Just In
Don't Miss!
- Finance
ಬಜೆಟ್ 2021: MSME ವಲಯಕ್ಕೆ ಏನು ಸಿಗಬಹುದು?
- Movies
ದುಬಾರಿ ಮೊತ್ತಕ್ಕೆ ತನ್ನ ಮನೆ ಮಾರಿದ ಕರಿಶ್ಮಾ ಕಪೂರ್
- News
ಫೆ.6ರಂದು ಮಡಿಕೇರಿಗೆ ಭೇಟಿ ನೀಡಲಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್
- Sports
ಆಸ್ಟ್ರೇಲಿಯಾ ವಿರುದ್ಧ ಆಡ್ತಿರೋದು ಅತೀ ದುರ್ಬಲ ಭಾರತ ತಂಡ ಅನ್ನೋದು ಗೊತ್ತಾ!?
- Lifestyle
ನಿಮ್ಮ ಮಕ್ಕಳ ಕೋಣೆಯನ್ನು ವಾಸ್ತು ಪ್ರಕಾರ ಈ ರೀತಿ ರೆಡಿ ಮಾಡಿ
- Education
NIA Recruitment 2021: 15 ಡೆಪ್ಯುರಿಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್
ಫ್ಲಿಪ್ಕಾರ್ಟ್ ಅಥವಾ ಅಮೆಜಾನ್ನಲ್ಲಿ ಯಾವುದಾದರೂ ವಸ್ತುಗಳನ್ನು ಆರ್ಡರ್ ಮಾಡುವ ಗ್ರಾಹಕರು ಅವುಗಳನ್ನು ತಕ್ಷಣವೇ ಪಡೆಯಲು ಬಯಸುತ್ತಾರೆ. ಹಲವಾರು ದಿನಗಳವರೆಗೆ ಕಾಯುವ ತಾಳ್ಮೆ ಜನರಿಗಿರುವುದಿಲ್ಲ.

ಆರ್ಡರ್ ಮಾಡಲಾದ ವಸ್ತುಗಳು ಜನರನ್ನು ತಲುಪಲು ಎಷ್ಟು ಸಮಯ ಬೇಕಾಗುತ್ತದೆ. ಹೆಚ್ಚೆಂದರೆ 20 ದಿನ ಅಥವಾ ಒಂದು ತಿಂಗಳು. ಆದರೆ ಟ್ರಕ್ ಒಂದು ಮಹಾರಾಷ್ಟ್ರದ ನಾಸಿಕ್ನಿಂದ ಕೇರಳದ ವಟಿಯೂರ್ಕಕ್ಕೆ ತೆರಳಲು ಒಂದು ವರ್ಷಕ್ಕೂ ಹೆಚ್ಚು ಸಮಯ ತೆಗೆದುಕೊಂಡಿದೆ. ಒಂದು ವರ್ಷವಾದರೂ ಸರಕುಗಳು ಸಂಬಂಧಪಟ್ಟವರನ್ನು ತಲುಪಿಲ್ಲ. ಏರೋಸ್ಪೇಸ್ ಆಟೋಕ್ಲೇವ್ ಹೊತ್ತು ನಾಸಿಕ್ನಿಂದ 2019ರ ಜುಲೈನಲ್ಲಿ ಹೊರಟ ಟ್ರಕ್ ಇನ್ನೂ ತಾನು ತಲುಪಬೇಕಾದ ಸ್ಥಳವನ್ನು ತಲುಪಿಲ್ಲ.

ಸುಮಾರು 70 ಟನ್ ತೂಕದ ಸರಕು ಸಾಗಿಸುತ್ತಿರುವ ವೊಲ್ವೋ ಎಫ್ಎಂ 12 ಟ್ರಕ್ ಕಳೆದ ಒಂದು ವರ್ಷದಿಂದ ಪ್ರಯಾಣಿಸುತ್ತಲೇ ಇದೆ. ಈ ಟ್ರಕ್ ಮಹಾರಾಷ್ಟ್ರದ ನಾಸಿಕ್ ನಲ್ಲಿ ತಯಾರಿಸಿದ ಏರೋಸ್ಪೇಸ್ ಆಟೋಕ್ಲೇವ್ ಹೊತ್ತುಕೊಂಡು ಕೇರಳದ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ ಕಡೆಗೆ ಸಾಗುತ್ತಿದೆ.
MOST READ:ಪೊಲೀಸರಿಗೆ ತಲೆ ನೋವು ತಂದಿಟ್ಟ ಸೀಜ್ ಆದ ವಾಹನಗಳು

ಈ ಟ್ರಕ್ 74 ವ್ಹೀಲ್ ಗಳನ್ನು ಹೊಂದಿರುವ ಬೃಹತ್ ಟ್ರಕ್ ಆಗಿದ್ದು, ತನ್ನ ದೈತ್ಯ ಗಾತ್ರದ ಕಾರಣಕ್ಕೆ ಪ್ರತಿ ದಿನ ಸರಾಸರಿ 5 ಕಿ.ಮೀಗಳಷ್ಟು ಮಾತ್ರ ಚಲಿಸುತ್ತದೆ. ಈ ಟ್ರಕ್ 7.5 ಮೀಟರ್ ಎತ್ತರ ಹಾಗೂ 6.65 ಮೀಟರ್ ಅಗಲವನ್ನು ಹೊಂದಿದೆ. ಈ ಟ್ರಕ್ ತನ್ನ ದೈತ್ಯ ಗಾತ್ರದಿಂದ ಇಡೀ ರಸ್ತೆಯನ್ನೇ ಬ್ಲಾಕ್ ಮಾಡುತ್ತದೆ.

