ಬಿಸಿಲ ಧಗೆಯಿಂದ ತಪ್ಪಿಸಿಕೊಳ್ಳಲು ಐಷಾರಾಮಿ ಕಾರಿಗೆ ಸೆಗಣಿ ಮೆತ್ತಿದ ಅಸಾಮಿ..!

ಹೆಚ್ಚುತ್ತಿರುವ ಜಾಗತಿಕ ತಾಪಮಾನದಿಂದಾಗಿ ಜನಸಾಮಾನ್ಯರ ಬದುಕು ಹೈರಾಣಾಗಿದ್ದು, ಬಿಸಿಲ ಧಗೆಯಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಡಬೇಕಾದ ಪರಿಸ್ಥಿತಿ ಉಂಟಾಗಿದೆ. ಹೀಗಿರುವಾಗ ವಾಹನ ಸವಾರರೂ ಕೂಡಾ ಬಿಸಿಲ ತಾಪಮಾನಕ್ಕೆ ಬಳಲಿ ಹೋಗಿದ್ದು, ಬಿರುಬಿಸಿಲಿನಿಂದ ತಪ್ಪಿಸಿಕೊಳ್ಳಲು ಕೆಲವು ಹಳೆಯ ಪದ್ದತಿಗಳತ್ತ ಮುಖಮಾಡುತ್ತಿದ್ದಾರೆ.

ಬಿಸಿಲ ಧಗೆಯಿಂದ ತಪ್ಪಿಸಿಕೊಳ್ಳಲು ಐಷಾರಾಮಿ ಕಾರಿಗೆ ಸೆಣಗಿ ಮೆತ್ತಿದ ಅಸಾಮಿ..!

ಹೌದು, ಉರಿಬಿಸಿಲಿನಿಂದ ತಪ್ಪಿಸಿಕೊಳ್ಳಲು ಎಸಿ ಬಳಕೆ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಯಾಕೆಂದ್ರೆ ಹೊರಗಿನ ತಾಪಮಾನವು ವರ್ಷದಿಂದ ವರ್ಷಕ್ಕೆ ಹೆಚ್ಚಿರುವುದರಿಂದ ವಾಹನ ಸವಾರಿ ಕಷ್ಟವಾಗುತ್ತಿದ್ದು, ಇದರಿಂದ ತಪ್ಪಿಸಿಕೊಳ್ಳಲು ಇಲ್ಲೊಬ್ಬ ಟೊಯೊಟಾ ಕಾರು ಮಾಲೀಕನು ಕಾರಿನ ಮೇಲ್ಭಾಗಕ್ಕೆ ಸೆಗಣಿ ಮೆತ್ತಿಸಿ ಸುದ್ದಿಯಾಗಿದ್ದಾರೆ.

ಬಿಸಿಲ ಧಗೆಯಿಂದ ತಪ್ಪಿಸಿಕೊಳ್ಳಲು ಐಷಾರಾಮಿ ಕಾರಿಗೆ ಸೆಣಗಿ ಮೆತ್ತಿದ ಅಸಾಮಿ..!

ಬಿಸಿಲಿನಿಂದ ಕಾರಿನ ಪೆಂಟ್ ಹಾಳಾಗದಿರಲಿ ಅಂತಾ ಬಹುತೇಕ ವಾಹನ ಮಾಲೀಕರು ವಾಹನಗಳಿಗೆ ಪಾಸ್ಟಿಕ್ ಹಾಳೆ ಹೊದಿಸುವುದನ್ನು ನಾವು ನೋಡಿದ್ದೇವೆ. ಇನ್ನು ಕೆಲವರು ವಾಹನಗಳಿಗೆ ಸರಿದೂಗುವ ಹಾಗೆ ಸಿದ್ದಪಡಿಸಲಾಗುವ ಛತ್ರಿಗಳನ್ನು ಬಳಕೆ ಮಾಡುವುದನ್ನು ಕೇಳಿದ್ದೇವೆ.

ಬಿಸಿಲ ಧಗೆಯಿಂದ ತಪ್ಪಿಸಿಕೊಳ್ಳಲು ಐಷಾರಾಮಿ ಕಾರಿಗೆ ಸೆಣಗಿ ಮೆತ್ತಿದ ಅಸಾಮಿ..!

