ಆಡಿ ಆರ್‌ಎಸ್5 ಸ್ಪೋರ್ಟ್ ಕೂಪೆ ಮೊದಲ ಗ್ರಾಹಕರಾದ ವಿರಾಟ್ ಕೊಹ್ಲಿ..

ಜರ್ಮನ್ ವಾಹನ ತಯಾರಕ ಸಂಸ್ಥೆಯಾದ ಆಡಿ ಮೊನ್ನೆಯಷ್ಟೇ ತನ್ನ ಹೊಸ ವಿನ್ಯಾಸದ ಆರ್‍ಎಸ್5 ಸ್ಪೋರ್ಟ್ ಕೂಪೆ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು,ಹೊಸ ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.1,10,65,000ಕ್ಕೆ ನಿಗದಿ ಪಡಿಸಲಾಗಿದೆ.

By Praveen Sannamani

ಜರ್ಮನ್ ವಾಹನ ತಯಾರಕ ಸಂಸ್ಥೆಯಾದ ಆಡಿ ಮೊನ್ನೆಯಷ್ಟೇ ತನ್ನ ಹೊಸ ವಿನ್ಯಾಸದ ಆರ್‍ಎಸ್5 ಸ್ಪೋರ್ಟ್ ಕೂಪೆ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 1,10,65,000ಕ್ಕೆ ನಿಗದಿ ಪಡಿಸಲಾಗಿದೆ.

ಆಡಿ ಆರ್‌ಎಸ್5 ಸ್ಪೋರ್ಟ್ ಕೂಪೆ ಮೊದಲ ಗ್ರಾಹಕರಾದ ವಿರಾಟ್ ಕೊಹ್ಲಿ..

ವಿಶೇಷ ಅಂದ್ರೆ, ಆಡಿ ಬಿಡುಗಡೆ ಮಾಡಿದ ಆರ್‍ಎಸ್5 ಸ್ಪೋರ್ಟ್ ಕೂಪೆ ಕಾರನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರೇ ಮೊದಲ ಗ್ರಾಹಕನಾಗಿದ್ದು, ಬೆಂಗಳೂರಿನಲ್ಲಿ ನಡೆದ ಕಾರು ಬಿಡುಗಡೆ ಸಮಾರಂಭದಲ್ಲಿ ಭಾಗಿಯಾಗಿದ್ದಲ್ಲೇ ಹೊಸ ಕಾರನ್ನು ಖರೀದಿಸಿ ಸುದ್ದಿಯಾಗಿದ್ದಾರೆ.

ಆಡಿ ಆರ್‌ಎಸ್5 ಸ್ಪೋರ್ಟ್ ಕೂಪೆ ಮೊದಲ ಗ್ರಾಹಕರಾದ ವಿರಾಟ್ ಕೊಹ್ಲಿ..

ಈ ಬಗ್ಗೆ ಆಡಿ ಸಂಸ್ಥೆಯೇ ಅಧಿಕೃತ ನೀಡಿದ್ದು, ಆಡಿ ಬ್ರಾಂಡ್ ಅಂಬಾಸಿಡರ್ ಆಗಿರುವ ಕೊಹ್ಲಿಯವರೇ ಆರ್‍ಎಸ್5 ಸ್ಪೋರ್ಟ್ ಕೂಪೆ ಕಾರಿನ ಮೊದಲ ಗ್ರಾಹಕರಾಗಿದ್ದಾರೆ ಎನ್ನಲಾಗಿದೆ.

ಆಡಿ ಆರ್‌ಎಸ್5 ಸ್ಪೋರ್ಟ್ ಕೂಪೆ ಮೊದಲ ಗ್ರಾಹಕರಾದ ವಿರಾಟ್ ಕೊಹ್ಲಿ..

ಆಡಿ ಸಂಸ್ಥೆಯು ಬಿಡುಗಡೆ ಮಾಡಿರುವ ಆರ್‌ಎಸ್5 ದುಬಾರಿ ಬೆಲೆಯ ಕಾರು ತನ್ನದೇ ಮತ್ತೊಂದು ಕಾರು ಮಾದರಿಯಾದ ಎ5 ಕಾರಿನ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲೇ ಅಭಿವೃದ್ಧಿಗೊಂಡಿದ್ದು, ಸುಧಾರಿತ ಎಂಜಿನ್ ಮತ್ತು ಕಾರ್ಬನ್ ಫೈಬರ್ ರೂಫ್ ಟಾಪ್ ಬಳಕೆ ಹಿನ್ನೆಲೆಯಲ್ಲಿ ಹೊಸ ಕಾರು ಹಳೆಯ ಮಾದರಿಗಿಂತ 60 ಕೆಜಿ ತೂಕ ಕಡಿತಗೊಳಿಸಲಾಗಿದೆ.

