ಫ್ಲೆಕ್ಸ್ ಫ್ಯೂಯಲ್ ವಾಹನಗಳಿಗೆ ಮಾರ್ಗಸೂಚಿ ರೂಪಿಸಲು ಮುಂದಾದ ಕೇಂದ್ರ ಸರ್ಕಾರ

ಫ್ಲೆಕ್ಸ್ ಫ್ಯೂಯಲ್ ಎಂಜಿನ್ ಹೊಂದಿರುವ ವಾಹನಗಳನ್ನು ಉತ್ಪಾದಿಸುವಂತೆ ಎಲ್ಲಾ ವಾಹನ ತಯಾರಕ ಕಂಪನಿಗಳಿಗೆ ಸೂಚನೆ ನೀಡಲು ಕೇಂದ್ರ ಸರ್ಕಾರವು ಸಿದ್ದತೆ ನಡೆಸುತ್ತಿದೆ ಎಂದು ವರದಿಯಾಗಿದೆ. ಇದಕ್ಕೆ ಸಂಬಂಧಿಸಿದ ಮತ್ತಷ್ಟು ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

ಫ್ಲೆಕ್ಸ್ ಫ್ಯೂಯಲ್ ವಾಹನಗಳಿಗೆ ಮಾರ್ಗಸೂಚಿ ರೂಪಿಸಲು ಮುಂದಾದ ಕೇಂದ್ರ ಸರ್ಕಾರ

ಈಗ ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆಗಳು ಗಗನಕ್ಕೇರಿವೆ. ಪೆಟ್ರೋಲ್ ಬೆಲೆ ಈಗಾಗಲೇ ರೂ. 100 ಗಳ ಗಡಿ ದಾಟಿದ್ದರೆ, ಡೀಸೆಲ್ ಬೆಲೆ ರೂ. 100ರ ಆಸು ಪಾಸಿನಲ್ಲಿದೆ. ಈ ಸಮಸ್ಯೆಯನ್ನು ಪರಿಹರಿಸಲು ಕೇಂದ್ರ ಸರ್ಕಾರವು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿರವರು ಮುಂದಿನ ಮೂರು ನಾಲ್ಕು ತಿಂಗಳಲ್ಲಿ ಎಲ್ಲಾ ವಾಹನ ತಯಾರಕರಿಗೆ ಫ್ಲೆಕ್ಸ್ ಫ್ಯೂಯಲ್ ಇಂಜಿನ್ ಹೊಂದಿರುವ ವಾಹನಗಳನ್ನು ಉತ್ಪಾದಿಸಲು ಸೂಚನೆ ನೀಡಲಾಗುವುದು ಎಂದು ಹೇಳಿದ್ದಾರೆ.

ಫ್ಲೆಕ್ಸ್ ಫ್ಯೂಯಲ್ ವಾಹನಗಳಿಗೆ ಮಾರ್ಗಸೂಚಿ ರೂಪಿಸಲು ಮುಂದಾದ ಕೇಂದ್ರ ಸರ್ಕಾರ

ಫ್ಲೆಕ್ಸ್ ಫ್ಯೂಯಲ್ ಎಂಜಿನ್ ಒಂದಕ್ಕಿಂತ ಹೆಚ್ಚು ಇಂಧನಗಳಲ್ಲಿ ಕಾರ್ಯ ನಿರ್ವಹಿಸುತ್ತದೆ. 2022 ರ ಮೂರನೇ ತ್ರೈಮಾಸಿಕದ ಅಂತ್ಯದ ವೇಳೆಗೆ ಫ್ಲೆಕ್ಸ್ ಫ್ಯೂಯಲ್ ಎಂಜಿನ್ ಹೊಂದಿರುವ ವಾಹನಗಳಿಗಾಗಿ ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು ಎಂದು ಈ ತಿಂಗಳ ಆರಂಭದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ನಿತಿನ್ ಗಡ್ಕರಿ ತಿಳಿಸಿದ್ದರು.

ಫ್ಲೆಕ್ಸ್ ಫ್ಯೂಯಲ್ ವಾಹನಗಳಿಗೆ ಮಾರ್ಗಸೂಚಿ ರೂಪಿಸಲು ಮುಂದಾದ ಕೇಂದ್ರ ಸರ್ಕಾರ

ಈ ಬಗ್ಗೆ ಮಾತನಾಡಿದ್ದ ಅವರು, ನಾವು ಫ್ಲೆಕ್ಸ್ ಫ್ಯೂಯಲ್ ಎಂಜಿನ್ ಹೊಂದಿರುವ ವಾಹನಗಳಿಗಾಗಿ ನಿಯಮಾವಳಿಗಳನ್ನು ರೂಪಿಸಲು ಬದ್ಧರಾಗಿದ್ದೇವೆ ಎಂದು ಹೇಳಿದ್ದರು. ಸಚಿವರ ಮಾತನ್ನು ಅರ್ಥೈಸುವುದಾದರೆ ಕೇಂದ್ರ ಸರ್ಕಾರವು ಫ್ಲೆಕ್ಸ್ ಫ್ಯೂಯಲ್ ಎಂಜಿನ್ ಹೊಂದಿರುವ ವಾಹನಗಳನ್ನು ಜಾರಿಗೆ ತರುವುದು ಖಚಿತವಾಗಿದೆ. ಫ್ಲೆಕ್ಸ್ ಫ್ಯೂಯಲ್ ಎಂಜಿನ್ ಹೊಂದಿರುವ ವಾಹನಗಳು ಪೆಟ್ರೋಲ್ ಬೆಲೆಯಿಂದ ಸಂಕಷ್ಟದಲ್ಲಿರುವ ಗ್ರಾಹಕರಿಗೆ ವರದಾನವಾಗಲಿವೆ ಎಂದು ಹೇಳಿದ್ದರು.

