ಉಚಿತ ಲಸಿಕೆ ನೀಡುವ ಸಲುವಾಗಿ ಇಂಧನಗಳ ಬೆಲೆ ಏರಿಸಲಾಗುತ್ತಿದೆ ಎಂದ ಕೇಂದ್ರ ಸಚಿವ

ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳು ಏರಿಕೆಯಾಗುತ್ತಲೇ ಇವೆ. ಇಂಧನಗಳ ಬೆಲೆ ಏರಿಕೆಯಿಂದಾಗಿ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗಿದೆ. ಬೆಲೆ ಏರಿಕೆಯಿಂದಾಗಿ ಜನ ಸಾಮಾನ್ಯರು ಹೈರಣಾಗಿದ್ದಾರೆ. ಭಾರತದ ಬಹುತೇಕ ಎಲ್ಲಾ ನಗರಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ರೂ. 110 ಗಳ ಗಡಿ ದಾಟಿದೆ. ಇನ್ನು ಪ್ರತಿ ಲೀಟರ್ ಡೀಸೆಲ್ ಬೆಲೆ ರೂ. 100 ರ ಗಡಿ ದಾಟಿದೆ.

ಉಚಿತ ಲಸಿಕೆ ನೀಡುವ ಸಲುವಾಗಿ ಇಂಧನಗಳ ಬೆಲೆ ಏರಿಸಲಾಗುತ್ತಿದೆ ಎಂದ ಕೇಂದ್ರ ಸಚಿವ

ಭಾರತದಲ್ಲಿ ಕಳೆದ ಮೂರು ವಾರಗಳಲ್ಲಿ 15 ಬಾರಿ ಬೆಲೆ ಏರಿಕೆ ಮಾಡಲಾಗಿದೆ ಎಂದು ವರದಿಗಳಾಗಿವೆ. ಇಂಧನಗಳ ಬೆಲೆ ಏರಿಕೆಗೆ - ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ, ಒಪೆಕ್ ದೇಶಗಳು ಕಡಿಮೆ ಪ್ರಮಾಣದಲ್ಲಿ ಇಂಧನ ಉತ್ಪಾದಿಸುತ್ತಿರುವುದು, ಭಾರತದಲ್ಲಿ ಇಂಧನಗಳ ಮೇಲೆ ವಿಧಿಸಲಾಗುವ ವಿವಿಧ ತೆರಿಗೆಗಳು ಸೇರಿದಂತೆ ಹಲವು ಕಾರಣಗಳಿವೆ.

ಉಚಿತ ಲಸಿಕೆ ನೀಡುವ ಸಲುವಾಗಿ ಇಂಧನಗಳ ಬೆಲೆ ಏರಿಸಲಾಗುತ್ತಿದೆ ಎಂದ ಕೇಂದ್ರ ಸಚಿವ

ಆದರೆ ಕೇಂದ್ರ ಸಚಿವರೊಬ್ಬರು ದೇಶದ ಜನರಿಗೆ ಉಚಿತವಾಗಿ ಕೋವಿಡ್ 19 ಲಸಿಕೆ ನೀಡುತ್ತಿರುವುದೇ ಇಂಧನಗಳ ಬೆಲೆ ಏರಿಕೆಗೆ ಕಾರಣವೆಂದು ತಿಳಿಸಿದ್ದಾರೆ. ಸಚಿವರ ಈ ಹೇಳಿಕೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವರಾದ ರಾಮೇಶ್ವರ ತೇಲಿರವರು ಈ ಹೇಳಿಕೆ ನೀಡಿದ್ದಾರೆ. ಉಚಿತ ಕೋವಿಡ್ 19 ಲಸಿಕೆ ನೀಡುವ ಸಲುವಾಗಿ ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್ ಬೆಲೆಯನ್ನು ಹೆಚ್ಚಿಸುತ್ತಿದೆ ಎಂದು ರಾಮೇಶ್ವರ್ ತೇಲಿರವರು ಎಎನ್‌ಐಗೆ ತಿಳಿಸಿದ್ದಾರೆ.

