Just In
Don't Miss!
- News
ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಹೃದಯಾಘಾತದಿಂದ ಸಾವು
- Sports
ಐಎಸ್ಎಲ್: ಅಂಕ ಹಂಚಿಕೊಂಡ ಈಸ್ಟ್ ಬೆಂಗಾಲ್ ಮತ್ತು ಚೆನ್ನೈಯಿನ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 18ರ ದರ
- Movies
ಶಿವಲಿಂಗಕ್ಕೆ ಅಪಮಾನ: ನಟಿಯ ವಿರುದ್ಧ ಮಾಜಿ ರಾಜ್ಯಪಾಲ ದೂರು
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಬಂಜೆತನಕ್ಕೆ ಕಾರಣವಾಗುವ ಥೈರಾಯ್ಡ್ ಲಕ್ಷಣಗಳು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದಂಡ ವಿಧಿಸಿದ ಪೊಲೀಸರಿಗೆ ಸರಿಯಾಗಿ ಚಮಕ್ ಕೊಟ್ಟ ಎಲೆಕ್ಟ್ರಿಷಿಯನ್
ಮೋಟಾರ್ಸೈಕಲ್ಗಳಲ್ಲಿ ಸುರಕ್ಷತೆಯ ಅನುಸಾರ ಎಷ್ಟೇ ಸೇಫ್ಟಿ ಫೀಚರ್ಸ್ ನೀಡಿದರೂ ಸಹ, ಟ್ರಾಫಿಕ್ ನಿಯಮಗಳನ್ನು ಪಾಲಿಸಿ ಮತ್ತು ಹುಷಾರಾಗಿ ವಾಹನ ಚಾಲನೆ ಮಾಡಿದರೆ ಯಾವುದೇ ರೀತಿಯಾದ ಅಪಘಾತಗಳು ಸಂಭವಿಸುವುದಿಲ್ಲ. ಟ್ರಾಫಿಕ್ ನಿಯಮಗಳಲ್ಲಿ ಬೈಕ್ ಅಥವಾ ಸ್ಕೂಟರ್ ಚಾಲಾನೆಯ ವೇಳೆ ಹೆಲ್ಮೆಟ್ ಧರಿಸುವುದು ಕೂಡಾ ಒಂದು.

ಹೆಲ್ಮೆಟ್ ಕೇವಲ ದೂರದಲ್ಲಿ ಟ್ರಾಫಿಕ್ ಪೊಲೀಸರು ಕಂಡು ಬಂದರೆ ಹಾಕಿಕೊಳ್ಳುವ ಒಂದು ಉಪಕರಣವಲ್ಲ ಹಾಗೆಯೆ ಕೇವಲ ಪೊಲೀಸರಿಂದ ತಪ್ಪಿಸಿಕೊಳ್ಳಲು ಮಾತ್ರ ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡುವ ಆಲೋಚನೆ ಇದ್ದರೆ ಅದು ತಪ್ಪಾಗುತ್ತದೆ. ಹೆಲ್ಮೆಟ್ ಮೋಟಾರ್ಸೈಕಲ್ ಚಾಲನೆಯ ವೇಳೆ ಅಪಘಾತ ಸಂಭವಿಸಿದಾಗ ನಮ್ಮ ಶಿರವನು ಕಾಪಾಡುವಲ್ಲಿ ಸಹಕರಿಸುತ್ತದೆ. ಹೀಗಾಗಿ ಸಂಚಾರಿ ನಿಯಮಗಳಲ್ಲಿ ಒಂದಾದ ಹೆಲ್ಮೆಟ್ ಧರಿಸಿ ವಾಹನ ಚಾಲನೆ ಎಂಬ ನಿಯಮವನ್ನು ಉಲ್ಲಂಘಿಸಿದ್ದಲ್ಲಿ ಪೊಲೀಸರು ಆ ಚಾಲಕರಿಗೆ ದಂಡ ವಿಧಿಸುತ್ತಾರೆ.

ಇದೀಗ ಕೆಲವು ದಿನಗಳ ಹಿಂದಷ್ಟೆ ದೇಶಾದ್ಯಾಂತ ಟ್ರಾಫಿಕ್ ನಿಯಮಗಳ ದಂಡವನ್ನು ಏರಿಕೆ ಮಾಡಲಾಗಿದ್ದು, ಈ ಉದ್ದೇಶವು ಕೇವಲ ಚಾಲಕರು ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸಲಿ ಎಂದು. ಆದರೆ ಇಲ್ಲೊಬ್ಬ ಹೆಲ್ಮೆಟ್ ಧರಿಸದ ಕಾರಣ ಪೊಲೀಸರ ಹತ್ತಿರ ದಂಡ ಪಾವತಿಸದೆ ದಂಡ ಹಾಕಿದ ಪೊಲೀಸರಿಗೆ ಸರಿಯಾಗಿ ಬುದ್ದಿ ಕಲಿಸಿದ್ದಾನೆ.