ಫ್ಲೆಕ್ಸ್ ಫ್ಯೂಯಲ್ ವಾಹನಗಳಿಗೆ ಮಾರ್ಗಸೂಚಿ ರೂಪಿಸಲು ಮುಂದಾದ ಕೇಂದ್ರ ಸರ್ಕಾರ

ಈಗ ಭಾರತದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ರೂ. 110 ಗಳಾದರೆ, ಎಥೆನಾಲ್ ಬೆಲೆ ಕೇವಲ ರೂ. 65 ಗಳಾಗಿದೆ. ಇದರಿಂದ ಗ್ರಾಹಕರ ಇಂಧನ ವೆಚ್ಚವನ್ನು ಕಡಿಮೆ ಮಾಡಬಹುದು ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ಇದರ ಜೊತೆಗೆ ಈ ಇಂಧನವು ವಿದೇಶಿ ವಿನಿಮಯವನ್ನು ಉಳಿಸುವುದಲ್ಲದೆ ವಾಯು ಮಾಲಿನ್ಯವನ್ನು ಸಹ ಕಡಿಮೆ ಮಾಡುತ್ತದೆ.

ಫ್ಲೆಕ್ಸ್ ಫ್ಯೂಯಲ್ ವಾಹನಗಳಿಗೆ ಮಾರ್ಗಸೂಚಿ ರೂಪಿಸಲು ಮುಂದಾದ ಕೇಂದ್ರ ಸರ್ಕಾರ

ಈಗ ಕಾರ್ಯ ನಿರ್ವಹಿಸುತ್ತಿರುವ ತೈಲ ಕಂಪನಿಗಳು ತಮ್ಮದೇ ಪೆಟ್ರೋಲ್ ಹಾಗೂ ಡೀಸೆಲ್ ಮೂಲ ಸೌಕರ್ಯಗಳಲ್ಲಿ ಜೈವಿಕ ಇಂಧನಗಳನ್ನು ಮಾರಾಟ ಮಾಡಲು ಸಿದ್ಧವಾಗಿವೆ ಎಂದು ನಿತಿನ್ ಗಡ್ಕರಿ ಹೇಳಿದರು. ಹಸಿರು ಸಾರಿಗೆ ಮೂಲಕ ರೈಲು, ಮೆಟ್ರೋ ಹಾಗೂ ದೂರದ ಬಸ್ಸುಗಳ ಸಂಚಾರಕ್ಕೆ ಚಾಲನೆ ನೀಡಲು ಕೇಂದ್ರ ರಸ್ತೆ ಸಾರಿಗೆ ಇಲಾಖೆಯು ನಿರ್ಧರಿಸಿದೆ ಎಂದು ಅವರು ಹೇಳಿದರು.

ಫ್ಲೆಕ್ಸ್ ಫ್ಯೂಯಲ್ ವಾಹನಗಳಿಗೆ ಮಾರ್ಗಸೂಚಿ ರೂಪಿಸಲು ಮುಂದಾದ ಕೇಂದ್ರ ಸರ್ಕಾರ

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ವಾಹನಗಳು ಹಾಗೂ ಇಂಧನ ಕೋಶ ವಾಹನ ತಂತ್ರಜ್ಞಾನಗಳು ಪರಸ್ಪರ ಸಂಬಂಧ ಹೊಂದಿವೆ. ಇವೆರಡೂ 2050 ರ ವೇಳೆಗೆ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಇಂಧನಗಳ ಬದಲು ಬಳಕೆಯಾಗಲಿವೆ ಎಂದು ಹೇಳಿದರು. ಸಚಿವರ ಪ್ರಕಾರ, ಪೆಟ್ರೋಲ್, ಡೀಸೆಲ್ ಇಂಧನಕ್ಕೆ ಪರ್ಯಾಯವೆಂದು ಪರಿಗಣಿಸಲಾದ ಎಲೆಕ್ಟ್ರಿಕ್ ವಾಹನಗಳಿಗೆ ನಿಧಾನವಾಗಿ ಬೇಡಿಕೆ ಹೆಚ್ಚಾಗುತ್ತಿದೆ.

