ಆನ್‌ಲೈನ್‌ ಮೂಲಕವೇ ದೊರೆಯಲಿವೆ ಆರ್‌ಟಿಒ ಕಚೇರಿಯ ಈ 18 ಸೇವೆಗಳು

ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರವು ಇತ್ತೀಚೆಗೆ ಆರ್‌ಟಿಒ ಕಚೇರಿಗಳಲ್ಲಿ ಅನಗತ್ಯ ಜನದಟ್ಟಣೆ ಉಂಟಾಗುವುದನ್ನು ತಪ್ಪಿಸಲು ಕೆಲವು ಸೇವೆಗಳನ್ನು ಆನ್‌ಲೈನ್‌ ಮೂಲಕ ನೀಡುವುದಾಗಿ ತಿಳಿಸಿತು. ಅದರಂತೆ ಆರ್‌ಟಿಒ ಕಚೇರಿಗಳ ಕೆಲವು ಪ್ರಮುಖ ಸೇವೆಗಳನ್ನು ಆನ್‌ಲೈನ್‌ಗೆ ವರ್ಗಾಯಿಸಲಾಯಿತು.

ಆನ್‌ಲೈನ್‌ ಮೂಲಕವೇ ದೊರೆಯಲಿವೆ ಆರ್‌ಟಿಒ ಕಚೇರಿಯ ಈ 18 ಸೇವೆಗಳು

ವಿಳಾಸ ಬದಲಾವಣೆ, ದಾಖಲೆಗಳ ನಕಲು ಪ್ರತಿ, ಅಂತರರಾಷ್ಟ್ರೀಯ ಚಾಲನಾ ಪರವಾನಗಿಗಾಗಿ ಅರ್ಜಿ ಸಲ್ಲಿಕೆ ಸೇರಿದಂತೆ ಕೆಲವು ಸೇವೆಗಳನ್ನು ಆನ್‌ಲೈನ್‌ ಮೂಲಕ ಪಡೆಯಬಹುದು. ಇದರಿಂದಾಗಿ ದೆಹಲಿಯ ಆರ್‌ಟಿಒ ಕಚೇರಿಗಳಲ್ಲಿ ಜನದಟ್ಟಣೆ ಕಡಿಮೆಯಾಗಿದೆ ಎಂದು ಹೇಳಲಾಗಿದೆ. ಹೆಚ್ಚಿನ ಆರ್‌ಟಿಒ ಸೇವೆಗಳನ್ನು ಆನ್‌ಲೈನ್‌ ಮೂಲಕ ನೀಡುವುದರಿಂದ ಜನದಟ್ಟಣೆ ಕಡಿಮೆಯಾಗುತ್ತದೆ ಎಂಬುದು ಸಾರಿಗೆ ಅಧಿಕಾರಿಗಳ ಅಭಿಪ್ರಾಯ.

ಆನ್‌ಲೈನ್‌ ಮೂಲಕವೇ ದೊರೆಯಲಿವೆ ಆರ್‌ಟಿಒ ಕಚೇರಿಯ ಈ 18 ಸೇವೆಗಳು

ದೆಹಲಿ ಸರ್ಕಾರವು ಆನ್‌ಲೈನ್‌ ಮೂಲಕ ಆರ್‌ಟಿಒ ಸೇವೆಗಳನ್ನು ಆರಂಭಿಸಿದೆ. ಇದರಿಂದಾಗಿ ಕರೋನಾ ವೈರಸ್ ಹರಡುವುದನ್ನು ತಡೆಯಬಹುದು. ಈಗ ಕೇಂದ್ರ ಸರ್ಕಾರವು ಸಹ ದೆಹಲಿ ಸರ್ಕಾರದ ಹಾದಿಯನ್ನೇ ತುಳಿಯುತ್ತಿದೆ ಎಂದು ವರದಿಯಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಆನ್‌ಲೈನ್‌ ಮೂಲಕವೇ ದೊರೆಯಲಿವೆ ಆರ್‌ಟಿಒ ಕಚೇರಿಯ ಈ 18 ಸೇವೆಗಳು

ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯು ದೇಶಾದ್ಯಂತ ಆನ್‌ಲೈನ್ ಮೂಲಕ ಆರ್‌ಟಿಒ ಸೇವೆಯನ್ನು ಆರಂಭಿಸುವುದಾಗಿ ಘೋಷಿಸಿದೆ. ಜನರಿಗೆ ಅನಗತ್ಯ ತೊಂದರೆಯಾಗುವುದನ್ನು ತಡೆಯಲು ಈ ಯೋಜನೆಯನ್ನು ದೇಶಾದ್ಯಂತ ಜಾರಿಗೆ ತರಲಾಗುತ್ತದೆ.