ಆದ್ರೆ ಇಲ್ಲೊಬ್ಬ ಟೊಯೊಟಾ ಕರೊಲ್ಲಾ ಆಲ್ಟಿಸ್ ಕಾರು ಮಾಲೀಕ ಮಾತ್ರ ಕಾರಿನ ಮೇಲ್ಭಾಗವನ್ನು ಸಂಪೂರ್ಣವಾಗಿ ಸೆಗಣಿಯಿಂದಲೇ ಕೊಟಿಂಗ್ ಮಾಡಿಸಿದ್ದು, ಕಾರು ಮಾಲೀಕನ ಹೊಸ ತಂತ್ರ ಕಂಡು ಬಹುತೇಕ ಕಾರು ಮಾಲೀಕರು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಹೀಗೂ ಮಾಡಬಹುದಾ ಅಂತಾ ತಲೆಕೆಡಿಸಿಕೊಂಡಿದ್ದಾರೆ.

ಬಿಸಿಲ ಧಗೆಯಿಂದ ತಪ್ಪಿಸಿಕೊಳ್ಳಲು ಐಷಾರಾಮಿ ಕಾರಿಗೆ ಸೆಣಗಿ ಮೆತ್ತಿದ ಅಸಾಮಿ..!

ಅಷ್ಟಕ್ಕೂ ಕಾರಿನ ಮೇಲ್ಭಾಗದಲ್ಲಿ ಸೆಗಣಿ ಮೆತ್ತಲು ಒಂದು ಕಾರಣವಿದೆ. ಬಿಸಿಲ ತಾಪಮಾನದಿಂದ ಕಾರಿನ ಮೇಲ್ಭಾಗವು ಕಾಯದಿರುವಂತೆ ತಡೆಯಲು ಈ ರೀತಿ ಮಾಡಲಾಗಿದ್ದು, ಇದರಿಂದ ಎಸಿ ಕಾರ್ಯನಿರ್ವಹಣೆ ಪರಿಣಾಮಕಾರಿಯಾಗಬಹುದು ಎನ್ನುವುದು ಟೊಯೊಟಾ ಕಾರು ಮಾಲೀಕನ ಐಡಿಯಾ.

ಬಿಸಿಲ ಧಗೆಯಿಂದ ತಪ್ಪಿಸಿಕೊಳ್ಳಲು ಐಷಾರಾಮಿ ಕಾರಿಗೆ ಸೆಣಗಿ ಮೆತ್ತಿದ ಅಸಾಮಿ..!

ಹೀಗಾಗಿ ಅಚ್ಚುಕಟ್ಟಾಗಿ ಕಾರಿನ ಮೇಲ್ಭಾಗಕ್ಕೆ ಸೆಗಣಿಯಿಂದ ಕೊಟಿಂಗ್ ಮಾಡಿರುವ ಕಾರು ಮಾಲೀಕನು ಕಾರಿನ ಕನ್ನಡಿಗಳು, ಲೋಗೋ ಮತ್ತು ಬಿಡಿಭಾಗಗಳ ಮೇಲೆ ಸೆಗಣಿ ಬಿಳದಂತೆ ಎಚ್ಚರವಹಿಸಿ ಕೋಟಿಂಗ್ ಮಾಡಲಾಗಿದ್ದು, ಐಷಾರಾಮಿ ಕಾರು ಹೋಗಿ ಮಣ್ಣಿನಿಂದ ನಿರ್ಮಾಣ ಮಾಡಲಾದ ಕಾರುಗಳಂತೆ ಕಾಣುತ್ತಿದೆ

ಬಿಸಿಲ ಧಗೆಯಿಂದ ತಪ್ಪಿಸಿಕೊಳ್ಳಲು ಐಷಾರಾಮಿ ಕಾರಿಗೆ ಸೆಣಗಿ ಮೆತ್ತಿದ ಅಸಾಮಿ..!

ಆದ್ರೆ ಸೆಗಣಿ ಮೆತ್ತಿದ ನಂತರ ಕಾರಿನ ಎಸಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎನ್ನುವ ಬಗ್ಗೆ ಮಾಹಿತಿಗಳಿಲ್ಲವಾದರೂ ಕಾರು ಮಾಲೀಕನ ಹೊಸ ಐಡಿಯಾ ಮಾತ್ರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು, ಸೆಗಣಿಯಿಂದ ಕಾರಿನ ಮೇಲ್ಭಾಗವನ್ನು ಕೋಟಿಂಗ್ ಮಾಡಿರುವುದಕ್ಕೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ ಇನ್ನು ಕೆಲವರು ಇನ್ನು ಏನೇನು ನೋಡ್ಬೇಕು ಅಂತಾ ತಲೆ ಕಡೆಸಿಕೊಂಡಿದ್ದಾರೆ.

