ಸೈರನ್ ಹೊಂದಿದ್ದ ಗಣ್ಯ ವ್ಯಕ್ತಿಗಳ ವಾಹನಗಳ ವಿರುದ್ಧ ಕಾರ್ಯಾಚರಣೆ ನಡೆಸಿದ ಪೊಲೀಸರು

ಹಿಂದೆ ಹಿರಿಯ ಸರ್ಕಾರಿ ಅಧಿಕಾರಿಗಳು ತಮ್ಮ ವಾಹನಗಳ ರೂಫ್ ಮೇಲೆ ಸೈರನ್ ಹಾಗೂ ಬೀಕನ್ ಎಂಬ ಪ್ರಕಾಶಮಾನ ದೀಪಗಳನ್ನು ಬಳಸುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಸಂಸ್ಕೃತಿಗೆ 2017 ರಲ್ಲಿ ಕೊನೆ ಹಾಡಿತು.

ಸೈರನ್ ಹೊಂದಿದ್ದ ಗಣ್ಯ ವ್ಯಕ್ತಿಗಳ ವಾಹನಗಳ ವಿರುದ್ಧ ಕಾರ್ಯಾಚರಣೆ ನಡೆಸಿದ ಪೊಲೀಸರು

ತುರ್ತು ಸೇವೆ ನೀಡುವ ವಾಹನಗಳನ್ನು ಹೊರತುಪಡಿಸಿ ಬೇರೆ ಯಾವುದೇ ವಾಹನಗಳಲ್ಲಿ ಸೈರನ್ ಹಾಗೂ ಬೀಕನ್ ದೀಪಗಳನ್ನು ಬಳಸಬಾರದು ಎಂಬ ನಿಯಮವನ್ನು ಜಾರಿಗೊಳಿಸಲಾಗಿದೆ. ಇದರನ್ವಯ ದೇಶದ ಪ್ರಧಾನ ಮಂತ್ರಿಗಳಿಂದ ಆರಂಭಿಸಿ ಹಿರಿಯ ಸರ್ಕಾರಿ ಅಧಿಕಾರಿಗಳವರೆಗೆ ತಮ್ಮ ವಾಹನಗಳ ರೂಫ್ ಮೇಲೆ ಅಳವಡಿಸಲಾಗಿದ್ದ ಸೈರನ್ ಹಾಗೂ ಬೀಕನ್ ದೀಪಗಳನ್ನು ತೆಗೆದುಹಾಕಿದರು.

ಸೈರನ್ ಹೊಂದಿದ್ದ ಗಣ್ಯ ವ್ಯಕ್ತಿಗಳ ವಾಹನಗಳ ವಿರುದ್ಧ ಕಾರ್ಯಾಚರಣೆ ನಡೆಸಿದ ಪೊಲೀಸರು

ಆದರೆ ಕೆಲವರು ಮಾತ್ರ ಇವುಗಳನ್ನು ಈಗಲೂ ಬಳಸುತ್ತಿದ್ದಾರೆ ಎಂಬ ಆರೋಪಗಳಿವೆ. ಸೈರನ್ ಹಾಗೂ ಬೀಕನ್ ದೀಪಗಳನ್ನು ಹೊಂದಿದ್ದ ವಾಹನಗಳ ವಿರುದ್ಧ ಪಶ್ಕಿಮ ಬಂಗಾಳ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಸೈರನ್ ಹೊಂದಿದ್ದ ಗಣ್ಯ ವ್ಯಕ್ತಿಗಳ ವಾಹನಗಳ ವಿರುದ್ಧ ಕಾರ್ಯಾಚರಣೆ ನಡೆಸಿದ ಪೊಲೀಸರು

ಈ ಮೂಲಕ ವಾಹನಗಳಲ್ಲಿ ಸೈರನ್ ಬಳಸಿ ತಾವು ಶ್ರೇಷ್ಠರೆಂದು ಬಿಂಬಿಸಿಕೊಳ್ಳಲು ಹೊರಟಿದ್ದವರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಒಟ್ಟು 191 ಗಣ್ಯ ವ್ಯಕ್ತಿಗಳವಾಹನಗಳಿಂದ ಸೈರನ್‌ಗಳನ್ನು ತೆಗೆದುಹಾಕಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸೈರನ್ ಹೊಂದಿದ್ದ ಗಣ್ಯ ವ್ಯಕ್ತಿಗಳ ವಾಹನಗಳ ವಿರುದ್ಧ ಕಾರ್ಯಾಚರಣೆ ನಡೆಸಿದ ಪೊಲೀಸರು

191 ವಾಹನಗಳಿಂದ 72 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಅಕ್ರಮವಾಗಿ ಅಳವಡಿಸಲಾಗಿದ್ದ ಸೈರನ್‌ಗಳನ್ನು ತೆಗೆದುಹಾಕಲಾಗಿದೆ. ಈ ಘಟನೆಯಿಂದ ಪಶ್ಚಿಮ ಬಂಗಾಳದ ಸರ್ಕಾರಿ ಅಧಿಕಾರಿಗಳು ಹಾಗೂ ಮಂತ್ರಿಗಳು ನಿಯಮಗಳನ್ನು ಉಲ್ಲಂಘಿಸಿರುವುದು ಪತ್ತೆಯಾಗಿದೆ.