ಆನ್‌ಲೈನ್‌ ಮೂಲಕವೇ ದೊರೆಯಲಿವೆ ಆರ್‌ಟಿಒ ಕಚೇರಿಯ ಈ 18 ಸೇವೆಗಳು

ಇದರಿಂದಾಗಿ ಚಾಲನಾ ಪರವಾನಗಿ ನವೀಕರಣ, ಚಾಲನಾ ತರಬೇತಿ ಪರವಾನಗಿಗಾಗಿ ಅರ್ಜಿ, ವಾಹನ ನೋಂದಣಿಯಂತಹ ಹಲವು ಪ್ರಮುಖ ಸೇವೆಗಳಿಗಾಗಿ ಆರ್‌ಟಿಒ ಕಚೇರಿಗಳಿಗೆ ತೆರಳುವುದು ತಪ್ಪಲಿದೆ. ದೇಶಾದ್ಯಂತ ಈ ಸೇವೆಯನ್ನು ಜಾರಿಗೊಳಿಸಲಾಗಿದ್ದು, ಸಾರ್ವಜನಿಕರು ಆನ್‌ಲೈನ್‌ ಮೂಲಕ ಈ ಸೇವೆಗಳನ್ನು ಪಡೆಯಬಹುದು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಆನ್‌ಲೈನ್‌ ಮೂಲಕವೇ ದೊರೆಯಲಿವೆ ಆರ್‌ಟಿಒ ಕಚೇರಿಯ ಈ 18 ಸೇವೆಗಳು

ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯು ಈ ಸೇವೆಗಳನ್ನು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವೆಂದು ತಿಳಿಸಿದೆ. ಆಧಾರ್ ಕಾರ್ಡ್ ಇರುವವರು ಮಾತ್ರ ಆರ್‌ಟಿಒಗೆ ಹೋಗದೇ ಆನ್‌ಲೈನ್‌ ಮೂಲಕ ಈ ಸೇವೆಗಳನ್ನು ಪಡೆಯಬಹುದು.

ಆನ್‌ಲೈನ್‌ ಮೂಲಕವೇ ದೊರೆಯಲಿವೆ ಆರ್‌ಟಿಒ ಕಚೇರಿಯ ಈ 18 ಸೇವೆಗಳು

18 ರೀತಿಯ ಸೇವೆಗಳನ್ನು ಆನ್‌ಲೈನ್‌ ಮೂಲಕ ನೀಡಲಾಗುತ್ತದೆ. ಅವುಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ.

ನಕಲಿ ಚಾಲನಾ ಪರವಾನಗಿಗಾಗಿ ಅರ್ಜಿ ಸಲ್ಲಿಕೆ

ಚಾಲನಾ ಪರವಾನಗಿ ಹಾಗೂ ನೋಂದಣಿ ಪ್ರಮಾಣಪತ್ರದಲ್ಲಿ ವಿಳಾಸ ಬದಲಾವಣೆ

ಅಂತರರಾಷ್ಟ್ರೀಯ ಚಾಲನಾ ಪರವಾನಗಿ ಪಡೆಯಲು ಚಾಲನಾ ಪರವಾನಗಿಗಾಗಿ ಅರ್ಜಿ ಸಲ್ಲಿಕೆ

ಮೋಟಾರು ವಾಹನದ ತಾತ್ಕಾಲಿಕ ನೋಂದಣಿಗೆ ಅರ್ಜಿ

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಆನ್‌ಲೈನ್‌ ಮೂಲಕವೇ ದೊರೆಯಲಿವೆ ಆರ್‌ಟಿಒ ಕಚೇರಿಯ ಈ 18 ಸೇವೆಗಳು

ನೋಂದಾಯಿತ ವಾಹನದ ನಕಲು ಪ್ರಮಾಣಪತ್ರಕ್ಕಾಗಿ ಅರ್ಜಿ

ನೋಂದಣಿ ಪ್ರಮಾಣಪತ್ರ ಪಡೆಯಲು ಎನ್‌ಒಸಿ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸುವುದು

ಮೋಟಾರು ವಾಹನದ ಮಾಲೀಕತ್ವದ ವರ್ಗಾವಣೆಗೆ ಅರ್ಜಿ

ಆನ್‌ಲೈನ್‌ ಮೂಲಕವೇ ದೊರೆಯಲಿವೆ ಆರ್‌ಟಿಒ ಕಚೇರಿಯ ಈ 18 ಸೇವೆಗಳು

ನೋಂದಣಿ ಪ್ರಮಾಣಪತ್ರದಲ್ಲಿ ವಿಳಾಸ ಬದಲಾವಣೆ ಮಾಹಿತಿಯನ್ನು ಸೇರಿಸುವುದು - ಸೇರಿದಂತೆ ಹಲವು ಪ್ರಮುಖ ಸೇವೆಗಳನ್ನು ಆನ್‌ಲೈನ್‌ ಮೂಲಕ ಪಡೆಯಬಹುದು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಆನ್‌ಲೈನ್‌ ಮೂಲಕವೇ ದೊರೆಯಲಿವೆ ಆರ್‌ಟಿಒ ಕಚೇರಿಯ ಈ 18 ಸೇವೆಗಳು

ಈ ಸೇವೆಗಳನ್ನು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಚಾಲಕ ಮೊದಲು ಆನ್‌ಲೈನ್ ಮೂಲಕ ನೋಂದಾಯಿಸಿಕೊಳ್ಳಬೇಕು. ಮೊದಲು ಆಧಾರ್ ಸಂಖ್ಯೆಯೊಂದಿಗೆ ಲಾಗ್ ಇನ್ ಆಗಬೇಕು. ನಂತರ ಲಭ್ಯವಿರುವ ಸೇವೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಗಮನಿಸಿ: ಈ ಲೇಖನದಲ್ಲಿ ಸಾಂದರ್ಭಿಕ ಚಿತ್ರಗಳನ್ನು ಬಳಸಲಾಗಿದೆ.

Most Read Articles

Kannada
English summary
Union transport ministry offers 18 important RTO services through online. Read in Kannada.
Story first published: Friday, March 5, 2021, 19:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X