ಈ ಕಾರಣಕ್ಕೆ ಕ್ರೂಸ್ ಹಡಗುಗಳಲ್ಲಿ ಬಾಳೆಹಣ್ಣು ಕೊಂಡೊಯ್ಯುವಂತಿಲ್ಲ..!

ರಜಾದಿನಗಳನ್ನು ಕ್ರೂಸ್ ಹಡಗುಗಳಲ್ಲಿ ಕಳೆಯುವ ಟ್ರೆಂಡ್ ಹೆಚ್ಚುತ್ತಿದೆ. ಐಷಾರಾಮಿತನವನ್ನು ಬಯಸುವ ಜನರು ಕ್ರೂಸ್ ಹಡಗುಗಳಲ್ಲಿ ಪ್ರಯಾಣ ಬೆಳೆಸಲು ಇಷ್ಟ ಪಡುತ್ತಾರೆ. ಕ್ರೂಸ್ ಹಡಗುಗಳು ಸಮುದ್ರದ ಮೂಲಕ ಪ್ರಪಂಚದ ವಿವಿಧ ದೇಶಗಳ ದರ್ಶನ ಮಾಡಿಸುತ್ತವೆ.

ಈ ಕಾರಣಕ್ಕೆ ಕ್ರೂಸ್ ಹಡಗುಗಳಲ್ಲಿ ಬಾಳೆಹಣ್ಣು ಕೊಂಡೊಯ್ಯುವಂತಿಲ್ಲ..!

ಕ್ರೂಸ್ ಹಡಗುಗಳು ಐಷಾರಾಮಿತನವನ್ನು ಬಯಸುವವರನ್ನು ಮಾತ್ರವಲ್ಲದೇ ಸಮುದ್ರದಲ್ಲಿ ಪ್ರಯಾಣಿಸ ಬಯಸುವವರನ್ನೂ ಸಹ ತಮ್ಮತ್ತ ಸೆಳೆಯುತ್ತವೆ. ಕ್ರೂಸ್ ಹಡಗುಗಳು ಹೆಚ್ಚು ದುಬಾರಿಯಾಗಿರುವ ಕಾರಣಕ್ಕೆ ಎಲ್ಲರಿಗೂ ಸಹ ಈ ಹಡಗುಗಳಲ್ಲಿ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ.

ಈ ಕಾರಣಕ್ಕೆ ಕ್ರೂಸ್ ಹಡಗುಗಳಲ್ಲಿ ಬಾಳೆಹಣ್ಣು ಕೊಂಡೊಯ್ಯುವಂತಿಲ್ಲ..!

ಇದು ಹಡಗುಗಳ ಒಂದು ಮುಖವಾದರೆ, ಹಡಗುಗಳು ಅಪಾಯಕಾರಿ ಎನ್ನುವುದು ಕ್ರೂಸ್ ಹಡಗುಗಳ ಇನ್ನೊಂದು ಮುಖ. ಈ ಹಡಗುಗಳಲ್ಲಿ ಮದ್ಯದ ಪಾರ್ಟಿಯನ್ನು ಏರ್ಪಡಿಸಲಾಗುತ್ತದೆ. ಮದ್ಯದ ಪಾರ್ಟಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕುಡಿಯುವವರು ಬ್ಯಾಲೆನ್ಸ್ ತಪ್ಪಿ ಸಮುದ್ರಕ್ಕೆ ಬೀಳುತ್ತಾರೆ.

ಈ ಕಾರಣಕ್ಕೆ ಕ್ರೂಸ್ ಹಡಗುಗಳಲ್ಲಿ ಬಾಳೆಹಣ್ಣು ಕೊಂಡೊಯ್ಯುವಂತಿಲ್ಲ..!

ಎಷ್ಟೊ ಬಾರಿ ಈ ರೀತಿಯಾಗಿ ಸಮುದ್ರಕ್ಕೆ ಬೀಳುವವರ ಮೃತದೇಹಗಳು ಪತ್ತೆಯಾಗುವುದೇ ಇಲ್ಲ. ಬಾಳೆಹಣ್ಣನ್ನು ಕ್ರೂಸ್ ಹಡಗುಗಳಲ್ಲಿ ಸಾಗಿಸಿದರೆ ಅಪಾಯ ಎದುರಾಗಲಿದೆ ಎಂಬ ನಂಬಿಕೆಯಿದೆ. ಬಾಳೆಹಣ್ಣು ಪ್ರಪಂಚದ ಬಹು ಸಂಖ್ಯಾತ ಜನರ ನೆಚ್ಚಿನ ಹಣ್ಣಾಗಿದೆ.

