ಡ್ರೈವಿಂಗ್ ಲೈಸೆನ್ಸ್ ಪಡೆಯಲು ಹೊಸ ನಿಯಮ ಜಾರಿಗೊಳಿಸಿದ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರವು ಡ್ರೈವಿಂಗ್ ಲೈಸೆನ್ಸ್ ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸಿದೆ. ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯು ಡ್ರೈವಿಂಗ್ ಲೈಸೆನ್ಸ್ ಪಡೆಯಲು ಸದ್ಯ ಇರುವ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಿದೆ.

ಡ್ರೈವಿಂಗ್ ಲೈಸೆನ್ಸ್ ಪಡೆಯಲು ಹೊಸ ನಿಯಮ ಜಾರಿಗೊಳಿಸಿದ ಕೇಂದ್ರ ಸರ್ಕಾರ

ಹೊಸ ನಿಯಮಗಳ ಪ್ರಕಾರ ಖಾಸಗಿ ವಾಹನ ತಯಾರಕ ಕಂಪನಿಗಳು, ಎನ್‌ಜಿಒಗಳು ಹಾಗೂ ಆಟೋಮೊಬೈಲ್ ಸಂಘಗಳು ಸರ್ಕಾರದಿಂದ ಅನುಮೋದಿತ ಚಾಲನಾ ತರಬೇತಿ ಕೇಂದ್ರಗಳನ್ನು ನಡೆಸಲು ಸಾಧ್ಯವಾಗುತ್ತದೆ. ನಿಗದಿತ ತರಬೇತಿಯನ್ನು ಪೂರ್ಣಗೊಳಿಸಿದ ಜನರಿಗೆ ಚಾಲನಾ ಪರವಾನಗಿಗಳನ್ನು ನೀಡಲು ಸಹ ಅವರಿಗೆ ಅವಕಾಶ ನೀಡಲಾಗುತ್ತದೆ.

ಡ್ರೈವಿಂಗ್ ಲೈಸೆನ್ಸ್ ಪಡೆಯಲು ಹೊಸ ನಿಯಮ ಜಾರಿಗೊಳಿಸಿದ ಕೇಂದ್ರ ಸರ್ಕಾರ

ಕೇಂದ್ರ ಸಾರಿಗೆ ಇಲಾಖೆಯು ಬುಧವಾರ ಈ ಕುರಿತು ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ಮಾರ್ಗಸೂಚಿಗಳ ಪ್ರಕಾರ ಚಾಲನಾ ಪರವಾನಗಿ ನೀಡುವ ಹೊಸ ನಿಯಮಗಳ ಜೊತೆಗೆ ಪ್ರಾದೇಶಿಕ ಸಾರಿಗೆ ಕಚೇರಿಗಳು (ಆರ್‌ಟಿಒ) ಚಾಲನಾ ಪರವಾನಗಿ ನೀಡುವ ಪ್ರಕ್ರಿಯೆಯೂ ಮುಂದುವರೆಯಲಿದೆ.

ಡ್ರೈವಿಂಗ್ ಲೈಸೆನ್ಸ್ ಪಡೆಯಲು ಹೊಸ ನಿಯಮ ಜಾರಿಗೊಳಿಸಿದ ಕೇಂದ್ರ ಸರ್ಕಾರ

ಈ ಬಗ್ಗೆ ಮಾಹಿತಿ ನೀಡಿರುವ ಸಾರಿಗೆ ಇಲಾಖೆಯು, ಕಾನೂನುಬದ್ಧ ಸಂಸ್ಥೆಗಳಾದ ಕಂಪನಿಗಳು, ಸಂಘಗಳು, ಸಂಸ್ಥೆಗಳು, ಎನ್‌ಜಿಒಗಳು, ಖಾಸಗಿ ಸಂಸ್ಥೆಗಳು / ಆಟೋಮೊಬೈಲ್ ಸಂಘಗಳು / ವಾಹನ ತಯಾರಕರ ಸಂಘಗಳು / ಸ್ವಾಯತ್ತ ಸಂಸ್ಥೆಗಳು / ಖಾಸಗಿ ವಾಹನ ತಯಾರಕ ಕಂಪನಿಗಳು ಖಾಸಗಿ ಚಾಲನಾ ತರಬೇತಿ ಕೇಂದ್ರಕ್ಕಾಗಿ ಅರ್ಜಿ ಸಲ್ಲಿಸಬಹುದು ಎಂದು ಹೇಳಿದೆ.

