India
YouTube

ಬೈಕ್ ನೀಡಿದ್ದ ಮೊದಲ ದಿನವೇ ಕಣ್ಮರೆಯಾಗಿದ್ದ ಧೋನಿ: ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕ ಶ್ರೀನಿವಾಸನ್

ಕ್ರಿಕೆಟ್ ಇತಿಹಾಸದಲ್ಲಿ ತಮ್ಮ ಗುರುತನ್ನು ಅಚ್ಚಳಿಯದಂತೆ ಉಳಿಸಿಕೊಂಡಿರುವ, ಮಿಸ್ಟರ್ ಕೂಲ್ ಅಂತಲೂ ಅಭಿಮಾನಿಗಳಿಂದ ಕರೆಸಿಕೊಳ್ಳುವ ಎಂ.ಎಸ್‌ ಧೋನಿ ಅವರಿಗೆ ಬೈಕ್‌ಗಳೆಂದರೆ ಬಹಳ ಇಷ್ಟ. ಎಷ್ಟರ ಮಟ್ಟಿಗೆ ಅಂದ್ರೆ, ಅವರ ಬಳಿ ದೇಶಿಯ ಹಾಗೂ ವಿದೇಶಿ ಬೈಕ್‌ಗಳ ದೊಡ್ಡ ಸಂಗ್ರಹವೇ ಇದೆ.

ಬೈಕ್ ನೀಡಿದ್ದ ಮೊದಲ ದಿನವೇ ಕಣ್ಮರೆಯಾಗಿದ್ದ ಧೋನಿ: ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕ ಶ್ರೀನಿವಾಸನ್

ಬೈಕ್‌ಗಳೆಂದರೆ ಧೋನಿಗಿರುವ ಕ್ರೇಜ್ ಬಗ್ಗೆ ಸ್ವತಃ ಸಿಎಸ್‌ಕೆ ಮಾಲೀಕ ಎನ್.ಶ್ರೀನಿವಾಸನ್ ಕುತೂಹಲಕಾರಿ ವಿಷಯವನ್ನು ಹಂಚಿಕೊಂಡಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಡಜನ್‌ಗಟ್ಟಲೆ ವಿಂಟೇಜ್ ಮೋಟಾರ್‌ಸೈಕಲ್‌ಗಳು, ಆಧುನಿಕ ಸೂಪರ್‌ಬೈಕ್‌ಗಳನ್ನು ಹೊಂದಿದ್ದಾರೆ. ಧೋನಿಗೆ ಚೆನ್ನೈ ಮೇಲಿನ ಪ್ರೀತಿಯಿಂದಲೇ ಮೋಟಾರ್ ಸೈಕಲ್ ಮೇಲೂ ಪ್ರೀತಿ ಬೆಳೆಯಿತು ಎಂದು ಎನ್.ಶ್ರೀನಿವಾಸನ್ ಹೇಳಿದ್ದಾರೆ.

ಬೈಕ್ ನೀಡಿದ್ದ ಮೊದಲ ದಿನವೇ ಕಣ್ಮರೆಯಾಗಿದ್ದ ಧೋನಿ: ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕ ಶ್ರೀನಿವಾಸನ್

ಚೆನ್ನೈ ಮತ್ತು ಎಂ.ಎಸ್ ಧೋನಿ ನಡುವಿನ ಸಂಬಂಧವು ಒಂದು ದಂತಕಥೆಯಾಗಿದೆ. IPL ನ ಮೊದಲ ಆವೃತ್ತಿಯಿಂದ MS ಧೋನಿ 2018 ರವರೆಗೆ ತಂಡವನ್ನು ಮುನ್ನಡೆಸಿದ್ದರು. ಬಳಿಕ ಎರಡು ವರ್ಷಗಳವರೆಗೆ ಫ್ರಾಂಚೈಸಿಯನ್ನು ಅಮಾನತುಗೊಳಿಸಲಾಗಿತ್ತು. ಧೋನಿ ಈವರೆಗೆ ಚೆನ್ನೈ ತಂಡಕ್ಕೆ ನಾಲ್ಕು ಐಪಿಎಲ್ ಪ್ರಶಸ್ತಿಗಳನ್ನು ತಂದುಕೊಟ್ಟಿದ್ದಾರೆ.