ಉಚಿತ ಲಸಿಕೆ ನೀಡುವ ಸಲುವಾಗಿ ಇಂಧನಗಳ ಬೆಲೆ ಏರಿಸಲಾಗುತ್ತಿದೆ ಎಂದ ಕೇಂದ್ರ ಸಚಿವ

ಈ ಬಗ್ಗೆ ಮಾತನಾಡಿರುವ ಅವರು, ಇಂಧನ ಬೆಲೆಗಳು ಹೆಚ್ಚಾಗಿಲ್ಲ. ಆದರೆ ಅವುಗಳ ಮೇಲೆ ವಿಧಿಸುತ್ತಿರುವ ತೆರಿಗೆಗಳು ಅಧಿಕವಾಗಿವೆ. ದೇಶದ ಪ್ರತಿಯೊಬ್ಬ ಪ್ರಜೆಗೂ ಉಚಿತವಾಗಿ ಕೋವಿಡ್ 19 ಲಸಿಕೆ ನೀಡಬೇಕು. ಲಸಿಕೆ ನೀಡುವುದಕ್ಕೆ ಹಣ ಎಲ್ಲಿಂದ ಬರುತ್ತದೆ? ಅದಕ್ಕಾಗಿಯೇ ಇಂಧನಗಳ ಮೇಲೆ ಈ ರೀತಿ ಶುಲ್ಕ ವಿಧಿಸಲಾಗುತ್ತಿದೆ ಎಂದು ಹೇಳಿದರು. ರಾಮೇಶ್ವರ ತೇಲಿರವರು ಅಸ್ಸಾಂನ ದಿಬ್ರುಗಡ್ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.

ಉಚಿತ ಲಸಿಕೆ ನೀಡುವ ಸಲುವಾಗಿ ಇಂಧನಗಳ ಬೆಲೆ ಏರಿಸಲಾಗುತ್ತಿದೆ ಎಂದ ಕೇಂದ್ರ ಸಚಿವ

ಭಾರತದಲ್ಲಿ 130 ಕೋಟಿ ಜನರಿಗೆ ಉಚಿತ ಲಸಿಕೆ ನೀಡುವುದು ಸರ್ಕಾರದ ಕರ್ತವ್ಯ ಎಂದು ಹೇಳುವ ಬದಲು ಅವರು ಈ ರೀತಿ ಹೇಳಿಕೆ ನೀಡಿ ಸಾರ್ವಜನಿಕರ ಕೋಪಕ್ಕೆ ತುತ್ತಾಗಿದ್ದಾರೆ. ಇಷ್ಟು ಮಾತ್ರವಲ್ಲದೇ ಇಂಧನ ಬೆಲೆಯನ್ನು ಪ್ಯಾಕೇಜ್ ಮಾಡಿದ ಕುಡಿಯುವ ನೀರಿನೊಂದಿಗೆ ಹೋಲಿಸಿದ್ದಾರೆ. ಗುಣಮಟ್ಟದ ಪ್ಯಾಕೇಜ್ ಮಾಡಲಾದ ನೀರನ್ನು ಕುಡಿಯಲು ಬಯಸಿದರೆ ಪ್ರತಿ ಬಾಟಲಿಗೆ ರೂ. 100 ಪಾವತಿಸಬೇಕು. ಈಗ ಪೆಟ್ರೋಲ್, ಡೀಸೆಲ್‌ ಪರಿಸ್ಥಿತಿಯೂ ಹಾಗೆ ಇದೆ ಎಂದು ಅವರು ಹೇಳಿದರು.