ಸೈರನ್ ಹೊಂದಿದ್ದ ಗಣ್ಯ ವ್ಯಕ್ತಿಗಳ ವಾಹನಗಳ ವಿರುದ್ಧ ಕಾರ್ಯಾಚರಣೆ ನಡೆಸಿದ ಪೊಲೀಸರು

ಸರ್ಕಾರಿ ಎಂಜಿನಿಯರ್‌ಗಳು, ಜಿಲ್ಲಾ ನ್ಯಾಯಾಧೀಶರು, ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು, ಅರಣ್ಯ ಅಧಿಕಾರಿಗಳು, ಉಪ ಕಾರ್ಯದರ್ಶಿಗಳು, ಆರೋಗ್ಯ ಮುಖ್ಯ ವೈದ್ಯಕೀಯ ಅಧಿಕಾರಿಗಳು ಹಾಗೂ ಸರ್ಕಾರಿ ಆಸ್ಪತ್ರೆ ಮೇಲ್ವಿಚಾರಕರು ಸೇರಿದಂತೆ ಹಲವು ಗಣ್ಯ ವ್ಯಕ್ತಿಗಳ ವಾಹನಗಳಲ್ಲಿದ್ದ ಸೈರನ್‌ಗಳನ್ನು ತೆಗೆದುಹಾಕಲಾಗಿದೆ.

ಸೈರನ್ ಹೊಂದಿದ್ದ ಗಣ್ಯ ವ್ಯಕ್ತಿಗಳ ವಾಹನಗಳ ವಿರುದ್ಧ ಕಾರ್ಯಾಚರಣೆ ನಡೆಸಿದ ಪೊಲೀಸರು

ಸರ್ಕಾರಿ ಅಧಿಕಾರಿಗಳು ಮಾತ್ರವಲ್ಲದೆ ರಾಜ್ಯ ಸರ್ಕಾರದ ಮಂತ್ರಿಗಳು ಸಹ ಅಕ್ರಮವಾಗಿ ಸೈರನ್‌ಗಳನ್ನು ಬಳಸುತ್ತಿರುವುದು ಕಂಡುಬಂದಿದ್ದು, ಅವರ ವಾಹನಗಳಿಂದಲೂ ಸೈರನ್‌ಗಳನ್ನು ತೆಗೆದುಹಾಕಲಾಗಿದೆ.

ಸೈರನ್ ಹೊಂದಿದ್ದ ಗಣ್ಯ ವ್ಯಕ್ತಿಗಳ ವಾಹನಗಳ ವಿರುದ್ಧ ಕಾರ್ಯಾಚರಣೆ ನಡೆಸಿದ ಪೊಲೀಸರು

ಸೈರನ್ ಬಳಕೆಯನ್ನು 2017 ರಿಂದ ನಿಷೇಧಿಸಲಾಗಿದೆ. ಯಾರೂ ಸಹ ಸೈರನ್ ಬಳಸಬಾರದು ಎಂದು ಸ್ಪಷ್ಟ ಪಡಿಸಲಾಗಿದೆ. ಈ ನಿಯಮವು ರಾಷ್ಟ್ರಪತಿ, ಪ್ರಧಾನಿ ಹಾಗೂ ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೂ ಸಹ ಅನ್ವಯವಾಗುತ್ತದೆ.

ಸೈರನ್ ಹೊಂದಿದ್ದ ಗಣ್ಯ ವ್ಯಕ್ತಿಗಳ ವಾಹನಗಳ ವಿರುದ್ಧ ಕಾರ್ಯಾಚರಣೆ ನಡೆಸಿದ ಪೊಲೀಸರು

ಹಲವರು ಈ ನಿಯಮಕ್ಕೆ ಬದ್ಧರಾಗಿದ್ದರೆ, ಬೆರಳೆಣಿಕೆಯಷ್ಟು ಮಂದಿ ಅಕ್ರಮವಾಗಿ ತಮ್ಮ ವಾಹನಗಳಲ್ಲಿ ಸೈರನ್‌ಗಳನ್ನು ಬಳಸುತ್ತಿದ್ದಾರೆ. ತುರ್ತು ವಾಹನಗಳಾದ ಆಂಬುಲೆನ್ಸ್, ಫೈರ್ ಇಂಜಿನ್, ಪೊಲೀಸ್ ವಾಹನಗಳು ಹಾಗೂ ಮಿಲಿಟರಿ ವಾಹನಗಳು ಸೈರನ್ ಹಾಗೂ ನೀಲಿ ಮತ್ತು ಕೆಂಪು ಬಣ್ಣದ ಬೀಕನ್ ದೀಪಗಳನ್ನು ಬಳಸಲು ಅವಕಾಶ ನೀಡಲಾಗಿದೆ.

Most Read Articles

Kannada
English summary
West Bengal cops removes illegal sirens and beacons from VIP vehicles. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X