ಜನರ ಅಸೂಯೆಗೆ ಬಲಿಪಶುವಾದ ಸೂಪರ್ ಬೈಕ್ ಸವಾರ

ಸೂಪರ್ ಬೈಕುಗಳನ್ನು ಹೊಂದಿರುವವರ ಜೀವನವು ನಾವು ಯೋಚಿಸುವುದಕ್ಕಿಂತ ಭಿನ್ನವಾಗಿರುತ್ತದೆ. ಸೂಪರ್ ಬೈಕ್‌ಗಳು ಎಲ್ಲರ ಗಮನವನ್ನು ತಮ್ಮತ್ತ ಸೆಳೆಯುತ್ತವೆ. ಇದು ಕೆಲವೊಮ್ಮೆ ಸೂಪರ್ ಬೈಕ್ ಸವಾರರಿಗೆ ಸಮಸ್ಯೆಯನ್ನು ತಂದೊಡ್ಡಬಲ್ಲದು.

ಜನರ ಅಸೂಯೆಗೆ ಬಲಿಪಶುವಾದ ಸೂಪರ್ ಬೈಕ್ ಸವಾರ

ಕಿರಿದಾದ ರಸ್ತೆಯಲ್ಲಿ ಸಂಚರಿಸಿದ ಸೂಪರ್ ಬೈಕ್ ಸವಾರನೊಬ್ಬ ತೊಂದರೆಗೆ ಸಿಲುಕಿದ ಘಟನೆ ನಡೆದಿದೆ. ಈ ಘಟನೆಗೆ ಸಂಬಂಧಿಸಿದ ವೀಡಿಯೊವನ್ನು ಲೈಫ್ ಮೋಟೋ ವರ್ಲ್ಡ್ ಎಂಬ ಯೂಟ್ಯೂಬ್ ಚಾನೆಲ್'ನಲ್ಲಿ ಅಪ್ ಲೋಡ್ ಮಾಡಲಾಗಿದೆ. ನೆರೆಹೊರೆಯವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಸೂಪರ್ ಬೈಕ್‌ ಸವಾರನನ್ನು ಪೊಲೀಸರು ಬಂಧಿಸಿದ್ದಾರೆ.

ಜನರ ಅಸೂಯೆಗೆ ಬಲಿಪಶುವಾದ ಸೂಪರ್ ಬೈಕ್ ಸವಾರ

ವೀಡಿಯೊದಲ್ಲಿರುವ ಮಾಹಿತಿಯ ಪ್ರಕಾರ, ಪಶ್ಚಿಮ ಬಂಗಾಳದ ಕಿರಿದಾದ ರಸ್ತೆಯಲ್ಲಿ ಸೂಪರ್ ಬೈಕ್ ಸವಾರನು ಸಾಗಿದಾಗ ಈ ಘಟನೆ ನಡೆದಿದೆ. ಈ ರಸ್ತೆಯಲ್ಲಿಯೇ ಸೂಪರ್ ಬೈಕ್ ಸವಾರನು ಮೂರರಿಂದ ನಾಲ್ಕು ಬಾರಿ ಸಂಚರಿಸಿದ ಎಂದು ಹೇಳಲಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಜನರ ಅಸೂಯೆಗೆ ಬಲಿಪಶುವಾದ ಸೂಪರ್ ಬೈಕ್ ಸವಾರ

ಸೂಪರ್ ಬೈಕ್ ವಿಪರೀತ ಶಬ್ದವನ್ನುಂಟು ಮಾಡುತ್ತಿದ್ದ ಕಾರಣಕ್ಕೆ ಅವನು ಮತ್ತೊಮ್ಮೆ ಆ ಬೈಕಿನಲ್ಲಿ ಸಾಗಿದಾಗ ಅಲ್ಲಿನ ನಿವಾಸಿಗಳು ಆತನನ್ನು ತಡೆದು ನಿಲ್ಲಿಸಿದ್ದಾರೆ. ಈ ವೀಡಿಯೊದಲ್ಲಿ ಕೆಲವರು ಬೈಕ್ ಸವಾರನ ಮೇಲೆ ಕೂಗಾಡುತ್ತಿರುವುದನ್ನು ಕಾಣಬಹುದು.

