ಮೈಲಿಗಲ್ಲುಗಳ ಬಣ್ಣದ ಹಿಂದಿರುವ ಕಾರಣಗಳೇನು ಗೊತ್ತಾ?

ನೀವು ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗುವಾಗ ಮೈಲಿಗಲ್ಲುಗಳನ್ನು ನೋಡಿರುತ್ತೀರಿ. ಕೆಲವು ಮೈಲಿಗಲ್ಲುಗಳು ಹಸಿರು ಬಣ್ಣದಲ್ಲಿರುತ್ತವೆ. ಇನ್ನು ಕೆಲವು ಹಳದಿ ಬಣ್ಣವನ್ನು ಹೊಂದಿರುತ್ತವೆ. ಮೈಲಿಗಲ್ಲುಗಳು ಏಕೆ ವಿವಿಧ ಬಣ್ಣಗಳಲ್ಲಿರುತ್ತವೆ ಎಂಬುದನ್ನು ಯೋಚಿಸಿದ್ದೀರಾ?

ಮೈಲಿಗಲ್ಲುಗಳ ಬಣ್ಣದ ಹಿಂದಿರುವ ಕಾರಣಗಳೇನು ಗೊತ್ತಾ?

ಯಾವುದೇ ಮೈಲುಗಲ್ಲಿನ 80%ನಷ್ಟು ಕೆಳಭಾಗವು ಬಿಳಿ ಬಣ್ಣವನ್ನು ಹೊಂದಿದ್ದರೆ, ಮೇಲ್ಭಾಗದ 20%ನಷ್ಟು ಭಾಗವು ಆರೇಂಜ್, ಹಳದಿ, ಹಸಿರು, ಕಪ್ಪು ಅಥವಾ ನೀಲಿ ಬಣ್ಣವನ್ನು ಹೊಂದಿರುತ್ತದೆ. ಆ ಬಿಳಿ ಬಣ್ಣವಿರುವ ಜಾಗದಲ್ಲಿ ಹತ್ತಿರವಿರುವ ಊರು ಎಷ್ಟು ದೂರವಿದೆ ಎಂದು ಬರೆಯಲಾಗಿರುತ್ತದೆ.

ಮೈಲಿಗಲ್ಲುಗಳ ಬಣ್ಣದ ಹಿಂದಿರುವ ಕಾರಣಗಳೇನು ಗೊತ್ತಾ?

ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಮೈಲಿಗಲ್ಲುಗಳು ಒಂದು ಬಣ್ಣವನ್ನು ಹೊಂದಿದ್ದರೆ, ರಾಜ್ಯ ಹೆದ್ದಾರಿಗಳಲ್ಲಿರುವ ಮೈಲಿಗಲ್ಲುಗಳು ಮತ್ತೊಂದು ಬಣ್ಣವನ್ನು ಹೊಂದಿರುತ್ತವೆ. ಮೈಲಿಗಲ್ಲುಗಳು ವಿವಿಧ ಬಣ್ಣಗಳನ್ನು ಏಕೆ ಹೊಂದಿರುತ್ತವೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಮೈಲಿಗಲ್ಲುಗಳ ಬಣ್ಣದ ಹಿಂದಿರುವ ಕಾರಣಗಳೇನು ಗೊತ್ತಾ?

ಮೊದಲಿಗೆ ರಾಷ್ಟ್ರೀಯ ಹೆದ್ದಾರಿಗಳ (ಎನ್‌ಎಚ್) ಬಗ್ಗೆ ತಿಳಿಯೋಣ. ಎನ್‌ಎಚ್ ಎಲ್ಲಾ ನಗರಗಳು ಹಾಗೂ ರಾಜ್ಯಗಳಿಗೆ ಸಂಪರ್ಕವನ್ನು ಒದಗಿಸುತ್ತದೆ. ರಾಷ್ಟ್ರೀಯ ಹೆದ್ದಾರಿಗಳನ್ನು ಭಾರತ ಸರ್ಕಾರವು ನಿರ್ಮಿಸಿ, ನಿರ್ವಹಿಸುತ್ತದೆ. ರಾಷ್ಟ್ರೀಯ ಹೆದ್ದಾರಿಗಳು 70,000 ಕಿ.ಮೀ ಗಿಂತಲೂ ಹೆಚ್ಚು ಉದ್ದವಾಗಿವೆ. ರಾಷ್ಟ್ರೀಯ ಹೆದ್ದಾರಿಗಳಿಂದ ಉತ್ತರ-ದಕ್ಷಿಣ, ಪೂರ್ವ - ಪಶ್ಚಿಮ ಹಾಗೂ ಗೋಲ್ಡನ್ ಕ್ವಾಡ್ರಿಲ್ಯಾಟರಲ್‍‍ಗಳು ರೂಪುಗೊಂಡಿವೆ.