ಉಚಿತ ಲಸಿಕೆ ನೀಡುವ ಸಲುವಾಗಿ ಇಂಧನಗಳ ಬೆಲೆ ಏರಿಸಲಾಗುತ್ತಿದೆ ಎಂದ ಕೇಂದ್ರ ಸಚಿವ

ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂನಂತಹ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಭಾರತದಲ್ಲಿ ಇಂಧನಗಳ (ಪೆಟ್ರೋಲ್ ಹಾಗೂ ಡೀಸೆಲ್) ಬೆಲೆಯನ್ನು ದಿನ ನಿತ್ಯ ಪರಿಷ್ಕರಿಸುತ್ತವೆ. ಈ ಬೆಲೆಗಳನ್ನು ಅಂತರ್ ರಾಷ್ಟ್ರೀಯ ಕಚ್ಚಾ ತೈಲ ಬೆಲೆ ಹಾಗೂ ರೂಪಾಯಿ ಡಾಲರ್ ವಿನಿಮಯ ದರಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.

ಉಚಿತ ಲಸಿಕೆ ನೀಡುವ ಸಲುವಾಗಿ ಇಂಧನಗಳ ಬೆಲೆ ಏರಿಸಲಾಗುತ್ತಿದೆ ಎಂದ ಕೇಂದ್ರ ಸಚಿವ

ಹೊಸ ತೈಲ ಬೆಲೆಗಳು ಪ್ರತಿ ದಿನ 6 ಗಂಟೆಗೆ ಜಾರಿಗೆ ಬರುತ್ತವೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಸೆಪ್ಟೆಂಬರ್ 24 ರಿಂದ ಡೀಸೆಲ್ ಬೆಲೆಯನ್ನು ಹಾಗೂ ಸೆಪ್ಟೆಂಬರ್ 28 ರಿಂದ ಪೆಟ್ರೋಲ್ ಬೆಲೆಯನ್ನು ಹೆಚ್ಚಿಸುತ್ತಿವೆ. ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಹೆಚ್ಚು ತೆರಿಗೆ ವಿಧಿಸುತ್ತಿರುವುದರಿಂದ ಇವುಗಳ ಬೆಲೆ ಹೆಚ್ಚಾಗುತ್ತಿದೆ. ಇದಲ್ಲದೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಿಸುವ ಇತರ ಅಂಶಗಳಲ್ಲಿ ರಾಜ್ಯ ಸರ್ಕಾರಗಳು ವಿಧಿಸುವ ವ್ಯಾಟ್, ಡೀಲರ್ ಕಮಿಷನ್, ಸರಕು ಶುಲ್ಕ ಇತ್ಯಾದಿಗಳು ಸೇರಿವೆ.

ಉಚಿತ ಲಸಿಕೆ ನೀಡುವ ಸಲುವಾಗಿ ಇಂಧನಗಳ ಬೆಲೆ ಏರಿಸಲಾಗುತ್ತಿದೆ ಎಂದ ಕೇಂದ್ರ ಸಚಿವ

ಕಳೆದ ಎರಡು ವರ್ಷಗಳಿಂದ ಇಂಧನದ ಮೇಲಿನ ಅಬಕಾರಿ ಸುಂಕ ಗಮನಾರ್ಹವಾಗಿ ಹೆಚ್ಚಾಗಿದೆ. ಇದು ಸಹ ಇಂಧನಗಳ ಬೆಲೆ ನಿರಂತರ ಏರಿಕೆಗೆ ಕಾರಣವಾಗಿದೆ. ಈ ವರ್ಷದ ಆರಂಭದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಭಾರೀ ಏರಿಕೆಯಾಗಿತ್ತು. ಈ ಕಾರಣದಿಂದಾಗಿ ಮೊದಲ ಬಾರಿಗೆ ದೇಶದ ಹಲವು ನಗರಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ ರೂ. 100 ಗಳ ಗಡಿ ದಾಟಿತ್ತು.

