ಬೈಕ್ ಮಾಡಿಫೈ, ವ್ಹೀಲಿಂಗ್ ಮಾಡುವ ಮುನ್ನ ಇನ್ಮುಂದೆ ಹತ್ತು ಬಾರಿ ಯೋಚಿಸಿ!

ಹೆಚ್ಚುತ್ತಿರುವ ಮಾಡಿಫೈಡ್ ವಾಹನಗಳ ಹಾವಳಿಯನ್ನು ತಡೆಯಲು ಟ್ರಾಫಿಕ್ ಪೊಲೀಸರು ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಕಾನೂನುಬಾಹಿರವಾಗಿ ವಾಹನಗಳನ್ನು ಮಾಡಿಫೈ ಮಾಡುವುದಲ್ಲದೆ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿರುವ ವಾಹನ ಮಾಲೀಕರ ವಿರುದ್ದ ಭಾರೀ ಪ್ರಮಾಣದ ದಂಡ ವಸೂಲಿ ಮಾಡಲಾಗುತ್ತಿದೆ.

ಬೈಕ್ ಮಾಡಿಫೈ, ವ್ಹೀಲಿಂಗ್ ಮಾಡುವ ಮುನ್ನ ಎಚ್ಚರ..

ದೇಶಾದ್ಯಂತ ವಿವಿಧ ನಗರಗಳಲ್ಲಿ ಮಾಡಿಫೈ ವಾಹನಗಳ ವಿರುದ್ಧ ದೊಡ್ಡ ಮಟ್ಟದ ಕಾರ್ಯಾಚರಣೆ ನಡೆಸಲಾಗುತ್ತಿದ್ದು ನಮ್ಮ ಬೆಂಗಳೂರಿನ ಟ್ರಾಫಿಕ್ ಪೊಲೀಸರು ಕೂಡಾ ಈಗಾಗಲೇ ಸಾವಿರಾರು ಪ್ರಕರಣಗಳನ್ನು ದಾಖಲಿಸಿ ಕಾನೂನುಬಾಹಿರವಾಗಿ ಮಾಡಿಫೈ ಮಾಡಲಾದ ವಾಹನಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಸ್ಥಳದಲ್ಲೇ ಮಾಡಿಫೈ ಮಾಡಲಾದ ಬೈಕ್‌ಗಳ ಎಕ್ಸಾಸ್ಟ್ ಕಿತ್ತುಹಾಕಿ ಬೈಕ್ ಮಾಲೀಕರಿಗೆ ಬಿಸಿ ಮುಟ್ಟಿಸುತ್ತಿರುವ ಪೊಲೀಸರು ಇದೀಗ ಮತ್ತಷ್ಟು ಕಠಿಣ ಕ್ರಮಗಳನ್ನು ಜಾರಿಗೆ ತಂದಿದ್ದಾರೆ.

ಬೈಕ್ ಮಾಡಿಫೈ, ವ್ಹೀಲಿಂಗ್ ಮಾಡುವ ಮುನ್ನ ಎಚ್ಚರ..

ಈ ಹಿಂದಿನ ದುಬಾರಿ ದಂಡಗಳ ಜಾರಿ ನಡುವೆಯೂ ಹೆಚ್ಚುತ್ತಿರುವ ಬೈಕ್ ಮಾಡಿಫೈ ಮತ್ತು ಬೈಕ್ ವ್ಹೀಲಿಂಗ್ ವಿರುದ್ಧ ಹೊಸ ಕ್ರಮ ಕೈಗೊಂಡಿರುವ ಬೆಂಗಳೂರು ನಗರ ಪೊಲೀಸರು ದಂಡದ ಮೊತ್ತವನ್ನು ಹತ್ತು ಪಟ್ಟು ಹೆಚ್ಚಿಸಿದ್ದಾರೆ.

ಬೈಕ್ ಮಾಡಿಫೈ, ವ್ಹೀಲಿಂಗ್ ಮಾಡುವ ಮುನ್ನ ಎಚ್ಚರ..

ಕ್ಲಾಸಿಕ್ ಬೈಕ್‌ಗಳ ಲುಕ್ ಬದಲಿಸಲು ಮತ್ತು ಕರ್ಕಶವಾಗಿ ಸದ್ದು ಮಾಡುವ ಎಕ್ಸಾಸ್ಟ್‌ಗಳನ್ನು ಅಳವಡಿಸುವ ಬೈಕ್ ಮಾಲೀಕರಿಗೆ ಮೊದಲ ಬಾರಿಗೆ ದಂಡದ ಜೊತೆಗೆ ರೂ. 50 ಸಾವಿರ ಮೌಲ್ಯದ ಬಾಂಡ್ ಬರೆಸಿಕೊಳ್ಳುವ ಪೊಲೀಸರು ಎರಡನೇ ಬಾರಿಗೆ ಸಿಕ್ಕಿಬಿದ್ದಲ್ಲಿ ಮೊದಲ ಬಾರಿಗೆ ಬರೆದುಕೊಟ್ಟಿರುವ ಬಾಂಡ್ ಮೂಲಕ ರೂ.50 ಸಾವಿರ ದಂಡ ವಸೂಲಿ ಜೊತೆಗೆ ಜೈಲಿಗಟ್ಟಲಿದ್ದಾರೆ.

