ವೈರಲ್ ಆಯ್ತು ಯುವಕರು ಕಾರಿನ ಮೇಲೆ ಸ್ಟಂಟ್ ಮಾಡುತ್ತಿರುವ ವೀಡಿಯೊ

ಉತ್ತರ ಪ್ರದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ರಸ್ತೆಗಳನ್ನು ಉತ್ತಮವಾಗಿ ಅಭಿವೃದ್ಧಿಪಡಿಸಲಾಗಿದೆ. ಪ್ರಗತಿಗಾಗಿ ಉತ್ತರ ಪ್ರದೇಶದ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಆದರೆ ಕೆಲವು ಯುವಕರು ಉತ್ತಮವಾಗಿರುವ ರಸ್ತೆಗಳಲ್ಲಿ ವಾಹನಗಳ ಮೂಲಕ ಸ್ಟಂಟ್ ಮಾಡಿ ಜನರ ಜೀವಕ್ಕೆ ಕುತ್ತು ತರುವ ಕೆಲಸ ಮಾಡುತ್ತಿದ್ದಾರೆ.

ವೈರಲ್ ಆಯ್ತು ಯುವಕರು ಕಾರಿನ ಮೇಲೆ ಸ್ಟಂಟ್ ಮಾಡುತ್ತಿರುವ ವೀಡಿಯೊ

ಉತ್ತರ ಪ್ರದೇಶದ ಇತಾಹ್‌ನಲ್ಲಿ ನಡೆದ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೀಡಿಯೊದಲ್ಲಿ ನಿರ್ಜನವಾಗಿರುವ ಹೆದ್ದಾರಿಯಲ್ಲಿ ಮೂರು ಕಾರುಗಳನ್ನು ಸಾಗುತ್ತಿರುವುದನ್ನು ಕಾಣಬಹುದು. ಆ ಕಾರುಗಳ ಮೇಲೆ ಯುವಕರು ನೃತ್ಯ ಮಾಡುತ್ತಾ ಸೆಲ್ಫಿ ತೆಗೆಯುತ್ತಿರುವುದನ್ನು ಸಹ ಕಾಣಬಹುದು.

ವೈರಲ್ ಆಯ್ತು ಯುವಕರು ಕಾರಿನ ಮೇಲೆ ಸ್ಟಂಟ್ ಮಾಡುತ್ತಿರುವ ವೀಡಿಯೊ

ಯುವಕರು ಕಾರ್ ಅನ್ನು ವೇಗವಾಗಿ ಚಾಲನೆ ಮಾಡುತ್ತಾ ಸಾಗುತ್ತಿದ್ದಾರೆ. ವರದಿಗಳ ಪ್ರಕಾರ ಸುಮಾರು 12 ಯುವಕರು ಈ ಕೃತ್ಯದಲ್ಲಿ ಭಾಗಿಯಾಗಿದ್ದರು. ಈ ವೀಡಿಯೊ ಕೇವಲ 25 ಸೆಕೆಂಡುಗಳಷ್ಟು ಉದ್ದವಾಗಿದೆ.

ವೈರಲ್ ಆಯ್ತು ಯುವಕರು ಕಾರಿನ ಮೇಲೆ ಸ್ಟಂಟ್ ಮಾಡುತ್ತಿರುವ ವೀಡಿಯೊ

ಈ ವೀಡಿಯೊ ಸಾಮಾಜಿಕ ಜಾಲತಾಣ, ಸ್ಥಳೀಯ ಹಾಗೂ ರಾಷ್ಟ್ರೀಯ ಸುದ್ದಿ ವಾಹಿನಿಗಳಲ್ಲಿ ವೈರಲ್ ಆದ ನಂತರ ಎಚ್ಚೆತ್ತ ಸ್ಥಳೀಯ ಪೊಲೀಸರು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಈ ಘಟನೆ ಹೆದ್ದಾರಿಯಲ್ಲಿ ನಡೆದಿಲ್ಲ. ರಸ್ತೆಗಳಲ್ಲಿ ಯಾವುದೇ ರೇಲಿಂಗ್ ಇಲ್ಲವೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವೈರಲ್ ಆಯ್ತು ಯುವಕರು ಕಾರಿನ ಮೇಲೆ ಸ್ಟಂಟ್ ಮಾಡುತ್ತಿರುವ ವೀಡಿಯೊ

ಆದರೆ ಈ ಘಟನೆ ಹೆದ್ದಾರಿಯಲ್ಲಿಯೇ ನಡೆದಿದೆ ಎಂದು ಹಲವು ವರದಿಗಳಲ್ಲಿ ಹೇಳಿರುವುದರಿಂದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ರೀತಿಯ ಘಟನೆಗಳಲ್ಲಿಪೊಲೀಸರು ವಾಹನಗಳ ನೋಂದಣಿ ಸಂಖ್ಯೆಗಳ ಮೂಲಕ ಕಾರುಗಳನ್ನು ಪತ್ತೆ ಹಚ್ಚಿ ಯುವಕರನ್ನು ಬಂಧಿಸುತ್ತಾರೆ.