ಉಚಿತ ಲಸಿಕೆ ನೀಡುವ ಸಲುವಾಗಿ ಇಂಧನಗಳ ಬೆಲೆ ಏರಿಸಲಾಗುತ್ತಿದೆ ಎಂದ ಕೇಂದ್ರ ಸಚಿವ

ಇಂಧನದ ಬೆಲೆಯನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೆ ಪೆಟ್ರೋಲ್, ಡೀಸೆಲ್ ಬೆಲೆಗಳು ಗಮನಾರ್ಹವಾಗಿ ಕಡಿಮೆಯಾಗುತ್ತವೆ. ಆದರೆ ಆದಾಯದ ನಷ್ಟ ಅನುಭವಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಹಲವು ರಾಜ್ಯ ಸರ್ಕಾರಗಳು ಇಂಧನದ ಬೆಲೆಯನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವುದನ್ನು ವಿರೋಧಿಸುತ್ತಿವೆ. ಮತ್ತೊಂದೆಡೆ ಕೇಂದ್ರ ಸರ್ಕಾರವು ಇಂಧನದ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡುವುದಿಲ್ಲವೆಂದು ತಿಳಿಸಿದೆ.

ಉಚಿತ ಲಸಿಕೆ ನೀಡುವ ಸಲುವಾಗಿ ಇಂಧನಗಳ ಬೆಲೆ ಏರಿಸಲಾಗುತ್ತಿದೆ ಎಂದ ಕೇಂದ್ರ ಸಚಿವ

ಪ್ರಪಂಚದಲ್ಲಿ ಪೆಟ್ರೋಲ್, ಡೀಸೆಲ್‌ ದುಬಾರಿಯಾಗಿರುವ ದೇಶಗಳಲ್ಲಿ ಭಾರತವು ಸಹ ಸೇರಿದೆ. ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಮೇಲೆ ಹೆಚ್ಚಿನ ತೆರಿಗೆ ವಿಧಿಸುವುದೇ ಇದಕ್ಕೆ ಪ್ರಮುಖ ಕಾರಣ. ಮದುವೆ ಹಾಗೂ ಇನ್ನಿತರ ಶುಭ ಸಮಾರಂಭಗಳಲ್ಲಿ ಉಡುಗೊರೆಯಾಗಿ ಪೆಟ್ರೋಲ್ ಅಥವಾ ಡೀಸೆಲ್ ನೀಡುವ ಹಲವು ವಿಲಕ್ಷಣ ಘಟನೆಗಳು ಭಾರತದಲ್ಲಿ ನಡೆದಿವೆ, ನಡೆಯುತ್ತಿವೆ.

ಉಚಿತ ಲಸಿಕೆ ನೀಡುವ ಸಲುವಾಗಿ ಇಂಧನಗಳ ಬೆಲೆ ಏರಿಸಲಾಗುತ್ತಿದೆ ಎಂದ ಕೇಂದ್ರ ಸಚಿವ

ಇತ್ತೀಚಿಗಷ್ಟೇ ನಮ್ಮ ಕರ್ನಾಟಕದಲ್ಲಿಯೇ ವಧು ವರರಿಗೆ ಅತಿಥಿಗಳು ಮೂರು ಲೀಟರ್ ಪೆಟ್ರೋಲ್ ಉಡುಗೊರೆಯಾಗಿ ನೀಡಿದ ಬಗ್ಗೆ ವರದಿಗಳಾಗಿದ್ದವು. ಇದರ ಜೊತೆಗೆ ಆಗಾಗ್ಗೆ ಪೆಟ್ರೋಲ್, ಡೀಸೆಲ್ ಕಳ್ಳತನಕ್ಕೆ ಸಂಬಂಧಿಸಿದ ಘಟನೆಗಳು ವರದಿಯಾಗುತ್ತಿವೆ.

Most Read Articles

Kannada
English summary
Union minister says fuel prices are hiked to give free vaccines details
Story first published: Monday, October 18, 2021, 9:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X