ಚಾಲನಾ ಶೈಲಿಯಿಂದ ನಿಮ್ಮ ವ್ಯಕ್ತಿತ್ವ ಗುರುತಿಸುವುದು ಹೇಗೆ ?

By Nagaraja

ಸ್ಟೀರಿಂಗ್ ಹಿಡಿಯುವ ಭಂಗಿ ಹಲವರದ್ದು ಹಲವು ಬಗೆಯದ್ದಾಗಿರುತ್ತದೆ. ರಸ್ತೆಗೆ ಅನುಗುಣವಾಗಿ ಕೈಯಲ್ಲಿ ಸ್ಟೀರಿಂಗ್ ಹಿಡಿಯುವ ಸ್ಟೀರಿಂಗ್ ಹ್ಯಾಂಡಲ್ ಶೈಲಿಯಲ್ಲೂ ವ್ಯತ್ಯಾಸ ಕಂಡುಬರುತ್ತದೆ. ಆದರೂ ಬಹುತೇಕ ಸಂದರ್ಭದಲ್ಲಿ ವಿಶಿಷ್ಟ ರೀತಿಯ ಚಾಲನಾ ಶೈಲಿಯನ್ನು ಚಾಲಕರು ರೂಢಿ ಮಾಡಿಕೊಂಡಿರುತ್ತಾರೆ.

ಅಷ್ಟಕ್ಕೂ ಚಾಲನಾ ಶೈಲಿಯಿಂದಲೇ ನಿಮ್ಮ ವ್ಯಕ್ತಿತ್ವ ಗುರುತಿಸಲು ಸಾಧ್ಯವೇ? ಹೌದು, ಎನ್ನುತ್ತಿವೆ ಸಂಶೋಧನಾ ವರದಿಗಳು. ಪ್ರತಿಯೊಬ್ಬರು ತಮ್ಮ ತಮ್ಮ ವ್ಯಕ್ತಿತ್ವಕ್ಕೆ ಅನುಗುಣವಾಗಿ ಸ್ಟೀರಿಂಗ್ ಹಿಡಿಯುವ ಕಲೆಯನ್ನು ರೂಢಿ ಮಾಡಿಕೊಂಡಿರುತ್ತಾರೆ. ಸಾಮಾನ್ಯವಾಗಿ ಕಂಡುಬರುವ ಇಂತಹ ಕೆಲವು ಚಾಲನಾ ಶೈಲಿ ಮತ್ತು ಸ್ವಭಾವ ಗುಣಗಳನ್ನು ನಾವಿಲ್ಲಿ ಬಹಿರಂಗ ಮಾಡುವ ಪ್ರಯತ್ನ ಮಾಡಲಿದ್ದೇವೆ.

01. ಪರಿಶುದ್ಧತಾವಾದಿ

01. ಪರಿಶುದ್ಧತಾವಾದಿ

ಡ್ರೈವಿಂಗ್ ಪಾಠ ಶಾಲೆಯಲ್ಲಿ ಚಾಲನೆಯನ್ನು ಹೇಗೆ ಕಲಿಸಿ ಕೊಟ್ಟಿರುತ್ತಾರೋ ಅದನ್ನು ಚಾಚು ತಪ್ಪದೇ ಹಿಂಬಾಲಿಸುವ ಚಾಲಕರನ್ನು ನಾವು ಪರಿಶುದ್ಧವಾದಿಗಳೆಂದು ವಿಶ್ಲೇಷಿಸಬಹುದು. ಈ ವಿಭಾಗಕ್ಕೆ ಸೇರಿದ ಚಾಲಕರು ತಮ್ಮ ಜೀವನದಲ್ಲೂ ಸಭ್ಯ ನಡತೆಯ ವ್ಯಕ್ತಿತ್ವವನ್ನು ಮೈಗೂಡಿಸಿ ಬಂದಿರುತ್ತಾರೆ. ಹಿಂದೆ 10 ಮತ್ತು 2 ಗಡಿಯಾರದ ಮುಳ್ಳಿನಂತಿದ್ದ ಈ ಶೈಲಿಯೀಗ 9 ಮತ್ತು 3ಕ್ಕೆ ಬಂದು ತಲುಪಿದೆ.