ಆಡಿ ಆರ್‌ಎಸ್5 ಸ್ಪೋರ್ಟ್ ಕೂಪೆ ಮೊದಲ ಗ್ರಾಹಕರಾದ ವಿರಾಟ್ ಕೊಹ್ಲಿ..

ಹೀಗಾಗಿ ಕಾರಿನ ಎಂಜಿನ್ ಕಾರ್ಯಕ್ಷಮತೆಯಲ್ಲಿ ಗುರುತರ ಬದಲಾವಣೆ ತರಲಾಗಿದ್ದು, ಎ5 ಮಾದಿಯ ಸ್ಟ್ಯಾಂಡರ್ಡ್ ಮಾದರಿಯಲ್ಲೇ ಸ್ಪೋರ್ಟಿ ಬಂಪರ್ ಮತ್ತು ಏರ್ ಇನ್‌ಟೆಕರ್, ಲಾರ್ಜ್ ಫ್ರಂಟ್ ಗ್ರಿಲ್, ಮ್ಯಾಟ್ರಿಕ್ ಎಲ್ಇಡಿ ಹೆಡ್‌ಲ್ಯಾಂಪ್ ಮತ್ತು 19-ಇಂಚಿನ ಅಲಾಯ್ ಚಕ್ರಗಳನ್ನು ಜೋಡಿಸಲಾಗಿದೆ.

ಆಡಿ ಆರ್‌ಎಸ್5 ಸ್ಪೋರ್ಟ್ ಕೂಪೆ ಮೊದಲ ಗ್ರಾಹಕರಾದ ವಿರಾಟ್ ಕೊಹ್ಲಿ..

ಎಂಜಿನ್ ಸಾಮರ್ಥ್ಯ

ಆಡಿ ಮಾದರಿಗಳಲ್ಲಿ ಮಧ್ಯಮ ಕ್ರಮಾಂಕ 2.9-ಲೀಟರ್ ವಿ6 ಟ್ವಿನ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿರುವ ಆರ್‌ಎಸ್5 ಕೂಪೆ ಕಾರುಗಳು, 444-ಬಿಎಚ್‌ಪಿ ಮತ್ತು 600-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಪಡೆದಿವೆ.

ಆಡಿ ಆರ್‌ಎಸ್5 ಸ್ಪೋರ್ಟ್ ಕೂಪೆ ಮೊದಲ ಗ್ರಾಹಕರಾದ ವಿರಾಟ್ ಕೊಹ್ಲಿ..

ಈ ಮೂಲಕ ಸ್ಪೋರ್ಟಿ ಮತ್ತು ಡೈಮಾಮಿಕ್ ಡ್ರೈವ್ ಸಿಸ್ಟಂ ಹೊಂದಿರುವ ಆರ್‌ಎಸ್5 ಕೂಪೆ ಕಾರುಗಳು 8-ಸ್ಪೀಡ್ ಟ್ರಿಪ್ಟೊನಿಕ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಜೋಡಿಸಲಾಗಿದ್ದು, ಬೆಸ್ಟ್ ಪರ್ಫಾಮೆನ್ಸ್ ಪ್ರಿಯರಿಗಾಗಿ ಇದು ಸಹಕಾರಿಯಾಗಲಿದೆ.

ಆಡಿ ಆರ್‌ಎಸ್5 ಸ್ಪೋರ್ಟ್ ಕೂಪೆ ಮೊದಲ ಗ್ರಾಹಕರಾದ ವಿರಾಟ್ ಕೊಹ್ಲಿ..

ಇದರೊಂದಿಗೆ ಉತ್ತಮ ಹಾರ್ಸ್ ಪವರ್ ಉತ್ಪಾದನೆ ಮೂಲಕ ಕೇವಲ 3.9 ಸೇಕೆಂಡುಗಳಲ್ಲಿ ಸೊನ್ನೆಯಿಂದ 100 ಕಿಮಿ ವೇಗ ಸಾಧಿಸಬಲ್ಲ ಗುಣಹೊಂದಿರುವ ಆಡಿ ಆರ್‌ಎಸ್5 ಕೂಪೆ ಕಾರುಗಳು 250 ಕಿ.ಮೀ ಪ್ರತಿ ಗಂಟೆಗೆ ಟಾಪ್ ಸ್ಪೀಡ್ ತಲುಪಬಲ್ಲವು.

ಆಡಿ ಆರ್‌ಎಸ್5 ಸ್ಪೋರ್ಟ್ ಕೂಪೆ ಮೊದಲ ಗ್ರಾಹಕರಾದ ವಿರಾಟ್ ಕೊಹ್ಲಿ..

