ಪುಡಿಪುಡಿಯಾದವು ಕುಖ್ಯಾತ ಗ್ಯಾಂಗ್ ಸ್ಟರ್ ಕಾರುಗಳು

ಉತ್ತರ ಪ್ರದೇಶ ಪೊಲೀಸರು ರೌಡಿಗಳ ಜೊತೆಗೆ ನಡೆದ ಗುಂಡಿನ ಚಕಮಕಿಯಲ್ಲಿ ಹತರಾಗಿದ್ದಾರೆ. ಈ ಘಟನೆಯ ನಂತರ ಪೊಲೀಸರು ಮುಖ್ಯ ಆರೋಪಿ ವಿಕಾಸ್ ದುಬೆಗಾಗಿ ಹುಡುಕಾಟವನ್ನು ತೀವ್ರಗೊಳಿಸಿದ್ದಾರೆ.

ಪುಡಿಪುಡಿಯಾದವು ಕುಖ್ಯಾತ ಗ್ಯಾಂಗ್ ಸ್ಟರ್ ಕಾರುಗಳು

ವಿಕಾಸ್ ದುಬೆಯ ಜಾಲವನ್ನು ಬುಡಸಮೇತ ನಿರ್ಮೂಲ ಮಾಡಲು ಉತ್ತರ ಪ್ರದೇಶ ಪೊಲೀಸರು ಪಣತೊಟ್ಟಿದ್ದಾರೆ. ವಿಕಾಸ್ ದುಬೆಗೆ ಸೇರಿದ ಆಸ್ತಿಗಳನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಕಾನ್ಪುರ ಜಿಲ್ಲೆಯ ಬಿಕ್ರು ಗ್ರಾಮದಲ್ಲಿರುವ ವಿಕಾಸ್ ದುಬೆಗೆ ಸೇರಿದ ಮನೆಯನ್ನು ನೆಲಸಮ ಮಾಡಲು ಮುಂದಾಗಿದ್ದಾರೆ. ವಿಕಾಸ್ ದುಬೆ ಜೆಸಿಬಿಯನ್ನು ಬಳಸಿ ರಸ್ತೆಯನ್ನು ಹಾಳುಗೆಡವಿ ಪೊಲೀಸರು ಬರುವ ಹಾದಿಯನ್ನು ಬಂದ್ ಮಾಡಿದ್ದ ಎಂದು ಹೇಳಲಾಗಿದೆ.

ಪುಡಿಪುಡಿಯಾದವು ಕುಖ್ಯಾತ ಗ್ಯಾಂಗ್ ಸ್ಟರ್ ಕಾರುಗಳು

ಪೊಲೀಸರು ಬೇರೆಡೆಯಿಂದ ಜೆಸಿಬಿ ತರಿಸಿ ದುಬೆಗೆ ಸೇರಿದ ಮನೆಯನ್ನು ನೆಲಸಮ ಮಾಡಿದ್ದಾರೆ. ಈ ವೇಳೆ ರೌಡಿ ವಿಕಾಸ್ ದುಬೆಗೆ ಸೇರಿದ ಎರಡು ಕಾರುಗಳು ಮನೆಯೊಳಗಿದ್ದವು. ಪೊಲೀಸರು ಇದೇ ಜೆಸಿಬಿಯಿಂದ ಆ ಕಾರುಗಳನ್ನು ನಾಶಪಡಿಸಿದ್ದಾರೆ.

