ಡ್ರೈವಿಂಗ್ ಟೆಸ್ಟ್'ನಲ್ಲಿ ಫೇಲ್ ಆಗುವವರಿಗೆ ವೀಡಿಯೊ ರೆಕಾರ್ಡಿಂಗ್ ಕ್ಲಿಪ್ ನೀಡಲಿದೆ ಸಾರಿಗೆ ಇಲಾಖೆ

ಇನ್ನು ಮುಂದೆ ಡ್ರೈವಿಂಗ್ ಟೆಸ್ಟ್ ನಲ್ಲಿ ಫೇಲ್ ಆಗುವವರು ಚಿಂತಿಸುವ ಅಗತ್ಯವಿಲ್ಲ. ದೆಹಲಿ ಸಾರಿಗೆ ಇಲಾಖೆಯು ಡ್ರೈವಿಂಗ್ ಟೆಸ್ಟ್ ನಲ್ಲಿ ಫೇಲ್ ಆಗುವವರ ತಪ್ಪುಗಳನ್ನು ಸರಿ ಪಡಿಸಲು ನೆರವಾಗಲಿದೆ. ಆಟೊಮೇಟೆಡ್ ಡ್ರೈವಿಂಗ್ ಟೆಸ್ಟ್ ನಲ್ಲಿ ಹೆಚ್ಚಿನ ಸಂಖ್ಯೆಯ ಜನರು ಅನುತ್ತೀರ್ಣರಾಗುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಸಾರಿಗೆ ಇಲಾಖೆಯು (ಡಿಟಿಸಿ) ವೀಡಿಯೋ ರೆಕಾರ್ಡಿಂಗ್‌ಗಳನ್ನು ಶೇರ್ ಮಾಡಲು ನಿರ್ಧರಿಸಿದೆ.

ಡ್ರೈವಿಂಗ್ ಟೆಸ್ಟ್'ನಲ್ಲಿ ಫೇಲ್ ಆಗುವವರಿಗೆ ವೀಡಿಯೊ ರೆಕಾರ್ಡಿಂಗ್ ಕ್ಲಿಪ್ ನೀಡಲಿದೆ ಸಾರಿಗೆ ಇಲಾಖೆ

ಅರ್ಜಿದಾರರು ಈ ವೀಡಿಯೊ ರೆಕಾರ್ಡಿಂಗ್‌ಗಳಲ್ಲಿ ತಾವು ಚಾಲನಾ ಪರೀಕ್ಷೆಯಲ್ಲಿ ಮಾಡಿದ ತಪ್ಪುಗಳನ್ನು ವೀಕ್ಷಿಸುವ ಮೂಲಕ ಮುಂದಿನ ಬಾರಿ ಡ್ರೈವಿಂಗ್ ಟೆಸ್ಟ್ ನಲ್ಲಿ ತಪ್ಪುಗಳಾಗದಂತೆ ನೋಡಿಕೊಳ್ಳಬಹುದು. ಮೂಲಗಳ ಪ್ರಕಾರ ಆಟೊಮೇಟೆಡ್ ಟೆಸ್ಟ್ ಟ್ರ್ಯಾಕ್‌ನಲ್ಲಿ ಡ್ರೈವಿಂಗ್ ಟೆಸ್ಟ್ ತೆಗೆದುಕೊಳ್ಳುವ ಅರ್ಜಿದಾರರಿಗೆ ಅಕ್ಟೋಬರ್ ತಿಂಗಳಿನಿಂದ ಈ ಸೌಲಭ್ಯವನ್ನು ಆರಂಭಿಸಲಾಗುವುದು.