ಇನ್ನು ಈ ಹಿಂದಿಗಿಂತಲೂ ಎಂಜಿನ್ ವಿಭಾಗದಲ್ಲಿ ಸುಧಾರಣೆ ತರಲಾಗಿದ್ದು, ಈ ಹಿನ್ನೆಲೆ ಆರ್‌ಎಸ್5 ಕೂಪೆ ಕಾರುಗಳು ಪ್ರತಿ ಲೀಟರ್‌ಗೆ 10.8 ಕಿಮಿ ಮೈಲೇಜ್ ನೀಡಲಿವೆ ಎಂದು ಆಡಿ ಸಂಸ್ಥೆಯು ಹೇಳಿಕೊಂಡಿದೆ.

ಆಡಿ ಆರ್‌ಎಸ್5 ಸ್ಪೋರ್ಟ್ ಕೂಪೆ ಮೊದಲ ಗ್ರಾಹಕರಾದ ವಿರಾಟ್ ಕೊಹ್ಲಿ..

ಕಾರಿನ ಒಳವಿನ್ಯಾಸ

ಸ್ಪೋರ್ಟಿ ಲುಕ್ ಹೊಂದಿರುವ ಕಾರಿನ ಒಳವಿನ್ಯಾಸವು ಫ್ಯಾಟ್ ಬಾಟಮ್ ಸ್ಟೀರಿಂಗ್ ಚಕ್ರಗಳು, ವರ್ಚುವಲ್ ಕುಕ್‌ಪ್ರಿಟ್, ಸ್ಪೆಷಲ್ ಆರ್‌ಎಸ್ ಸ್ಕ್ರೀನ್, ಸುಧಾರಿತ ಎಂಎಂಐ ಯುನಿಟ್, ಆಡಿ ಸ್ಮಾರ್ಟ್‌ಫೋನ್ ಇಂಟರ್‌ಫೇಸ್, ಅಲ್ಯುನಿಯಂ ಪ್ರೇರಿತ ಪೆಡಲ್‌ಗಳನ್ನು ಇರಿಸಲಾಗಿದೆ.

ಆಡಿ ಆರ್‌ಎಸ್5 ಸ್ಪೋರ್ಟ್ ಕೂಪೆ ಮೊದಲ ಗ್ರಾಹಕರಾದ ವಿರಾಟ್ ಕೊಹ್ಲಿ..

ಇದಲ್ಲದೇ ಹೊಸ ಕಾರುಗಳಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, 6 ಏರ್‌ಬ್ಯಾಗ್, ಎಬಿಎಸ್, ಇಬಿಡಿ, ಎಲೆಕ್ಟ್ರಾನಿಕ್ ಡಿಫ್ರೆಷಿಯಲ್ ಲಾಕ್, ಟ್ರಾಕ್ಷನ್ ಕಂಟ್ರೊಲರ್, ಪಾರ್ಕಿಂಗ್ ಅಸಿಸ್ಟಂಟ್, ರಿಯರ್ ವ್ಯೂ ಕ್ಯಾಮೆರಾ ಮತ್ತು ಪಾರ್ಕಿಂಗ್ ಸಿಸ್ಟಂ ಪ್ಲಸ್ ತಂತ್ರಜ್ಞಾನ ಅಳವಡಿಸಲಾಗಿದೆ.

ಆಡಿ ಆರ್‌ಎಸ್5 ಸ್ಪೋರ್ಟ್ ಕೂಪೆ ಮೊದಲ ಗ್ರಾಹಕರಾದ ವಿರಾಟ್ ಕೊಹ್ಲಿ..

ಆರ್‌ಎಸ್5 ಕೂಪೆ ಬಗೆಗೆ ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಆಡಿ ಆರ್‍ಎಸ್ ಸರಣಿಯಲ್ಲಿ ಸಿದ್ದಗೊಂಡಿರುವ ಹೊಸ ಆರ್‍ಎಸ್5 ಕಾರುಗಳ ಹೊಸ ವಿನ್ಯಾಸ ಹಾಗೂ ಸ್ಪೋರ್ಟಿ ವೈಶಿಷ್ಟ್ಯತೆಗಳು ಗ್ರಾಹಕರನ್ನು ಸೆಳೆಯಲಿದ್ದು, ಜನಪ್ರಿಯ ಬಿಎಂಡಬ್ಲ್ಯು ಎಂ4 ಕಾರುಗಳಿಗೆ ಪೈಪೋಟಿಯನ್ನು ನೀಡುವ ನೀರಿಕ್ಷೆಯಿದೆ.

Most Read Articles

Kannada
English summary
Virat Kohli Gets All New Audi RS5 Sports Coupe Car.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X