ಟಾಮ್ ಕ್ರೂಸ್ ಮನವಿ ತಿರಸ್ಕರಿಸಿದ ಅಮೆರಿಕಾ ಸೇನೆ

ಟಾಮ್ ಕ್ರೂಸ್ ಹಾಲಿವುಡ್‌ನ ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರು. ಅವರು ತಮ್ಮ ಸಾಹಸಗಳಿಂದ ಜನಪ್ರಿಯರಾಗಿದ್ದಾರೆ. ಡ್ಯೂಪ್ ಬಳಸದೇ ಅನೇಕ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ವಿಮಾನವನ್ನು ಓಡಿಸುವ ಹಾಗೂ ಎತ್ತರದ ಕಟ್ಟಡಗಳನ್ನು ಏರುವ ದೃಶ್ಯಗಳಲ್ಲಿ ಡ್ಯೂಪ್ ಇಲ್ಲದೇ ನಟಿಸುತ್ತಾರೆ.

ಟಾಮ್ ಕ್ರೂಸ್ ಮನವಿ ತಿರಸ್ಕರಿಸಿದ ಅಮೆರಿಕಾ ಸೇನೆ

ಟಾಮ್ ಕ್ರೂಸ್ ಪೈಲಟ್ ತರಬೇತಿಯನ್ನು ಪಡೆದಿದ್ದು, ಅನೇಕ ಚಿತ್ರಗಳಲ್ಲಿ ವಿಮಾನ ಹಾಗೂ ಹೆಲಿಕಾಪ್ಟರ್‌ಗಳನ್ನು ಚಾಲನೆ ಮಾಡಿದ್ದಾರೆ. ವಿಶ್ವಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಕಾರಣಕ್ಕೆ ಈ ರೀತಿಯ ದೃಶ್ಯಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಾರೆ.

ಟಾಮ್ ಕ್ರೂಸ್ ಮನವಿ ತಿರಸ್ಕರಿಸಿದ ಅಮೆರಿಕಾ ಸೇನೆ

ಟಾಪ್ ಗನ್ ಚಿತ್ರವು ಟಾಮ್ ಕ್ರೂಸ್ ರವರನ್ನು ಹಾಲಿವುಡ್‌ನಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಅಭಿಮಾನಿ ಬಳಗವನ್ನು ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. 34 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಈ ಚಿತ್ರವು ಹಲವಾರು ಸಾಹಸ ದೃಶ್ಯಗಳನ್ನು ಹೊಂದಿತ್ತು.

ಟಾಮ್ ಕ್ರೂಸ್ ಮನವಿ ತಿರಸ್ಕರಿಸಿದ ಅಮೆರಿಕಾ ಸೇನೆ

ಈ ಚಿತ್ರದ ಎರಡನೇ ಭಾಗ ಬಿಡುಗಡೆಗೆ ಸಿದ್ಧವಾಗಿದೆ. ಟಾಮ್ ಕ್ರೂಸ್ ಮುಖ್ಯ ಪಾತ್ರದಲ್ಲಿರುವ ಈ ಚಿತ್ರವು ಜೂನ್ 26ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಮಾರಕ ಕರೋನಾ ವೈರಸ್ ನಿಂದಾಗಿ ಇಡೀ ಪ್ರಪಂಚವೇ ತತ್ತರಿಸಿದೆ.

ಟಾಮ್ ಕ್ರೂಸ್ ಮನವಿ ತಿರಸ್ಕರಿಸಿದ ಅಮೆರಿಕಾ ಸೇನೆ

ಈ ಕಾರಣಕ್ಕೆ ಬಹುತೇಕ ಚಿತ್ರಗಳ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಇದೇ ವೇಳೆ ಟಾಪ್ ಗನ್ ಮೇವರಿಕ್ ಚಿತ್ರದ ಎರಡನೆಯ ಭಾಗದ ಬಗ್ಗೆ ಹಲವು ಆಸಕ್ತಿದಾಯಕ ಮಾಹಿತಿಗಳು ಬಹಿರಂಗಗೊಂಡಿವೆ. ಈ ಚಿತ್ರವು ಅಭಿಮಾನಿಗಳಿಗೆ ಇಷ್ಟವಾಗುವುದರಲ್ಲಿ ಸಂಶಯವಿಲ್ಲ.

ಟಾಮ್ ಕ್ರೂಸ್ ಮನವಿ ತಿರಸ್ಕರಿಸಿದ ಅಮೆರಿಕಾ ಸೇನೆ

ಈ ಚಿತ್ರದ ಮೊದಲಾರ್ಧದಲ್ಲಿ ಟಾಮ್ ಕ್ರೂಸ್, ಪೀಟ್ ಮಾವೆರಿಕ್ ಮಿಚೆಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಅವರು ಯುವ ಪೈಲಟ್ ಪಾತ್ರವನ್ನು ನಿರ್ವಹಿಸಲಿದ್ದಾರೆ. ದ್ವಿತೀಯಾರ್ಧದಲ್ಲಿ, ಗೂಸ್‌ನ ಮಗ ಬ್ರಾಡ್ಲಿಯ ಸ್ನೇಹಿತನಿಗೆ ಬೋಧಕನ ಪಾತ್ರವನ್ನು ನಿಭಾಯಿಸಲಿದ್ದಾರೆ.