ಡ್ರೈವಿಂಗ್ ಟೆಸ್ಟ್'ನಲ್ಲಿ ಫೇಲ್ ಆಗುವವರಿಗೆ ವೀಡಿಯೊ ರೆಕಾರ್ಡಿಂಗ್ ಕ್ಲಿಪ್ ನೀಡಲಿದೆ ಸಾರಿಗೆ ಇಲಾಖೆ

ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ ಅವರು ಮಾಡಿದ ತಪ್ಪಿನ ವೀಡಿಯೊ ರೆಕಾರ್ಡಿಂಗ್ ಕ್ಲಿಪ್ ಜೊತೆಗೆ ವಿವರವಾದ ಪರೀಕ್ಷಾ ವರದಿಯನ್ನು ನೀಡಲಾಗುತ್ತದೆ. ವರದಿಗಳ ಪ್ರಕಾರ, ಈ ವೀಡಿಯೊ ಕ್ಲಿಪ್ ಅನ್ನು ವಾಟ್ಸಾಪ್ ಸಂದೇಶದ ಮೂಲಕ ಅರ್ಜಿದಾರರಿಗೆ ಕಳುಹಿಸಲಾಗುತ್ತದೆ. ಚಾಲನಾ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವವರಿಗೆ ತಮ್ಮಿಂದ ಆಗುವ ತಪ್ಪುಗಳ ಬಗ್ಗೆ ತಿಳಿದಿರುವುದಿಲ್ಲ.

ಡ್ರೈವಿಂಗ್ ಟೆಸ್ಟ್'ನಲ್ಲಿ ಫೇಲ್ ಆಗುವವರಿಗೆ ವೀಡಿಯೊ ರೆಕಾರ್ಡಿಂಗ್ ಕ್ಲಿಪ್ ನೀಡಲಿದೆ ಸಾರಿಗೆ ಇಲಾಖೆ

ಇದರಿಂದ ಅವರು ಅದೇ ತಪ್ಪುಗಳನ್ನು ಪದೇ ಪದೇ ತಪ್ಪುಗಳನ್ನು ಮಾಡುತ್ತಲೇ ಇರುತ್ತಾರೆ. ಇನ್ನು ಮುಂದೆ ಹೊಸ ಚಾಲನಾ ಪರೀಕ್ಷಾ ವ್ಯವಸ್ಥೆಯಲ್ಲಿ, ಟೆಸ್ಟ್ ಟ್ರ್ಯಾಕ್‌ನಲ್ಲಿ ಅಳವಡಿಸಲಾಗಿರುವ ಕ್ಯಾಮೆರಾಗಳ ಸಹಾಯದಿಂದ ಡ್ರೈವಿಂಗ್ ಟೆಸ್ಟ್ ನಡೆಸಲಾಗುತ್ತದೆ. ಈ ಕ್ಯಾಮೆರಾಗಳು ಡ್ರೈವಿಂಗ್ ಟೆಸ್ಟ್ ಅನ್ನು ಸಂಪೂರ್ಣವಾಗಿ ರೆಕಾರ್ಡಿಂಗ್ ಮಾಡುತ್ತವೆ.

ಡ್ರೈವಿಂಗ್ ಟೆಸ್ಟ್'ನಲ್ಲಿ ಫೇಲ್ ಆಗುವವರಿಗೆ ವೀಡಿಯೊ ರೆಕಾರ್ಡಿಂಗ್ ಕ್ಲಿಪ್ ನೀಡಲಿದೆ ಸಾರಿಗೆ ಇಲಾಖೆ

ಈ ಮೂಲಕ ಅರ್ಜಿದಾರರ ಮಾಹಿತಿಯನ್ನು ವೀಡಿಯೊ ರೂಪದಲ್ಲಿ ನಿರ್ವಹಿಸಲಾಗುತ್ತದೆ. ಈ ವೀಡಿಯೊ ಮೂಲಕ ಜನರಿಗೆ ಅವರ ತಪ್ಪುಗಳನ್ನು ತಿಳಿಸಲಾಗುತ್ತದೆ. ಮೂಲಗಳ ಪ್ರಕಾರ ದೆಹಲಿ ಸಾರಿಗೆ ಇಲಾಖೆಯು ಕಳೆದ ಹಲವು ತಿಂಗಳುಗಳಿಂದ ಈ ಹೊಸ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಕಾರ್ಯವನ್ನು ನಿರ್ವಹಿಸುತ್ತಿತ್ತು. ಆದರೆ ಕರೋನಾ ಸಾಂಕ್ರಾಮಿಕದ ಎರಡನೇ ಅಲೆ ಈ ಕಾರ್ಯವನ್ನು ನಿಧಾನಗೊಳಿಸಿತ್ತು.

