ಲಾಕ್‌ಡೌನ್ ಎಫೆಕ್ಟ್: ನಡುರಸ್ತೆಯಲ್ಲಿ ರಂಪಾಟ ಮಾಡಿದ ಯುವತಿ

ಕರೋನಾ ವೈರಸ್ ಹರಡದಂತೆ ತಡೆಯುವ ಉದ್ದೇಶದಿಂದ ದೇಶಾದ್ಯಂತ ಮೇ 3ರವರೆಗೆ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಎಲ್ಲಾ ರೀತಿಯ ಸಾರಿಗೆ ಸೇವೆಗಳನ್ನು ರದ್ದುಪಡಿಸಲಾಗಿದೆ. ಈ ಲಾಕ್‌ಡೌನ್‌ನಿಂದ ಅಗತ್ಯ ವಸ್ತುಗಳನ್ನು ಸಾಗಿಸುವವರಿಗೆ ವಿನಾಯಿತಿ ನೀಡಲಾಗಿದೆ.

ಲಾಕ್‌ಡೌನ್ ಎಫೆಕ್ಟ್: ನಡುರಸ್ತೆಯಲ್ಲಿ ರಂಪಾಟ ಮಾಡಿದ ಯುವತಿ

ಇದರ ಜೊತೆಗೆ ಅಗತ್ಯ ಸೇವೆಗಳ ಪೂರೈಕೆದಾರರಿಗೆ ಹಲವು ಷರತ್ತುಗಳೊಂದಿಗೆ ವಿನಾಯಿತಿ ನೀಡಲಾಗಿದೆ. ಕರೋನಾ ವೈರಸ್ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿರುವ ಕಾರಣಕ್ಕೆ ಜನರು ವಿನಾಕಾರಣ ಮನೆಯಿಂದ ಹೊರಬರದಂತೆ ನಿಷೇಧ ಹೇರಲಾಗಿದೆ.

ಲಾಕ್‌ಡೌನ್ ಎಫೆಕ್ಟ್: ನಡುರಸ್ತೆಯಲ್ಲಿ ರಂಪಾಟ ಮಾಡಿದ ಯುವತಿ

ಈ ಕಾರಣಕ್ಕೆ ಪೊಲೀಸರು ಜನರ ಓಡಾಟದ ಮೇಲೆ ನಿಗಾವಹಿಸಿದ್ದಾರೆ. ಮನೆಯಿಂದ ಹೊರಬರುವ ಪ್ರತಿಯೊಂದು ವಾಹನವನ್ನು ಪರೀಕ್ಷಿಸಿ ನಂತರ ಸರಿಯಾದ ಕಾರಣವಿದ್ದರೆ ಮಾತ್ರ ಮುಂದುವರಿಯಲು ಅವಕಾಶ ನೀಡುತ್ತಾರೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಲಾಕ್‌ಡೌನ್ ಎಫೆಕ್ಟ್: ನಡುರಸ್ತೆಯಲ್ಲಿ ರಂಪಾಟ ಮಾಡಿದ ಯುವತಿ

ಕೆಲವರು ಪೊಲೀಸರಿಗೆ ಯಾಮಾರಿಸಲು ಯತ್ನಿಸಿ ಸಿಕ್ಕಿಬಿದ್ದಿದ್ದಾರೆ. ಇನ್ನೂ ಕೆಲವರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸುತ್ತಾರೆ. ಇದೇ ರೀತಿಯ ಘಟನೆಯೊಂದು ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ.

ಲಾಕ್‌ಡೌನ್ ಎಫೆಕ್ಟ್: ನಡುರಸ್ತೆಯಲ್ಲಿ ರಂಪಾಟ ಮಾಡಿದ ಯುವತಿ

ಈ ಘಟನೆಯಲ್ಲಿ ಪೊಲೀಸರು ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿ ಹೊರಬಂದ ಹ್ಯುಂಡೈ ಅಯಾನ್ ಕಾರ್ ಅನ್ನು ಪರಿಶೀಲಿಸಿದ್ದಾರೆ. ಈ ಕಾರಿನಲ್ಲಿದ್ದ ಯುವತಿ ಪೊಲೀಸರ ತಪಾಸಣೆಗೆ ಸಹಕರಿಸಿಲ್ಲ. ಪೊಲೀಸರು ದಾಖಲೆಗಳನ್ನು ಕೇಳಿದಾಗ ಅವರ ಮೇಲೆಯೇ ಕೂಗಾಡಿದ್ದಾಳೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಲಾಕ್‌ಡೌನ್ ಎಫೆಕ್ಟ್: ನಡುರಸ್ತೆಯಲ್ಲಿ ರಂಪಾಟ ಮಾಡಿದ ಯುವತಿ