ಬೈಕ್ ಮಾಡಿಫೈ, ವ್ಹೀಲಿಂಗ್ ಮಾಡುವ ಮುನ್ನ ಎಚ್ಚರ..

ಹಾಗೆಯೇ ನಗರ ಪ್ರದೇಶಗಳಲ್ಲಿ ಮಿತಿ ಮೀರುತ್ತಿರುವ ಪುಂಡರ ವ್ಹೀಲಿಂಗ್ ಹಾವಳಿಯನ್ನು ತಡೆಯಲು ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿರುವ ಪೊಲೀಸ್ ಇಲಾಖೆಯು ಮೊದಲ ಬಾರಿಗೆ ವ್ಹೀಲಿಂಗ್ ಸಿಕ್ಕಿಬಿಳುವ ಬೈಕ್ ಸವಾರರಿಗೆ ದಂಡದ ಜೊತೆಗೆ ರೂ. 2 ಲಕ್ಷ ಮೌಲ್ಯದ ಬಾಂಡ್ ಬರೆಸಿಕೊಳ್ಳಲಿರುವ ಪೊಲೀಸರು ಎರಡನೇ ಬಾರಿಗೆ ಸಿಕ್ಕಿಬಿದ್ದಾಗ ಬಾಂಡ್ ಮೌಲ್ಯವನ್ನು ಆಧರಿಸಿ ದಂಡ ವಸೂಲಿ ಮಾಡಲಿದ್ದಾರೆ.

ಬೈಕ್ ಮಾಡಿಫೈ, ವ್ಹೀಲಿಂಗ್ ಮಾಡುವ ಮುನ್ನ ಎಚ್ಚರ..

ಒಂದು ವೇಳೆ ದಂಡ ಕಟ್ಟಲು ಸಾಧ್ಯವಿಲ್ಲವಾದಲ್ಲಿ ಜೈಲು ಶಿಕ್ಷೆ ಅನುಭವಿಸಬೇಕಿದ್ದು, ಸಿಆರ್‌ಪಿಸಿ ಕಲಂ 107 ಅಡಿಯಲ್ಲಿ ಬಾಂಡ್ ಬರೆಸಿಕೊಳ್ಳಲಿರುವ ಪೊಲೀಸರು ವ್ಹೀಲಿಂಗ್, ಮಾಡಿಫೈ ಎಕ್ಸಾಸ್ಟ್ ಸೇರಿದಂತೆ ಇತರೆ ಸಂಚಾರಿ ನಿಯಮಗಳ ಉಲ್ಲಂಘನೆ ವಿರುದ್ಧವು ಕಠಿಣ ಕ್ರಮಕೈಗೊಳ್ಳತ್ತಿದ್ದಾರೆ.

ಬೈಕ್ ಮಾಡಿಫೈ, ವ್ಹೀಲಿಂಗ್ ಮಾಡುವ ಮುನ್ನ ಎಚ್ಚರ..

ಪದೇ ಪದೇ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ತಪ್ಪಿಸಿಕೊಳ್ಳುವ ಸವಾರಿಗೆ ಬಿಸಿ ಮಟ್ಟಿಸಲು ಮುಂದಾಗಿರುವ ಪೊಲೀಸರು ದಂಡ ವಸೂಲಿ ಮಾಡಲು ವಾಹನ ಮಾಲೀಕರ ಮನೆ ಬಾಲಿಗೆ ಬಂದು ದಂಡ ವಸೂಲಿ ಮಾಡಲು ಚಾಲನೆ ನೀಡಲಾಗಿದ್ದು, ನಿಯಮ ಉಲ್ಲಂಘನೆ ಮಾಡಿದ್ದರೂ ಪೊಲೀಸರ ಕೈಗೆ ಸಿಕ್ಕಿಬಿದ್ದಿಲ್ಲ ಎನ್ನುವವರಿಗೆ ಪೊಲೀಸರು ಶಾಕಿಂಗ್ ನೀಡುತ್ತಿದ್ದಾರೆ

ಬೈಕ್ ಮಾಡಿಫೈ, ವ್ಹೀಲಿಂಗ್ ಮಾಡುವ ಮುನ್ನ ಎಚ್ಚರ..