ಫ್ಲೆಕ್ಸ್ ಫ್ಯೂಯಲ್ ವಾಹನಗಳಿಗೆ ಮಾರ್ಗಸೂಚಿ ರೂಪಿಸಲು ಮುಂದಾದ ಕೇಂದ್ರ ಸರ್ಕಾರ

ಕೆಲವು ಕಂಪನಿಗಳು ಈ ಬದಲಾವಣೆಯನ್ನು ತಕ್ಷಣವೇ ಸ್ವೀಕರಿಸಿದರೆ, ಕೆಲವು ಕಂಪನಿಗಳು ಇನ್ನೂ ಗೊಂದಲದ ಮನಸ್ಥಿತಿಯಲ್ಲಿವೆ. ವಾಹನದ ಮೂಲ ಗುಣ ಲಕ್ಷಣವನ್ನು ಬದಲಾಯಿಸಲು ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡಬೇಕಾಗುತ್ತದೆ ಎಂಬುದು ಕಂಪನಿಗಳ ಹಿಂಜರಿಕೆಗೆ ಪ್ರಮುಖ ಕಾರಣವಾಗಿದೆ. ಈ ಹಿಂಜರಿಕೆ ಹಾಗೂ ಗೊಂದಲವನ್ನು ದೂರ ಮಾಡಲು ಕೇಂದ್ರ ಸರ್ಕಾರ ಹಾಗೂ ಆಯಾ ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳಿಗೆ ಸಬ್ಸಿಡಿ ನೀಡುತ್ತಿವೆ.

ಫ್ಲೆಕ್ಸ್ ಫ್ಯೂಯಲ್ ವಾಹನಗಳಿಗೆ ಮಾರ್ಗಸೂಚಿ ರೂಪಿಸಲು ಮುಂದಾದ ಕೇಂದ್ರ ಸರ್ಕಾರ

ಗುಜರಾತ್ ರಾಜ್ಯ ಸರ್ಕಾರವು ಇವಿ ತಯಾರಕ ಕಂಪನಿಗಳಿಗೆ ಹಾಗೂ ಇವಿ ಖರೀದಿದಾರರಿಗೆ ಹಲವಾರು ಆಕರ್ಷಕ ಸಬ್ಸಿಡಿ ಕೊಡುಗೆಗಳನ್ನು ಘೋಷಿಸಿದೆ. ಜೊತೆಗೆ ಹಲವು ಇವಿ ಸ್ಟಾರ್ಟ್ ಅಪ್‌ ಕಂಪನಿಗಳನ್ನು ತನ್ನತ್ತ ಸೆಳೆಯುತ್ತಿದೆ. ಸಬ್ಸಿಡಿ ನೀಡುತ್ತಿರುವ ಹಿನ್ನೆಲೆಯಲ್ಲಿ ಜನರು ಸಹ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ.

ಫ್ಲೆಕ್ಸ್ ಫ್ಯೂಯಲ್ ವಾಹನಗಳಿಗೆ ಮಾರ್ಗಸೂಚಿ ರೂಪಿಸಲು ಮುಂದಾದ ಕೇಂದ್ರ ಸರ್ಕಾರ

ಹಲವು ಸ್ಟಾರ್ಟ್ ಅಪ್ ಕಂಪನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುತ್ತಿವೆ. ಆದರೆ ಪ್ರಮುಖ ವಾಹನ ತಯಾರಕ ಕಂಪನಿಗಳು ಇನ್ನೂ ಇವಿ ಉತ್ಪಾದನೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿಲ್ಲ. ಭಾರತದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೋಕಾರ್ಪ್ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು 2022ರ ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಗೊಳಿಸುವುದಾಗಿ ಘೋಷಿಸಿದೆ.

ಫ್ಲೆಕ್ಸ್ ಫ್ಯೂಯಲ್ ವಾಹನಗಳಿಗೆ ಮಾರ್ಗಸೂಚಿ ರೂಪಿಸಲು ಮುಂದಾದ ಕೇಂದ್ರ ಸರ್ಕಾರ

ಎಲೆಕ್ಟ್ರಿಕ್ ವಾಹನಗಳು ಪೆಟ್ರೋಲ್, ಡೀಸೆಲ್ ಮೇಲೆ ಮಾಡುವ ಖರ್ಚನ್ನು ಕಡಿಮೆ ಮಾಡುತ್ತವೆ. ಜೊತೆಗೆ ಎಲೆಕ್ಟ್ರಿಕ್ ವಾಹನಗಳು ಪರಿಸರ ಸ್ನೇಹಿಯೂ ಹೌದು. ಪ್ರತಿ ಗಂಟೆಗೆ 25 ಕಿ.ಮೀಗಳಿಗಿಂತ ಕಡಿಮೆ ವೇಗದಲ್ಲಿ ಚಲಿಸುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ರಿಜಿಸ್ಟರ್ ಮಾಡುವ ಅವಶ್ಯಕತೆಯಿಲ್ಲ. ಜೊತೆಗೆ ಇವುಗಳನ್ನು ಚಾಲನೆ ಮಾಡಲು ಯಾವುದೇ ಡ್ರೈವಿಂಗ್ ಲೈಸೆನ್ಸ್ ಅವಶ್ಯಕತೆಯೂ ಇಲ್ಲ ಎಂಬುದು ಗಮನಾರ್ಹ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Union government to mandate flex fuel vehicles production details
Story first published: Monday, September 27, 2021, 12:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X