ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಈ ಸ್ಕೂಟರ್ ಮಾಲೀಕ ಮಾಡಿದ್ದೇನು ಗೊತ್ತಾ?

ನಗರಪ್ರದೇಶಗಳಲ್ಲಿ ಟ್ರಾಫಿಕ್ ದಟ್ಟಣೆಯನ್ನು ತಡೆದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಟ್ರಾಫಿಕ್ ಪೊಲೀಸರು ಸಂಚಾರಿ ನಿಯಮ ಪಾಲಿಸದ ವಾಹನಗಳನ್ನು ಹಿಡಿದು ದಂಡಹಾಕುವುದು ಕಾಮನ್. ಆದ್ರೆ ಟ್ರಾಫಿಕ್ ಪೊಲೀಸರ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಸ್ಕೂಟರ್ ಮಾಲೀಕನೊಬ್ಬ ಮಾಡಿರುವ ಪ್ಲ್ಯಾನ್ ನಿಮಗೆ ಅಚ್ಚರಿ ತರಿಸದೇ ಇರಲಾರದು.

ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಈ ಸ್ಕೂಟರ್ ಮಾಲೀಕ ಮಾಡಿದ್ದೇನು ಗೊತ್ತಾ?

ದೇಶಾದ್ಯಂತ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದಂತೆ ಅಷ್ಟೇ ಪ್ರಮಾಣದಲ್ಲಿ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳು ಕೂಡಾ ಅಷ್ಟೇ ಪ್ರಮಾಣದಲ್ಲಿ ಹೆಚ್ಚುತ್ತಿವೆ. ಟ್ರಾಫಿಕ್ ಪೊಲೀಸರ ತಪಾಸಣೆ ವೇಳೆಯೂ ವಾಹನಗಳಿಗೆ ಸಂಬಂಧಪಟ್ಟ ದಾಖಲೆಗಳನ್ನು ಇಟ್ಟುಕೊಳ್ಳದ ಬಹುತೇಕ ವಾಹನ ಸವಾರರು, ದಂಡದಿಂದ ತಪ್ಪಿಸಿಕೊಳ್ಳಲು ನಾನಾ ಬಗೆಯ ಹರಸಾಹಸ ಪಡುವುದನ್ನು ನಾವು ದಿನಬೆಳಗಾದ್ರೆ ಸಾಕು ನೋಡುತ್ತಲೇ ಇರುತ್ತೇವೆ. ಆದ್ರೆ ಇಲ್ಲೊಬ್ಬ ಸ್ಕೂಟರ್ ಮಾಲೀಕ ಮಾತ್ರ ಟ್ರಾಫಿಕ್ ಪೊಲೀಸರ ತಪಾಸಣೆದಿಂದ ತಪ್ಪಿಸಿಕೊಳ್ಳಲು ಹೊಸ ಐಡಿಯಾ ಮಾಡಿದ್ದಾನೆ.

ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಈ ಸ್ಕೂಟರ್ ಮಾಲೀಕ ಮಾಡಿದ್ದೇನು ಗೊತ್ತಾ?

ನಾವು ತಿಳಿದೋ ತಿಳಿಯದೆಯೋ ದಿನನಿತ್ಯ ಹಲವಾರು ಸಂಚಾರ ನಿಯಮ ಉಲ್ಲಂಘಿಸುತ್ತೇವೆ. ಸಿಗ್ನಲ್ ಜಂಪ್ ಮಾಡುವುದು, ಒನ್ ವೇನಲ್ಲಿ ವಿರುದ್ಧ ದಿಕ್ಕಿನಿಂದ ಗಾಡಿ ಓಡಿಸುವುದು, ಯೂ ಟರ್ನ್ ನಿಷೇಧ ಜಾಗದಲ್ಲಿ ಯೂ ಟರ್ನ್ ತೆಗೆದುಕೊಳ್ಳುವುದು ಹೀಗೆ ಅನೇಕ ತಪ್ಪುಗಳು ಸಹಜವಾಗಿಯೇ ಆಗುತ್ತಿರುತ್ತವೆ.

ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಈ ಸ್ಕೂಟರ್ ಮಾಲೀಕ ಮಾಡಿದ್ದೇನು ಗೊತ್ತಾ?

