ರಿಕ್ಷಾ ಹೊಡೆದು ಹಾಕಿದ ಪೊಲೀಸರು..!

ಭಾರತದ ಬಹುತೇಕ ಜನರು ಪೊಲೀಸರಿಗೆ, ಅದರಲ್ಲೂ ಟ್ರಾಫಿಕ್ ಪೊಲೀಸರಿಗೆ ಗೌರವ ತೋರಿಸುವುದಿಲ್ಲ. ಪ್ರತಿ ತಿಂಗಳು, ಇಂಟರ್‍‍ನೆಟ್‍‍ನಲ್ಲಿ ಪೊಲೀಸರ ಕೆಟ್ಟ ನಡವಳಿಕೆಯ ಬಗ್ಗೆ ವರದಿಗಳು ಪ್ರಕಟವಾಗುತ್ತಲೇ ಇರುತ್ತವೆ.

ರಿಕ್ಷಾ ಹೊಡೆದು ಹಾಕಿದ ಪೊಲೀಸರು..!

ಟ್ರಾಫಿಕ್ ಪೊಲೀಸರು ಸಹ ಕೆಟ್ಟದಾಗಿ ವರ್ತಿಸುವ ಹಲವಾರು ಘಟನೆಗಳು ವರದಿಯಾಗುತ್ತಿರುತ್ತವೆ. ಸಾಮಾನ್ಯ ಜನರ ಮೇಲೆ ಪೊಲೀಸರು ದೌರ್ಜನ್ಯವೆಸಗುವ ಬಗ್ಗೆ ಹಲವಾರು ವರದಿಗಳಾಗಿವೆ. ಈಗ ಇದೇ ರೀತಿಯ ಮತ್ತೊಂದು ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ರಿಕ್ಷಾ ಹೊಡೆದು ಹಾಕಿದ ಪೊಲೀಸರು..!

ಈ ಘಟನೆಯ ವೀಡಿಯೊ ವೈರಲ್ ಆಗಿದೆ. ಈ ವೀಡಿಯೊದಲ್ಲಿ ಕೆಲವು ಪೊಲೀಸರು ಎಲೆಕ್ಟ್ರಿಕ್ ರಿಕ್ಷಾದ ಹೆಡ್‌ಲ್ಯಾಂಪ್ ಹಾಗೂ ಕನ್ಸೋಲ್‍‍ಗಳನ್ನು ಹೊಡೆದು ಹಾಕುವುದನ್ನು ಕಾಣಬಹುದು. ಈ ವೀಡಿಯೊದಲ್ಲಿ, ಸಾರ್ವಜನಿಕ ರಸ್ತೆಯಲ್ಲಿರುವ ಪೊಲೀಸರು ಎಲೆಕ್ಟ್ರಿಕ್ ರಿಕ್ಷಾವನ್ನು ಸುತ್ತುವರೆದಿರುವುದನ್ನು ಕಾಣಬಹುದು.

ರಿಕ್ಷಾ ಹೊಡೆದು ಹಾಕಿದ ಪೊಲೀಸರು..!

ಈ ಪೊಲೀಸರ ಪೈಕಿ ಒಬ್ಬರು ತಮ್ಮ ಲಾಠಿಯಿಂದ ಎಲೆಕ್ಟ್ರಿಕ್ ರಿಕ್ಷಾದ ಹೆಡ್‌ಲ್ಯಾಂಪ್ ಅನ್ನು ಮುರಿದು ಹೋಗುವವರೆಗೂ ಹೊಡೆಯುತ್ತಾರೆ. ಇದರ ಜೊತೆಗೆ ರಿಕ್ಷಾದ ಸ್ಪೀಡೋಮೀಟರ್ ಕನ್ಸೋಲ್ ಅನ್ನು ಸಹ ಹೊಡೆದು ಹಾಕುತ್ತಾರೆ.

ರಿಕ್ಷಾ ಹೊಡೆದು ಹಾಕಿದ ಪೊಲೀಸರು..!