ಡ್ರೈವಿಂಗ್ ಟೆಸ್ಟ್'ನಲ್ಲಿ ಫೇಲ್ ಆಗುವವರಿಗೆ ವೀಡಿಯೊ ರೆಕಾರ್ಡಿಂಗ್ ಕ್ಲಿಪ್ ನೀಡಲಿದೆ ಸಾರಿಗೆ ಇಲಾಖೆ

ವೀಡಿಯೋ ಕ್ಲಿಪ್‌ಗಳನ್ನು ಹೊರತುಪಡಿಸಿ, ಇಲಾಖೆಯು ಪರೀಕ್ಷೆಯ ವಿವರವಾದ ವರದಿಯನ್ನು ಡ್ರೈವಿಂಗ್ ಟೆಸ್ಟ್ ನಲ್ಲಿ ಅನುತ್ತೀರ್ಣರಾಗುವ ಅರ್ಜಿದಾರರಿಗೆ ಕಳುಹಿಸುತ್ತದೆ. ಇದರಲ್ಲಿ ಅವರು ಪ್ರತಿ ನಿಯತಾಂಕಗಳಲ್ಲಿ ಹೇಗೆ ಕಾರ್ಯ ನಿರ್ವಹಿಸಿದರು ಎಂಬ ಮಾಹಿತಿಯನ್ನು ನೀಡಲಾಗುತ್ತದೆ. ಚಾಲನಾ ಪರೀಕ್ಷೆಯನ್ನು ತೆಗೆದುಕೊಳ್ಳುವ ಮೊದಲು ಅರ್ಜಿದಾರರಿಗೆ ಆಟೊಮೇಟೆಡ್ ಟೆಸ್ಟ್ ಟ್ರ್ಯಾಕ್ ಬಗ್ಗೆ ಕಲ್ಪನೆಯನ್ನು ನೀಡಲು ಆಡಿಯೋ ವೀಡಿಯೊ ಪ್ರೆಸೆಂಟೆಶನ್ ಗಳನ್ನು ತೋರಿಸಲಾಗುತ್ತದೆ.

ಡ್ರೈವಿಂಗ್ ಟೆಸ್ಟ್'ನಲ್ಲಿ ಫೇಲ್ ಆಗುವವರಿಗೆ ವೀಡಿಯೊ ರೆಕಾರ್ಡಿಂಗ್ ಕ್ಲಿಪ್ ನೀಡಲಿದೆ ಸಾರಿಗೆ ಇಲಾಖೆ

ದೆಹಲಿಯಲ್ಲಿ ರಾತ್ರಿ 10 ಗಂಟೆಯವರೆಗೆ ನಡೆಯುತ್ತಿದೆ ಡ್ರೈವಿಂಗ್ ಟೆಸ್ಟ್

ಚಾಲನಾ ಪರವಾನಗಿ ಪಡೆಯುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಸಲುವಾಗಿ, ದೆಹಲಿ ಸರ್ಕಾರವು ಈಗ ರಾತ್ರಿ 10 ಗಂಟೆಯವರೆಗೆ ಡ್ರೈವಿಂಗ್ ಟೆಸ್ಟ್ ತೆಗೆದುಕೊಳ್ಳಲು ಅನುಮತಿ ನೀಡಿದೆ. ಮುಂಬರುವ ದಿನಗಳಲ್ಲಿ ಎಲ್ಲಾ ಆಟೊಮೇಟೆಡ್ ಟ್ರ್ಯಾಕ್‌ಗಳಲ್ಲಿ ರಾತ್ರಿ ವೇಳೆ ಡ್ರೈವಿಂಗ್ ಟೆಸ್ಟ್ ಗಳನ್ನು ನಡೆಸಲಾಗುತ್ತದೆ.

