ಲ್ಯಾಂಬೊರ್ಗಿನಿ ಹುರಾಕನ್ ಕಾರಿನಿಂದ ಹೊರ ಬರಲು ಪರದಾಡಿದ ಐರಾವತ ನಟಿ

ಖ್ಯಾತ ನಟಿ ಊರ್ವಶಿ ರೌತೆಲಾ ಅವರು ಕನ್ನಡದಲ್ಲಿ ಐರಾವತ ಸಿನಿಮಾದಲ್ಲಿ ನಟಿಸಿದ್ದಾರೆ. ಈಗ ಅವರು ಹೊಸ ತಮಿಳು ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಈ ಬಗ್ಗೆ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಮಾಹಿತಿ ನೀಡಿದ್ದಾರೆ.

ಲ್ಯಾಂಬೊರ್ಗಿನಿ ಹುರಾಕನ್ ಕಾರಿನಿಂದ ಹೊರ ಬರಲು ಪರದಾಡಿದ ಐರಾವತ ನಟಿ

ಇನ್ಸ್ಟಾಗ್ರಾಮ್ ಮೂಲಕ ಮಾಹಿತಿ ನೀಡಿರುವ ಅವರು ತಮ್ಮ ಲ್ಯಾಂಬೊರ್ಗಿನಿ ಹುರಾಕನ್‌ ಕಾರಿನಿಂದ ಹೊರ ಬರಲು ಪರದಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು ಇನ್ಸ್ಟಾಗ್ರಾಮ್ ಹಾಗೂ ರಿಯಾಲಿಟಿ, ಎತ್ತರವಾಗಿರುವ ಹುಡುಗಿಯ ಸಮಸ್ಯೆ, ನಾನು ನನ್ನ ಲ್ಯಾಂಬೊ ಕಾರಿನಲ್ಲಿ ಆಗಮಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಲ್ಯಾಂಬೊರ್ಗಿನಿ ಹುರಾಕನ್ ಕಾರಿನಿಂದ ಹೊರ ಬರಲು ಪರದಾಡಿದ ಐರಾವತ ನಟಿ

ಈ ಲ್ಯಾಂಬೊರ್ಗಿನಿ ಕಾರು ಅವರಿಗೆ ಸೇರಿದ್ದೇ ಅಥವಾ ಅದು ಚಿತ್ರದ ಒಂದು ಭಾಗವೇ ಎಂದು ತಿಳಿದು ಬಂದಿಲ್ಲ. ಈಗ ಅವರು ದಿ ಲೆಜೆಂಡ್ ಎಂಬ ದೊಡ್ಡ ಬಜೆಟ್'ನ ವೈಜ್ಞಾನಿಕ ಚಲನಚಿತ್ರದಲ್ಲಿ ನಟಿಸುತ್ತಿದ್ದಾರೆ.

ಲ್ಯಾಂಬೊರ್ಗಿನಿ ಹುರಾಕನ್ ಕಾರಿನಿಂದ ಹೊರ ಬರಲು ಪರದಾಡಿದ ಐರಾವತ ನಟಿ

ಊರ್ವಶಿ ರೌತೆಲಾರವರು ಹುರಾಕನ್ ಕಾರಿನ ಜೊತೆ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲು. ಕಾರಿನ ರಿಜಿಸ್ಟ್ರೇಷನ್ ನಂಬರ್ ಕಾಣಿಸದ ಕಾರಣ ಈ ಕಾರಿನ ಮಾಲೀಕರು ಯಾರು ಎಂದು ತಿಳಿಯಲು ಸಾಧ್ಯವಾಗಿಲ್ಲ.

