ಭಾರತದ ಮೊದಲ ಹೈಬ್ರಿಡ್ ಹಾರುವ ಕಾರ್ ಅನ್ನು ಅನಾವರಣಗೊಳಿಸಲು ಮುಂದಾದ ಚೆನ್ನೈ ಮೂಲದ ಕಂಪನಿ

ಚೆನ್ನೈ ಮೂಲದ ವಿನತಾ ಏರೋಮೊಬಿಲಿಟಿ ಕಂಪನಿಯು ಭಾರತದ ಮೊದಲ ಹಾರುವ ಹೈಬ್ರಿಡ್ ಕಾರ್ ಅನ್ನು ಅಭಿವೃದ್ಧಿಪಡಿಸಿದೆ. ಮುಂದಿನ ತಿಂಗಳು ಲಂಡನ್ ನಲ್ಲಿ ನಡೆಯಲಿರುವ ಏರ್ ಶೋದಲ್ಲಿ ಈ ಕಾರ್ ಅನ್ನು ಅನಾವರಣಗೊಳಿಸಲಾಗುವುದು ಎಂದು ವರದಿಯಾಗಿದೆ. ಈ ಲೇಖನದಲ್ಲಿ ಈ ಹಾರುವ ಹೈ ಬ್ರಿಡ್ ಕಾರ್ ಬಗೆಗಿನ ವಿವರಗಳನ್ನು ನೋಡೋಣ.

ಭಾರತದ ಮೊದಲ ಹೈಬ್ರಿಡ್ ಹಾರುವ ಕಾರ್ ಅನ್ನು ಅನಾವರಣಗೊಳಿಸಲು ಮುಂದಾದ ಚೆನ್ನೈ ಮೂಲದ ಕಂಪನಿ

ವಿನತಾ ಏರೋಮೊಬಿಲಿಟಿ ಕಂಪನಿಯು ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಕಂಪನಿಯು ಭಾರತದ ಮೊದಲ ಹೈಬ್ರಿಡ್ ಹಾರುವ ಕಾರ್ ಅನ್ನು ಅಭಿವೃದ್ಧಿಪಡಿಸಿದೆ ಎಂದು ವರದಿಯಾಗಿದೆ. ಇದು ಭಾರತದ ಮೊದಲ ಹೈಬ್ರಿಡ್ ಫ್ಲೈಯಿಂಗ್ ಕಾರು ಮಾತ್ರವಲ್ಲದೆ ಒಟ್ಟಾರೆಯಾಗಿ ಏಷ್ಯಾದ ಮೊದಲ ಹಾರುವ ಕಾರು ಎಂಬ ಹೆಗ್ಗಳಿಕೆಯನ್ನು ಕೂಡ ಹೊಂದಿದೆ.

ಭಾರತದ ಮೊದಲ ಹೈಬ್ರಿಡ್ ಹಾರುವ ಕಾರ್ ಅನ್ನು ಅನಾವರಣಗೊಳಿಸಲು ಮುಂದಾದ ಚೆನ್ನೈ ಮೂಲದ ಕಂಪನಿ

ವಿನತಾ ಏರೋಮೊಬಿಲಿಟಿ ಮುಂದಿನ ತಿಂಗಳು ಲಂಡನ್‌ನಲ್ಲಿ ನಡೆಯಲಿರುವ ವಿಶ್ವದ ಪ್ರಮುಖ ಏರ್‌ ಶೋ ಆದ ಎಕ್ಸೆಲ್‌ನಲ್ಲಿ ಈ ಹಾರುವ ಕಾರ್ ಅನ್ನು ಅನಾವರಣಗೊಳಿಸಲು ನಿರ್ಧರಿಸಿದೆ. ಈ ಮೂಲಕ ಏಷ್ಯಾದ ಮೊದಲ ಹೈಬ್ರಿಡ್ ಕಾರ್ ಅನ್ನು ಬಿಡುಗಡೆಗೊಳಿಸಲು ಸಿದ್ದತೆಗಳನ್ನು ನಡೆಸಿದೆ. ಈ ವಿಷಯವನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾರವರು ನಿನ್ನೆ ತಮ್ಮ ಟ್ವಿಟರ್ ಖಾತೆಯ ಮೂಲಕ ಖಚಿತಪಡಿಸಿದ್ದಾರೆ.

