ಮೀ. (27 ಮೈಲ್) ವೇಗತೆಯಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿತ್ತು.

ಎಂದಿಗೂ ಮರೆಯಲಾಗದ ಟೈಟಾನಿಕ್ ದುರಂತದ ನಗ್ನ ಸತ್ಯಗಳು

ಟೈಟಾನಿಕ್, ವಿಶ್ವದಲ್ಲಿ ವಿದ್ಯುತ್ ಚಾಲಿತ ಲೈಟ್ (ಎಲೆಕ್ಟ್ರಿಕ್) ಹಾಗೂ ಟೆಲಿಫೋನ್ ವ್ಯವಸ್ಥೆ ಹೊಂದಿದ್ದ ಅಂದಿನ ಅತ್ಯಾಧುನಿಕ ಹಡಗುಗಳಲ್ಲಿ ಒಂದಾಗಿತ್ತು.

ಎಂದಿಗೂ ಮರೆಯಲಾಗದ ಟೈಟಾನಿಕ್ ದುರಂತದ ನಗ್ನ ಸತ್ಯಗಳು

ಇನ್ನೊಂದು ಅಚ್ಚರಿ ಅಂದ್ರೆ ಕಲ್ಲಿದ್ದಲು ಹೊಗೆ ಹಾಗೂ ಹಬೆ ಹೊರಹೋಗಲು ನಿರ್ಮಿಸಿದ್ದ ನಾಲ್ಕು ಕೊಳವೆಗಳಲ್ಲಿ ಕೇವಲ ಮೂರು ಮಾತ್ರ ಕಾರ್ಯನಿರ್ವಹಿಸುತ್ತಿದ್ದವು. ನಾಲ್ಕನೆಯದನ್ನು ಹಡಗಿನ ಸೌಂದರ್ಯ ಹೆಚ್ಚಿಸಲು ನಿರ್ಮಿಸಲಾಗಿತ್ತು ಎನ್ನುವುದೇ ವಿಶೇಷ.

ಎಂದಿಗೂ ಮರೆಯಲಾಗದ ಟೈಟಾನಿಕ್ ದುರಂತದ ನಗ್ನ ಸತ್ಯಗಳು

ಅಷ್ಟಕ್ಕೂ ಟೈಟಾನಿಕ್‌‌ನಲ್ಲಿ ಸಂಚರಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಅದೊಂದು ವೈಭವಪೂರಿತ ಪ್ರಯಾಣವಾಗಿತ್ತು. ಅಂದಿನ ಕಾಲಕ್ಕೆಯೇ 99 ಸಾವಿರ ಅಮೆರಿಕನ್ ಡಾಲರ್‌ ಪಾವತಿಸಬೇಕಾಗಿತ್ತು. ಅಂದ್ರೆ ಭಾರತೀಯ ರೂಪಾಯಿ ಪ್ರಕಾರ ಇಂದಿನ ಮೌಲ್ಯ 73 ಲಕ್ಷ.

ಎಂದಿಗೂ ಮರೆಯಲಾಗದ ಟೈಟಾನಿಕ್ ದುರಂತದ ನಗ್ನ ಸತ್ಯಗಳು

ಮತ್ತೊಂದು ಬೇಸರದ ಸಂಗತಿ ಏನೆಂದರೆ ಆಗ ತಾನೇ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದ ಇಪ್ಪತ್ತಾರು ನವ ಜೋಡಿಗಳು ತಮ್ಮ ಮೊದಲ ಪ್ರವಾಸದಲ್ಲಿಯೇ ಜೀವ ಕಳೆದುಕೊಂಡಿದ್ದರು.

ಎಂದಿಗೂ ಮರೆಯಲಾಗದ ಟೈಟಾನಿಕ್ ದುರಂತದ ನಗ್ನ ಸತ್ಯಗಳು

ಇದರಿಂದಾಗಿಯೇ ಕಹಿಸತ್ಯಗಳನ್ನು ತನ್ನ ಒಡಲೊಳಗೆ ಇಟ್ಟುಕೊಂಡಿರುವ ಟೈಟಾನಿಕ್ ಹಡಗು ಕೆಲವರಿಗೆ ಕರಾಳ ನೆನಪುಗಳಾದ್ರೆ ಮತ್ತೆ ಕೆಲವರಿಗೆ ಅದು ಅಧ್ಯಯನ ವಸ್ತು ಎಂದ್ರೆ ತಪ್ಪಾಗಲಾರದು.

Most Read Articles

Kannada
English summary
Ugly Truths About Titanic Ship Accident. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X