ಲ್ಯಾಂಬೊರ್ಗಿನಿ ಹುರಾಕನ್ ಕಾರಿನಿಂದ ಹೊರ ಬರಲು ಪರದಾಡಿದ ಐರಾವತ ನಟಿ

ಅವರು ಪೋಸ್ಟ್ ಮಾಡಿರುವ ಚಿತ್ರಗಳಲ್ಲಿ ಎರಡು ಡೋರುಗಳ ಸ್ಪೋರ್ಟ್ಸ್ ಕೂಪೆ ಕಾರಿನಿಂದ ಹೊರ ಬರಲು ಪರದಾಡುತ್ತಿರುವ ಊರ್ವಶಿ ರೌತೆಲಾರವರನ್ನು ಕಾಣಬಹುದು. ಊರ್ವರ್ಶಿ ರೌತೆಲಾರವರು 178 ಸೆ. ಮೀ ಅಂದರೆ ಸುಮಾರು 5 ಅಡಿ 10 ಇಂಚು ಎತ್ತರವಿದ್ದಾರೆ.

ಲ್ಯಾಂಬೊರ್ಗಿನಿ ಹುರಾಕನ್ ಕಾರಿನಿಂದ ಹೊರ ಬರಲು ಪರದಾಡಿದ ಐರಾವತ ನಟಿ

ಈ ಎತ್ತರವು ಭಾರತೀಯ ಮಹಿಳೆಯರ ಸರಾಸರಿ ಎತ್ತರಕ್ಕಿಂತ ಹೆಚ್ಚಾಗಿದೆ. ಆದರೆ ಕಾರಿನ ಒಳಗೆ ಹೋಗಲು ಅಥವಾ ಹೊರಗೆ ಬರಲು ಸಾಧ್ಯವಾಗದಷ್ಟು ಎತ್ತರವಲ್ಲ. ಸೂಪರ್‌ಕಾರ್‌ಗಳು ಹಾಗೂ ಸ್ಪೋರ್ಟ್ಸ್ ಕಾರುಗಳು ಉತ್ತಮ ಚಾಲನಾ ಡೈನಾಮಿಕ್ಸ್ ಪಡೆಯಲು ಕಡಿಮೆ ಗುರುತ್ವಾಕರ್ಷಣೆಯ ಕೇಂದ್ರವನ್ನು ಹೊಂದಿರುತ್ತವೆ.

ಲ್ಯಾಂಬೊರ್ಗಿನಿ ಹುರಾಕನ್ ಕಾರಿನಿಂದ ಹೊರ ಬರಲು ಪರದಾಡಿದ ಐರಾವತ ನಟಿ

ಕಡಿಮೆ ಗುರುತ್ವಾಕರ್ಷಣೆಯ ವಾಹನಗಳು ಸ್ಥಿರತೆಯನ್ನು ಹೊಂದಿರುತ್ತವೆ. ಏರೋ ಡೈನಾಮಿಕ್ಸ್ ಕಾರಣಕ್ಕೆ ಸ್ಪೋರ್ಟ್ಸ್ ಕಾರುಗಳು ಹಾಗೂ ಸೂಪರ್‌ಕಾರ್‌ಗಳು ಲೋ ಸ್ಲಂಗ್ ರೂಫ್ ಹೊಂದಿರುತ್ತವೆ.

ಲ್ಯಾಂಬೊರ್ಗಿನಿ ಹುರಾಕನ್ ಕಾರಿನಿಂದ ಹೊರ ಬರಲು ಪರದಾಡಿದ ಐರಾವತ ನಟಿ

ಈ ವಾಹನಗಳನ್ನು ವೇಗವಾಗಿ ಚಲಿಸುವಂತೆ ವಿನ್ಯಾಸಗೊಳಿಸಲಾಗಿರುತ್ತದೆ. ಈ ಕಾರಣಕ್ಕೆ ಈ ವಾಹನಗಳು ಉಳಿದ ವಾಹನಗಳಿಗಿಂತ ವಿಭಿನ್ನವಾಗಿರುತ್ತವೆ. ಸ್ಪೋರ್ಟ್ಸ್ ಕಾರುಗಳು ಹಾಗೂ ಸೂಪರ್‌ಕಾರ್‌ಗಳು ಲೋ ಸ್ಲಂಗ್ ಹೊಂದಿದ್ದು, ನೆಲ ಮುಟ್ಟುವಂತೆ ಸೀಟುಗಳನ್ನು ನೀಡಲಾಗಿರುತ್ತದೆ.