ಈ ಕಾರಣಕ್ಕೆ ಕ್ರೂಸ್ ಹಡಗುಗಳಲ್ಲಿ ಬಾಳೆಹಣ್ಣು ಕೊಂಡೊಯ್ಯುವಂತಿಲ್ಲ..!

ಈ ಕಾರಣಕ್ಕೆ ಕ್ರೂಸ್ ಹಡಗುಗಳಲ್ಲಿ ಪ್ರಯಾಣ ಬೆಳೆಸುವ ಜನರು ಈ ಹಣ್ಣನ್ನು ತಮ್ಮ ಜೊತೆಗೆ ಕೊಂಡೊಯ್ಯುತ್ತಾರೆ. ಆದರೆ ಬಾಳೆಹಣ್ಣನ್ನು ತಮ್ಮ ಜೊತೆಯಲ್ಲಿ ತೆಗೆದುಕೊಂಡು ಹೋಗಲು ಅನುಮತಿ ನೀಡುವುದಿಲ್ಲ. ಬಾಳೆಹಣ್ಣು ನತದೃಷ್ಟ ಎಂಬ ಕಾರಣಕ್ಕೆ ಈ ರೀತಿ ಮಾಡಲಾಗುತ್ತದೆ.

ಈ ಕಾರಣಕ್ಕೆ ಕ್ರೂಸ್ ಹಡಗುಗಳಲ್ಲಿ ಬಾಳೆಹಣ್ಣು ಕೊಂಡೊಯ್ಯುವಂತಿಲ್ಲ..!

ಈ ನಿಯಮವನ್ನು ಉಲ್ಲಂಘಿಸುವುದನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಆದರೆ ಇದು ಕೇವಲ ಮೂಢನಂಬಿಕೆಯಾಗಿದೆ. ಆದರೆ ಈ ಮೂಢನಂಬಿಕೆಯನ್ನು ನಗರ ಪ್ರದೇಶದ ಜನರೂ ಸಹ ಆಚರಿಸುತ್ತಿರುವುದು ದುರದೃಷ್ಟಕರ.

ಈ ಕಾರಣಕ್ಕೆ ಕ್ರೂಸ್ ಹಡಗುಗಳಲ್ಲಿ ಬಾಳೆಹಣ್ಣು ಕೊಂಡೊಯ್ಯುವಂತಿಲ್ಲ..!

ಪ್ರಪಂಚದಲ್ಲಿರುವ ಬಹು ಸಂಖ್ಯೆಯ ವಸ್ತುಗಳನ್ನು ಹಡಗುಗಳ ಮೂಲಕವೇ ಸಾಗಿಸಲಾಗುತ್ತದೆ. ಏರೋಪ್ಲೇನ್ ಹಾಗೂ ರೈಲುಗಳನ್ನು ಕಂಡು ಹಿಡಿಯುವ ಮೊದಲು ಹೆಚ್ಚಿನ ಸಂಖ್ಯೆಯಲ್ಲಿ ವಸ್ತುಗಳನ್ನು ಹಡಗುಗಳ ಮೂಲಕ ಸಾಗಿಸಲಾಗುತ್ತಿತ್ತು.

ಈ ಕಾರಣಕ್ಕೆ ಕ್ರೂಸ್ ಹಡಗುಗಳಲ್ಲಿ ಬಾಳೆಹಣ್ಣು ಕೊಂಡೊಯ್ಯುವಂತಿಲ್ಲ..!

17ನೇ ಶತಮಾನದಲ್ಲಿ ಬಾಳೆಹಣ್ಣುಗಳನ್ನು ಸಾಗಿಸುತ್ತಿದ್ದ ಕೆಲವು ಹಡಗುಗಳು ಅಪಘಾತಕ್ಕೀಡಾಗಿದ್ದವು. ಇದೇ ವೇಳೆ ಬೇರೆ ವಸ್ತುಗಳಿದ್ದ ಹಡಗುಗಳು ಯಾವುದೇ ಅಪಾಯವಿಲ್ಲದೇ ಸಾಗುತ್ತಿದ್ದವು. ಈ ಕಾರಣಕ್ಕೆ ಬಾಳೆಹಣ್ಣನ್ನು ದುರಾದೃಷ್ಟವೆಂದು ಪರಿಗಣಿಸಲಾಯಿತು.