ಡ್ರೈವಿಂಗ್ ಟೆಸ್ಟ್'ನಲ್ಲಿ ಫೇಲ್ ಆಗುವವರಿಗೆ ವೀಡಿಯೊ ರೆಕಾರ್ಡಿಂಗ್ ಕ್ಲಿಪ್ ನೀಡಲಿದೆ ಸಾರಿಗೆ ಇಲಾಖೆ

ಈ ಹಿನ್ನೆಲೆಯಲ್ಲಿ ಎಲ್ಲಾ ವಲಯ ಸಾರಿಗೆ ಪ್ರಾಧಿಕಾರಗಳ ಟ್ರ್ಯಾಕ್‌ಗಳಲ್ಲಿ ಹೆಚ್ಚಿನ ಸಾಮರ್ಥ್ಯದ ದೀಪಗಳನ್ನು ಅಳವಡಿಸಲಾಗುವುದು. ಡ್ರೈವಿಂಗ್ ಟೆಸ್ಟ್ ಟ್ರ್ಯಾಕ್‌ಗಳಲ್ಲಿ ಅಳವಡಿಸಲಾಗುವ ದೀಪಗಳ ಬೆಳಕು ಹಗಲಿನಂತೆ ಪ್ರಕಾಶಮಾನವಾಗಿರುತ್ತದೆ. ಈ ವರ್ಷದ ದೀಪಾವಳಿ ಹಬ್ಬಕ್ಕೂ ಮುನ್ನ ಈ ಟ್ರ್ಯಾಕ್‌ಗಳಲ್ಲಿ ಲೈಟಿಂಗ್ ಕೆಲಸಗಳನ್ನು ಆರಂಭಿಸಲಾಗುವುದು.

ಡ್ರೈವಿಂಗ್ ಟೆಸ್ಟ್'ನಲ್ಲಿ ಫೇಲ್ ಆಗುವವರಿಗೆ ವೀಡಿಯೊ ರೆಕಾರ್ಡಿಂಗ್ ಕ್ಲಿಪ್ ನೀಡಲಿದೆ ಸಾರಿಗೆ ಇಲಾಖೆ

ಪಿಯುಸಿ ಪ್ರಮಾಣ ಪತ್ರ ಕಡ್ಡಾಯ

ದೆಹಲಿಯಲ್ಲಿ ಚಳಿಗಾಲಕ್ಕೂ ಮುನ್ನ ಮಾಲಿನ್ಯವನ್ನು ನಿಯಂತ್ರಿಸಲು ವಾಹಂಗಳು ಮಾನ್ಯವಾದ ಪಿಯುಸಿ ಪ್ರಮಾಣ ಪತ್ರ ಹೊಂದುವುದನ್ನು ಕಡ್ಡಾಯಗೊಳಿಸಲಾಗಿದೆ. ಇನ್ನು ಮುಂದೆ ದೆಹಲಿಯ ರಸ್ತೆಗಳಲ್ಲಿ ಪಿಯುಸಿ ಪ್ರಮಾಣ ಪತ್ರ ಇಲ್ಲದೆ ಸಾಗುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಪಿಯುಸಿ ಪ್ರಮಾಣ ಪತ್ರ ಇಲ್ಲದೆ ವಾಹನ ಚಾಲನೆ ಮಾಡುವಾಗ ಸಿಕ್ಕಿ ಬೀಳುವ ವಾಹನ ಸವಾರರಿಗೆ ರೂ. 10,000 ದಂಡ ಅಥವಾ 6 ತಿಂಗಳು ಜೈಲು ಶಿಕ್ಷೆ ವಿಧಿಸಲಾಗುವುದು ಅಥವಾ ಚಾಲನಾ ಪರವಾನಗಿಯನ್ನು 3 ತಿಂಗಳು ರದ್ದುಗೊಳಿಸಲಾಗುವುದು.