MOST READ:ಪೊಲೀಸರಿಗೆ ತಲೆ ನೋವು ತಂದಿಟ್ಟ ಸೀಜ್ ಆದ ವಾಹನಗಳು

ಪುಡಿಪುಡಿಯಾದವು ಕುಖ್ಯಾತ ಗ್ಯಾಂಗ್ ಸ್ಟರ್ ಕಾರುಗಳು

ಒಂದು ಮಹೀಂದ್ರಾ ಸ್ಕಾರ್ಪಿಯೋ ಆಗಿದ್ದರೆ, ಮತ್ತೊಂದು ಟೊಯೊಟಾ ಫಾರ್ಚೂನರ್ ಕಾರು. ಈ ಎರಡೂ ದುಬಾರಿ ಬೆಲೆಯ ಎಸ್ ಯುವಿಗಳು. ರೌಡಿ ದುಬೆ ಕಾನ್ಪುರದಿಂದ ಪರಾರಿಯಾಗುವ ಮುನ್ನ ಈ ಕಾರುಗಳನ್ನು ಬಳಸುತ್ತಿದ್ದ ಎಂದು ಹೇಳಲಾಗಿದೆ.

ಪುಡಿಪುಡಿಯಾದವು ಕುಖ್ಯಾತ ಗ್ಯಾಂಗ್ ಸ್ಟರ್ ಕಾರುಗಳು

ಈ ಎರಡೂ ಕಾರುಗಳು ದುಬೆಯ ಮನೆಯಲ್ಲಿದ್ದ ಕಾರಣಕ್ಕೆ ಪೊಲೀಸರು ಇವುಗಳನ್ನು ನಾಶಪಡಿಸಿದ್ದಾರೆ. ಮಹೀಂದ್ರಾ ಸ್ಕಾರ್ಪಿಯೋವನ್ನು ಪೂರ್ತಿಯಾಗಿ ನಾಶಪಡಿಸಲಾಗಿದ್ದರೆ, ಟೊಯೊಟಾ ಫಾರ್ಚೂನರ್ ಕಾರಿನ ರೂಫ್ ಸಂಪೂರ್ಣವಾಗಿ ನಾಶವಾಗಿದೆ.

MOST READ:ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಆಂಬ್ಯುಲೆನ್ಸ್ ಪಡೆದ ಜಗನ್ ಸರ್ಕಾರ

ಪುಡಿಪುಡಿಯಾದವು ಕುಖ್ಯಾತ ಗ್ಯಾಂಗ್ ಸ್ಟರ್ ಕಾರುಗಳು

ಪೊಲೀಸ್ ಮೂಲಗಳ ಪ್ರಕಾರ ದುಬೆ 2013ರಲ್ಲಿ ಈ ಮನೆಯನ್ನು ನಿರ್ಮಿಸಿದ್ದ. ಈ ಮನೆ ಸುಮಾರು 12 ಅಡಿ ಉದ್ದ ಹಾಗೂ ಅಗಲವನ್ನು ಹೊಂದಿದೆ. ಈ ಮನೆಯಿಂದಲೇ ದುಬೆ ಹಲವಾರು ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎಂದು ವರದಿಯಾಗಿದೆ.

ಪುಡಿಪುಡಿಯಾದವು ಕುಖ್ಯಾತ ಗ್ಯಾಂಗ್ ಸ್ಟರ್ ಕಾರುಗಳು

ಸದ್ಯಕ್ಕೆ ದುಬೆ ವಿರುದ್ಧ 60ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ವಿಕಾಸ್ ದುಬೆ ಈ ಗ್ರಾಮದಲ್ಲಿ ಅಡಗಿದ್ದಾನೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಪೊಲೀಸರು ಬಿಕ್ರು ಗ್ರಾಮದಲ್ಲಿ ಪಥ ಸಂಚಲನ ನಡೆಸಿದ್ದರು.