ಡ್ರೈವಿಂಗ್ ಲೈಸೆನ್ಸ್ ಪಡೆಯಲು ಹೊಸ ನಿಯಮ ಜಾರಿಗೊಳಿಸಿದ ಕೇಂದ್ರ ಸರ್ಕಾರ

ಸಾರಿಗೆ ಇಲಾಖೆಯ ಮಾರ್ಗಸೂಚಿಗಳ ಪ್ರಕಾರ ವೈದ್ಯಕೀಯ ಸಂಸ್ಥೆಗಳು ಅರ್ಜಿ ಸಲ್ಲಿಸಲು ಮೋಟಾರ್ ವಾಹನ ಕಾಯಿದೆ, 1989 ರ ಅಡಿಯಲ್ಲಿ ಸೂಚಿಸಲಾದಭೂಮಿಯಲ್ಲಿ ಅಗತ್ಯ ಮೂಲಸೌಕರ್ಯ ಅಥವಾ ಸೌಲಭ್ಯಗಳನ್ನು ಹೊಂದಿರಬೇಕು ಎಂದು ಹೇಳಲಾಗಿದೆ.

ಡ್ರೈವಿಂಗ್ ಲೈಸೆನ್ಸ್ ಪಡೆಯಲು ಹೊಸ ನಿಯಮ ಜಾರಿಗೊಳಿಸಿದ ಕೇಂದ್ರ ಸರ್ಕಾರ

ಅಂತಹ ಸಂಸ್ಥೆಗಳು ಪರವಾನಗಿಗಾಗಿ ತಮ್ಮ ಪಾರದರ್ಶಕತೆಯ ಬಗ್ಗೆ ಸರ್ಕಾರಕ್ಕೆ ಸಾಬೀತು ಪಡಿಸಬೇಕು. ರಾಜ್ಯಗಳಲ್ಲಿ ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ತರಬೇತಿ ಕೇಂದ್ರವನ್ನು ನಡೆಸಲು ಸಾಕಷ್ಟು ಸಂಪನ್ಮೂಲಗಳನ್ನು ಹೊಂದಿರುವ ಬಗ್ಗೆ ಅರ್ಜಿದಾರನು ತನ್ನ ಆರ್ಥಿಕ ಸಾಮರ್ಥ್ಯವನ್ನು ಪ್ರದರ್ಶಿಸ ಬೇಕು ಎಂದು ಮಾರ್ಗಸೂಚಿಗಳಲ್ಲಿ ಹೇಳಲಾಗಿದೆ.

ಡ್ರೈವಿಂಗ್ ಲೈಸೆನ್ಸ್ ಪಡೆಯಲು ಹೊಸ ನಿಯಮ ಜಾರಿಗೊಳಿಸಿದ ಕೇಂದ್ರ ಸರ್ಕಾರ

ಸಂಸ್ಥೆಯು ಚಾಲನಾ ತರಬೇತಿ ಕೇಂದ್ರಕ್ಕಾಗಿ ಅರ್ಜಿಯನ್ನು ಸಲ್ಲಿಸಿದ ನಂತರ, ಸಂಬಂಧಪಟ್ಟ ಪ್ರಾಧಿಕಾರವು ಅರ್ಜಿಯನ್ನು ಸ್ವೀಕರಿಸಿದ ಅರವತ್ತು ದಿನಗಳಲ್ಲಿ ಪ್ರಕ್ರಿಯೆಯನ್ನು ಪೂರ್ಣಗೊಳಿಸ ಬೇಕಾಗುತ್ತದೆ.