ಈ ಕಾರಣಕ್ಕೆ ಕ್ರೂಸ್ ಹಡಗುಗಳಲ್ಲಿ ಬಾಳೆಹಣ್ಣು ಕೊಂಡೊಯ್ಯುವಂತಿಲ್ಲ..!

ಇದು ಹಲವಾರು ಶತಮಾನಗಳ ಹಿಂದೆ ನಡೆದಿದ್ದ ಘಟನೆಯಾಗಿದ್ದು, ಇದಕ್ಕೆ ಯಾವುದೇ ವೈಜ್ಞಾನಿಕ ತಳಹದಿಯಿರುವುದಿಲ್ಲ. ಆದರೂ ಈಗಲೂ ಸಹ ಹಡಗಿನಲ್ಲಿ ಪ್ರಯಾಣ ಬೆಳೆಸುವ ವೇಳೆಯಲ್ಲಿ ಬಾಳೆಹಣ್ಣುಗಳನ್ನು ಜೊತೆಯಲ್ಲಿ ಕೊಂಡೊಯ್ಯಬಾರದೆಂಬ ನಿಷೇಧವಿದೆ.

ಈ ಕಾರಣಕ್ಕೆ ಕ್ರೂಸ್ ಹಡಗುಗಳಲ್ಲಿ ಬಾಳೆಹಣ್ಣು ಕೊಂಡೊಯ್ಯುವಂತಿಲ್ಲ..!

ಆದರೆ ಇದು ಕೇವಲ ಮೂಢನಂಬಿಕೆಯಾಗಿದೆ. ಬಾಳೆಹಣ್ಣು ಕೊಳೆತಾಗ ಎಥೆಲೈನ್ ಉತ್ಪಾದನೆಯಾಗುತ್ತದೆ. ಈ ಕಾರಣಕ್ಕೆ ಬಾಳೆಹಣ್ಣಿಗೆ ಹತ್ತಿರವಿರುವ ಬೇರೆ ಹಣ್ಣು ಹಾಗೂ ತರಕಾರಿಗಳೂ ಸಹ ಕೊಳೆತು ಹೋಗುತ್ತವೆ.

ಈ ಕಾರಣಕ್ಕೆ ಕ್ರೂಸ್ ಹಡಗುಗಳಲ್ಲಿ ಬಾಳೆಹಣ್ಣು ಕೊಂಡೊಯ್ಯುವಂತಿಲ್ಲ..!

ಆಧುನಿಕ ಯುಗದಲ್ಲಿ ಅತ್ಯಾಧುನಿಕವಾದ ಆರೋಗ್ಯ ಸೇವೆ, ಸುರಕ್ಷತಾ ನಿಯಮಗಳಿದ್ದರೂ ಕ್ರೂಸ್ ಹಡಗುಗಳಲ್ಲಿ ಇಂದಿಗೂ ಮೂಢನಂಬಿಕೆಯನ್ನು ಪಾಲಿಸಲಾಗುತ್ತಿದೆ. ಇದು ಕೇವಲ ಕ್ರೂಸ್ ಹಡಗುಗಳಿಗೆ ಮಾತ್ರ ಸೀಮಿತವಾಗಿಲ್ಲ.

ಈ ಕಾರಣಕ್ಕೆ ಕ್ರೂಸ್ ಹಡಗುಗಳಲ್ಲಿ ಬಾಳೆಹಣ್ಣು ಕೊಂಡೊಯ್ಯುವಂತಿಲ್ಲ..!

ಮೀನು ಹಿಡಿಯಲು ಸಮುದ್ರಕ್ಕೆ ತೆರಳುವ ಮೀನುಗಾರರೂ ಸಹ ತಮ್ಮೊಂದಿಗೆ ಬಾಳೆಹಣ್ಣನ್ನು ಕೊಂಡೊಯ್ಯುವುದಿಲ್ಲ. ಅವರೂ ಸಹ ಬಾಳೆಹಣ್ಣನ್ನು ದುರಾದೃಷ್ಟವೆಂದು ಪರಿಗಣಿಸುತ್ತಾರೆ.

Most Read Articles

Kannada
English summary
Reasons for not carrying banana in Cruise Ship. Read in Kannada.
Story first published: Tuesday, January 28, 2020, 17:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X