ಲ್ಯಾಂಬೊರ್ಗಿನಿ ಹುರಾಕನ್ ಕಾರಿನಿಂದ ಹೊರ ಬರಲು ಪರದಾಡಿದ ಐರಾವತ ನಟಿ

ಈ ರೀತಿಯ ಕಾರುಗಳ ಒಳ ಹೋಗಲು ಅಥವಾ ಹೊರ ಬರಲು ಊರ್ವಶಿ ರೌತೆಲಾ ಮಾತ್ರವಲ್ಲದೇ ಎತ್ತರಕ್ಕೆ ಇರುವ ಹಲವಾರು ಜನರು ಪರದಾಡುತ್ತಾರೆ. ಕೆಲ ದಿನಗಳ ಹಿಂದಷ್ಟೇ ದಿ ರಾಕ್ ಎಂದು ಕರೆಯಲ್ಪಡುವ ಜನಪ್ರಿಯ ಹಾಲಿವುಡ್ ನಟ ಡ್ವೇನ್ ಜಾನ್ಸನ್ ಪೋರ್ಷೆ ಟೇಕಾನ್ ಕಾರಿನ ಒಳಗೆ ಹೋಗಲು ಪರದಾಡಿದ್ದರು.

ಲ್ಯಾಂಬೊರ್ಗಿನಿ ಹುರಾಕನ್ ಕಾರಿನಿಂದ ಹೊರ ಬರಲು ಪರದಾಡಿದ ಐರಾವತ ನಟಿ

ಡ್ವೇನ್ ಜಾನ್ಸನ್ 6 ಅಡಿ 5 ಇಂಚು ಎತ್ತರವನ್ನು ಹೊಂದಿರುವುದೇ ಈ ರೀತಿ ಪರದಾಡಲು ಕಾರಣವೆಂದರೆ ತಪ್ಪಾಗಲಾರದು. ಅವರು ಫೆರಾರಿ ಕಾರಿನೊಳಗೆ ಹೋಗಲು ಸಹ ಪರದಾಡಿದ್ದರು.

ಹೆಚ್ಚಿನ ಸೂಪರ್‌ಕಾರು ತಯಾರಕ ಕಂಪನಿಗಳು ಕಾರುಗಳ ಒಳ ಹೋಗುವುದರ ಬಗ್ಗೆ ಹಾಗೂ ಹೊರ ಬರುವುದರ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ವಾಹನದ ವಿನ್ಯಾಸ, ಅದರ ಏರೋ ಡೈನಾಮಿಕ್ ಹಾಗೂ ಗುರುತ್ವಾಕರ್ಷಣೆಯ ಕೇಂದ್ರದಲ್ಲಿ ಹಸ್ತಕ್ಷೇಪ ಮಾಡಿದಂತಾಗುತ್ತದೆ ಎಂಬ ಕಾರಣಕ್ಕೆ ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ.

ಲ್ಯಾಂಬೊರ್ಗಿನಿ ಹುರಾಕನ್ ಕಾರಿನಿಂದ ಹೊರ ಬರಲು ಪರದಾಡಿದ ಐರಾವತ ನಟಿ

ಈ ಕಾರಣಕ್ಕೆ ಸ್ಪೋರ್ಟ್ಸ್ ಕಾರ್ ಅಥವಾ ಸೂಪರ್ ಕಾರ್ ಖರೀದಿಸುವ ಮುನ್ನ ಆ ಕಾರುಗಳ ಒಳಗೆ ಹೋಗಲು ಹಾಗೂ ಹೊರಗೆ ಬರಲು ಸಾಧ್ಯವಾಗುತ್ತದೆ ಎಂಬುದನ್ನು ಖಚಿತ ಪಡಿಸಿಕೊಂಡು ಖರೀದಿಸುವುದು ಒಳ್ಳೆಯದು.

Most Read Articles

Kannada
English summary
Urvashi Rautela struggles to come out from Lamborghini Huracan-supercar. Read in Kannada.
Story first published: Tuesday, July 27, 2021, 17:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X