ಡ್ರೈವಿಂಗ್ ಟೆಸ್ಟ್'ನಲ್ಲಿ ಫೇಲ್ ಆಗುವವರಿಗೆ ವೀಡಿಯೊ ರೆಕಾರ್ಡಿಂಗ್ ಕ್ಲಿಪ್ ನೀಡಲಿದೆ ಸಾರಿಗೆ ಇಲಾಖೆ

ದೆಹಲಿಯಲ್ಲಿ ಸಾರಿಗೆ ಇಲಾಖೆಯಿಂದ ಅನುಮೋದಿಸಲ್ಪಟ್ಟ 900 ಕ್ಕೂ ಹೆಚ್ಚು ಮಾಲಿನ್ಯ ಪರೀಕ್ಷಾ ಕೇಂದ್ರಗಳಿವೆ. ಇವುಗಳನ್ನು ದೆಹಲಿಯಾದ್ಯಂತವಿರುವ ಪೆಟ್ರೋಲ್ ಬಂಕ್ ಹಾಗೂ ವರ್ಕ್ ಶಾಪ್ ಗಳಲ್ಲಿ ಸ್ಥಾಪಿಸಲಾಗಿದೆ. ವಾಹನಗಳ ಹೊರಸೂಸುವಿಕೆ ಮಟ್ಟ ಸರಿಯಿರುವ ವಾಹನಗಳಿಗೆ ಪಿಯುಸಿ ಪ್ರಮಾಣಪತ್ರ ನೀಡಲಾಗುತ್ತದೆ. ವಾಹನದ ಹೊರಸೂಸುವಿಕೆ ಮಟ್ಟವು ನಿಗದಿತ ಪ್ರಮಾಣದ ಮಿತಿಯನ್ನು ಮೀರಿದರೆ ಅಂತಹ ವಾಹನಗಳಿಗೆ ಪಿಯುಸಿ ಪ್ರಮಾಣಪತ್ರವನ್ನು ನೀಡಲಾಗುವುದಿಲ್ಲ.

ಡ್ರೈವಿಂಗ್ ಟೆಸ್ಟ್'ನಲ್ಲಿ ಫೇಲ್ ಆಗುವವರಿಗೆ ವೀಡಿಯೊ ರೆಕಾರ್ಡಿಂಗ್ ಕ್ಲಿಪ್ ನೀಡಲಿದೆ ಸಾರಿಗೆ ಇಲಾಖೆ

ಈ ಪ್ರಮಾಣ ಪತ್ರವನ್ನು ಪಡೆಯುವ ಮೂಲಕ ದಂಡ ವಿಧಿಸುವುದರಿಂದ ಚಾಲನಾ ಪರವಾನಗಿ ಅಮಾನತುಗೊಳ್ಳುವುದರಿಂದ ಹಾಗೂ ಜೈಲುವಾಸಕ್ಕೆ ತುತ್ತಾಗುವಂತಹ ಕ್ರಮಗಳಿಂದ ಪಾರಾಗಬಹುದು. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ಸಮಸ್ಯೆ ಹೆಚ್ಚಾಗಿದೆ. ಈ ಸಮಸ್ಯೆಯನ್ನು ಕಡಿಮೆ ಮಾಡಲು ದೆಹಲಿ ರಾಜ್ಯ ಸರ್ಕಾರವು ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂಬುದು ಗಮನಾರ್ಹ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Who fail in driving test will get recorded video clip says delhi rto details
Story first published: Saturday, September 25, 2021, 19:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X