ಆಟೋ ಚಾಲಕನೊಂದಿಗೆ ಜರ್ಮನ್ ಯುವತಿಯ ಚೌಕಾಷಿ: ಸ್ಪಷ್ಟ ಕನ್ನಡಕ್ಕೆ ನೆಟ್ಟಿಗರು ಫಿದಾ

ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ಆಟೋ ಚಾಲಕರ ಜೊತೆಗೆ ಹೇಗೆ ವ್ಯವಹರಿಸಬೇಕು ಎಂಬುದರ ಕುರಿತು ಜರ್ಮನ್ ಯುವತಿಯೊಬ್ಬರು ನಿರರ್ಗಳವಾಗಿ ಕನ್ನಡ ಮಾತನಾಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಆಟೋ ಚಾಲಕನೊಂದಿಗೆ ಜರ್ಮನ್ ಯುವತಿಯ ಚೌಕಾಷಿ: ಸ್ಪಷ್ಟ ಕನ್ನಡಕ್ಕೆ ನೆಟ್ಟಿಗರು ಫಿದಾ

ಭಾರತದಲ್ಲಿ ಆಟೋಗಳು ಸಾರ್ವಜನಿಕರ ನಿತ್ಯವಸರ ಸೇವೆಗೆ ಪ್ರಮುಖ ಸಾರಿಗೆಗಳಾಗಿವೆ. ದೇಶದ ಆಯಾ ರಾಜ್ಯಗಳಲ್ಲಿ ಆಟೋಗಳಿಗೆ ಇಂತಿಷ್ಟು ಕಿ.ಮೀಗಳಿಗೆ ಕನಿಷ್ಟ ದರವನ್ನು ರಾಜ್ಯ ಸರ್ಕಾರಗಳು ನಿಗದಿಪಡಿಸಿವೆ. ಹಾಗೇಯೇ ಕರ್ನಾಟಕದಲ್ಲೂ ರೂ. 30 ಕನಿಷ್ಟ ಪ್ರಯಾಣದ ದರವಾಗಿದೆ. ಆದರೆ ಹವಲರು ಮೀಟರ್ ಹಾಕದೆ ಅವರೇ ದರ ನಿಗದಿಪಡಿಸಿ ಪ್ರಯಾಣಿಕರಿಂದ ಹಣ ಪಡಿಯುತ್ತಾರೆ.

ಆಟೋ ಚಾಲಕನೊಂದಿಗೆ ಜರ್ಮನ್ ಯುವತಿಯ ಚೌಕಾಷಿ: ಸ್ಪಷ್ಟ ಕನ್ನಡಕ್ಕೆ ನೆಟ್ಟಿಗರು ಫಿದಾ

ಹಾಗಾಗಿ ಭಾರತದಲ್ಲಿ ಪ್ರಯಾಣ ದರವನ್ನು ಮಾತುಕತೆ ಮಾಡುವುದು ಕೂಡ ಒಂದು ಕಲೆಯಾಗಿದೆ. ನಿಮಗೆ ಸ್ಥಳೀಯ ಭಾಷೆ ತಿಳಿದಿಲ್ಲದಿದ್ದರೆ ಎದುರಾಗುವ ಸಂಕಷ್ಟಗಳು ಒಂದೆರಡಲ್ಲ. ಇದನ್ನು ತಿಳಿಸುವ ಕುರಿತಾಗಿ ಜರ್ಮನ್ ಪ್ರಜೆಗಳಿಬ್ಬರು ಕನ್ನಡ ಭಾಷೆಯಲ್ಲಿ ವಿಡಿಯೋವೊಂದನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ವಿಡಿಯೋಗಾಗಿ ಆಟೋವೊಂದನ್ನು ಪಡೆದಿರುವ ಅವರು, ಆಟೋ ಚಾಲಕ ಹಾಗೂ ಪ್ರಯಾಣಿಕರಾಗಿ ಅವರೇ ನಟಿಸಿದ್ದಾರೆ. ಈ ವಿಡಿಯೋದಲ್ಲಿ ಆಟೋ ಚಾಲಕನ ಜೊತೆ ಒಪ್ಪಂದ ಮಾಡಿಕೊಳ್ಳುತ್ತಿರುವಾಗ ಜರ್ಮನ್ ಯುವತಿ ನಿರರ್ಗಳವಾಗಿ ಕನ್ನಡ ಮಾತನಾಡುವುದು ಹಲವರ ಮನಗೆದ್ದಿದೆ.