ಬಿಸಿಲ ಧಗೆಯಿಂದ ತಪ್ಪಿಸಿಕೊಳ್ಳಲು ಐಷಾರಾಮಿ ಕಾರಿಗೆ ಸೆಣಗಿ ಮೆತ್ತಿದ ಅಸಾಮಿ..!

ಇನ್ನು ಜಾಗತಿಕ ತಾಪಮಾನದಿಂದ ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಗರಿಷ್ಠ ಪ್ರಮಾಣದ ಉಷ್ಠಾಂಶ ದಾಖಲಾಗುತ್ತಿದ್ದು, ಎಸಿ ಸೌಲಭ್ಯವಿಲ್ಲದೆ ವಾಹನ ಪ್ರಯಾಣ ಕಷ್ಟಸಾಧ್ಯ ಅಂದ್ರೆ ತಪ್ಪಾಗುವುದಿಲ್ಲ. ಕಾರುಗಳಲ್ಲಿ ಎಸಿ ಇದ್ದರೂ ಕೂಡಾ ಸರಿಯಾಗಿ ಕಾರ್ಯನಿರ್ವಹಣೆ ಮಾಡುವುದೇ ಇಲ್ಲ. ಹೀಗಾಗಿ ಬೇಸಿಗೆ ಕಾಲದಲ್ಲಿ ಕಾರಿನ ಎಸಿ ಯುನಿಟ್ ಪ್ರಭಾವಶಾಲಿಯಾಗಿ ಕೆಲಸ ಮಾಡಬೇಕಾದರೆ ಏನು ಮಾಡಬೇಕು ಎನ್ನುವ ಪ್ರಶ್ನೆಗೆ ಈ ಟಿಪ್ಸ್ ಫಾಲೋ ಮಾಡಿ ನೋಡಿ.

ಬಿಸಿಲ ಧಗೆಯಿಂದ ತಪ್ಪಿಸಿಕೊಳ್ಳಲು ಐಷಾರಾಮಿ ಕಾರಿಗೆ ಸೆಣಗಿ ಮೆತ್ತಿದ ಅಸಾಮಿ..!

ನೆರಳಿನಡಿ ಪಾರ್ಕ್ ಮಾಡಿ..!

ನಿಮ್ಮ ಕಾರನ್ನು ಸಾಧ್ಯವಾದಷ್ಟು ತಣ್ಣಗಿರಿಸಲು ನೆರಳು ಇರುವ ಪ್ರದೇಶಗಳಲ್ಲಿ ಪಾರ್ಕ್ ಮಾಡುವುದು ಒಳಿತು. ಯಾಕೆಂದ್ರೆ ಮರದ ಅಡಿಯಲ್ಲಿ ಅಥವಾ ಬೆಸ್‌ಮೆಂಟ್ ಪಾರ್ಕಿಂಗ್ ಸ್ಲಾಟ್‌ನಲ್ಲಿ ಪಾರ್ಕ್ ಮಾಡುವುದರಿಂದ ಕಾರು ತಪ್ಪಾಗಿರುವುದಲ್ಲದೇ ಎಸಿ ಮೇಲೆ ಹೆಚ್ಚು ಒತ್ತಡ ಬೀಳಲಾರದು.

ಬಿಸಿಲ ಧಗೆಯಿಂದ ತಪ್ಪಿಸಿಕೊಳ್ಳಲು ಐಷಾರಾಮಿ ಕಾರಿಗೆ ಸೆಣಗಿ ಮೆತ್ತಿದ ಅಸಾಮಿ..!

ವಿಂಡ್ ಸ್ಕ್ರೀನ್ ರಿಪ್ಲೆಕ್ಟರ್‍‍ಗಳನ್ನು ಬಳಸಿ..!

ಈ ಹಿಂದಿನಿಂದಲೂ ಬಹುತೇಕ ಕಾರು ಮಾಲೀಕರು ಈ ಸಲಹೆಯನ್ನು ಪಾಲಿಸುತ್ತಿದ್ದರು. ಕಾರಿನ ಮುಂಭಾಗ ವಿಂಡ್ ಸ್ಕ್ರೀನ್ ಮತ್ತು ಹಿಂಭಾಗದ ವಿಂಡ್‌ ಸ್ಕ್ರೀನ್‌ಗಳಿಗೆ ಕಪ್ಪು ಬಣ್ಣದ ರಿಫ್ಲೆಕ್ಟರ್‍‍ಗಳನ್ನು ಅಂಟಿಸುವುದು ಕೂಡಾ ಬಿಸಿಲ ತಾಪವನ್ನು ಕಡಿಮೆ ಮಾಡಬಹುದಾಗಿದೆ.