ಇಷ್ಟೆಲ್ಲಾ ನಡೆಯುತ್ತಿದ್ದರೂ ರಿಕ್ಷಾ ಚಾಲಕರು ಏನನ್ನೂ ಮಾತನಾಡದೇ ಸುಮ್ಮನಿರುತ್ತಾರೆ. ಈ ಪೊಲೀಸರು ಆ ಪ್ರದೇಶದಲ್ಲಿ ಹಾದುಹೋದ ಹಲವು ರಿಕ್ಷಾಗಳಿಗೆ ಇದೇ ರೀತಿ ಮಾಡುವುದನ್ನು ಕಾಣಬಹುದು. ಪೊಲೀಸರು ಎಲೆಕ್ಟ್ರಿಕ್ ರಿಕ್ಷಾ ಎಳೆಯುವವರಿಗೆ ಏನನ್ನೂ ಹೇಳದೇ ಏಕಾ‍ಏಕಿ ಅವರ ರಿಕ್ಷಾಗಳನ್ನು ಹೊಡೆದು ಹಾಕಿ ಅವುಗಳನ್ನು ಹಾಳು ಮಾಡುತ್ತಿದ್ದಾರೆ.

ರಿಕ್ಷಾ ಹೊಡೆದು ಹಾಕಿದ ಪೊಲೀಸರು..!

ಎಲೆಕ್ಟ್ರಿಕ್ ರಿಕ್ಷಾಗಳನ್ನು ಈ ರೀತಿಯಾಗಿ ಹೊಡೆದು ಹಾಕುತ್ತಿರುವ ಏಕೈಕ ಕಾರಣವೆಂದರೆ ಆ ರಿಕ್ಷಾಗಳು ರಸ್ತೆಗೆ ಬಂದಿದ್ದು. ಭಾರತದ ಹಲವಾರು ಭಾಗಗಳಲ್ಲಿ ಈ ರಿಕ್ಷಾಗಳನ್ನು ನಿಷೇಧಿಸಲಾಗಿದೆ. ಟ್ರಾಫಿಕ್ ಜಾಮ್ ಉಂಟಾಗುವ ಕಾರಣಕ್ಕೆ ರಿಕ್ಷಾಗಳಂತಹ ನಿಧಾನವಾಗಿ ಚಲಿಸುವ ವಾಹನಗಳನ್ನು ಸಂಚಾರ ಪೊಲೀಸರು ನಿಷೇಧಿಸಿದ್ದಾರೆ.

ರಿಕ್ಷಾ ಹೊಡೆದು ಹಾಕಿದ ಪೊಲೀಸರು..!

ಆದರೆ, ರಿಕ್ಷಾ ಎಳೆಯುವವರು ಇಂತಹ ನಿಷೇಧಗಳಿಗೆ ತಲೆ ಕೆಡಿಸಿಕೊಳ್ಳದೇ ರಸ್ತೆಗಳನ್ನು ಪ್ರವೇಶಿಸುತ್ತಾರೆ. ಆದರೆ, ಎಲೆಕ್ಟ್ರಿಕ್ ರಿಕ್ಷಾಗಳ ಪ್ರವೇಶವನ್ನು ನಿಲ್ಲಿಸಲು ಪೊಲೀಸರು ಇಂತಹ ಕಠಿಣ ಕ್ರಮಗಳಿಗೆ ಮುಂದಾಗಿರುವುದು ಸ್ವಲ್ಪ ಅತಿಯಾಯ್ತು ಎನಿಸುತ್ತದೆ.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ರಿಕ್ಷಾ ಹೊಡೆದು ಹಾಕಿದ ಪೊಲೀಸರು..!