ಪೊಲೀಸರು ದಾಖಲೆಗಳನ್ನು ತೋರಿಸುವಂತೆ ಒತ್ತಾಯಿಸಿದಾಗ ತಪ್ಪಿಸಿಕೊಳ್ಳಲು ಯಾವುದೇ ದಾರಿ ಕಾಣದೇ, ಕಾರಿನಲ್ಲಿದ್ದ ವಸ್ತುವನ್ನು ಕಾರಿನಿಂದ ಹೊರಕ್ಕೆ ಎಸೆದು, ಕಾರಿನಿಂದ ಹೊರಬಂದು ರಸ್ತೆಯಲ್ಲಿ ಕುಳಿತು ಅಳುವುದಕ್ಕೆ ಆರಂಭಿಸಿದ್ದಾಳೆ. ಈ ದೃಶ್ಯವನ್ನು ಅಲ್ಲಿಯೇ ಇದ್ದ ಪೊಲೀಸರೊಬ್ಬರು ರೆಕಾರ್ಡ್ ಮಾಡಿದ್ದಾರೆ.

ಲಾಕ್‌ಡೌನ್ ಎಫೆಕ್ಟ್: ನಡುರಸ್ತೆಯಲ್ಲಿ ರಂಪಾಟ ಮಾಡಿದ ಯುವತಿ

ಈ ವೀಡಿಯೊ ಸದ್ಯಕ್ಕೆ ವೈರಲ್ ಆಗಿದೆ. ಈ ವೀಡಿಯೊದಲ್ಲಿ ಯುವತಿಯು ಪೊಲೀಸರ ಮೇಲೆ ಕೂಗಾಡುತ್ತಿರುವುದನ್ನು ಕಾಣಬಹುದು. ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆಆ ಯುವತಿಗೆ ರೂ.6,000 ದಂಡ ವಿಧಿಸಲಾಗಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಲಾಕ್‌ಡೌನ್ ಎಫೆಕ್ಟ್: ನಡುರಸ್ತೆಯಲ್ಲಿ ರಂಪಾಟ ಮಾಡಿದ ಯುವತಿ

ಕರೋನಾ ವೈರಸ್ ಸೋಂಕು ಹರಡದಂತೆ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಇದರ ಹಿಂದಿನ ಉದ್ದೇಶವನ್ನು ಅರ್ಥ ಮಾಡಿಕೊಳ್ಳದೇ ಪೊಲೀಸರ ಮೇಲೆಯೇ ಕೂಗಾಡಿ ರಂಪಾಟ ನಡೆಸಿರುವ ಯುವತಿಯ ಕೃತ್ಯಕ್ಕೆ ಆಕ್ರೋಶ ವ್ಯಕ್ತವಾಗಿದೆ.

ಲಾಕ್‌ಡೌನ್ ಎಫೆಕ್ಟ್: ನಡುರಸ್ತೆಯಲ್ಲಿ ರಂಪಾಟ ಮಾಡಿದ ಯುವತಿ

ದೇಶಾದ್ಯಂತ ಪ್ರತಿದಿನ ಈ ರೀತಿಯ ಘಟನೆಗಳು ನಡೆಯುತ್ತಲೇ ಇವೆ. ಪೊಲೀಸರು ಲಾಕ್‌ಡೌನ್ ಉಲ್ಲಂಘಿಸಿ ಹೊರಬರುವವರಿಗೆ ಲಾಠಿ ರುಚಿ ತೋರಿಸುವುದರ ಜೊತೆಗೆ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಿದ್ದಾರೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಲಾಕ್‌ಡೌನ್ ಎಫೆಕ್ಟ್: ನಡುರಸ್ತೆಯಲ್ಲಿ ರಂಪಾಟ ಮಾಡಿದ ಯುವತಿ

ಪೊಲೀಸರ ಕ್ರಮದಿಂದ ಪಾರಾಗಲು ವಿಶೇಷ ಪಾಸ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ. ತುರ್ತು ಸಂದರ್ಭದಲ್ಲಿ ಮನೆಯಿಂದ ಹೊರಬರುವಾಗ ಈ ಪಾಸ್‌ಗಳನ್ನು ಜೊತೆಯಲ್ಲಿಟ್ಟು ಕೊಂಡರೆ ಪೊಲೀಸರ ಕಠಿಣ ಕ್ರಮದಿಂದ ಪಾರಾಗಬಹುದು.

Most Read Articles

Kannada
English summary
UP girl sits on road and cries during lockdown. Read in Kannada.
Story first published: Thursday, April 23, 2020, 15:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X