ಟಾಮ್ ಕ್ರೂಸ್ ಮನವಿ ತಿರಸ್ಕರಿಸಿದ ಅಮೆರಿಕಾ ಸೇನೆ

ಈ ಚಿತ್ರದಲ್ಲಿ ಆಕ್ಷನ್ ಹಾಗೂ ಫ್ಲೈಟ್ ಚೇಸಿಂಗ್ ದೃಶ್ಯಗಳು ಹೆಚ್ಚಿನ ಸಂಖ್ಯೆಯಲ್ಲಿರುತ್ತವೆ ಎಂದು ನಿರೀಕ್ಷಿಸಲಾಗಿದೆ. ಚಿತ್ರದ ಎರಡನೇ ಟ್ರೈಲರ್ ಇದನ್ನು ಖಚಿತ ಪಡಿಸಿತ್ತು.

ಟಾಮ್ ಕ್ರೂಸ್ ಮನವಿ ತಿರಸ್ಕರಿಸಿದ ಅಮೆರಿಕಾ ಸೇನೆ

ಟಾಮ್ ಕ್ರೂಸ್ ರವರು ಈ ಚಿತ್ರದ ಮೊದಲಾರ್ಧದಲ್ಲಿ ಲಾಕ್‌ಹೀಡ್ ಮಾರ್ಟಿನ್ಸ್ ಎಫ್ -14 ಅನ್ನು ಬಳಸಲು ಹಾಗೂ ದ್ವಿತೀಯಾರ್ಧದಲ್ಲಿ ಬೋಯಿಂಗ್ ಎಫ್ / ಎ - 18 ಸೂಪರ್ ಹಾರ್ನೆಟ್ ಅನ್ನು ಬಳಸಲು ಅವಕಾಶ ನೀಡುವಂತೆ ಕೋರಿ ಅಮೆರಿಕಾ ಸೇನೆಗೆ ಮನವಿ ಮಾಡಿದ್ದರು. ಆದರೆ ಅಮೆರಿಕಾ ಸೇನೆ ಈ ಮನವಿಯನ್ನು ತಿರಸ್ಕರಿಸಿದೆ.

ಈ ಕಾರಣಕ್ಕೆ ಬೋಯಿಂಗ್ ಎಫ್ / ಎ - 18 ಸೂಪರ್ ಹಾರ್ನೆಟ್ ವಿಮಾನದ ಬದಲು ಬೇರೆ ವಿಮಾನವನ್ನು ಬಳಸಲಾಗಿದೆ. ಕಂಪ್ಯೂಟರ್ ಗ್ರಾಫಿಕ್ಸ್ ನೆರವಿನಿಂದ ಈ ರೀತಿ ಬದಲಿಸಲಾಗಿದೆ. ಇದಕ್ಕಾಗಿ ಪಿ -51 ವಿಮಾನ ಹಾಗೂ ಹೆಲಿಕಾಪ್ಟರ್‌ಗಳನ್ನು ಬಳಸಲಾಗಿದೆ.

ಟಾಮ್ ಕ್ರೂಸ್ ಮನವಿ ತಿರಸ್ಕರಿಸಿದ ಅಮೆರಿಕಾ ಸೇನೆ

ಈ ಚಿತ್ರದಲ್ಲಿ ಹೆಚ್ಚಿನ ಥ್ರಿಲ್ ನೀಡುವ ಉದ್ದೇಶಕ್ಕೆ ಕಂಪ್ಯೂಟರ್ ಗ್ರಾಫಿಕ್ಸ್ ಅನ್ನು ಹೆಚ್ಚು ಬಳಸದೆ ನೈಜವಾಗಿ ಚಿತ್ರೀಕರಿಸಲು ಚಿತ್ರತಂಡವು ಸಾಕಷ್ಟು ಶ್ರಮಿಸಿದೆ. ಟಾಮ್ ಕ್ರೂಸ್ ಹಾಗೂ ಸಹನಟರು ನೈಜವಾದ ಸಾಹಸಗಳನ್ನು ಮಾಡಿದ್ದಾರೆ. ಈ ಕಾರಣಕ್ಕೆ ಈ ಚಿತ್ರವು ಅಭಿಮಾನಿಗಳಲ್ಲಿ ಹೆಚ್ಚು ನಿರೀಕ್ಷೆಯನ್ನು ಹುಟ್ಟುಹಾಕಿದೆ.

Most Read Articles

Kannada
English summary
US army denies Tom Cruise request. Read in Kannada.
Story first published: Monday, April 6, 2020, 11:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X