02. ಸೊಗಸುಗಾರ

02. ಸೊಗಸುಗಾರ

ಸೀಟಲ್ಲಿ ಆರಾಮವಾಗಿ ಕುಳಿತುಕೊಂಡು ಒಂದೇ ಕೈಯಲ್ಲಿ ಸ್ಟೀರಿಂಗ್ ಹಿಡಿದುಕೊಂಡು ಚಾಲನೆ ಮಾಡುವವರು ಜೀವನದಲ್ಲಿ ಎಂತಹುದೇ ಪರಿಸ್ಥಿತಿಯನ್ನು ಬಹಳ ಶಾಂತಚಿತ್ತರಾಗಿ ಎದುರಿಸಬಲ್ಲರು. ಇದರರ್ಥ ಇವರು ಅಸುರಕ್ಷಿತ ಚಾಲಕರು ಎಂಬುದಲ್ಲ. ಬದಲಾಗಿ ಎಷ್ಟೇ ಕಷ್ಟ ಪರಿಸ್ಥಿತಿ ಎದುರಾದರೂ ಧೈರ್ಯಗೆಡದೇ ನಿಶ್ಚಿಂತತೆಯಿಂದ ಎದುರಿಸುತ್ತಾರೆ.

03. ಸರಳವಾದಿ

03. ಸರಳವಾದಿ

ಹೆಸರೇ ಸೂಚಿಸುವಂತೆ, ಈ ರೀತಿಯಾಗಿ ಚಾಲನೆ ಮಾಡುವವರು ವಿಷಯಗಳನ್ನು ಸರಳವಾಗಿ ಇರಿಸಿಕೊಳ್ಳಲು ಬಯಸುತ್ತಾರೆ. ಎಲ್ಲರಲ್ಲೂ ನಂಬಿಕೆಯನ್ನಿಟ್ಟುಕೊಳ್ಳುವ ಬದಲು ಕೆಲವೇ ಕೆಲವು ನೈಜ ಆಪ್ತ ಸ್ನೇಹಿತರನ್ನು ಮಾತ್ರ ಹೊಂದಿರುತ್ತಾರೆ. ನಿಮ್ಮ ಸರಳತೆಯಿಂದಾಗಿ ಇತರರಿಂದಲೂ ಮೆಚ್ಚುಗೆಗೆ ಪಾತ್ರವಾಗಲಿದ್ದೀರಿ.

04. ಎದೆಗಾರಿಕೆ

04. ಎದೆಗಾರಿಕೆ

ಇಂತವರು ಎದೆಗಾರಿಕೆ ಅಥವಾ ನಿರ್ಭೀತಿಯಿಂದ ಪರಿಸ್ಥಿತಿಯನ್ನು ಎದುರಿಸುವ ಗುಣವನ್ನು ಮೈಗೂಡಿಸಿ ಬಂದಿರುತ್ತಾರೆ. ಅಲ್ಲದೆ ಯಾವುದೇ ರೀತಿಯ ಸಾಹಸಕ್ಕೆ ಧುಮುಕಲು ಹಿಂಜರಿಯುವುದಿಲ್ಲ. ಪ್ರೇಮದ ವಿಚಾರದಲ್ಲೂ ತಮ್ಮ ಬಯಕೆಗಳನ್ನು ತಿಳಿಸಲು ಹಿಂದು ಮುಂದು ನೋಡುವವರಲ್ಲ.

05. ಕ್ಯಾಪ್ಟನ್ ಕೂಲ್

05. ಕ್ಯಾಪ್ಟನ್ ಕೂಲ್

ಹುಟ್ಟಿನಿಂದಲೇ ನಾಯಕತ್ವ ಗುಣವನ್ನು ಮೈಗೂಡಿಸಿಕೊಂಡು ಬಂದಿರುವ ಈ ವಿಭಾಗಕ್ಕೆ ಸೇರಿದ ವ್ಯಕ್ತಿಗಳು, ಸಂದರ್ಭಕ್ಕೆ ತಕ್ಕಂತೆ ಉಚಿತವಾದ ನಿರ್ಣಯಗಳನ್ನು ತೆಗೆದುಕೊಳ್ಳುತ್ತಾರೆ. ನಿಮ್ಮ ಸಾಮರ್ಥ್ಯದ ಮೇಲಿರುವ ಆತ್ಮವಿಶ್ವಾಸದಿಂದಾಗಿ ಇತರರಿಂದಲೂ ನಂಬಿಕೆಯನ್ನು ಗಿಟ್ಟಿಸಿಕೊಳ್ಳುವಿರಿ. ನಿಮ್ಮ ನಾಯಕತ್ವ ಗುಣ ಪ್ರಶಂಸೆಗೂ ಪಾತ್ರವಾಗಲಿದೆ.