ವೈರಲ್ ಆಯ್ತು ಯುವಕರು ಕಾರಿನ ಮೇಲೆ ಸ್ಟಂಟ್ ಮಾಡುತ್ತಿರುವ ವೀಡಿಯೊ

ಆದರೆ ಈ ವೀಡಿಯೊದಲ್ಲಿ ಕಾರುಗಳ ನೋಂದಣಿ ಸಂಖ್ಯೆ ಗೋಚರಿಸುತ್ತಿಲ್ಲ. ಹಿಂಭಾಗದಲ್ಲಿರುವ ಕಾರು ಸಹ ನೋಂದಣಿ ಫಲಕವನ್ನು ಹೊಂದಿಲ್ಲ. ಪೊಲೀಸರು ಅದನ್ನು ಪತ್ತೆಹಚ್ಚಲು ಸಾಧ್ಯವಾಗಬಾರದೆಂಬ ಕಾರಣಕ್ಕೆ ಈ ಯುವಕರು ಉದ್ದೇಶಪೂರ್ವಕವಾಗಿ ನೋಂದಣಿ ಫಲಕವನ್ನು ತೆಗೆದು ಹಾಕಿರುವ ಸಾಧ್ಯತೆಗಳಿವೆ.

ವೈರಲ್ ಆಯ್ತು ಯುವಕರು ಕಾರಿನ ಮೇಲೆ ಸ್ಟಂಟ್ ಮಾಡುತ್ತಿರುವ ವೀಡಿಯೊ

ಸಾರ್ವಜನಿಕ ರಸ್ತೆಗಳಲ್ಲಿ ಸ್ಟಂಟ್ ಮಾಡುವುದು ಕಾನೂನುಬಾಹಿರ. ಈ ರೀತಿಯ ಸ್ಟಂಟ್'ಗಳು ಸಾರ್ವಜನಿಕರ ಪ್ರಾಣಕ್ಕೆ ಸಂಚಕಾರ ತಂದಿಡುತ್ತವೆ. ಈ ಸ್ಟಂಟ್'ಗಳು ಬಹುತೇಕ ಬಾರಿ ಅಪಘಾತಗಳಲ್ಲಿ ಕೊನೆಯಾಗುತ್ತವೆ.

ವಾಹನಗಳಲ್ಲಿ ಸ್ಟಂಟ್ ಮಾಡಲೇ ಬೇಕು ಎಂದೆನಿಸಿದರೆ ಖಾಲಿ ಪ್ರದೇಶ ಅಥವಾ ಮೈದಾನಗಳಲ್ಲಿ ಮಾಡುವುದು ಒಳ್ಳೆಯದು. ಇತ್ತೀಚಿನ ದಿನಗಳಲ್ಲಿ ಪೊಲೀಸರುಈ ರೀತಿಯ ಕೃತ್ಯಗಳನ್ನು ತಡೆಗಟ್ಟಲು ನಗರದ ವಿವಿಧ ಭಾಗಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ.

ವೈರಲ್ ಆಯ್ತು ಯುವಕರು ಕಾರಿನ ಮೇಲೆ ಸ್ಟಂಟ್ ಮಾಡುತ್ತಿರುವ ವೀಡಿಯೊ

ಇವುಗಳ ಮೂಲಕ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರನ್ನು ಪತ್ತೆ ಹಚ್ಚಿ ಇ ಚಲನ್ ಕಳುಹಿಸಲಾಗುತ್ತದೆ. ಈ ರೀತಿಯ ಘಟನೆ ನಡೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ನಡೆದಿದ್ದ ಹಲವು ಘಟನೆಗಳಲ್ಲಿ ಪೊಲೀಸರು ನಂಬರ್ ಪ್ಲೇಟ್'ಗಳ ಆಧಾರದ ಮೇಲೆ ಕೃತ್ಯಗಳಲ್ಲಿ ಭಾಗಿಯಾಗಿದ್ದವರನ್ನು ಬಂಧಿಸಿದ್ದರು.ಈ ಘಟನೆಯಲ್ಲಿ ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಗಮನಿಸಿ: ಕೊನೆಯ ಎರಡು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Uttar Pradesh youths does stunt on cars video goes viral. Read in Kannada.
Story first published: Wednesday, June 16, 2021, 20:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X