ಡ್ರೈವಿಂಗ್ ಲೈಸೆನ್ಸ್ ಪಡೆಯಲು ಹೊಸ ನಿಯಮ ಜಾರಿಗೊಳಿಸಿದ ಕೇಂದ್ರ ಸರ್ಕಾರ

ಮಾನ್ಯತೆ ಪಡೆದ ತರಬೇತಿ ಕೇಂದ್ರವು ವಾರ್ಷಿಕ ಕಾರ್ಯಕ್ಷಮತೆಯ ವರದಿಯನ್ನು ಆಯಾ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ (ಆರ್‌ಟಿ‌ಒ) / ಜಿಲ್ಲಾ ಸಾರಿಗೆ ಕಚೇರಿಗಳಿಗೆ (ಡಿ‌ಟಿ‌ಒ) ಸಲ್ಲಿಸಬೇಕು.

ಡ್ರೈವಿಂಗ್ ಲೈಸೆನ್ಸ್ ಪಡೆಯಲು ಹೊಸ ನಿಯಮ ಜಾರಿಗೊಳಿಸಿದ ಕೇಂದ್ರ ಸರ್ಕಾರ

ಈ ರೀತಿ ಮಾನ್ಯತೆ ಪಡೆದ ಕೇಂದ್ರಗಳ ಕಾರ್ಯಾಚರಣೆಗೆ ಕೇಂದ್ರ ಸರ್ಕಾರವು ಯಾವುದೇ ಅನುದಾನವನ್ನು ನೀಡುವುದಿಲ್ಲ. ಆದರೆ ಕಾರ್ಪೊರೇಟ್ ಕೇಂದ್ರ ಅಥವಾ ರಾಜ್ಯ ಸರ್ಕಾರದ ಯಾವುದೇ ಯೋಜನೆಯಡಿ ಸಂಸ್ಥೆಗಳು ಸಿಎಸ್‌ಆರ್ ಅಡಿಯಲ್ಲಿ ಬೆಂಬಲವನ್ನು ಪಡೆಯಬಹುದು.

ಡ್ರೈವಿಂಗ್ ಲೈಸೆನ್ಸ್ ಪಡೆಯಲು ಹೊಸ ನಿಯಮ ಜಾರಿಗೊಳಿಸಿದ ಕೇಂದ್ರ ಸರ್ಕಾರ

ಇದರ ಜೊತೆಗೆ ಮಾನ್ಯತೆ ಪಡೆದ ಕೇಂದ್ರಗಳು ತರಬೇತಿಯ ಪಠ್ಯಕ್ರಮ, ರಚನೆ, ಸಮಯ ಹಾಗೂ ಕೆಲಸದ ದಿನಗಳ ಮಾಹಿತಿಯನ್ನು ಒಳಗೊಂಡಿರುವ ಆನ್‌ಲೈನ್ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಬೇಕು ಎಂದು ಮಾರ್ಗಸೂಚಿಗಳಲ್ಲಿ ಹೇಳಲಾಗಿದೆ.

ಡ್ರೈವಿಂಗ್ ಲೈಸೆನ್ಸ್ ಪಡೆಯಲು ಹೊಸ ನಿಯಮ ಜಾರಿಗೊಳಿಸಿದ ಕೇಂದ್ರ ಸರ್ಕಾರ

ಪೋರ್ಟಲ್ ನಲ್ಲಿ ತರಬೇತಿ ಪಡೆಯುತ್ತಿರುವವರ ಮಾಹಿತಿ, ತರಬೇತಿ ಪಡೆದವರ ಮಾಹಿತಿ, ತರಬೇತುದಾರರ ವಿವರ, ತರಬೇತಿಯ ಫಲಿತಾಂಶ, ಲಭ್ಯವಿರುವ ಸೌಲಭ್ಯಗಳು, ರಜಾದಿನಗಳ ಪಟ್ಟಿ, ತರಬೇತಿ ಶುಲ್ಕ ಇತ್ಯಾದಿಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಹೇಳಲಾಗಿದೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Union transport ministry allows auto makers ngos to run driving training centers details
Story first published: Thursday, August 5, 2021, 18:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X