ಮೈಲಿಗಲ್ಲುಗಳ ಬಣ್ಣದ ಹಿಂದಿರುವ ಕಾರಣಗಳೇನು ಗೊತ್ತಾ?

ಉತ್ತರ-ದಕ್ಷಿಣ ಕಾರಿಡಾರ್ - ಜಮ್ಮು ಕಾಶ್ಮೀರದ ಶ್ರೀನಗರದಿಂದ, ಭಾರತದ ದಕ್ಷಿಣ ತುದಿಯಲ್ಲಿರುವ ಕನ್ಯಾಕುಮಾರಿಯವರೆಗೆ ವಿಸ್ತರಿಸಿದೆ. ಈ ರಸ್ತೆಯ ಉದ್ದವು 4000 ಕಿ.ಮೀಗಳಾಗಿದೆ.

ಪೂರ್ವ-ಪಶ್ಚಿಮ ಕಾರಿಡಾರ್ - ಅಸ್ಸಾಂನ ಸಿಲ್ಚಾರ್‍‍ನಿಂದ ಗುಜರಾತ್‍‍ನಲ್ಲಿರುವ ಪೋರಬಂದರ್‍‍ವರೆಗೂ ವಿಸ್ತರಿಸಿದೆ. ಈ ರಸ್ತೆಯ ಒಟ್ಟು ಉದ್ದವು 3300 ಕಿ.ಮೀಗಳಾಗಿದೆ. ಉತ್ತರ-ದಕ್ಷಿಣ, ಪೂರ್ವ - ಪಶ್ಚಿಮ ಕಾರಿಡಾರ್‌ಗಳು ಒಂದೇ ಕಾರಿಡಾರ್‍‍ಗಳಾಗಿದ್ದು, ಬೇರೆ ಬೇರೆಯಲ್ಲ ಎಂಬುದನ್ನು ಗಮನಿಸಬೇಕು.

ಮೈಲಿಗಲ್ಲುಗಳ ಬಣ್ಣದ ಹಿಂದಿರುವ ಕಾರಣಗಳೇನು ಗೊತ್ತಾ?

ಗೋಲ್ಡನ್ ಕ್ವಾಡ್ರಿಲ್ಯಾಟರಲ್‍ (ಜಿಕ್ಯೂ): ಈ ಹೆದ್ದಾರಿಯು ಭಾರತದ ನಾಲ್ಕು ಮೆಟ್ರೋ ನಗರಗಳಾದ ದೆಹಲಿ, ಮುಂಬೈ, ಚೆನ್ನೈ ಹಾಗೂ ಕೋಲ್ಕತ್ತಾ ನಗರಗಳನ್ನು ಸಂಪರ್ಕಿಸುತ್ತದೆ. ಈ ಹೆದ್ದಾರಿಯ ಒಟ್ಟು ಉದ್ದವು 5846 ಕಿ.ಮೀಗಳಾಗಿದೆ.

ಮೈಲಿಗಲ್ಲುಗಳ ಬಣ್ಣದ ಹಿಂದಿರುವ ಕಾರಣಗಳೇನು ಗೊತ್ತಾ?

ಹಳದಿ ಬಣ್ಣದ ಮೈಲಿಗಲ್ಲು

ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಮೈಲಿಗಲ್ಲುಗಳು ಹಳದಿ ಬಣ್ಣವನ್ನು ಹೊಂದಿರುತ್ತವೆ. ನೀವು ಮುಂದಿನ ಬಾರಿ ಯಾವುದಾದರೂ ರಸ್ತೆಯಲ್ಲಿ ಚಲಿಸುವಾಗ ಹಳದಿ ಬಣ್ಣದ ಮೈಲಿಗಲ್ಲುಗಳನ್ನು ಕಂಡರೆ, ನೀವು ರಾಷ್ಟ್ರೀಯ ಹೆದ್ದಾರಿಯಲ್ಲಿರುವಿರಿ ಎಂದರ್ಥ.