ಭಾರತದ ಮೊದಲ ಹೈಬ್ರಿಡ್ ಹಾರುವ ಕಾರ್ ಅನ್ನು ಅನಾವರಣಗೊಳಿಸಲು ಮುಂದಾದ ಚೆನ್ನೈ ಮೂಲದ ಕಂಪನಿ

ಪ್ರಧಾನಿ ನರೇಂದ್ರ ಮೋದಿರವರು ಸಹ ತಮ್ಮ ಟ್ವಿಟರ್ ನಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದು ವಿನತಾ ವಿನತಾ ಏರೋಮೊಬಿಲಿಟಿ ಕಂಪನಿಗೆ ಅಭಿನಂದನೆ ಸಲ್ಲಿಸಿದ್ದಾರೆ. ವಿನತಾ ಹೈಬ್ರಿಡ್ ಹಾರುವ ಕಾರು ಡಿಜಿಟಲ್ ಉಪಕರಣದ ಪ್ಯಾನೆಲ್ ಕಗಳನ್ನು ಹೊಂದಿದೆ. ಇವು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಹೊಂದಿವೆ ಎಂಬುದು ಗಮನಾರ್ಹ.

ಭಾರತದ ಮೊದಲ ಹೈಬ್ರಿಡ್ ಹಾರುವ ಕಾರ್ ಅನ್ನು ಅನಾವರಣಗೊಳಿಸಲು ಮುಂದಾದ ಚೆನ್ನೈ ಮೂಲದ ಕಂಪನಿ

ಇವುಗಳಿಂದ ಈ ಹೈಬ್ರಿಡ್ ಕಾರಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ವಿಭಿನ್ನ ಅನುಭವವನ್ನು ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಹೈಬ್ರಿಡ್ ಕಾರಿನಲ್ಲಿ ಐಷಾರಾಮಿ ಕಾರುಗಳಲ್ಲಿರುವಂತಹ ವಿಶೇಷ ಸೌಲಭ್ಯಗಳು ಇರಲಿವೆ ಎಂದು ವರದಿಯಾಗಿದೆ. ಇದರ ಜೊತೆಗೆ ಈ ಹಾರುವ ಕಾರಿನಲ್ಲಿ ಕೆಲವು ಜಿಪಿಎಸ್ ಟ್ರ್ಯಾಕರ್ ಹಾಗೂ ಫೀಚರ್ ಗಳನ್ನು ತೋರಿಸಲಾಗಿದೆ.

ಭಾರತದ ಮೊದಲ ಹೈಬ್ರಿಡ್ ಹಾರುವ ಕಾರ್ ಅನ್ನು ಅನಾವರಣಗೊಳಿಸಲು ಮುಂದಾದ ಚೆನ್ನೈ ಮೂಲದ ಕಂಪನಿ

ಈ ಕಾರಿನಲ್ಲಿ ಪನೋರಾಮಿಕ್ ವಿಂಡೋಗಳನ್ನು ಸಹ ನೀಡಲಾಗಿದೆ. ಇದರಿಂದ ಪ್ರಯಾಣಿಕರು 300 ಡಿಗ್ರಿ ವೀಕ್ಷಿಸಲು ಸಾಧ್ಯವಾಗಲಿದೆ. 1,100 ಕೆ.ಜಿ ತೂಕವನ್ನು ಹೊಂದಿರುವ ಈ ಹೈಬ್ರಿಡ್ ಹಾರುವ ಕಾರು 1,300 ಕೆ.ಜಿ ತೂಕವನ್ನು ಹೊರುವ ಸಾಮರ್ಥ್ಯವನ್ನು ಹೊಂದಿದೆ. ಈ ಹೈಬ್ರಿಡ್ ಹಾರುವ ಕಾರು ಲಂಬವಾಗಿ ತೆಗೆಯುವ ಹಾಗೂ ಇಳಿಯುವ ಸೌಲಭ್ಯವನ್ನು ಹೊಂದಿದೆ.