ಮಾಮೂಲಾಗಿ ನಾವು ಟ್ರಾಫಿಕ್ ನಿಯಮಗಳನ್ನು ಪಾಲಿಸದೇ ಪೊಲೀಸರ ಕೈಗೆ ಸಿಕ್ಕಿ ಬಿದ್ದಾಗ ಸ್ಥಳದಲ್ಲಿಯೇ ದಂಡವನ್ನು ಪಾವತಿಸಿ ಸುಮ್ಮನಾಗುತ್ತೇವೆ, ಆದರೆ ಉತ್ತರ ಪ್ರದೇಶದಲ್ಲಿನ ಈ ಎಲೆಕ್ಟ್ರಿಷಿಯನ್ ಮಾತ್ರ ದಂಡ ನೀಡಿದ ನಂತರ ಆ ಪೊಲೀಸರ ಮೇಲೆ ಸೇಡನು ತೀರಿಸಿಕೊಳ್ಳಲು ಖತರ್ನಾಕ್ ಪ್ಲಾನ್ ಒಂದನ್ನು ಮಾಡಿದ್ದ.

ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯ ನಿವಾಸಿಯಾದ ಶ್ರೀನಿವಾಸ್ ಎಂಬಾತ ವೃತ್ತಿಯಲ್ಲಿ ಒಬ್ಬ ಸಾಧರಣ ಎಲೆಕ್ಟ್ರಿಷಿಯನ್ ಆಗಿದ್ದು, ಈತ ಡ್ಯೂಟಿಯಲ್ಲಿದ್ದ ಕಾರಣ ಹೆಲ್ಮೆಟ್ ಇಲ್ಲದೆಯೆ ತನ್ನ ಮೋಟಾರ್ಸೈಕಲ್ ರೈಡಿಂಗ್ ಮಾಡುತ್ತಿದ್ದ. ಹೆಲ್ಮೆಟ್ ಇಲ್ಲದೆಯೆ ಬೈಕ್ ಡ್ರೈವಿಂಗ್ ಮಾಡುತ್ತಿದ್ದ ಈತನನ್ನು ರಮೇಶ್ ಚಂದ್ರ ಎಂಬ ಪೊಲೀಸ್ ಅಧಿಕಾರಿಯು ಆತನನ್ನು ತಡೆದು ರೂ.500 ದಂಡ ಕಟ್ಟಲು ಹೇಳಿದರು.

ತಿಂಗಳಿಗೆ ರೂ.6000 ಸಂಬಳ ಪಡೆಯುವ ಸಾಧಾರಣ ಎಲೆಕ್ಟ್ರಿಷಿಯನ್ ಶ್ರೀನಿವಾಸ್ ರೂ.500 ಅನ್ನು ಪಾವತಿಸಲು ಸಮ್ಮತಿಸದ ಕಾರಣ, ಪೊಲೀಸರು ಆತನಿಗೆ ಚಲನ್ ನೀಡಿ ಆನ್ಲೈನ್ನಲ್ಲಿ ಪಾವತಿಸಲು ಹೇಳಿದರು. ಹಾಗು ಶ್ರೀನಿವಾಸ್ ತನ್ನ ಮೇಲಾಧಿಕಾರಿಗೆ ಕರೆ ಮಾಡಿ ಆತ ಡ್ಯೂಟಿಯಲ್ಲಿರುವುದಾಗಿ ಅಲ್ಲಿನ ಸ್ಥಳೀಯರು ಪವರ್ ಲೈನ್ನಲ್ಲಿ ತೊಂದರೆ ಇದೆ ಎಂದ ಕಾರಣ ಬಂದಿರುವುದಾಗಿ ಹೇಳಿದರೂ ಸಹ ಪೊಲೀಸರು ಅದಕ್ಕೆ ಒಪ್ಪಲಿಲ್ಲ.

ಸ್ಥಳದಲ್ಲಿಯೇ ಪೊಲೀಸ್ ಅಧಿಕಾರಿಗಳಿಗೆ ಮತ್ತು ಎಲೆಕ್ಟ್ರಿಷಿಯನ್ ಶ್ರೀನಿವಾಸ್ರವರಿಗೆ ಸಣ್ಣ ಜಗಳವಾಗಿ, ಟ್ರಾಫಿಕ್ ರೂಲ್ಸ್ ಬಗ್ಗೆ ಪೊಲೀಸರು ಮತ್ತು ಎಲೆಕ್ಟ್ರಿಕ್ ಬಿಲ್ ಪಾವತಿಸದಿದ್ದರೆ ನಾವು ಏನು ಮಾಡಬೇಕು ಎಂದು ನಮಗೆ ತಿಳಿದಿದೆ ಎಂಬ ಕಾರಣದಿಂದ ಸಣ್ಣ ಜಗಳ ಬಂತು.