MOST READ: ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಮೈಲಿಗಲ್ಲುಗಳ ಬಣ್ಣದ ಹಿಂದಿರುವ ಕಾರಣಗಳೇನು ಗೊತ್ತಾ?

ಹಸಿರು ಮೈಲಿಗಲ್ಲು

ಮೈಲಿಗಲ್ಲುಗಳ ಮೇಲೆ ಹಸಿರು ಬಣ್ಣವಿದ್ದರೆ, ನೀವು ರಾಜ್ಯ ಹೆದ್ದಾರಿಯಲ್ಲಿರುವಿರಿ ಎಂದರ್ಥ. ರಾಜ್ಯ ಹೆದ್ದಾರಿಗಳನ್ನು ರಾಜ್ಯ ಸರ್ಕಾರವು ನಿರ್ಮಿಸಿರುತ್ತದೆ. ಮೈಲಿಗಲ್ಲುಗಳ ಮೇಲೆ ಹಸಿರು ಬಣ್ಣವಿರುವುದು ರಾಜ್ಯ ಹೆದ್ದಾರಿ ಎಂಬುದರ ಸಂಕೇತವಾಗಿದೆ.

MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ಕಾರಣವೇನು?

ಮೈಲಿಗಲ್ಲುಗಳ ಬಣ್ಣದ ಹಿಂದಿರುವ ಕಾರಣಗಳೇನು ಗೊತ್ತಾ?

ಕಪ್ಪು, ನೀಲಿ ಅಥವಾ ಬಿಳಿ ಬಣ್ಣದ ಮೈಲಿಗಲ್ಲು

ನೀವು ಹೋಗುತ್ತಿರುವ ರಸ್ತೆಯಲ್ಲಿರುವ ಯಾವುದಾದರೂ ಮೈಲಿಗಲ್ಲು ಕಪ್ಪು, ನೀಲಿ ಅಥವಾ ಬಿಳಿ ಬಣ್ಣವನ್ನು ಹೊಂದಿದ್ದರೆ, ನೀವು ಆ ನಗರದ ಮುಖ್ಯ ರಸ್ತೆಯಲ್ಲಿರುವಿರಿ ಎಂದರ್ಥ. ಈ ರಸ್ತೆಗಳನ್ನು ಆ ಪ್ರದೇಶದ ಸ್ಥಳೀಯ ಆಡಳಿತವು ನಿರ್ಮಿಸಿರುತ್ತದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಮೈಲಿಗಲ್ಲುಗಳ ಬಣ್ಣದ ಹಿಂದಿರುವ ಕಾರಣಗಳೇನು ಗೊತ್ತಾ?

ಆರೇಂಜ್ ಬಣ್ಣದ ಮೈಲಿಗಲ್ಲು

ನೀವು ಓಡಾಡುತ್ತಿರುವ ರಸ್ತೆಯು ಹಳ್ಳಿಯಲ್ಲಿದ್ದರೆ, ನೀವು ಆ ರಸ್ತೆಯಲ್ಲಿರುವ ಮೈಲಿಗಲ್ಲಿನ ಮೇಲೆ ಆರೇಂಜ್ ಬಣ್ಣವನ್ನು ನೋಡಿರುತ್ತೀರಿ. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ನಿರ್ಮಿಸಲಾಗುವ ರಸ್ತೆಗಳಲ್ಲಿರುವ ಮೈಲಿಗಲ್ಲುಗಳ ಮೇಲೆ ಆರೇಂಜ್ ಬಣ್ಣವಿರುತ್ತದೆ.

ಮೈಲಿಗಲ್ಲುಗಳ ಬಣ್ಣದ ಹಿಂದಿರುವ ಕಾರಣಗಳೇನು ಗೊತ್ತಾ?

ನೀವು ಮುಂದಿನ ಬಾರಿ ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗುವ ರಸ್ತೆಯಲ್ಲಿ ಮೇಲೆ ತಿಳಿಸಿದ ಬಣ್ಣಗಳು ಕಂಡು ಬಂದರೆ, ಬಣ್ಣಗಳ ಆಧಾರದ ಮೇಲೆ ಆ ರಸ್ತೆಗಳು, ಗ್ರಾಮ ಪಂಚಾಯಿತಿ, ನಗರದ ಆಡಳಿತ, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ನಿರ್ಮಿಸಿದ ರಸ್ತೆಗಳು ಎಂದು ತಿಳಿಯಿರಿ.

Most Read Articles

Kannada
English summary
Why roadside milestones have different colors? - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X