ಬೈಕ್‍‍ಗಳನ್ನು ಹಾಳು ಮಾಡುತ್ತವೆ ಈ ಮಾಡಿಫೈ ಬಿಡಿಭಾಗಗಳು..!

ಬೈಕ್‍‍ಗಳು ಭಾರತದ ರಸ್ತೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತವೆ. ಭಾರತದಲ್ಲಿ ಬೈಕ್ ಬಿಡಿಭಾಗಗಳ ಬಹುದೊಡ್ಡ ಮಾರುಕಟ್ಟೆಯಿದೆ. ಜನರು ಈ ಬಿಡಿಭಾಗಗಳನ್ನು ಹಿಂದೆ ಮುಂದೆ ಯೋಚನೆ ಮಾಡದೆ ಖರೀದಿಸುತ್ತಾರೆ.

ಬೈಕ್‍‍ಗಳನ್ನು ಹಾಳು ಮಾಡುತ್ತವೆ ಈ ಮಾಡಿಫೈ ಬಿಡಿಭಾಗಗಳು..!

ಭಾರತದ ಮೋಟಾರು ವಾಹನ ಕಾಯ್ದೆಯ ಪ್ರಕಾರ ಬೈಕ್‍‍ಗಳನ್ನು ಮಾಡಿಫೈಗೊಳಿಸುವಂತಿಲ್ಲ. ಬೈಕ್‍‍ಗಳನ್ನು ಮಾಡಿಫೈಗೊಳಿಸುವುದು ಕಾನೂನುಬಾಹಿರ. ಕಾನೂನುಬಾಹಿರ ಮಾತ್ರವಲ್ಲದೇ ಮಾಡಿಫೈನಲ್ಲಿ ಅಳವಡಿಸುವ ಕೆಲವೊಂದು ಬಿಡಿಭಾಗಗಳು ಬೈಕ್ ಅನ್ನು ಹಾಳು ಮಾಡುತ್ತವೆ. ಯಾವ ಹೆಚ್ಚುವರಿ ಬಿಡಿಭಾಗಗಳಿಂದ ಬೈಕ್ ಹಾಳಾಗುತ್ತದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಬೈಕ್‍‍ಗಳನ್ನು ಹಾಳು ಮಾಡುತ್ತವೆ ಈ ಮಾಡಿಫೈ ಬಿಡಿಭಾಗಗಳು..!

ಬೃಹತ್ ಗಾತ್ರದ ಎಕ್ಸಾಸ್ಟ್

ಮಾರಾಟವಾದ ನಂತರ ಯಾವುದೇ ವಾಹನಗಳಲ್ಲಿ ಎಕ್ಸಾಸ್ಟ್ ಗಳನ್ನು ಮಾಡಿಫೈ ಮಾಡುವಂತಿಲ್ಲ. ಆದರೂ ಕೆಲವರು ಬೃಹತ್ ಗಾತ್ರದ ಎಕ್ಸಾಸ್ಟ್ ಗಳನ್ನು ತಮ್ಮ ಬೈಕ್‍‍ಗಳಲ್ಲಿ ಅಳವಡಿಸಿಕೊಳ್ಳುತ್ತಾರೆ. ಟ್ರಾಕ್ಟರ್ ರೀತಿಯ ಎಕ್ಸಾಸ್ಟ್ ಗಳು ಟ್ರೆಂಡ್ ಆಗಿದ್ದು, ಹಳ್ಳಿಗಳ ಜನರು ಇವುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ.

ಬೈಕ್‍‍ಗಳನ್ನು ಹಾಳು ಮಾಡುತ್ತವೆ ಈ ಮಾಡಿಫೈ ಬಿಡಿಭಾಗಗಳು..!

ಹೆಚ್ಚು ಶಬ್ದವನ್ನುಂಟು ಮಾಡುವ ಮಾಡಿಫೈಗೊಳಿಸಲಾದ ಎಕ್ಸಾಸ್ಟ್ ಗಳು ಬೈಕ್ ಸವಾರರಿಗೆ ಸಾವನ್ನುಂಟು ಮಾಡುವ ಸಾಧ್ಯತೆಗಳಿರುತ್ತವೆ. ಈ ಎಕ್ಸಾಸ್ಟ್ ಗಳು ಹೆಚ್ಚು ಬಿಸಿಯಾಗುವುದರ ಜೊತೆಗೆ ಬೈಕ್ ಸವಾರನ ಗಮನವನ್ನು ಬೇರೆ ಕಡೆಗೆ ಸೆಳೆಯುತ್ತವೆ.