06. ಬೆಂಬಲಿಗ

06. ಬೆಂಬಲಿಗ

ಈ ವಿಭಾಗದ ಚಾಲಕರು ಇತರರಿಗೆ ಸಹಾಯ ಮಾಡುವ ಅವಕಾಶವನ್ನು ಯಾವತ್ತೂ ಮಿಸ್ ಮಾಡುವುದಿಲ್ಲ. ಇತರರ ಸಲಹೆಗಳನ್ನು ಸಮಯ ಚಿತ್ತದಿಂದ ಆಲಿಸುವ ಇಂತಹ ವ್ಯಕ್ತಿಗಳು ಉತ್ತಮ ಬೆಂಬಲಿಗರೆನಿಸಿಕೊಳ್ಳುತ್ತಾರೆ.

 07. ರಾಜತಂತ್ರಜ್ಞ

07. ರಾಜತಂತ್ರಜ್ಞ

ಯಾವುದೇ ಪರಿಸ್ಥಿತಿಯನ್ನು ಬಹಳ ಚಾಣಕ್ಷತೆಯಿಂದ ಎದುರಿಸುವ ವ್ಯಕ್ತಿತ್ವ ಗುಣ ಇವರದ್ದಾಗಿರುತ್ತದೆ. ವಾದ, ಪ್ರತಿವಾದಗಳು ಎದುರಾದಾಗ ಪರಿಸ್ಥಿತಿಯನ್ನು ನಿಯಂತ್ರಿಸುವ ಗುಣ ಮೈಗೂಡಿಸಿಕೊಂಡಿರುತ್ತಾರೆ. ಒಟ್ಟಿನಲ್ಲಿ ಚುರುಕು ಮಾತುಗಾರಿಕೆ ಮತ್ತು ಬುದ್ಧಿವಂತಿಕೆಯಿಂದ ಜೀವನದಲ್ಲಿ ಶ್ರೇಯಸ್ಸಿಗೆ ಒಳಗಾಗುತ್ತಾನೆ.

08. ಹಾಸ್ಯಗಾರ

08. ಹಾಸ್ಯಗಾರ

ತಾನೇನು ಮಾಡಬೇಕೆಂದು ತೋಚದೇ ಎಲ್ಲ ವಿಷಯಗಳಲ್ಲೂ ಮೂಗು ತೂರಿಸಲು ಹೋಗಿ ಕೊನೆಗೆ ತಾನೇ ನಗೆಪಾಟಲಿಗೊಳಗಾಗುವ ಪರಿಸ್ಥಿತಿ ಬಂದೊದಗಲಿದೆ. ಪ್ರತಿಯೊಂದು ವಿಷಯದಲ್ಲಿ ಹಾಸ್ಯ ಹುಡುಕುವ ಪ್ರಯತ್ನ ಇವರದ್ದಾಗಿರುತ್ತದೆ.

09. ದುರ್ಬಲ ಮನಸ್ಸು

09. ದುರ್ಬಲ ಮನಸ್ಸು

ಈ ರೀತಿಯ ಚಾಲನಾ ಶೈಲಿಯು ಮಾನಸಿಕ ಒತ್ತಡ ಹಾಗೂ ದುರ್ಬಲ ಮನಸ್ಸನ್ನು ಸಾರುತ್ತದೆ. ಜೀವನದಲ್ಲಿ ಎದುರಾಗುವ ಸಮಸ್ಯೆಯಿಂದ ದೂರವುಳಿಯಲು ಬಯಸುತ್ತಾರೆ. ಅಲ್ಲದೆ ಹಾಯಾಗಿರಲು ಬಯಸುತ್ತಾರೆ.

 10. ಅವಿವೇಕ

10. ಅವಿವೇಕ

ಚಾಲನೆ ವೇಳೆ ಪದೇ ಪದೇ ಹಾರ್ನ್ ಹೊಡೆಯುವುದು ಅವಿವೇಕದ ಚಾಲನಾ ಶೈಲಿಯ ಲಕ್ಷಣವಾಗಿರುತ್ತದೆ. ಜೀವನದಲ್ಲೂ ಇದೇ ರೀತಿಯ ಅಸಂಬಂದ್ಧತೆಯ ನಡೆವಳಿಕೆಯಿಂದಾಗಿ ಕೆಟ್ಟ ಹೆಸರಿಗೆ ಒಳಗಾಗುವ ಭೀತಿಯೂ ಕಾಡುತ್ತದೆ.

Most Read Articles

Kannada
English summary
Did You Know That Your Driving Style Reveals Your Personality?
Story first published: Friday, July 15, 2016, 11:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X