ಆದರೆ ಕೆಲವೊಮ್ಮೆ ಇದಕ್ಕಿಂತಲೂ ಜಿಪುಣವಾಗಿ ವರ್ತಿಸುವ ಬುದ್ಧಿಜೀವಿ ಚಾಲಕರು ಪೊಲೀಸರ ಕಣ್ಣಿಗೆ ಮಣ್ಣೆರೆಚುವಂತಹ ಪ್ರವೃತ್ತಿಗಳನ್ನು ಮಾಡುತ್ತಿರುತ್ತಾರೆ. ಇದಕ್ಕೆ ತಾಜಾ ಉದಾಹರಣೆ ಅಂದ್ರೆ ಟ್ರಾಫಿಕ್ ಪೊಲೀಸರ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಸ್ಕೂಟರ್ ಮಾಲೀಕನು ಸ್ಕೂಟರ್ ಮೇಲೆಯೇ ವಾಹನದ ಎಲ್ಲಾ ದಾಖಲೆಗಳನ್ನು ಅಂಟಿಸಿಕೊಂಡಿದ್ದಾನೆ.

ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಈ ಸ್ಕೂಟರ್ ಮಾಲೀಕ ಮಾಡಿದ್ದೇನು ಗೊತ್ತಾ?

ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುವ ಈ ಚಿತ್ರವು ಪುದುಚೇರಿ ನೋಂದಣಿಯ ಸ್ಕೂಟರ್ ಎನ್ನಲಾಗಿದ್ದು, ಟ್ರಾಫಿಕ್ ಪೊಲೀಸ ತಪಾಸಣೆಯನ್ನು ಕಿರಿಕಿರಿ ಎಂದುಕೊಂಡಂತಿರುವ ಈ ಸ್ಕೂಟರ್ ಮಾಲೀಕನು ತನ್ನನ್ನು ಯಾವುದೇ ಟ್ರಾಫಿಕ್ ಪೊಲೀಸರು ಹಿಡಿಯಂತೆ ಈ ಪ್ಲ್ಯಾನ್ ಮಾಡಿದ್ದಾನೆ.

ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಈ ಸ್ಕೂಟರ್ ಮಾಲೀಕ ಮಾಡಿದ್ದೇನು ಗೊತ್ತಾ?

ಸ್ಕೂಟರ್ ಮುಂಭಾದದಲ್ಲೇ ವಾಹನದ ಆರ್‌ಸಿ(ನೋಂದಣಿ ಪತ್ರ) , ಡ್ರೈವಿಂಗ್ ಲೈಸೆನ್ಸ್, ಥರ್ಡ್ ಪಾರ್ಟಿ ಮಿಮೆ ಪತ್ರವನ್ನು ಅಂಟಿಕೊಂಡಿರುವ ಈ ಮಹಾನುಭಾವ, ಸ್ಕೂಟರ್ ಹಿಂಭಾಗದಲ್ಲಿ ಎಮಿಷನ್ ಟೆಸ್ಟಿಂಗ್ ಸರ್ಟಿಫಿಕೇಟ್ ಅಂಟಿಕೊಂಡಿದ್ದಾನಂತೆ.

ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಈ ಸ್ಕೂಟರ್ ಮಾಲೀಕ ಮಾಡಿದ್ದೇನು ಗೊತ್ತಾ?

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರವು ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಸ್ಕೂಟರ್ ಮೇಲೆ ದಾಖಲೆಗಳನ್ನು ಅಂಟಿಕೊಂಡಿರುವ ಸ್ಕೂಟರ್ ಮಾಲೀಕನ ನಡೆ ಬಗ್ಗೆ ಬಹುತೇಕರು ಕಿಡಿಕಾರಿದ್ದಾರೆ.

ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಈ ಸ್ಕೂಟರ್ ಮಾಲೀಕ ಮಾಡಿದ್ದೇನು ಗೊತ್ತಾ?

ವಾಹನ ಚಾಲನೆ ವೇಳೆ ಅನುಮಾನ ಮೂಡಿಸುವಂತಹ ವಾಹನಗಳನ್ನು ತಡೆದು ತಪಾಸಣೆ ಮಾಡುವ ಟ್ರಾಫಿಕ್ ಪೊಲೀಸರಿಗೆ ವಾಹನ ಮಾಲೀಕರು ಸರಿಯಾದ ದಾಖಲೆಗಳನ್ನು ತೊರಿಸಬೇಕಿರುವುದು ನಮ್ಮ ಕರ್ತವ್ಯವಾಗಿದ್ದು, ಸ್ಕೂಟರ್ ಮಾಲೀಕ ಮಾಡಿರುವ ಇಂತಹ ವಿಲಕ್ಷಣ ನಡೆಯನ್ನು ಹಲವರು ಟೀಕಿಸಿದ್ದಾರೆ.

ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಈ ಸ್ಕೂಟರ್ ಮಾಲೀಕ ಮಾಡಿದ್ದೇನು ಗೊತ್ತಾ?

ಇನ್ನು ಮೊದಲೆಲ್ಲಾ ವಾಹನದ ಪರವಾನಗಿಯ ಪತ್ರಗಳು ಮತ್ತು ವಾಹನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕಾದ ಅನಿವಾರ್ಯತೆಗಳಿದ್ದವು. ಆದ್ರೆ ಇದೀಗ ಆ ಪರಿಸ್ಥಿತಿ ಬದಲಾಗುವ ಸಮಯ ಬಂದಿದೆ. ಇದಕ್ಕೆ ಕಾರಣ ಇಷ್ಟು ದಿನಗಳ ಕಾಲ ನೆನೆಗುದಿಗೆ ಬಿದ್ದಿದ್ದ ಡಿಜಿ ಲಾಕರ್ ಯೋಜನೆಗೆ ಕೇಂದ್ರ ಸರ್ಕಾರವು ಮರುಜೀವ ನೀಡಿದೆ.

MOST READ: ಕೇವಲ 40 ರೂಪಾಯಿ ಆಸೆಗೆ ಬರೋಬ್ಬರಿ 40 ಲಕ್ಷ ಕಳೆದುಕೊಂಡ ಹ್ಯುಂಡೈ ಕಾರು ಚಾಲಕ..!

ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಈ ಸ್ಕೂಟರ್ ಮಾಲೀಕ ಮಾಡಿದ್ದೇನು ಗೊತ್ತಾ?

ಹೌದು, ವಾಹನಗಳ ದಾಖಲೆಗಳು ಹಾಗೂ ಪ್ರಮಾಣ ಪತ್ರಗಳನ್ನು ವಿದ್ಯುನ್ಮಾನ (ಡಿಜಿಟಲ್) ರೂಪದಲ್ಲಿ ಸಂಗ್ರಹಿಸುವ ಉದ್ದೇಶದಿಂದ ಈ ಹಿಂದೆ ದೇಶಾದ್ಯಂತ 'ಡಿಜಿ ಲಾಕರ್‌' ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದರೂ ಬಹುತೇಕ ಕಡೆ ಹೊಸ ಯೋಜನೆಯ ಬಳಕೆಗೆ ಮಾನ್ಯತೆ ಇಲ್ಲವಾಗಿತ್ತು. ಆದ್ರೆ ಇದೀಗ ಕೇಂದ್ರ ಸಾರಿಗೆ ಇಲಾಖೆಯು ಡಿಜಿಟಲ್ ಲಾಕರ್‌ಗೆ ಮಾನ್ಯತೆ ನೀಡುವ ಮೂಲಕ ವಾಹನ ಸವಾರರಿಗೆ ಸಿಹಿಸುದ್ದಿ ನೀಡಿದೆ.

ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಈ ಸ್ಕೂಟರ್ ಮಾಲೀಕ ಮಾಡಿದ್ದೇನು ಗೊತ್ತಾ?

ಡಿಜಿ ಲಾಕರ್ ಅಪ್ಲಿಕೇಷನ್‌ಗೆ ಮಾನ್ಯತೆ ದೊರೆತಿರುವ ಹಿನ್ನೆಲೆಯಲ್ಲಿ ವಾಹನ ಸವಾರರು ಇನ್ಮುಂದೆ ಪೊಲೀಸರು ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ವಾಹನಗಳನ್ನು ಅಡ್ಡಹಾಕಿ ವಾಹನಗಳ ದಾಖಲೆಗಳನ್ನು ಕೇಳಿದರೆ ಸವಾರರು ತಮ್ಮ ಮೊಬೈಲ್ ನಲ್ಲಿರುವ ದಾಖಲೆ ತೋರಿಸುವ ದಂಡಾಸ್ತ್ರ ಹಾಗೂ ಕಾನೂನಿನ ಕ್ರಮದಿಂದ ಪಾರಾಗಬಹುದುದಾಗಿದೆ.

ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಈ ಸ್ಕೂಟರ್ ಮಾಲೀಕ ಮಾಡಿದ್ದೇನು ಗೊತ್ತಾ?