ಬೈಕ್‍‍ಗಳನ್ನು ಹಾಳು ಮಾಡುತ್ತವೆ ಈ ಮಾಡಿಫೈ ಬಿಡಿಭಾಗಗಳು..!

ಅಗಲವಾದ ಟಯರ್‍‍ಗಳು

ಹೆಚ್ಚು ಅಗಲದ ಟಯರ್‍‍ಗಳಿರುವ ಬೈಕ್‍‍ಗಳು ರಸ್ತೆಗಳಲ್ಲಿ ವಿಭಿನ್ನವಾಗಿ ಕಾಣುತ್ತವೆ. ಟಯರ್‍‍ಗಳು ಹೆಚ್ಚು ಅಗಲವಾಗಿರುವ ಕಾರಣಕ್ಕೆ ಬೈಕಿನ ತೂಕವು ಹೆಚ್ಚಾಗಿ ಟರ್ನಿಂಗ್‍‍ಗಳಲ್ಲಿ ಈ ಬೈಕ್‍‍ಗಳನ್ನು ತಿರುಗಿಸುವುದಕ್ಕೆ ತೊಂದರೆಯಾಗುತ್ತದೆ. ಇವುಗಳ ಜೊತೆಗೆ ಈ ಬೈಕುಗಳ ಮೈಲೇಜ್ ಹಾಗೂ ಪರ್ಫಾಮೆನ್ಸ್ ಮೇಲೆ ಪರಿಣಾಮ ಉಂಟಾಗುತ್ತದೆ.

ಬೈಕ್‍‍ಗಳನ್ನು ಹಾಳು ಮಾಡುತ್ತವೆ ಈ ಮಾಡಿಫೈ ಬಿಡಿಭಾಗಗಳು..!

ಹೆಚ್ಚು ಲೈಟ್‍‍ಗಳು

ಆಕ್ಸಿಲರಿ ಲೈಟ್‍‍ಗಳನ್ನು ಬೈಕ್‍‍ಗಳಲ್ಲಿ ಅಳವಡಿಸಿದರೆ ಕತ್ತಲಿರುವ ರಸ್ತೆಗಳಲ್ಲಿ ಹೆಚ್ಚು ಉಪಯೋಗವಾಗುತ್ತದೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ಈ ಲೈಟ್‍‍ಗಳನ್ನು ಅಳವಡಿಸಿಕೊಂಡರೆ ಎದುರುಗಡೆಯಿಂದ ಬರುತ್ತಿರುವ ಬೇರೆ ವಾಹನಗಳ ಸವಾರರ ಕಣ್ಣುಗಳಿಗೆ ಬೆಳಕು ಬಿದ್ದು ರಸ್ತೆ ಕಾಣದಂತಾಗಿ ಅಪಘಾತಗಳು ಸಂಭವಿಸುವ ಸಾಧ್ಯತೆಗಳಿರುತ್ತವೆ. ಹೆಚ್ಚುವರಿ ಲೈಟ್‍‍ಗಳು ಹೆಚ್ಚಿನ ಪ್ರಮಾಣದಲ್ಲಿ ಬ್ಯಾಟರಿಯನ್ನು ಬಳಸುತ್ತವೆ.

ಬೈಕ್‍‍ಗಳನ್ನು ಹಾಳು ಮಾಡುತ್ತವೆ ಈ ಮಾಡಿಫೈ ಬಿಡಿಭಾಗಗಳು..!

ಚಿತ್ರ ವಿಚಿತ್ರ ಸೀಟುಗಳು

ಕುರಿಯ ಉಣ್ಣೆ ಅಥವಾ ರೇಷ್ಮೆ ವಸ್ತುಗಳಿಂದ ಮಾಡಲಾದ ಸೀಟುಗಳನ್ನು ಅಳವಡಿಸುವುದರಿಂದ ಸವಾರನಿಗೆ ಬೈಕ್‍‍ಗಳ ಮೇಲೆ ಗ್ರಿಪ್ ಸಿಗುವುದಿಲ್ಲ. ಸಡನ್ನಾಗಿ ಬ್ರೇಕ್ ಹಾಕಿದಾಗ ಬೈಕ್ ಸವಾರನು ಕೆಳಗೆ ಬೀಳುವ ಸಾಧ್ಯತೆಗಳಿವೆ. ಮಾರಾಟದ ವೇಳೆ ನೀಡಲಾಗುವ ಸೀಟುಗಳನ್ನು ಗ್ರಿಪ್ ಸಿಗುವಂತೆ ತಯಾರಿಸಲಾಗಿರುತ್ತದೆ.

