ಭಾರತದಲ್ಲಿರುವ ಏಳು ವಿಭಿನ್ನ ಬಗೆಯ ಡ್ರೈವಿಂಗ್ ಲೈಸೆನ್ಸ್'ಗಳಿವು

ಭಾರತದಲ್ಲಿ ವಿವಿಧ ರೀತಿಯ ವಾಹನಗಳನ್ನು ಚಾಲನೆ ಮಾಡಲು ವಿಭಿನ್ನ ರೀತಿಯ ಚಾಲನಾ ಪರವಾನಗಿಗಳ ಅಗತ್ಯವಿದೆ. ಚಾಲನಾ ಪರವಾನಗಿಗಳನ್ನು ಹೆಚ್ಚಾಗಿ ಕಾರು ಅಥವಾ ಬೈಕುಗಳಿಗಾಗಿ ನೀಡಲಾಗುತ್ತದೆ.

ಭಾರತದಲ್ಲಿರುವ ಏಳು ವಿಭಿನ್ನ ಬಗೆಯ ಡ್ರೈವಿಂಗ್ ಲೈಸೆನ್ಸ್'ಗಳಿವು

ಆದರೆ ಟ್ರಕ್‌ ಅಥವಾ ಟ್ರಾಲಿಯಂತಹ ಭಾರೀ ವಾಹನಗಳನ್ನು ಚಾಲನೆ ಮಾಡಲು ಇವುಗಳನ್ನು ಬಳಸುವುದಿಲ್ಲ. ಕಮರ್ಷಿಯಲ್ ವಾಹನ ಚಾಲನೆ ಮಾಡಲು ಖಾಸಗಿವಾಹನಕ್ಕಾಗಿ ನೀಡಿರುವ ಪರವಾನಗಿಯನ್ನು ಬಳಸುವುದು ಕಾನೂನುಬಾಹಿರವಾಗಿದೆ. ವಿವಿಧ ರೀತಿಯ ವಾಹನಗಳನ್ನು ಚಾಲನೆ ಮಾಡಲು ನೀಡಲಾಗುವ 7 ವಿಭಿನ್ನ ಬಗೆಯ ಚಾಲನಾ ಪರವಾನಗಿಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಭಾರತದಲ್ಲಿರುವ ಏಳು ವಿಭಿನ್ನ ಬಗೆಯ ಡ್ರೈವಿಂಗ್ ಲೈಸೆನ್ಸ್'ಗಳಿವು

1. ಎಂಸಿ 50 ಸಿಸಿ

ಈ ಚಾಲನಾ ಪರವಾನಗಿಯನ್ನು ಕಡಿಮೆ ಎಂಜಿನ್ ಪವರ್ ಹೊಂದಿರುವ ವಾಹನಗಳನ್ನು ಚಾಲನೆ ಮಾಡಲು ನೀಡಲಾಗುತ್ತದೆ. ಇವುಗಳಲ್ಲಿ 50 ಸಿಸಿ ಅಥವಾ ಅದಕ್ಕಿಂತ ಕಡಿಮೆ ಸಾಮರ್ಥ್ಯದ ಸ್ಕೂಟರ್‌, ಬೈಕ್‌ ಅಥವಾ ಮೊಪೆಡ್‌ಗಳು ಸೇರಿವೆ. 16 ವರ್ಷದ ಬಳಿಕ ಈ ಪರವಾನಗಿಗಾಗಿ ಅರ್ಜಿ ಸಲ್ಲಿಸಬಹುದು.

ಭಾರತದಲ್ಲಿರುವ ಏಳು ವಿಭಿನ್ನ ಬಗೆಯ ಡ್ರೈವಿಂಗ್ ಲೈಸೆನ್ಸ್'ಗಳಿವು

2. ಎಲ್‌ಎಂವಿ - ಎನ್‌ಟಿ

ಲಘು ಮೋಟಾರ್ ವಾಹನ (ಎನ್‌ಟಿ) ಚಾಲನಾ ಪರವಾನಗಿಯೊಂದಿಗೆ, ಯಾವುದೇ ರೀತಿಯ ಜೀಪ್ ಅಥವಾ ಮೋಟಾರ್ ಕಾರ್ ಚಾಲನೆ ಮಾಡಬಹುದು. ಆದರೆ ಈ ಪರವಾನಗಿ ಮೂಲಕ ಕಮರ್ಷಿಯಲ್ ವಾಹನಗಳನ್ನು ಚಾಲನೆ ಮಾಡಲು ಸಾಧ್ಯವಿಲ್ಲ. ಈ ಪರವಾನಗಿಯನ್ನು ವೈಯಕ್ತಿಕ ವಾಹನಗಳಿಗೆ ಮಾತ್ರ ಬಳಸಬಹುದು.