ಬೈಕ್ ನೀಡಿದ್ದ ಮೊದಲ ದಿನವೇ ಕಣ್ಮರೆಯಾಗಿದ್ದ ಧೋನಿ: ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕ ಶ್ರೀನಿವಾಸನ್

ಅವರು ಐದು ಸಂದರ್ಭಗಳಲ್ಲಿ ರನ್ನರ್-ಅಪ್ ಆಗಿ ಮುಗಿಸಿದ್ದಾರೆ, ಇದು ಐಪಿಎಲ್‌ನ ಕ್ರಿಕೆಟ್ ಇತಿಹಾಸದಲ್ಲಿ ಧೋನಿಯನ್ನು ಶ್ರೇಷ್ಠ ನಾಯಕರಲ್ಲಿ ಒಬ್ಬರನ್ನಾಗಿ ಮಾಡಿದೆ. ಧೋನಿ ಜಾರ್ಖಂಡ್‌ನ ರಾಂಚಿಯಿಂದ ಬಂದವರಾಗಿದ್ದರೂ, ಚೆನ್ನೈನ ಹಳದಿ ಬಣ್ಣದೊಂದಿಗೆ ಅವರಿಗೆ ಭಾವನಾತ್ಮಕ ಸಂಬಂಧವಿದೆ.

ಬೈಕ್ ನೀಡಿದ್ದ ಮೊದಲ ದಿನವೇ ಕಣ್ಮರೆಯಾಗಿದ್ದ ಧೋನಿ: ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕ ಶ್ರೀನಿವಾಸನ್

ಅವರು ಚೆನ್ನೈನಾದ್ಯಂತ ಅಭಿಮಾನಿಗಳಿಂದ ಪ್ರೀತಿಯಿಂದ 'ಥಲಾ' ಎಂದು ಕರೆಸಿಕೊಂಡಿದ್ದಾರೆ. ಅವರು ಹುಟ್ಟಿದ ಸ್ಥಳಕ್ಕೆ ಎಷ್ಟು ಪ್ರಾಮುಖ್ಯತೆ ಕೊಡುತ್ತಾರೋ ಚೆನ್ನೈ ನಗರಕ್ಕೂ ಅಷ್ಟೇ ಪ್ರಾಮುಖ್ಯತೆ ಕೊಡುತ್ತಾರೆ. ಧೋನಿ ಮತ್ತು ಚೆನ್ನೈ ನಡುವೆ ಇರುವ ಭಾಂಧವ್ಯವನ್ನು ಸಿಎಸ್‌ಕೆ ಮಾಲೀಕ ಎನ್.ಶ್ರೀನಿವಾಸನ್ ವಿವರಿಸಿದ್ದಾರೆ.

ಬೈಕ್ ನೀಡಿದ್ದ ಮೊದಲ ದಿನವೇ ಕಣ್ಮರೆಯಾಗಿದ್ದ ಧೋನಿ: ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕ ಶ್ರೀನಿವಾಸನ್

2008 ರಲ್ಲಿ ಚೆನ್ನೈ ನಗರದ ರಸ್ತೆಗಳಲ್ಲಿ ಓಡಾಡಲು ಎಂಎಸ್‌ ಧೋನಿ ಅವರಿಗೆ ಗೇಟ್‌ವೇ ಒದಗಿಸಲಾಯಿತು. "ಮೊದಲ ದಿನ ನಾವು ಅವರಿಗೆ ಫ್ರಾಂಚೈಸಿ ಬೈಕ್ ನೀಡಿದ್ದೇವು, ಆ ಬಳಿಕ ಅವರು ಕಣ್ಣಿಗೆ ಕಾದಣೆ ಕಣ್ಮರೆಯಾಗಿಬಿಟ್ಟರು. ದಿನವಿಡಿ ನಗರದಾದ್ಯಂತ ರೌಂಡ್ಸ್ ಹಾಕಿ ವಾಪಸ್‌ ಆಗಿದ್ದರು ಎಂದು ಶ್ರೀನವಾಸನ್ ಹೇಳಿದ್ದಾರೆ.