MOST READ: ಬ್ರೇಕ್ ಫೇಲ್ ಆದಾಗ ಜೀವ ಉಳಿಸಿಕೊಳ್ಳಲು ಈ ಟಿಪ್ಸ್ ಖಂಡಿತ ನಿಮ್ಮ ಸಹಾಯಕ್ಕೆ ಬರುತ್ತೆ..!

ಬಿಸಿಲ ಧಗೆಯಿಂದ ತಪ್ಪಿಸಿಕೊಳ್ಳಲು ಐಷಾರಾಮಿ ಕಾರಿಗೆ ಸೆಣಗಿ ಮೆತ್ತಿದ ಅಸಾಮಿ..!

ಹೀಗಾಗಿ ಶಾಖವನ್ನು ತಡೆಯಲು ವಿಂಡ್ ಸ್ಕ್ರೀನ್‌ಗಳಿಗೆ ರಿಫ್ಲೆಕ್ಟರ್‍‍ಗಳನ್ನು ಬಳಕೆ ಮಾಡಬಹುದಾಗಿದ್ದು, ಇವು ಸೂರ್ಯ ಶಾಖವನ್ನು ಕಾರಿನ ಒಳಭಾಗಕ್ಕೆ ಬಿಡದಂತೆ ತಡೆಯುವುದಲ್ಲದೇ ಎಸಿ ಮೇಲೆ ಹೆಚ್ಚಿನ ಒತ್ತಡ ಬೀಳದಂತೆ ಮಾಡುತ್ತದೆ.

ಬಿಸಿಲ ಧಗೆಯಿಂದ ತಪ್ಪಿಸಿಕೊಳ್ಳಲು ಐಷಾರಾಮಿ ಕಾರಿಗೆ ಸೆಣಗಿ ಮೆತ್ತಿದ ಅಸಾಮಿ..!

ಕಿಟಕಿ ಪೂರ್ತಿ ಮುಚ್ಚುವುದು ಬೇಡ..!

ಬಹುತೇಕ ಕಾರು ಮಾಲೀಕರು ಕಾರ್ ಪಾರ್ಕ್ ಮಾಡಿದ ನಂತರ ಕಾರಿನ ವಿಂಡೊಗಳನ್ನು ಪೂರ್ತಿಯಾಗಿ ಮುಚ್ಚಿಬಿಡುತ್ತಾರೆ. ಇದು ತುಂಬಾ ತಪ್ಪು. ಹೀಗೆ ಮಾಡುವುದರಿಂದ ಕಾರಿನಲ್ಲಿರುವ ಗಾಳಿಯು ಬಿಸಿಯಾಗಿ ಮಾರ್ಪಾಡುತ್ತದೆ.

ಬಿಸಿಲ ಧಗೆಯಿಂದ ತಪ್ಪಿಸಿಕೊಳ್ಳಲು ಐಷಾರಾಮಿ ಕಾರಿಗೆ ಸೆಣಗಿ ಮೆತ್ತಿದ ಅಸಾಮಿ..!

ಹೀಗಾಗಿ ಬಿಸಿಲು ಇರುವ ಜಾಗದಲ್ಲಿ ಪಾರ್ಕ್ ಮಾಡಿ ಅಲ್ಲಿಯೇ ಇರುವುದಾದರೇ ಪೂರ್ತಿಯಾಗಿ ವಿಂಡ್ ಮುಚ್ಚದೇ ತುಸು ತೆರೆಯುವುದು ಒಳಿತು. ಇಲ್ಲವಾದಲ್ಲಿ ಕಾರ್ ಪಾರ್ಕ್ ಬೇರೆಯಡೆ ಹೋಗುವುದಾದರೇ ನೆರಳಿನಡಿಯೇ ಪಾರ್ಕ್ ಮಾಡಿಬಿಡುವುದು ಸೂಕ್ತ.