ಜಗಳವಾದ ನಂತರ ಸ್ಥಳದಿಂದ ಹಿಂತಿರುಗಿದ ಶ್ರೀನಿವಾಸ್ ತನಗೆ ದಂಡ ಹಾಕಿದ ಪೊಲೀಸರು ಇದ್ದ ಪೊಲೀಸ್ ಠಾಣೆಯ ಪವರ್ ಲೈನ್ ಅನ್ನು ಕಟ್ ಮಾಡಿದ್ದಾರೆ. ಹೀಗೇಕೆ ಮಾಡಿದೆ ಎಂದು ಪೊಲೀಸರು ಎಲೆಕ್ಟ್ರಿಷಿಯನ್ ಅನ್ನು ಕೇಳಿದಾಗ, ಪೊಲೀಸ್ ಠಾಣೆಯು 2016ರಿಂದ ಎಲೆಕ್ಟ್ರಿಕ್ ಬಿಲ್ ಅನ್ನು ಪಾವತಿಸದೇ ಇರುವ ಕಾರಣ ಪವರ್ ಲೈನ್ ಅನ್ನು ಕಟ್ ಮಾಡಿರುವುದಾಗಿ ಹೇಳಿದರು.

ನಿಜವಾಗಿಯೂ ಆ ಪೊಲೀಸ್ ಠಾಣೆಯವರು 2016ರಿಂದ ಒಂದು ಪೈಸಾ ಕೂಡಾ ಎಲೆಕ್ಟ್ರಿಕ್ ಬಿಲ್ ಎಂದು ಪಾವತಿಸದ ಕಾರಣ ಇಲ್ಲಿಯವರೆಗೂ ರೂ.6.62 ಲಕ್ಷ ಬಿಲ್ ಮೊತ್ತವಾಗಿಯಂತೆ. ಹೀಗಾಗಿ ಟ್ರಾಫಿಕ್ ರೂಲ್ಸ್ ಫಾಲೋ ಮಾಡಲು ಹೇಳುವ ಪೊಲೀಸರು ತಾವು ತಮ್ಮ ಠಾಣೆಯಲ್ಲಿ ಬಳಸಿದ ವಿದ್ಯುತ್ಗೆ ಬಿಲ್ ಅನ್ನು ಪಾವತಿಸುವುದು ಕೂಡಾ ಒಂದು ರೂಲ್ ಎಂದು ಶ್ರೀನಿವಾಸ್ ವಾದ ಮಾಡಿದರು.

ದಕ್ಷಿಣಾಂಚಲ್ ವಿದ್ಯಾತ್ ವಿತ್ರಾನ್ ನಿಗಮ್ ಲಿಮಿಟೆಡ್ನ ಉಪ ವಿಭಾಗೀಯ ಅಧಿಕಾರಿಯಾದ ರನ್ವೀರ್ ಸಿಂಗ್ರವರು ಬಾಕಿ ಇರುವ ಎಲೆಕ್ಟ್ರಿಕ್ ಬಿಲ್ ಅನ್ನು ಪಾವತಿಸಲು ನಾವು ಆ ಪೊಲೀಸ್ ಠಾಣೆಗೆ ಹಲವಾರು ಸುತ್ತೊಲೆಯನ್ನು ನೀಡಿದರೂ ಸಹ ಅವರು ಅದನ್ನು ತಿರಸ್ಕರಿಸಿ ಒಂದು ಪೈಸೆ ಕೂಡಾ ಇದುವರೆಗು ಕಟ್ಟಲಿಲ್ಲವೆಂದು ಹೇಳಿದ್ದಾರೆ.

ಲೈನ್ಪಾರ್ ಪೊಲೀಸ್ ಠಾಣೆಯವರು ಎಷ್ಟು ದಿನಗಳಿಂದ ವಿದ್ಯುತ್ ಬಿಲ್ ಪಾವತಿಸಲಿಲ್ಲ ಎಂದು ಪರಿಶೀಲಿಸಿದಾಗ, 2016ರಿಂದ ಅವರು ಒಂದು ಪೈಸೆ ಕೂಡಾ ಪಾವತಿಸದೇ ಇರುವುದರಿಂದ, ಇಲ್ಲಿಯವರೆಗು ವಿದ್ಯುತ್ ಬಿಲ್ ಸುಮಾರು ರೂ. 7 ಲಕ್ಷ ದಾಟಿದೆ ಎಂದು ತಿಳಿದು ಬಂದಿದೆ.