ಸದರ್ ಬಜಾರ್ ಬುರ್ದ್ವಾನ್‍‍ನಲ್ಲಿ ನಡೆದಿರುವ ಈ ಘಟನೆಯು ಟ್ರಾಫಿಕ್ ಪೊಲೀಸರು ಭಾರತದಾದ್ಯಂತವಿರುವ ರಿಕ್ಷಾ ಚಾಲಕರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದಕ್ಕೆ ಸಾಕ್ಷಿಯಾಗಿದೆ. ದೆಹಲಿಯಲ್ಲಿ, ಟ್ರಾಫಿಕ್ ಪೊಲೀಸರು ಆಟೋ ರಿಕ್ಷಾ ಹಾಗೂ ಮ್ಯಾನುವಲ್ ರಿಕ್ಷಾಗಳ ಟಯರ್‌ಗಳನ್ನು ಹಾನಿ ಮಾಡಲು ಐಸ್ ಬ್ರೇಕರ್‌ಗಳಂತಹ ವಸ್ತುಗಳನ್ನು ಬಳಸುತ್ತಾರೆ.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ರಿಕ್ಷಾ ಹೊಡೆದು ಹಾಕಿದ ಪೊಲೀಸರು..!

ಆಟೋ ರಿಕ್ಷಾಗಳಂತಹ ತ್ರಿಚಕ್ರ ವಾಹನಗಳಿಗೆ ಮೋಟಾರು ವಾಹನ ಕಾಯ್ದೆಯಡಿ ದಂಡ ವಿಧಿಸಬಹುದಾದರೂ, ಹಲವಾರು ಎಲೆಕ್ಟ್ರಿಕ್ ರಿಕ್ಷಾಗಳು ಯಾವುದೇ ರಿಜಿಸ್ಟ್ರೇಷನ್ ನಂಬರ್ ಇಲ್ಲದೆ ರಸ್ತೆಗಳಲ್ಲಿ ಅಕ್ರಮವಾಗಿ ಸಂಚರಿಸುತ್ತವೆ. ರಿಜಿಸ್ಟ್ರೇಷನ್ ನಂಬರ್ ಇಲ್ಲದ ಕಾರಣಕ್ಕೆ ಅವುಗಳಿಗೆ ದಂಡ ವಿಧಿಸಲಾಗುವುದಿಲ್ಲ.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಈ ರೀತಿಯ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆಯಬಹುದು. ಆದರೆ ಈ ವಾಹನಗಳನ್ನು ವಶಪಡಿಸಿಕೊಂಡು, ಅವುಗಳನ್ನು ಸಂರಕ್ಷಿಸುವುದು ದೀರ್ಘ ಕಾರ್ಯವಿಧಾನವಾದ ಕಾರಣ, ಪೊಲೀಸರು ಅವುಗಳನ್ನು ಮಾಡುವುದಿಲ್ಲ. ಬದಲಿಗೆ ರಿಕ್ಷಾಗಳನ್ನು ಹೊಡೆದು ಹಾಕುವಂತಹ ಕಠಿಣ ಕ್ರಮಗಳಿಗೆ ಮುಂದಾಗಿ ರಿಕ್ಷಾ ಎಳೆಯುವವರಿಗೆ ಎಚ್ಚರಿಕೆ ನೀಡುತ್ತಿದ್ದಾರೆ.

ರಿಕ್ಷಾ ಹೊಡೆದು ಹಾಕಿದ ಪೊಲೀಸರು..!

ಆದರೆ ಎಚ್ಚರಿಕೆ ನೀಡುವ ಉದ್ದೇಶದಿಂದ ರಿಕ್ಷಾಗಳನ್ನೇ ಅವಲಂಬಿಸುವವರ ಮೇಲೆ ಪೊಲೀಸರು ಕೈಗೊಂಡಿರುವ ಈ ಕ್ರಮವು ಅಮಾನವೀಯವಾಗಿದೆ. ಪೊಲೀಸರು ಸೇರಿದಂತೆ ಯಾರೇ ಆಗಲಿ ಇಂತಹ ಅಕ್ರಮ ವಾಹನಗಳ ಸಂಚಾರವನ್ನು ನಿಲ್ಲಿಸಲು ಬೇರೆ ವಿಧಾನಗಳನ್ನು ಅನುಸರಿಸಬೇಕು.

Most Read Articles

Kannada
English summary
Cops break damage electric rickshaw intentionally - Read in Kannada
Story first published: Wednesday, November 20, 2019, 10:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X