ಭಾರತದ ಮೊದಲ ಹೈಬ್ರಿಡ್ ಹಾರುವ ಕಾರ್ ಅನ್ನು ಅನಾವರಣಗೊಳಿಸಲು ಮುಂದಾದ ಚೆನ್ನೈ ಮೂಲದ ಕಂಪನಿ

ಈ ಉದ್ದೇಶಕ್ಕಾಗಿ ಸಹ ಅಕ್ಷೀಯ ಕ್ವಾಡ್ ರೋಟರ್ ಅನ್ನು ಬಳಸಲಾಗುತ್ತದೆ. ವಿನತಾ ಏರೋಮೊಬಿಲಿಟಿ ಹಾರುವ ಹೈಬ್ರಿಡ್ ಕಾರು ವೇಗವು ಪ್ರತಿ ಗಂಟೆಗೆ 100 ಕಿ.ಮೀ ಆರಂಭಗೊಂಡು 120 ಕಿ.ಮೀ ವೇಗದಲ್ಲಿ ಹಾರಬಲ್ಲ ಸಾಮರ್ಥ್ಯವನ್ನು ನೀಡಿದೆ. ಈ ಹೈಬ್ರಿಡ್ ಹಾರುವ ಕಾರು ಗರಿಷ್ಠ 3,000 ಅಡಿಗಳಷ್ಟು ಎತ್ತರಕ್ಕೆ ಹಾರುವ ಸಾಮರ್ಥ್ಯವನ್ನು ಹೊಂದಿದೆ.

ಭಾರತದ ಮೊದಲ ಹೈಬ್ರಿಡ್ ಹಾರುವ ಕಾರ್ ಅನ್ನು ಅನಾವರಣಗೊಳಿಸಲು ಮುಂದಾದ ಚೆನ್ನೈ ಮೂಲದ ಕಂಪನಿ

ಜೈವಿಕ ಇಂಧನದ ಮೂಲಕ ಹಾರಾಟ ನಡೆಸುವಂತೆ ಈ ಹಾರುವ ಕಾರ್ ಅನ್ನು ವಿನ್ಯಾಸಗೊಳಿಸಿದೆ. ಸಣ್ಣ ಹನಿ ಕೂಡ ಈ ಹಾರುವ ಕಾರಿನಲ್ಲಿ ಯಾವುದೇ ತಪ್ಪುಗಳನ್ನು ಉಂಟು ಮಾಡುವುದಿಲ್ಲ ಎಂದು ಕಂಪನಿ ದೃಢಪಡಿಸಿದೆ. ಈ ಉದ್ದೇಶಕ್ಕಾಗಿ ಈ ಹಾರುವ ಹೈಬ್ರಿಡ್ ಕಾರಿನಲ್ಲಿ ವಿವಿಧ ಎಲೆಕ್ಟ್ರಿಕ್ ಮೋಟಾರ್‌ ಹಾಗೂ ಪ್ರೊಪಲ್ಶನ್ ಇಂಜಿನ್‌ಗಳನ್ನು ಬಳಸಲಾಗಿದೆ.

ಭಾರತದ ಮೊದಲ ಹೈಬ್ರಿಡ್ ಹಾರುವ ಕಾರ್ ಅನ್ನು ಅನಾವರಣಗೊಳಿಸಲು ಮುಂದಾದ ಚೆನ್ನೈ ಮೂಲದ ಕಂಪನಿ

ಇದರಿಂದ ಯಾವುದಾದರೂ ಒಂದು ವಿಫಲವಾದರೆ ಮತ್ತೊಂದು ಪ್ರಯಾಣಿಕರನ್ನು ಸುರಕ್ಷಿತವಾಗಿ ಗಮ್ಯ ಸ್ಥಾನಕ್ಕೆ ಕರೆದೊಯ್ಯಲಿದೆ. ಎಲೆಕ್ಟ್ರಿಕ್ ಸರಬರಾಜಿನಲ್ಲಿ ಅಸಮರ್ಪಕ ಕ್ರಿಯೆ ಉಂಟಾದ ಸಂದರ್ಭದಲ್ಲಿ, ಜನರೇಟರ್‌ಗಳು ಎಲೆಕ್ಟ್ರಿಕ್ ಮೋಟರ್‌ಗಳಿಗೆ ಪವರ್ ಸಪ್ಲೈ ಮಾಡುತ್ತವೆ. ಈ ಜನರೇಟರ್ ಜೈವಿಕ ಇಂಧನದಿಂದ ಚಾಲಿತವಾಗುತ್ತದೆ ಎಂಬುದು ಗಮನಾರ್ಹ.