ಎಲೆಕ್ಟ್ರಿಷಿಯನ್ ಮತ್ತು ಇತರ ಉದ್ಯೋಗಿಗಳು ಪೊಲೀಸರಿಂದ ಚಲನ್ ನೀಡುವ ಬಗ್ಗೆ ಕೋಪಗೊಂಡಿದ್ದರು. ಕಳೆದ ನಾಲ್ಕು ತಿಂಗಳಿನಿಂದ ಎಲೆಕ್ಟ್ರಿಷಿಯನ್ಗಳು ಸಂಬಳ ಪಡೆಯದ ಕಾರಣ ಮತ್ತು ಶ್ರೀನಿವಾಸ್ರವರು ರೂ 500 ಅನ್ನು ಚಲನ್ ಆಗಿ ಪಾವತಿಸಲು ಅಸಮರ್ಥತೆಯನ್ನು ವ್ಯಕ್ತ ಪಡಿಸಿದರು. ವಿದ್ಯುತ್ ಬಿಲ್ ಅನ್ನು ಜೆನರೇಟ್ ಮಾಡಿದ ನಂತರ ಅದೇ ದಿನ ರಾತ್ರಿ ಪೊಲೀಸ್ ಅಧಿಕಾರಿಗಳು ವಿವಾದವನ್ನು ಬಗೆಹರಿಸಲು ಮುಂದಾದರು.

ಇವೆಲ್ಲವು ಆದ ಬಳಿಕ ಪೊಲೀಸರು ಫಿರೋಜಾಬಾದ್ನಲ್ಲಿರುವ ಪೊಲೀಸ್ ಠಾಣೆಗಳ ವಿದ್ಯುತ್ ಬಿಲ್ ಎಂದು ರೂ.1.15 ಕೋಟಿ ಹಣವನ್ನು ಡಿವಿವಿಎನ್ಎಲ್ಗೆ ಪಾವತಿಸಲಾಗಿದ್ದು, ಇನ್ನು ಬಾಕಿ ಇರುವ ಮೊತ್ತವನ್ನು ಶೀಘ್ರವೇ ಪಾವತಿಸುವುದಾಗಿ ಪೊಲೀಸರು ಒಪ್ಪಿಕೊಂಡಿದ್ದಾರೆ.

ಎಲೆಕ್ಟ್ರಿಷಿಯನ್ ತೆಗೆದುಕೊಂಡ ಕ್ರಮ ಅನಗತ್ಯವಾಗಿತ್ತು, ಪವರ್ ಲೈನ್ ಅನ್ನು ಮಂಗಳವಾರ ಸಂಜೆ 4.30ಕ್ಕೆ ಕಟ್ ಮಾಡಲಾಗಿದ್ದು, ಸಮರು 4 ಗಂಟೆಗಳ ಕಾಲ ಪೊಲೀಸ್ ಠಾಣೆಯಲ್ಲಿ ವಿದ್ಯುತ್ ಇರಲಿಲ್ಲ. ಇನ್ನು ಎಲೆಕ್ಟ್ರಿಷಿಯನ್ ಕೃತ್ಯದ ವಿರುದ್ದ ನಾವು ಡಿವಿವಿಎಲ್ಎನ್ನ ಅಧಿಕಾರಿಗಳನ್ನು ಸಂಪರ್ಕಿಸುದ್ದೇವೆ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.

ಆದರೆ ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಮಾರು 70 ಪೊಲೀಸರು ಟ್ರಾಫಿಕ್ ರೂಲ್ಸ್ ಫಾಲೋ ಮಾಡದೇ ಇದ್ದರೆ ಅವರ ಮೇಲೆ ನಾವು ದಂಡವನ್ನು ನೀಡಿದ್ದೇವೆ, ಹೀಗಿರುವಾಗ ಸಾಧಾರಣ ಎಲೆಕ್ಟ್ರಿಷಿಯನ್ ಆದ ಶ್ರೀನಿವಾಸ್ರವರನ್ನು ಹೇಗೆ ಬಿಡಲು ಸಾಧ್ಯ ಮತ್ತು ಶೀಘ್ರವೇ ಬಾಕಿ ಇರುವ ವಿದ್ಯುತ್ ಬಿಲ್ನ ಮೊತ್ತವನ್ನು ಪಾವತಿಸುವುದಾಗಿ ಸ್ಟೇಷನ್ ಹೌಸ್ ಅಧಿಕಾರಿಯು ವಾದಿಸಿದ್ದಾರೆ.
Source: TOI