ಬೈಕ್ ನೀಡಿದ್ದ ಮೊದಲ ದಿನವೇ ಕಣ್ಮರೆಯಾಗಿದ್ದ ಧೋನಿ: ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕ ಶ್ರೀನಿವಾಸನ್

ಶ್ರೀನಿವಾಸನ್ ಅವರು ಧೋನಿಗೆ ಯಾವ ಬೈಕ್ ಕೊಟ್ಟಿದ್ದರು ಎಂಬುದರ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ಆದರೆ ಅವರು ಯಮಹಾ ಎಫ್‌ಜೆಡ್ -1 ಅನ್ನು ಹೊಂದಿದ್ದರು, ಅದರಲ್ಲೇ ಅವರು ಕ್ರೀಡಾಂಗಣಕ್ಕೆ ತಲುಪಿದ್ದರು ಎನ್ನಲಾಗಿದೆ. ಚೆನ್ನೈನಲ್ಲಿ ಅವರ ಸುದೀರ್ಘವಾಗಿ ತಂಗಿದ್ದ ಸಮಯದಲ್ಲಿ, ಅವರು ಪ್ರಯಾಣಕ್ಕಾಗಿ Yamaha FZ-1 ಅನ್ನು ಬಳಸಿದ್ದರು ಎಂದು ಈ ಹಿಂದೆಯೂ ವರದಿಯಾಗಿತ್ತು.

ಬೈಕ್ ನೀಡಿದ್ದ ಮೊದಲ ದಿನವೇ ಕಣ್ಮರೆಯಾಗಿದ್ದ ಧೋನಿ: ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕ ಶ್ರೀನಿವಾಸನ್

ಬೈಕ್ ಪ್ರಿಯ, ವೈವಿಧ್ಯಮಯ ಬೈಕ್ ಹಾಗೂ ಕಾರ್ ಕಲೆಕ್ಷನ್ ಹೊಂದಿರುವ ಧೋನಿ ಅವರಿಗೆ ಬೈಕ್‌ನಲ್ಲಿ ಸವಾರಿ ಮಾಡುವುದು ಬಹಳ ಇಷ್ಟ. ಅವರು ಬೈಕ್‌ನಲ್ಲಿ ನಗರದ ಎಲ್ಲಾ ಭಾಗಗಳಿಗೆ ಸುತ್ತಾಡಿದ್ದಾರೆ. ಇದು ಚೆನ್ನೈನೊಂದಿಗಿನ ಅವರ ಭಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿತು. ಇದು ಎಂದಿಗೂ ಕೊನೆಗೊಳ್ಳುವುದಿಲ್ಲ ಎಂದು ಶ್ರೀನಿವಾಸನ್ ಹೇಳಿದರು.

ಬೈಕ್ ನೀಡಿದ್ದ ಮೊದಲ ದಿನವೇ ಕಣ್ಮರೆಯಾಗಿದ್ದ ಧೋನಿ: ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕ ಶ್ರೀನಿವಾಸನ್

ಧೋನಿ ತಮ್ಮ ಕೊನೆಯ IPL ಪಂದ್ಯವನ್ನು ತವರಿನ ಅಭಿಮಾನಿಗಳ ಮುಂದೆ ಆಡಲು ಬಯಸಿದ್ದಾರೆ. 2023 ರಲ್ಲಿ ಫ್ರಾಂಚೈಸಿಯನ್ನು ಮುನ್ನಡೆಸಲು ಸಿದ್ಧರಾಗಿದ್ದಾರೆ. IPL 2022 ರಲ್ಲಿ ಮಹಿ ನಾಯಕತ್ವವನ್ನು ತೊರೆದರು. ಆದರೆ ತಂಡದ ವೈಫಲ್ಯದ ನಂತರ ರವೀಂದ್ರ ಜಡೇಜಾ ಹುದ್ದೆಗೆ ರಾಜೀನಾಮೆ ನೀಡಿದ್ದು, ಮತ್ತೆ ನಾಯಕನ ಪಟ್ಟವನ್ನು ತೆಗೆದುಕೊಂಡಿದ್ದಾರೆ.