ಇನ್ನು ನಗರ ಪ್ರದೇಶಗಳಲ್ಲಿನ ಯುವ ಬೈಕ್ ಸವಾರರು ಬೈಕ್ ಮಾಡಿಫೈ ಮೇಲೆ ಹೆಚ್ಚಿನ ವ್ಯಾಮೋಹ ಹೊಂದುತ್ತಿದ್ದು, ಇದು ಸಾರ್ವಜನಿಕ ಜೀವನಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ. ಇದರಿಂದಾಗಿ ಕಾನೂನು ಬಾಹಿರವಾಗಿರುವ ಬೈಕ್ ಮಾಡಿಫೈ ವಿರುದ್ಧ ಪೊಲೀಸರು ವಿಶೇಷ ಕಾರ್ಯಾಚರಣೆಯನ್ನು ಆರಂಭಿಸಿರುವುದಕ್ಕೆ ಜನಸಾಮಾನ್ಯರು ನಿಟ್ಟುಸಿರು ಬಿಡುವಂತಾಗಿದೆ.

MOST READ: ಕಾರಿನಲ್ಲಿ ಸೈಕಲ್ ಕೊಂಡೊಯ್ಯುವವರೇ ಎಚ್ಚರ, ಬೀಳುತ್ತೆ ಭಾರೀ ಪ್ರಮಾಣದ ದಂಡ..

ಬೈಕ್ ಮಾಡಿಫೈ, ವ್ಹೀಲಿಂಗ್ ಮಾಡುವ ಮುನ್ನ ಎಚ್ಚರ..

ಹಾಗೆಯೇ ನಗರದ ಪ್ರಮುಖ ರಸ್ತೆಗಳಲ್ಲಿ ಹಾಡಹಗಲೇ ವ್ಹೀಲಿಂಗ್ ಹಾವಳಿಯಿಂದಾಗಿ ಇತರೆ ವಾಹನ ಸವಾರರಿಗೂ ಕಿರಿಕಿರಿ ಉಂಟಾಗುತ್ತಿದ್ದು, ವ್ಹೀಲಿಂಗ್ ಹುಚ್ಚಿಗೆ ಹಲವಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಬೈಕ್ ವ್ಹೀಲಿಂಗ್ ಮಾಡುವವರು ಮಾತ್ರವಲ್ಲ ಅಮಾಯಕ ಜನ ಜೀವ ಕಳೆದುಕೊಳ್ಳುತ್ತಿದ್ದು, ವ್ಹೀಲಿಂಗ್ ಹಾವಳಿಯನ್ನು ಪರಿಣಾಮಕಾರಿ ತಗ್ಗಿಸಲು ಕಠಿಣ ಕ್ರಮಗಳು ಅವಶ್ಯಕವಾಗಿತ್ತು.

ಬೈಕ್ ಮಾಡಿಫೈ, ವ್ಹೀಲಿಂಗ್ ಮಾಡುವ ಮುನ್ನ ಎಚ್ಚರ..

ಇದರೊಂದಿಗೆ ಕೇವಲ ಬೈಕ್ ಮಾಡಿಫೈ ಮಾಡಿಸಿಕೊಳ್ಳುವ ವಾಹನ ಸವಾರರಿಗೆ ಮಾತ್ರವಲ್ಲ ಮಾಡಿಫೈ ಮಾಡುವ ಗ್ಯಾರೇಜ್‌ಗಳ ವಿರುದ್ದವು ಕ್ರಮ ಕೈಗೊಳ್ಳಲಾಗುತ್ತಿದ್ದು, ಬೈಕ್ ಸವಾರರು ನೀಡುವ ಮಾಹಿತಿ ಮೇರೆಗೆ ಮಾಡಿಫೈ ಗ್ಯಾರೇಜ್‌ಗಳ ಸೀಜ್ ಮಾಡಲಾಗುತ್ತಿದೆ.

MOST READ: ಅವಾಚ್ಯ ಶಬ್ದ ಬಳಸಿದ ಟ್ರಾಫಿಕ್ ಪೊಲೀಸ್ ಕಪಾಳಕ್ಕೆ ಬಾರಿಸಿದ ಮಹಿಳೆ

ಬೈಕ್ ಮಾಡಿಫೈ, ವ್ಹೀಲಿಂಗ್ ಮಾಡುವ ಮುನ್ನ ಎಚ್ಚರ..

ಬೈಕ್ ಮಾಡ್ಯುಲೇಷನ್ ಮಾಡ್ಕೊಂಡು ವ್ಹೀಲಿಂಗ್ ಮಾಡುತ್ತಿದ್ದ 16 ಜನ ಯುವಕರನ್ನು ಬಸವನಗುಡಿ ಪೊಲೀಸರು ಮೊನ್ನೆಯಷ್ಟೇ ರೆಡ್ ಹ್ಯಾಂಡ್ ಆಗಿ ಲಾಕ್ ಮಾಡಿಕೊಂಡಿದ್ದರು. ಹೀಗಾಗಿ ಬೈಕ್ ಸವಾರರು ಇನ್ಮುಂದೆ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ಮುನ್ನ ಹತ್ತಾರು ಬಾರಿ ಯೋಚಿಸಬೇಕಿದೆ.

Most Read Articles

Kannada
English summary
₹2 lakh fine if caught doing bike stunts in Bengaluru. Read in Kannada.
Story first published: Tuesday, October 27, 2020, 18:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X