ಜನರ ಅಸೂಯೆಗೆ ಬಲಿಪಶುವಾದ ಸೂಪರ್ ಬೈಕ್ ಸವಾರ

ಮನೆಯಲ್ಲಿ ವಯಸ್ಸಾದವರಿದ್ದು, ಅವರಿಗೆ ಹೃದಯದ ಸಮಸ್ಯೆ ಇದೆ. ಬೈಕ್ ಹೆಚ್ಚು ಶಬ್ದ ಮಾಡಿದರೆ ಅವರ ಆರೋಗ್ಯ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ ಎಂದು ಅವರು ಬೈಕ್ ಸವಾರನಿಗೆ ಹೇಳುತ್ತಾರೆ. ಸೂಪರ್ ಬೈಕ್ ಸವಾರ ಅವರ ಬಳಿ ಕ್ಷಮೆಯಾಚಿಸಿ ಇನ್ನು ಮುಂದೆ ಈ ರಸ್ತೆಯಲ್ಲಿ ಬೈಕ್‌ ಚಾಲನೆ ಮಾಡುವುದಿಲ್ಲವೆಂದು ಹೇಳುತ್ತಾನೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಜನರ ಅಸೂಯೆಗೆ ಬಲಿಪಶುವಾದ ಸೂಪರ್ ಬೈಕ್ ಸವಾರ

ಈ ಉತ್ತರದಿಂದ ತೃಪ್ತರಾಗದ ಜನರು ಮತ್ತೆ ಬೈಕ್ ಸವಾರನ ಮೇಲೆ ಕೂಗಾಡುತ್ತಾರೆ. ನಂತರ ಬೈಕ್ ಸವಾರ ತನ್ನ ತಂದೆಯನ್ನು ಘಟನಾ ಸ್ಥಳಕ್ಕೆ ಕರೆ ತಂದಿದ್ದಾನೆ. ಆತನ ತಂದೆಯ ಮೇಲೆಯೂ ಅಲ್ಲಿ ನೆರೆದಿದ್ದವರು ಕೂಗಾಡಿದ್ದಾರೆ. ಬೈಕ್ ಸವಾರನ ತಂದೆ ಕೆಲಸ ಮಾಡುವ ಕಾರ್ಖಾನೆಯ ಮಾಲೀಕರೂ ಘಟನಾ ಸ್ಥಳಕ್ಕೆ ಬಂದಿದ್ದಾರೆ.

ಜನರ ಅಸೂಯೆಗೆ ಬಲಿಪಶುವಾದ ಸೂಪರ್ ಬೈಕ್ ಸವಾರ

ಸುದೀರ್ಘ ವಾಗ್ವಾದದ ನಂತರ ಪೊಲೀಸರು ಅಲ್ಲಿಗೆ ಬಂದಿದ್ದಾರೆ. ಬೈಕ್‌ ಸವಾರನ ಹೆಲ್ಮೆಟ್‌ನಲ್ಲಿದ್ದ ಕ್ಯಾಮೆರಾದಲ್ಲಿ ಈ ಘಟನೆ ರೆಕಾರ್ಡ್ ಆಗಿದೆ. ಹೀಗೆ ರೆಕಾರ್ಡ್ ಮಾಡುವುದು ಕಾನೂನುಬಾಹಿರವೆಂದು ಅಲ್ಲಿ ನೆರೆದಿದ್ದವರು ಪೊಲೀಸರಿಗೆ ತಿಳಿಸಿದ್ದಾರೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಜನರ ಅಸೂಯೆಗೆ ಬಲಿಪಶುವಾದ ಸೂಪರ್ ಬೈಕ್ ಸವಾರ

ಜೊತೆಗೆ ಹೆಲ್ಮೆಟ್ ಕಿತ್ತು ಬಿಸಾಕುವುದಾಗಿ ಬೆದರಿಕೆ ಹಾಕಿದ್ದಾರೆ. ಇದಾದ ನಂತರ ಬೈಕ್ ಸವಾರ ತನ್ನ ಹೆಲ್ಮೆಟ್ ತೆಗೆದಿದ್ದಾನೆ. ಆದರೆ ಆತ ಕ್ಯಾಮೆರಾವನ್ನು ಆಫ್ ಮಾಡಿಲ್ಲ. ಇದರ ನಡುವೆ ಪೊಲೀಸರು ಬೈಕ್ ಎಷ್ಟು ಶಬ್ದ ಮಾಡುತ್ತದೆ ಎಂಬುದನ್ನು ಅರಿಯುವ ಪ್ರಯತ್ನ ಮಾಡಿದ್ದಾರೆ.