MOSTREAD: ಕೆಟ್ಟು ನಿಂತ ವಾಹನಗಳನ್ನು ತಳ್ಳುವ ಜನಪ್ರಿಯ ವಿಧಾನವಿದು

ಪುಡಿಪುಡಿಯಾದವು ಕುಖ್ಯಾತ ಗ್ಯಾಂಗ್ ಸ್ಟರ್ ಕಾರುಗಳು

ಪೊಲೀಸರು ತನ್ನ ಮೇಲೆ ದಾಳಿ ಮಾಡುವ ಸುದ್ದಿ ದುಬೆ ಕಿವಿಗೆ ಬಿದ್ದು ಪೊಲೀಸರ ಮೇಲೆಯೇ ದಾಳಿ ಮಾಡಲು ಮುಂದಾಗಿದ್ದಾನೆ. ವಿಕಾಸ್ ದುಬೆ ಪೊಲೀಸರ ಮೇಲೆ ನಡೆಸಿದ ದಾಳಿಯಲ್ಲಿ ಹಲವು ಪೊಲೀಸರು ಗಾಯಗೊಂಡಿದ್ದರೆ, 8 ಜನ ಪೊಲೀಸರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಪುಡಿಪುಡಿಯಾದವು ಕುಖ್ಯಾತ ಗ್ಯಾಂಗ್ ಸ್ಟರ್ ಕಾರುಗಳು

ಕಳೆದ ಗುರುವಾರ ನಡೆದ ಈ ಘಟನೆ ದೇಶಾದ್ಯಂತ ಭಾರಿ ಸಂಚಲನವನ್ನು ಉಂಟು ಮಾಡಿದೆ. ದುಬೆ ಪೊಲೀಸರ ಮೇಲೆ ನಡೆಸಿದ ದಾಳಿಯಲ್ಲಿ ಡಿಎಸ್ ಪಿ ದೇವೇಂದ್ರ ಮಿಶ್ರಾ, ಮೂವರು ಎಸ್‌ಐಗಳು ಹಾಗೂ ನಾಲ್ವರು ಕಾನ್‌ಸ್ಟೆಬಲ್‌ಗಳು ಸಾವನ್ನಪ್ಪಿದ್ದಾರೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಕಾರಿಗೂ ಬಂತು ಪೋರ್ಟಬಲ್ ಟಾಯ್ಲೆಟ್

ದುಬೆ ಬಂಧನಕ್ಕೆ ಬಲೆ ಬೀಸಿರುವ ಪೊಲೀಸರು ಆತನನ್ನು ಸೆರೆಹಿಡಿಯಲು 25 ತಂಡಗಳನ್ನು ರಚಿಸಿದ್ದಾರೆ. ಪೊಲೀಸರು ದುಬೆಗಾಗಿ ಆತನ ಗೆಸ್ಟ್ ಹೌಸ್ ಹಾಗೂ ವಾಹನಗಳನ್ನು ಶೋಧಿಸುತ್ತಿದ್ದಾರೆ. ಪೊಲೀಸರು ವಿಕಾಸ್ ದುಬೆಗೆ ಸೇರಿದ ಕಾರುಗಳನ್ನು ನಾಶಪಡಿಸುತ್ತಿರುವ ವೀಡಿಯೊ ಇಂಟರ್ ನೆಟ್ ನಲ್ಲಿ ವೈರಲ್ ಆಗಿದೆ.

ಪುಡಿಪುಡಿಯಾದವು ಕುಖ್ಯಾತ ಗ್ಯಾಂಗ್ ಸ್ಟರ್ ಕಾರುಗಳು

ಪೊಲೀಸರು ತಮ್ಮ ಈ ಕಾರ್ಯವನ್ನು ಸಮರ್ಥಿಸಿಕೊಂಡಿದ್ದಾರೆ. ಉತ್ತರಪ್ರದೇಶ ಪೊಲೀಸರು ಶೀಘ್ರದಲ್ಲೇ ಗ್ಯಾಂಗ್ ಸ್ಟರ್ ವಿಕಾಸ್ ದುಬೆಯನ್ನು ಬಂಧಿಸುವ ವಿಶ್ವಾಸದಲ್ಲಿದ್ದಾರೆ.

Most Read Articles

Kannada
English summary
UP cops destroys gangster vikas dubey's cars. Read in Kannada.
Story first published: Tuesday, July 7, 2020, 10:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X