ನಿಮ್ಮ ಮೊಬೈಲ್‌ನಲ್ಲಿ ಡಿಜಿ ಲಾಕರ್ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಳ್ಳುವ ಮೂಲಕ ವಾಹನ ಚಾಲನಾ ಪರವಾನಿಗೆ (ಡಿಎಲ್) ಮತ್ತು ನೋಂದಣಿ ಪ್ರಮಾಣಪತ್ರಗಳನ್ನು (ಆರ್‍‌ಸಿ) ದಾಖಲೆಗಳನ್ನು ಡಿಜಿ ಲಾಕರ್ ವ್ಯವಸ್ಥೆಗೆ ಅಳವಡಿಸಿ, ಅವು ಮೊಬೈಲ್‍ನಲ್ಲಿ ಲಭ್ಯವಾಗುವಂತೆ ಮಾಡಬಹುದಾಗಿದೆ.

MOST READ: ನ್ಯಾನೋ ಬರುವುದಕ್ಕೂ ಮುನ್ನ ಬಂದು ಹೋದ 'ಮೀರಾ' ಕಾರಿನ ಕಥೆ ಗೊತ್ತಾ?

ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಈ ಸ್ಕೂಟರ್ ಮಾಲೀಕ ಮಾಡಿದ್ದೇನು ಗೊತ್ತಾ?

ಕಾಗದ ರಹಿತ ಆಡಳಿತ ಉದ್ದೇಶದಿಂದ ಕೇಂದ್ರ ಸರ್ಕಾರವು 2016ರಲ್ಲೇ ಈ ಯೋಜನೆಯನ್ನು ಜಾರಿ ತಂದಿದ್ದು, ಸರ್ಕಾರಿ ಸಚಿವಾಲಯಗಳಲ್ಲಿ ಮತ್ತು ಆಡಳಿತದ ಒತ್ತಡವನ್ನು ಕಡಿಮೆ ಮಾಡುವುದೇ ಇದರ ಮೂಲ ಉದ್ದೇಶವಾಗಿದೆ.

ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಈ ಸ್ಕೂಟರ್ ಮಾಲೀಕ ಮಾಡಿದ್ದೇನು ಗೊತ್ತಾ?

ಆದ್ರೆ ಇದರ ಬಗ್ಗೆ ಹೆಚ್ಚಿನ ತಿಳುವಳಿಕೆ ಇಲ್ಲದ ಕಾರಣ ಬಹುತೇಕ ವಾಹನ ಸವಾರರು ಡಿಜಿ ಲಾಕರ್ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಇದಲ್ಲದೇ ಡಿಜಿ ಲಾಕರ್ ಹೊಂದಿದ ವಾಹನ ಸವಾರರಿಗೂ ಟ್ರಾಫಿಕ್ ಪೊಲೀಸರು ಕೆಲವು ಬಾರಿಗೆ ಮಾನ್ಯತೆ ಮಾಡದೆ ಇದ್ದಿದ್ದು ಸಹ ಈ ಅಪ್ಲಿಕೇಷನ್ ಬಳಕೆ ಕೆಲವು ವಾಹನ ಸವಾರರು ಹಿಂದೇಟು ಹಾಕುತ್ತಿದ್ದರು.

ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಈ ಸ್ಕೂಟರ್ ಮಾಲೀಕ ಮಾಡಿದ್ದೇನು ಗೊತ್ತಾ?

ಇದೇ ಕಾರಣಕ್ಕೆ ಡಿಜಿ ಲಾಕರ್ ಬಗ್ಗೆ ಮತ್ತೊಮ್ಮೆ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರವು ಡಿಜಿ ಲಾಕರ್‌ ಮೂಲಕ ತೋರಿಸುವ ದಾಖಲೆಗಳಿಗೆ ಮಾನ್ಯತೆ ಎನ್ನುವ ಮೂಲಕ ಟ್ರಾಫಿಕ್ ಪೊಲೀಸರ ವಸೂಲಿಗೆ ಬ್ರೇಕ್ ಹಾಕಿದ್ದು, ವಾಹನದ ದಾಖಲೆಗಳನ್ನ ಅಷ್ಟೇ ಅಲ್ಲದೇ ನಿಮ್ಮ ಪ್ಯಾನ್ ಕಾರ್ಡ್, ಮತದಾನ ಗುರುತಿನ ಪತ್ರ, ಪಾಸ್ ಪೋರ್ಟ್, ಜನ್ಮ ದಾಖಲೆ, ಮದುವೆ ದಾಖಲೆ ಸೇರಿದಂತೆ ಕೆಲವು ವ್ಯಯಕ್ತಿಕ ದಾಖಲೆಗಳನ್ನು ಇಲ್ಲಿ ಶೇಖರಿಸಿ ಇಡಬಹುದು.

Most Read Articles

Kannada
English summary
When you are tired of the police constantly asking for your documents. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X