ಬಿಸಿಲ ಧಗೆಯಿಂದ ತಪ್ಪಿಸಿಕೊಳ್ಳಲು ಐಷಾರಾಮಿ ಕಾರಿಗೆ ಸೆಣಗಿ ಮೆತ್ತಿದ ಅಸಾಮಿ..!

ಎಸಿ ಆನ್ ಮಾಡುವ ಮುನ್ನ..!

ಹೆಚ್ಚಿನ ಸಮಯ ಬಿಸಿಲಿನಲ್ಲಿ ಪಾರ್ಕ್ ಮಾಡಿದ ನಂತರ ಈ ಟಿಪ್ಸ್ ತಪ್ಪದೇ ಅನುಸರಿಸುವುದು ಹೆಚ್ಚು ಪರಿಣಾಮಕಾರಿಯಾಗಿದೆ. ಬಿಸಿಲಿನಲ್ಲಿ ಪಾರ್ಕ್ ಮಾಡಿ ತಕ್ಷಣವೇ ಕಾರು ಪ್ರಯಾಣ ಮಾಡುವ ಸಂದರ್ಭವಿದ್ದಾಗ ಎಸಿ ಆನ್ ಮಾಡುವ ಪೂರ್ತಿಯಾಗಿ ಕಿಟಿಕಿಗಳನ್ನು ಕ್ಲೋಸ್ ಮಾಡಲೇಬೇಡಿ.

ಬಿಸಿಲ ಧಗೆಯಿಂದ ತಪ್ಪಿಸಿಕೊಳ್ಳಲು ಐಷಾರಾಮಿ ಕಾರಿಗೆ ಸೆಣಗಿ ಮೆತ್ತಿದ ಅಸಾಮಿ..!

ಯಾಕೆಂದ್ರೆ, ಕಾರು ಚಾಲನೆ ಶುರು ಮಾಡಿದ ತಕ್ಷಣವೇ ಎಸಿ ಆನ್ ಮಾಡಿದಲ್ಲಿ ಒಳಭಾಗವನ್ನು ತಣ್ಣಗಾಗಿಸಲು ಎಸಿಗೆ ಹೆಚ್ಚಿನ ಸಮಯಬೇಕಾಗುತ್ತದೆ. ಆದ್ದರಿಂದ ಪ್ರಯಾಣಕ್ಕೂ ಮುನ್ನವೇ ವಿಂಡೋಗಳನ್ನು ಪೂರ್ತಿಯಾಗಿ ಕೆಳಕ್ಕೆ ಇಳಿಸಿ ಕೆಲವು ನಿಮಿಷ ಹೊರಗಿನ ಗಾಳಿಯಲ್ಲಿ ಕಾರಿನ ಒಳಭಾಗವನ್ನು ತಣ್ಣಗಾಗಲು ಬೀಡಿ. ತದನಂತರವಷ್ಟೇ ಕಿಟಿಕಿ ಮುಚ್ಚಿ ಎಸಿ ಆನ್ ಮಾಡಿ ನೋಡಿ.

ಬಿಸಿಲ ಧಗೆಯಿಂದ ತಪ್ಪಿಸಿಕೊಳ್ಳಲು ಐಷಾರಾಮಿ ಕಾರಿಗೆ ಸೆಣಗಿ ಮೆತ್ತಿದ ಅಸಾಮಿ..!

ಸಮಯಕ್ಕೆ ಸರಿಯಾಗಿ ಸರ್ವೀಸ್ ಮಾಡಿಸಿ

ಬೇಸಿಗೆ ಶುರುವಾಗುವುದಕ್ಕೂ ಮುನ್ನ ಮನೆಗಳಲ್ಲಿ ಅಳವಡಿಸಲಾಗಿರುವ ಎಸಿಯನ್ನು ಹೇಗೆ ಸರ್ವೀಸ್ ಮಾಡಿಸುತ್ತಿರೋ ಹಾಗೆಯೆ ಕಾರಿನ ಎಸಿಯನ್ನು ಕೂಡಾ ಕಾಲಕಾಲಕ್ಕೆ ಚೆಕ್ ಮಾಡಿಸುವುದನ್ನು ಮರೆಯಬಾರದು. ಇದರಿಂದ ದೂರ ಪ್ರಯಾಣದ ಸಂದರ್ಭಗಳಲ್ಲಿ ಯಾವುದೇ ರೀತಿಯಾದ ತೊಂದರೆಗಳು ಇರುವುದಿಲ್ಲ.

Most Read Articles

Kannada
English summary
Used Cow dung To Beat The Heat - Toyota Corolla. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X