ಜನರ ಅಸೂಯೆಗೆ ಬಲಿಪಶುವಾದ ಸೂಪರ್ ಬೈಕ್ ಸವಾರ

ಪೊಲೀಸ್ ಅಧಿಕಾರಿಯೊಬ್ಬರು ಬೈಕಿನ ಹಿಂಬದಿಯ ಸೀಟಿನಲ್ಲಿ ಕುಳಿತು ಸ್ವಲ್ಪ ದೂರ ಸಾಗಿದ್ದಾರೆ. ಇಷ್ಟಕ್ಕೂ ತೃಪ್ತರಾಗದ ಜನರು ಪೊಲೀಸರಿಗೆ ಲಿಖಿತ ದೂರು ನೀಡಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಬೈಕ್‌ ಸವಾರನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಜನರ ಅಸೂಯೆಗೆ ಬಲಿಪಶುವಾದ ಸೂಪರ್ ಬೈಕ್ ಸವಾರ

ಪೊಲೀಸರು ಆತನನ್ನು ಕೆಲವು ಗಂಟೆಗಳ ಕಾಲ ಪೊಲೀಸ್ ಠಾಣೆಯಲ್ಲಿಟ್ಟು ನಂತರ ಬಿಡುಗಡೆ ಮಾಡಿದ್ದಾರೆ. ಒಟ್ಟಿನಲ್ಲಿ ಸೂಪರ್ ಬೈಕ್ ಸವಾರ ತನ್ನದಲ್ಲದ ತಪ್ಪಿಗೆ ತೊಂದರೆಗೆ ಸಿಲುಕಿದ್ದಾನೆ. ಕೆಲವೊಮ್ಮೆ ಸೂಪರ್‌ಬೈಕ್‌ಗಳು ಅನಗತ್ಯವಾಗಿ ಜನರ ಗಮನ ಸೆಳೆಯುತ್ತವೆ.

ಇದು ವಿವಿಧ ಸಮಸ್ಯೆಗಳಿಗೆ ಕಾರಣವಾಗಬಹುದು. ಭಾರತದಲ್ಲಿ ಸೂಪರ್ ಬೈಕುಗಳನ್ನು ಹೊಂದುವುದು ಸುಲಭದ ಕೆಲಸವಲ್ಲ. ಸೂಪರ್ ಬೈಕ್ ಹೊಂದಿದ್ದರೆ ಅಸೂಯೆ ಪಡುವ ಜನರಿರುವ ಜಾಗಗಳಲ್ಲಿ ಹೆಚ್ಚು ತೊಂದರೆಯಾಗಬಹುದು.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಜನರ ಅಸೂಯೆಗೆ ಬಲಿಪಶುವಾದ ಸೂಪರ್ ಬೈಕ್ ಸವಾರ

ಈ ಘಟನೆಯಲ್ಲಿ ಈ ಬೈಕ್ ಸವಾರ ತನ್ನ ಬೈಕ್ ಹೆಚ್ಚು ಶಬ್ದ ಮಾಡಿದ ಕಾರಣಕ್ಕೆ ಕ್ಷಮೆಯಾಚಿಸಿದ್ದಾನೆ. ಆದರೂ ಜನರು ಆತನಿಗೆ ಶಿಕ್ಷೆ ನೀಡಿದ್ದು ಸರಿಯೇ ಎಂದು ಆತ ಪ್ರಶ್ನಿಸಿದ್ದಾನೆ.

Most Read Articles
 

Kannada
English summary
West Bengal police arrests super bike rider for making loud noise. Read in Kannada.
Story first published: Friday, January 22, 2021, 10:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X