ಭಾರತದಲ್ಲಿರುವ ಏಳು ವಿಭಿನ್ನ ಬಗೆಯ ಡ್ರೈವಿಂಗ್ ಲೈಸೆನ್ಸ್'ಗಳಿವು

ಈ ಪರವಾನಗಿ ಮೂಲಕ ಟ್ಯಾಕ್ಸಿ ಅಥವಾ ಆಟೋಗಳಂತಹ ವಾಹನಗಳನ್ನು ಚಾಲನೆ ಮಾಡಲು ಸಾಧ್ಯವಿಲ್ಲ. ಎಲ್‌ಎಂವಿ - ಎನ್‌ಟಿ ಪರವಾನಗಿ ಹೊಂದಿದ್ದರೆ ಬೈಕ್ ಅಥವಾ ಸ್ಕೂಟರ್‌ಗಾಗಿ ಪ್ರತ್ಯೇಕ ಪರವಾನಗಿ ಪಡೆಯುವ ಅಗತ್ಯವಿಲ್ಲ. ಈ ಪರವಾನಗಿಯಿದ್ದರೆ ಕಾರು, ಸ್ಕೂಟರ್ ಅಥವಾ ಬೈಕ್ ಚಾಲನೆ ಮಾಡಬಹುದು.

ಭಾರತದಲ್ಲಿರುವ ಏಳು ವಿಭಿನ್ನ ಬಗೆಯ ಡ್ರೈವಿಂಗ್ ಲೈಸೆನ್ಸ್'ಗಳಿವು

3. ಎಫ್‌ವಿ‌ಜಿ

ಗೇರ್ ಇಲ್ಲದ ಸ್ಕೂಟರ್ ಅಥವಾ ಮೊಪೆಡ್ ಚಾಲನೆ ಮಾಡಲು ಈ ಪರವಾನಗಿಯನ್ನು ನೀಡಲಾಗುತ್ತದೆ. ಈ ವಾಹನಗಳ ಎಂಜಿನ್‌ ಸಾಮರ್ಥ್ಯ ಎಷ್ಟೇ ಇದ್ದರೂ ವಾಹನವು ಗೇರ್ ಹೊಂದಿರಬಾರದು ಎಂಬುದು ಒಂದೇ ಷರತ್ತು.

ಭಾರತದಲ್ಲಿರುವ ಏಳು ವಿಭಿನ್ನ ಬಗೆಯ ಡ್ರೈವಿಂಗ್ ಲೈಸೆನ್ಸ್'ಗಳಿವು

ಈ ಚಾಲನಾ ಪರವಾನಗಿ ಪಡೆದ ನಂತರ ಗೇರ್ ಹೊಂದಿರದ ಎಲೆಕ್ಟ್ರಿಕ್ ಮೊಪೆಡ್ ಅಥವಾ ಸ್ಕೂಟರ್ ಅನ್ನು ಸಹ ಚಾಲನೆ ಮಾಡಬಹುದು. ಈ ಪರವಾನಗಿಯೊಂದಿಗೆ ಗೇರ್ ಇರದ ಬೈಕ್ ಅನ್ನು ಸಹ ಚಾಲನೆ ಮಾಡಬಹುದು.

ಭಾರತದಲ್ಲಿರುವ ಏಳು ವಿಭಿನ್ನ ಬಗೆಯ ಡ್ರೈವಿಂಗ್ ಲೈಸೆನ್ಸ್'ಗಳಿವು

4. ಎಂಸಿ ಇಎಕ್ಸ್ 50 ಸಿಸಿ

ಈ ಪರವಾನಗಿ ಪಡೆದರೆ 50 ಸಿಸಿ ಅಥವಾ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ಬೈಕ್, ಸ್ಕೂಟರ್ ಅಥವಾ ಮೊಪೆಡ್ ಅನ್ನು ಚಾಲನೆ ಮಾಡಬಹುದು. ಈ ಪರವಾನಗಿ ಎಂಸಿ 50 ಸಿಸಿ ಪರವಾನಗಿಗಿಂತ ಭಿನ್ನವಾಗಿದೆ. ಈ ಪರವಾನಗಿಯನ್ನು ಗೇರ್ ಹೊಂದಿರುವ 50 ಸಿಸಿಗಿಂತ ಹೆಚ್ಚು ಸಾಮರ್ಥ್ಯದ ದ್ವಿಚಕ್ರ ವಾಹನಗಳಿಗೆ ನೀಡಲಾಗುತ್ತದೆ.