ಆಟೋ ಚಾಲಕನೊಂದಿಗೆ ಜರ್ಮನ್ ಯುವತಿಯ ಚೌಕಾಷಿ: ಸ್ಪಷ್ಟ ಕನ್ನಡಕ್ಕೆ ನೆಟ್ಟಿಗರು ಫಿದಾ

ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿರುವ ಜೆನ್ನಿಫರ್ ಅವರು ಕನ್ನಡದಲ್ಲಿ ಮಾತನಾಡಿರುವ ವಿಡಿಯೋವನ್ನು ಶೇರ್ ಮಾಡಿದ್ದು, ತಮ್ಮ ಫಾಲೋವರ್‌ಗಳಿಂದ ಭಾರೀ ಪ್ರಶಂಸೆಯನ್ನು ಗಿಟ್ಟಿಸಿಕೊಂಡಿದ್ದಾರೆ. ವೈರಲ್ ವೀಡಿಯೊದಲ್ಲಿ, ಜೆನ್ನಿಫರ್ ಆಟೋ ಪ್ರಯಾಣಿಕರಂತೆ ಮತ್ತು ಆಕೆಯ ಸ್ನೇಹಿತ ಎಜ್ರಾ ಎಂಬ ಯುವಕ ಆಟೋ ಡ್ರೈವರ್ ಆಗಿ ಕಾಣಿಸಿಕೊಂಡಿದ್ದಾರೆ.

ಆಟೋ ಚಾಲಕನೊಂದಿಗೆ ಜರ್ಮನ್ ಯುವತಿಯ ಚೌಕಾಷಿ: ಸ್ಪಷ್ಟ ಕನ್ನಡಕ್ಕೆ ನೆಟ್ಟಿಗರು ಫಿದಾ

ನಗರದಲ್ಲಿ ತಮ್ಮ ಮೊದಲ ದಿನವನ್ನು ತೋರಿಸುವ ಕ್ಲಿಪ್‌ನಲ್ಲಿ, ಜೆನ್ನಿಫರ್ ಆಟೋ ಡ್ರೈವರ್‌ನೊಂದಿಗೆ ಕನ್ನಡದಲ್ಲಿ ಮಾತನಾಡಲು ಹೆಣಗಾಡುತ್ತಾಳೆ "ನಾನು ದೇವರಾಜ ಮಾರ್ಕೆಟ್ ಹೋಗ್ಬೇಕು ಎಂಬುದನ್ನು ಬಹಳ ಕಷ್ಟದಿಂದ ವಿವರಿಸುತ್ತಾಳೆ. ಮುಂದಿನ ದೃಷ್ಯದಲ್ಲಿ ಒಂದು ತಿಂಗಳ ಬಳಿಕ ಎಂಬುದನ್ನು ತೋರಿಸಿ ಕನ್ನಡವನ್ನು ನಿರರ್ಗಳವಾಗಿ ಮಾತನಾಡಿದ್ದಾಳೆ.

ಆಟೋ ಚಾಲಕನೊಂದಿಗೆ ಜರ್ಮನ್ ಯುವತಿಯ ಚೌಕಾಷಿ: ಸ್ಪಷ್ಟ ಕನ್ನಡಕ್ಕೆ ನೆಟ್ಟಿಗರು ಫಿದಾ

ತನ್ನ ಮಾತುಕತೆ ಕೌಶಲ್ಯವನ್ನು ಸುಧಾರಿಸಿಕೊಂಡು ಈ ಬಾರಿ ಕನ್ನಡ ಉಚ್ಚಾರಣೆಯಲ್ಲಿ ನಿರರ್ಗಳವಾಗಿ ಮಾತನಾಡಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಆಕೆ ದೇವರಾಜ ಮಾರ್ಕೆಟ್‌ಗೆ ತೆರಳಲು ಕೇಳಿದಾಗ ಆಟೋ ಚಾಲಕ ದುಬಾರಿ ಮೊತ್ತವನ್ನು ಹೇಳಿದಾಗ, ಆಕೆ ಕೋಪಕೊಂಡು 'ಏನು ಹುಚ್ಚಾ? ಕಮ್ಮಿ ಮಾಡಿ! ಎಂದು ಹೇಳುತ್ತಾ ನೆಟ್ಟಗರನ್ನು ಫಿದಾ ಮಾಡಿದ್ದಾಳೆ.