ಈ ಟ್ರಕ್ ಯಾವುದಾದರೂ ಸ್ಥಳಕ್ಕೆ ಬಂದಾಗ ಇತರ ವಾಹನ ಚಾಲಕರ ಸುರಕ್ಷತೆಯ ದೃಷ್ಟಿಯಿಂದ ಆ ಸ್ಥಳದಲ್ಲಿನ ಸಂಚಾರವನ್ನು ಸಂಪೂರ್ಣವಾಗಿ ನಿಲ್ಲಿಸಲಾಗುತ್ತದೆ. ಈ ಟ್ರಕ್ ನಗರ ಪ್ರದೇಶದೊಳಗಿದ್ದಾಗ ಪೊಲೀಸರು ವಿಶೇಷ ಕಾಳಜಿ ವಹಿಸುತ್ತಾರೆ.
MOST READ:ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಆಂಬ್ಯುಲೆನ್ಸ್ ಪಡೆದ ಜಗನ್ ಸರ್ಕಾರ

ನಾಸಿಕ್ ಹಾಗೂ ವಟಿಯೂರ್ಕ ನಡುವಿನ ಅಂತರ ಸುಮಾರು 1,700 ಕಿ.ಮೀಗಳಾಗಿದೆ. ಸಾಮಾನ್ಯ ಲಾರಿಗಳು ಹೆಚ್ಚು ಕಡಿಮೆ ಒಂದು ವಾರದಲ್ಲಿ ಇಷ್ಟು ದೂರ ಸಂಚರಿಸುತ್ತವೆ. ಆದರೆ ಏರೋಸ್ಪೇಸ್ ಆಟೋಕ್ಲೇವ್ ಹೊತ್ತಿರುವ ಈ ಟ್ರಕ್ ಅಷ್ಟು ವೇಗವಾಗಿ ಹೋಗಲು ಸಾಧ್ಯವಿಲ್ಲ. ಬಹಳ ಎಚ್ಚರಿಕೆಯಿಂದ ಸಂಚರಿಸಬೇಕು.

ಈ ಟ್ರಕ್ ಹೋಗುವ ಹಲವು ಸ್ಥಳಗಳಲ್ಲಿ ಮರಗಳನ್ನು ಕತ್ತರಿಸಲಾಗುತ್ತದೆ. ಜೊತೆಗೆ ವಿದ್ಯುತ್ ಸಂಪರ್ಕವನ್ನು ಸಹ ಕಡಿತಗೊಳಿಸಲಾಗುತ್ತದೆ. ಈ ಟ್ರಕ್ನ ಜೊತೆಗೆ ತಂಡವೊಂದು ಕಾರ್ಯನಿರ್ವಹಿಸುತ್ತಿದೆ. ಟ್ರಕ್ ಚಲಿಸುವಾಗ ಮುಂದಿರುವ ಅಡೆತಡೆಗಳನ್ನು ನೋಡಿ ಅವುಗಳನ್ನು ಸರಿಪಡಿಸುವುದು ಆ ತಂಡದ ಕೆಲಸ.
MOSTREAD: ಕೆಟ್ಟು ನಿಂತ ವಾಹನಗಳನ್ನು ತಳ್ಳುವ ಜನಪ್ರಿಯ ವಿಧಾನವಿದು

ಒಟ್ಟು 32 ಜನರ ಈ ತಂಡವು ಟ್ರಕ್ ನೊಂದಿಗೆ ಕೆಲಸ ಮಾಡುತ್ತಿದೆ. ಈ ಟ್ರಕ್ ತೆವಳುತ್ತಾ ಸಾಗುತ್ತಿರುವುದರಿಂದ ಟ್ರಕ್ ನ ಜೊತೆಗಿರುವವರು ಟ್ರಕ್ನ ಜೊತೆಗೆ ನಡೆಯುತ್ತಾರೆ. ಸರಕು ಸುರಕ್ಷಿತವಾಗಿದೆಯೇ, ಯಾವುದಾದರೂ ವಸ್ತುಗಳಿಗೆ ತಗುಲಿ ಹಾನಿಯಾಗಿದೆಯೇ ಎಂಬುದನ್ನು ಗಮನಿಸುತ್ತಲೇ ಇರುತ್ತಾರೆ.

ಈ ಟ್ರಕ್ ಸದ್ಯಕ್ಕೆ ಕೇರಳಕ್ಕೆ ಪ್ರವೇಶಿಸಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಟ್ರಕ್ ತಾನು ತಲುಪ ಬೇಕಿರುವ ಸ್ಥಳವನ್ನು ತಲುಪಲಿದೆ. ವೋಲ್ವೋ ಎಫ್ಎಂ ಸರಣಿ ಟ್ರಕ್ ಅನ್ನು ಹಲವು ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತದೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ
ಲೋ ಎಂಡ್ ಮಾದರಿಯ ಟ್ರಕ್ ಗಳು 10,800 ಸಿಸಿ ಎಂಜಿನ್ ಹೊಂದಿವೆ. ಈ ಎಂಜಿನ್ ಗರಿಷ್ಠ 450 ಬಿಹೆಚ್ಪಿ ಪವರ್ ಹಾಗೂ 2,150 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಹೈ-ಎಂಡ್ ಮಾದರಿಗಳು 12,800 ಸಿಸಿ ಎಂಜಿನ್ ಹೊಂದಿವೆ.

ಈ ಎಂಜಿನ್ ಗರಿಷ್ಠ 500 ಬಿಹೆಚ್ಪಿ ಪವರ್ ಹಾಗೂ 2,500 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇಷ್ಟು ಬೃಹತ್ ಗಾತ್ರದ ಟ್ರಕ್ ಗಳನ್ನು ಮಾನ್ ಸ್ಟರ್ ಗಳೆಂದು ಕರೆಯುವುದು ಸೂಕ್ತ.