ಬೈಕ್ ನೀಡಿದ್ದ ಮೊದಲ ದಿನವೇ ಕಣ್ಮರೆಯಾಗಿದ್ದ ಧೋನಿ: ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕ ಶ್ರೀನಿವಾಸನ್

ಧೋನಿ ಬೈಕ್, ಕಾರ್ ಕಲೆಕ್ಷನ್

ಧೋನಿಯವರು ಮೋಟಾರ್‌ಸೈಕಲ್‌ಗಳು ಮತ್ತು ವಿಂಟೇಜ್ ಕಾರುಗಳನ್ನು ಇರಿಸಿಕೊಳ್ಳಲು ವಿಶೇಷ ಗಾಜಿನ ಮನೆಯನ್ನು ನಿರ್ಮಿಸಿಕೊಂಡಿದ್ದಾರೆ. ಇದರಲ್ಲಿ ಕವಾಸಕಿ ನಿಂಜಾ H2, ಕಾನ್ಫೆಡರೇಟ್ ಹೆಲ್‌ಕ್ಯಾಟ್, ಕವಾಸಕಿ ನಿಂಜಾ ZX-14R, Harley-Davidson Fatboy ಮತ್ತು BSA ಗೋಲ್ಡ್‌ಸ್ಟಾರ್, ಯಮಹಾ RD350 ಮತ್ತು ಇತರ ಹಲವು ವಿಂಟೇಜ್ ಮೋಟಾರ್‌ಸೈಕಲ್‌ಗಳನ್ನು ಹೊಂದಿದ್ದಾರೆ.

ಬೈಕ್ ನೀಡಿದ್ದ ಮೊದಲ ದಿನವೇ ಕಣ್ಮರೆಯಾಗಿದ್ದ ಧೋನಿ: ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕ ಶ್ರೀನಿವಾಸನ್

ಧೋನಿ ಇತ್ತೀಚೆಗೆ ತಮ್ಮ ಗ್ಯಾರೇಜ್‌ಗೆ 1969ರ ಫೋರ್ಡ್ ಮಸ್ಟಾಂಗ್ ಅನ್ನು ಇಳಿಸಿದ್ದಾರೆ. ಇದು ಭಾರತದಲ್ಲಿ ಅಪರೂಪವಾಗಿ ಕಾಣಿಸಿಕೊಳ್ಳುವ ಕಾರಾಗಿದೆ. 1969 ರ ಮುಸ್ತಾಂಗ್ ಜೊತೆಗೆ, ರೋಲ್ಸ್ ರಾಯ್ಸ್ ಸಿಲ್ವರ್ ಶ್ಯಾಡೋವನ್ನು ಧೋನಿ ಈ ಹಿಂದೆ ಖರೀದಿಸಿದ್ದರು.

ಬೈಕ್ ನೀಡಿದ್ದ ಮೊದಲ ದಿನವೇ ಕಣ್ಮರೆಯಾಗಿದ್ದ ಧೋನಿ: ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕ ಶ್ರೀನಿವಾಸನ್

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಸಮಾನ್ಯರಂತೆ ಧೋನಿ ಅವರಿಗೂ ಬೈಕ್‌ಗಳೆಂದರೆ ಹೆಚ್ಚು ಪ್ರೀತಿ. ಈಗಲೂ ಅವರು ಹೆಲ್ಮೆಟ್ ಧರಿಸಿ ಸಾಮಾನ್ಯರಂತೆ ರಸ್ತೆಗಳಲ್ಲಿ ಸಂಚರಿಸಿರುವ ಹಲವು ಉದಾಹರಣೆಗಳು ಇವೆ. ಅವರು ಆರಂಭದಲ್ಲಿ ಕಾರುಗಳನ್ನು ಖರೀದಿಸಿದಾಗ ರಾಂಚಿಯ ಬೀದಿಗಳಲ್ಲಿ ಕಾರನ್ನು ಓಡಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅವರು ಹೆಚ್ಚು ಹೊರಬರುವುದಿಲ್ಲ.

Most Read Articles

Kannada
English summary
We gave MS Dhoni a bike and he just disappeared with it
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X