ಆಟೋ ಚಾಲಕನೊಂದಿಗೆ ಜರ್ಮನ್ ಯುವತಿಯ ಚೌಕಾಷಿ: ಸ್ಪಷ್ಟ ಕನ್ನಡಕ್ಕೆ ನೆಟ್ಟಿಗರು ಫಿದಾ

ತನ್ನ ಆಟೋ ಸವಾರಿ ವೀಡಿಯೊವನ್ನು ಮಾಡಲು ಆಟೋವನ್ನು ನೀಡಿದ್ದಕ್ಕಾಗಿ ಆಟೋ ಡ್ರೈವರ್ - ಹರೀಶ್‌ಗೆ ಧನ್ಯವಾದ ತಿಳಿಸಿದ್ದಾರೆ. "ಈ ವೀಡಿಯೊದ ಕ್ರೆಡಿಟ್‌ಗಳು harish.mysore.7 ಗೆ ನೀಡುತ್ತೇನೆ. ನಮ್ಮ ವೀಡಿಯೊವನ್ನು ಚಿತ್ರೀಕರಿಸಲು ನಮಗೆ ಸಹಕರಿಸಿದ ಹಾಗೂ ರಿಕ್ಷಾ ಓಡಿಸುವುದನ್ನು ಕಲಿಸಿದ ನನ್ನ ಸ್ನೇಹಿತ ez.raicht ಗೆ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.

ಆಟೋ ಚಾಲಕನೊಂದಿಗೆ ಜರ್ಮನ್ ಯುವತಿಯ ಚೌಕಾಷಿ: ಸ್ಪಷ್ಟ ಕನ್ನಡಕ್ಕೆ ನೆಟ್ಟಿಗರು ಫಿದಾ

ವಿಡಿಯೋ ಮುಖ್ಯ ಉದ್ದೇಶ

ಆಟೋ ಚಾಲಕರು ಮೀಟರ್ ಇದ್ದರೂ ಬಳಸುವುದಿಲ್ಲ, ಜೊತೆಗೆ ಮನಬಂದಂತೆ ಹಣಕ್ಕೆ ಬೇಡಿಕೆಯಿಟ್ಟು ಸುಳಿಗೆ ಮಾಡುತ್ತಾರೆ. ಈ ಬಗ್ಗೆ ನಗರ ವಾಸಿಗಳಿಗೆ ಹೇಳಬೇಕಿಲ್ಲ, ಪ್ರತಿಯೊಬ್ಬರಿಗೂ ಇಂತಹ ಅನುಭವವಾಗಿರುತ್ತದೆ. ಸ್ಥಳೀಯರಿಗೆ ಇಂತಹ ಸಂದರ್ಭಗಳು ಎದುರಾದಾಗ ನಗರಕ್ಕೆ ಭೇಟಿ ನೀಡುವ ಇತರ ರಾಜ್ಯದವರು ಹಾಗೂ ವಿದೇಶಿಗರ ಪರಿಸ್ಥಿತಿ ಹೇಳಬೇಕಿಲ್ಲ.

ಆಟೋ ಚಾಲಕನೊಂದಿಗೆ ಜರ್ಮನ್ ಯುವತಿಯ ಚೌಕಾಷಿ: ಸ್ಪಷ್ಟ ಕನ್ನಡಕ್ಕೆ ನೆಟ್ಟಿಗರು ಫಿದಾ

ಇದು ಕೇವಲ ಮೈಸೂರು, ಬೆಂಗಳೂರು ನಗರಗಳಲ್ಲಿ ಮಾತ್ರವಲ್ಲ ದೇಶದ ಬಹುತೇಕ ನಗರಗಳಲ್ಲಿ ಆಟೋ ಚಾಲಕರು ಹೀಗೆಯೇ ವರ್ತಿಸುತ್ತಾರೆ. ಸ್ಥಳೀಯರಾಗಿದ್ದರೆ ಇದನ್ನು ಸಮರ್ಥವಾಗಿ ಎದುರಿಸುವುದರಿಂದ ಚಾಲಕರು ಸ್ಥಳೀಯರೊಂದಿಗೆ ಈ ರೀತಿ ವರ್ತಿಸುವುದಿಲ್ಲ. ಇದನ್ನೇ ಜೆನ್ನಿಫರ್ ವಿಡಿಯೋ ಮೂಲಕ ತಿಳಿಸಿದ್ದಾರೆ.