ಭಾರತದಲ್ಲಿರುವ ಏಳು ವಿಭಿನ್ನ ಬಗೆಯ ಡ್ರೈವಿಂಗ್ ಲೈಸೆನ್ಸ್'ಗಳಿವು

5. ಎಂಸಿಡಬ್ಲ್ಯೂಜಿ

ಈ ಪರವಾನಗಿ ಪಡೆದ ನಂತರ ಯಾವುದೇ ಗೇರ್ ಹೊಂದಿರುವ ಅಥವಾ ಗೇರ್ ಹೊಂದಿಲ್ಲದ ಬೈಕ್, ಸ್ಕೂಟರ್ ಅಥವಾ ಮೊಪೆಡ್ ಅನ್ನು ಚಾಲನೆ ಮಾಡಬಹುದು. ಈ ಪರವಾನಗಿಗಾಗಿ ಯಾವುದೇ ಎಂಜಿನ್ ಸಾಮರ್ಥ್ಯದ ಮಿತಿ ಇಲ್ಲ. ಈ ಪರವಾನಗಿ ಪಡೆದ ನಂತರ ಯಾವುದೇ ಸಾಮರ್ಥ್ಯದ ಎಂಜಿನ್‌ ಹೊಂದಿರುವ ಬೈಕ್ ಚಾಲನೆ ಮಾಡಬಹುದು.

ಭಾರತದಲ್ಲಿರುವ ಏಳು ವಿಭಿನ್ನ ಬಗೆಯ ಡ್ರೈವಿಂಗ್ ಲೈಸೆನ್ಸ್'ಗಳಿವು

6. ಹೆಚ್‌ಜಿಎಂವಿ

ಹೆವಿ ಗೂಡ್ಸ್ ಮೋಟಾರ್ ವೆಹಿಕಲ್ (ಹೆಚ್‌ಜಿಎಂವಿ) ಪರವಾನಗಿಯನ್ನು ಲಾರಿ, ಸಾರಿಗೆಯಲ್ಲಿ ಬಳಸುವ ಟ್ರೈಲರ್‌ಗಳಂತಹ ಭಾರೀ ವಾಹನಗಳನ್ನು ಚಾಲನೆ ಮಾಡಲು ನೀಡಲಾಗುತ್ತದೆ. ಈ ಪರವಾನಗಿಯನ್ನು ವಾಣಿಜ್ಯ ಬಳಕೆಗಾಗಿ ಮಾತ್ರ ಬಳಸಬೇಕು.

ಭಾರತದಲ್ಲಿರುವ ಏಳು ವಿಭಿನ್ನ ಬಗೆಯ ಡ್ರೈವಿಂಗ್ ಲೈಸೆನ್ಸ್'ಗಳಿವು

7. ಹೆಚ್‌ಪಿ‌ಎಂವಿ

ಕಮರ್ಷಿಯಲ್ ವಾಹನಗಳನ್ನು ಚಾಲನೆ ಮಾಡಲು ಹಾಗೂ ಭಾರತದಾದ್ಯಂತ ಪರವಾನಗಿ ಹೊಂದಿರುವ ಪ್ಯಾಸೆಂಜರ್ ವಾಹನಗಳನ್ನು ಚಾಲನೆ ಮಾಡಲು ಈ ಪರವಾನಗಿಯ ಅಗತ್ಯವಿದೆ. ಈ ಪರವಾನಗಿ ಪಡೆಯಲು ಕನಿಷ್ಠ 18 ವರ್ಷಗಳು ಆಗಿರಬೇಕು. ಹಲವು ರಾಜ್ಯಗಳಲ್ಲಿ ಈ ಮಿತಿಯನ್ನು 20 ವರ್ಷಗಳಿಗೆ ನಿಗದಿಪಡಿಸಲಾಗಿದೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Various kinds of driving licenses in India. Read in Kannada.
Story first published: Friday, July 30, 2021, 15:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X