ಬೈಕ್‍‍ಗಳನ್ನು ಹಾಳು ಮಾಡುತ್ತವೆ ಈ ಮಾಡಿಫೈ ಬಿಡಿಭಾಗಗಳು..!

ಕಿರಿಕಿರಿ ಉಂಟು ಮಾಡುವ ಹಾರ್ನ್‍‍ಗಳು

ಹೆಚ್ಚು ಶಬ್ದವನ್ನುಂಟು ಮಾಡುವ ಹಾರ್ನ್‍ಗಳ ಬಳಕೆಯನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಇವುಗಳಿಂದ ಜನರ ಆರೋಗ್ಯದ ಮೇಲೆ ಸಮಸ್ಯೆ ಉಂಟಾಗಿ ಕಿವುಡುತನ ಉಂಟಾಗಬಹುದೆಂಬ ಕಾರಣಕ್ಕೆ ಇವುಗಳ ಬಳಕೆಯನ್ನು ನಿಷೇಧಿಸಲಾಗಿದೆ. ಇವುಗಳಿಂದ ವಾಹನದಲ್ಲಿರುವ ಎಲೆಕ್ಟ್ರಿಕ್ ವಿಫಲವಾಗಲಿದೆ.

ಬೈಕ್‍‍ಗಳನ್ನು ಹಾಳು ಮಾಡುತ್ತವೆ ಈ ಮಾಡಿಫೈ ಬಿಡಿಭಾಗಗಳು..!

ಅಗಲವಾದ ಕ್ರಾಶ್ ಗಾರ್ಡ್

ಹೆಚ್ಚು ಅಗಲವಾದ ಕ್ರಾಶ್‍‍ಗಾರ್ಡ್‍‍ಗಳನ್ನು ಅಳವಡಿಸಿಕೊಳ್ಳುವುದರಿಂದ ಬೈಕ್‍‍ಗಳ ಹ್ಯಾಂಡ್ಲಿಂಗ್‍‍ಗಳಿಗೆ ತೊಂದರೆಯಾಗಲಿದೆ. ಇದರಿಂದ ಬೈಕ್ ಸವಾರ ನಿಯಂತ್ರಣ ತಪ್ಪಿ ಅಪಘಾತಗಳಿಗೆ ದಾರಿ ಮಾಡಿಕೊಡುತ್ತದೆ.

ಬೈಕ್‍‍ಗಳನ್ನು ಹಾಳು ಮಾಡುತ್ತವೆ ಈ ಮಾಡಿಫೈ ಬಿಡಿಭಾಗಗಳು..!

ಮಡ್‍‍ಗಾರ್ಡ್‍‍ಗಳನ್ನು ತೆಗೆದುಹಾಕುವುದು

ಬೈಕ್‍‍ಗಳ ಹಿಂಭಾಗದಲ್ಲಿರುವ ಮಡ್‍‍ಗಾರ್ಡ್‍‍ಗಳು ಕುಳಿತುಕೊಳ್ಳಲು ಆರಾಮದಾಯಕವಾಗಿರುವುದರ ಜೊತೆಗೆ ಬೈಕಿಗೆ ತನ್ನದೇ ಆದ ಲುಕ್ ನೀಡುತ್ತವೆ. ಮಡ್‍‍ಗಾರ್ಡ್‍‍ಗಳಿದ್ದರೆ ಮಳೆಗಾಲದಲ್ಲಿ ಮಳೆ ನೀರು ಬೈಕ್ ಸವಾರನ ಮೇಲೆ ಬೀಳದಂತೆ ತಡೆಯುತ್ತವೆ. ಕೆಲವರು ಹುಚ್ಚುತನದಿಂದ ಬೈಕ್‍‍ಗಳ ಹಿಂಭಾಗದಲ್ಲಿರುವ ಮಡ್‍‍ಗಾರ್ಡ್‍‍ಗಳನ್ನು ತೆಗೆಯುತ್ತಿದ್ದಾರೆ.

Most Read Articles

Kannada
English summary
Unnecessary motorcycle accessories modifications. Read in Kannada.
Story first published: Monday, January 27, 2020, 11:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X