ಆಟೋ ಚಾಲಕನೊಂದಿಗೆ ಜರ್ಮನ್ ಯುವತಿಯ ಚೌಕಾಷಿ: ಸ್ಪಷ್ಟ ಕನ್ನಡಕ್ಕೆ ನೆಟ್ಟಿಗರು ಫಿದಾ

ಸ್ಥಳೀಯರಿಗೆ ಆಟೋ ಪ್ರಯಾಣ ಎಲ್ಲಿಂದ ಎಲ್ಲಿಗೆ ಪ್ರಯಾಣಿಸಿದರೆ ಎಷ್ಟು ಕೊಡಬಹುದು ಎಂಬುದರ ಬಗ್ಗೆ ತಿಳಿದಿರುತ್ತದೆ. ಹಾಗಾಗಿ ಆಟೋ ಚಾಲಕರನ್ನು ಪ್ರಶ್ನಿಸಬಹುದು, ಆದರೆ ಹೊಸಬರಿಗೆ ಇದ್ಯಾವುದು ತಿಳಿದಿರುವುದಲ್ಲ. ವಿಡಿಯೋದಲ್ಲೂ ಜೆನ್ನಿಫರ್ ಮೊದಲಿಗೆ ಆಟೋ ಚಾಲಕ 300 ರೂ. ಹೇಳಿದಾಗಿ ಪ್ರಶ್ನಿಸದೇ ಆಟೋವನ್ನು ಏರುತ್ತಾರೆ.

ಆಟೋ ಚಾಲಕನೊಂದಿಗೆ ಜರ್ಮನ್ ಯುವತಿಯ ಚೌಕಾಷಿ: ಸ್ಪಷ್ಟ ಕನ್ನಡಕ್ಕೆ ನೆಟ್ಟಿಗರು ಫಿದಾ

ಇದಾದ ಬಳಿಕ ಆಕೆ 3 ತಿಂಗಳು ಅಲ್ಲಿಯೇ ಇದ್ದ ಮೇಲೆ ಮತ್ತೊಮ್ಮೆ ಆಟೋವನ್ನು ಏರುವ ಸಂದರ್ಭ ಬಂದಾಗ ಆಟೋ ಚಾಲಕ 300 ರೂ. ಹೇಳಿದಾಗ ಕೋಪಗೊಳ್ಳುತ್ತಾಳೆ. ನಾನು ಮೈಸೂರ್‌ನಲ್ಲೇ ಇದ್ದವಳು ನನಗೂ ಗೊತ್ತು, ಎಂದಾಗ ಆಟೋ ಚಾಲಕ 50 ರೂ. ಕೊಡಿ ಎಂದು ಹೇಳುತ್ತಾನೆ. ಈ ಕುರಿತ ವಿಡಿಯೋವನ್ನು ಜರ್ಮನ್ ಪ್ರಜೆಗಳು ಅಚ್ಚುಕಟ್ಟಾಗಿ ಮಾಡಿ ತೋರಿದ್ದಾರೆ.

ಆಟೋ ಚಾಲಕನೊಂದಿಗೆ ಜರ್ಮನ್ ಯುವತಿಯ ಚೌಕಾಷಿ: ಸ್ಪಷ್ಟ ಕನ್ನಡಕ್ಕೆ ನೆಟ್ಟಿಗರು ಫಿದಾ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿರುವ ಜೆನ್ನಿಫರ್ ಅವರು ತಮ್ಮ ಎಲ್ಲಾ ವಿಡಿಯೋಗಳನ್ನು ಕನ್ನಡದಲ್ಲಿ ಮಾಡುತ್ತಾರೆ. ಸದ್ಯ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಫಾಲೋವರ್ಸ ಇದ್ದಾರೆ. ಇವರು ನಿರರ್ಗಳವಾಗಿ ಮಾತನಾಡುವ ಕನ್ನಡ ಭಾಷೆಗೆ ಹಲವರು ಅಭಿಮಾನಿಗಳಿದ್ದಾರೆ. ಇದೀಗ ಆಟೋ ಚಾಲಕರೊಂದಿಗೆ ವ್ಯವರಿಸುವ ಕುರಿತು ಮಾಡಿರುವ ವಿಡಿಯೋ ಸಾಕಷ್ಟು ಫೇಮಸ್ ಆಗಿದೆ.

Most Read Articles

Kannada
English summary
Video on Dealing with Auto Drivers netigens like to German Girl Kannada
Story first published: Wednesday, September 28, 2022, 18:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X