ಭಾರತದ ಮೊದಲ ಹೈಬ್ರಿಡ್ ಹಾರುವ ಕಾರ್ ಅನ್ನು ಅನಾವರಣಗೊಳಿಸಲು ಮುಂದಾದ ಚೆನ್ನೈ ಮೂಲದ ಕಂಪನಿ

ವಿನತಾ ಏರೋ ಮೊಬಿಲಿಟಿ ಕಂಪನಿಯು ಇತ್ತೀಚೆಗೆ ಈ ಹೈಬ್ರಿಡ್ ಹಾರುವ ಕಾರಿನಲ್ಲಿ ಪೂರ್ಣ ಪ್ರಮಾಣದ ಪ್ಯಾರಾಚೂಟ್ ಹಾಗೂ ಏರ್ ಬ್ಯಾಗ್ ಸೌಲಭ್ಯಗಳನ್ನು ಒದಗಿಸಿದೆ. ಈ ಮೂಲಕ ಪ್ರಯಾಣಿಕರ ಸುರಕ್ಷತೆಯನ್ನು ಖಾತರಿಪಡಿಸಿದೆ. ವಿನತಾ ಏರೋ ಮೊಬಿಲಿಟಿ ಕಂಪನಿಯು ಮಾತ್ರವಲ್ಲದೇ ವಿಶ್ವದಾದ್ಯಂತವಿರುವ ಹಲವು ಕಂಪನಿಗಳು ಹಾರುವ ಕಾರುಗಳನ್ನು ಅಭಿವೃದ್ಧಿಪಡಿಸುತ್ತಿವೆ.

ಭಾರತದ ಮೊದಲ ಹೈಬ್ರಿಡ್ ಹಾರುವ ಕಾರ್ ಅನ್ನು ಅನಾವರಣಗೊಳಿಸಲು ಮುಂದಾದ ಚೆನ್ನೈ ಮೂಲದ ಕಂಪನಿ

ಹಲವು ಕಂಪನಿಗಳು ಈಗಾಗಲೇ ಹಾರುವ ಕಾರುಗಳ ಪರೀಕ್ಷಾರ್ಥ ಹಾರಾಟವನ್ನು ಪೂರ್ಣಗೊಳಿಸಿವೆ. ಕೆಲವು ಹಾರುವ ಕಾರುಗಳು ಯಶಸ್ಸನ್ನು ಸಹ ಕಂಡಿವೆ. ಹಾರುವ ಕಾರುಗಳು ಪ್ರಯಾಣಿಕರು ಗಂಟೆ ಗಟ್ಟಲೇ ಟ್ರಾಫಿಕ್ ಜಾಮ್ ಗಳಲ್ಲಿ ಕಾಯುವ ತೊಂದರೆಯನ್ನು ತಪ್ಪಿಸುತ್ತವೆ. ಕೆಲವು ಕಂಪನಿಗಳು ಭಾರತದಲ್ಲಿಯೂ ತಮ್ಮ ಹಾರುವ ಕಾರುಗಳನ್ನು ಬಿಡುಗಡೆಗೊಳಿಸುವುದಾಗಿ ಮಾಹಿತಿ ನೀಡಿವೆ. ಆದರೆ ಈ ಕಾರುಗಳು ಇನ್ನು ಎರಡು - ಮೂರು ವರ್ಷಗಳ ನಂತರ ಭಾರತದಲ್ಲಿ ಬಿಡುಗಡೆಯಾಗಲಿವೆ.

ಗಮನಿಸಿ: ಕೊನೆಯ ಎರಡು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Vinata aeromobility to unveil its hybrid flying car soon details
Story first published: Wednesday, September 22, 2021, 14:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X